For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳೇ ಪಾದಗಳತ್ತ ನಿರ್ಲಕ್ಷ್ಯ ಮಾಡಬೇಡಿ!

|

ಮಧುಮೇಹಿಗಳು ಪಾದಗಳ ಆರೈಕೆ ಬಗ್ಗೆ ಸ್ಪೆಷಲ್ ಕೇರ್ ತೆಗೆದುಕೊಳ್ಳಬೇಕು. ಮಧುಮೇಹಿಗಳಲ್ಲಿ ಪಾದಗಳ ಸಮಸ್ಯೆ ಕಂಡು ಬರುವುದು ಅಧಿಕ. ಏಕೆಂದರೆ ಮಧುಮೇಹ ಕಾಯಿಲೆಯೂ ನರಗಳಿಗೆ ಹಾನಿಯುಂಟು ಮಾಡುವುದರಿಂದ ಪಾದಗಳಿಗೆ ರಕ್ತ ಸಂಚಾರ ಸರಿಯಾಗಿ ಆಗದೆ ತೊಂದರೆ ಉಂಟಾಗುತ್ತದೆ.

ಪಾದಗಳ ಆರೈಕೆ ಬಗ್ಗೆ ಗಮನ ಕೊಡದಿದ್ದರೆ ಸೀರಿಯಸ್ ಆದ ಸಮಸ್ಯೆ ಕಾಣಿಸಬಹುದು. ಆದ್ದರಿಂದ ಮಧುಮೇಹಿಗಳು ಈ ಕೆಳಗಿನ ಪಾದಗಳ ಆರೈಕೆ ಮಾಡುವುದು ಒಳ್ಳೆಯದು.

ಪಾದಗಳನ್ನು ಸ್ವಚ್ಛವಾಗಿಡಿ

ಪಾದಗಳನ್ನು ಸ್ವಚ್ಛವಾಗಿಡಿ

ಮಧುಮೇಹಿಗಳು ಮೊದಲು ಮಾಡಬೇಕಾದ ಆರೈಕೆ ಎಂದರೆ ಪಾದಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ಪಾದಗಳನ್ನು ಸ್ವಚ್ಛವಾಗಿ ಇಡದಿದ್ದರೆ ಕಜ್ಜಿ, ಗುಳ್ಳೆಗಳು ಬಂದರೆ ಸುಲಭವಾಗಿ ಒಣಗುವುದಿಲ್ಲ. ಆದ್ದರಿಂದ ಹದ ಬಿಸಿ ನೀರಿನಲ್ಲಿ ಪಾದಗಳನ್ನು ತೊಳೆದು ಸ್ವಚ್ಛವಾಗಿಡಿ.

ಪಾದಗಳತ್ತ ಗಮನ ಕೊಡಿ

ಪಾದಗಳತ್ತ ಗಮನ ಕೊಡಿ

ಪಾದಗಳಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು ಪ್ರತಿನಿತ್ಯ ಗಮನ ಕೊಡಿ. ಪಾದಗಳಲ್ಲಿ ಊತ, ಬಿರುಕು ಈ ರೀತಿಯ ಸಮಸ್ಯೆಗಳು ಮುಂದೆ ದೊಡ್ಡ ಸಮಸ್ಯೆಯಾಗಬಹುದು. ಆದ್ದರಿಂದ ಇವುಗಳತ್ತ ಗಮನ ಕೊಡಿ.

ಬರಿಗಾಲಿನಲ್ಲಿ ಓಡಾಡಬೇಡಿ

ಬರಿಗಾಲಿನಲ್ಲಿ ಓಡಾಡಬೇಡಿ

ಬರಿಗಾಲಿನಲ್ಲಿ ಓಡಾಡಿದರೆ ಏನಾದರೂ ತಾಗಿ ಗಾಯವಾದರೆ ಒಣಗುವುದು ಕಷ್ಟ. ಆದ್ದರಿಂದ ಓಡಾಡುವಾಗ ಚಪ್ಪಲಿ ಧರಿಸಿ ಓಡಾಡುವುದು ಸೇಫ್, ಅದರಲ್ಲೂ ಶೂ ಬಳಸುವುದು ತುಂಬಾ ಒಳ್ಳೆಯದು.

ಸಾಕ್ಸ್

ಸಾಕ್ಸ್

ಸ್ವಚ್ಛವಾದ, ಒಣಗಿದ ಸಾಕ್ಸ್ ಧರಿಸಿ. ಸರಿಯಾದ ರೀತಿಯ ಸಾಕ್ಸ್ ಅಂದರೆ ಸರಿಯಾದ ಸೈಜ್ ನ, ತ್ವಚೆಯಲ್ಲಿ ತುರಿಕೆ ತರದ ಸಾಕ್ಸ್ ಧರಿಸಿ. ಹಾಟ್ ವಾಟರ್ ಬಾಟಲ್ ಅಥವಾ ಹೀಟಿಂಗ್ ಪ್ಯಾಡ್ ಬಳಸಬೇಡಿ, ಅದರ ಬದಲು ಮಲಗುವಾಗ ಸಾಕ್ಸ್ ಬಳಸಿ ಮಲಗಿ.

ಶೂ

ಶೂ

ಶೂ ಕೊಳ್ಳುವಾಗ ಅದರಿಂದ ಯಾವುದೇ ತುರಿಕೆ ಅಥವಾ ಗಾಯ ಉಂಟಾಗದಂತೆ ಶೂ ಧರಿಸಿ. ಸ್ಪೆಷಲ್ ಡಯಾಬಿಟಿಸ್ ಶೂ ಮಾರ್ಕೆಟ್ ನಲ್ಲಿ ದೊರೆಯುತ್ತದೆ, ಅದನ್ನು ಧರಿಸಬಹುದು.

 ಧೂಮಪಾನ ಮತ್ತು ಪಾದಗಳ ಆರೈಕೆಗೆ ನೇರ ಸಂಬಂಧವಿದೆ

ಧೂಮಪಾನ ಮತ್ತು ಪಾದಗಳ ಆರೈಕೆಗೆ ನೇರ ಸಂಬಂಧವಿದೆ

ಅತೀಯಾದ ಧೂಮಪಾನ ಪಾದಗಳಿಗೆ ರಕ್ತ ಸಂಚಾರವಾಗುವುದನ್ನು ತಡೆಯುತ್ತದೆ. ಆದ್ದರಿಂದ ಮಧುಮೇಹಿಗಳ ಧೂಮಪಾನದ ಸಹವಾಸ ಮಾಡದಿರುವುದು ಒಳ್ಳೆಯದು.

ಸ್ವಚಿಕಿತ್ಸೆ ಮಾಡಬೇಡಿ

ಸ್ವಚಿಕಿತ್ಸೆ ಮಾಡಬೇಡಿ

ನಿಮ್ಮ ಪಾದಗಳಲ್ಲಿ ಏನಾದರೂ ತೊಂದರೆ ಕಾಣಿಸಿದರೆ ಸ್ವ ಚಿಕಿತ್ಸೆ ಮಾಡಬೇಡಿ, ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.

ಕೊನೆಯದಾಗಿ ಹೇಳುವುದೆಂದರೆ

ಕೊನೆಯದಾಗಿ ಹೇಳುವುದೆಂದರೆ

ಕೂದಲಿನ ಆರೈಕೆ ಬಗ್ಗೆ ಹೆಚ್ಚಿನ ಗಮನ ಕೊಡಿ, ಸಣ್ಣದೆಂದು ನಿರ್ಲಕ್ಷ್ಯ ಮಾಡಿದ ಗಾಯವೂ ಮುಂದೆ ದೊಡ್ಡದಾಗಿ ತೊಂದರೆಯನ್ನು ಅನುಭವಿಸುವಂತಾಗುವುದು. ಆದ್ದರಿಂದ ಪಾದಗಳ ಬಗ್ಗೆ ಎಚ್ಚರ.

English summary

Foot Care For Diabetics

If you are negligent and omit to take good care of your feet, you might have to amputate your feet or leg. If you take good care of your feet, you can evade most of the serious health problems that are connected with diabetes.
X
Desktop Bottom Promotion