For Quick Alerts
ALLOW NOTIFICATIONS  
For Daily Alerts

ಬ್ಲಡ್ ಶುಗರ್ ಎಷ್ಟು ಬಾರಿ ಪರೀಕ್ಷೆ ಆಗಬೇಕು?

By Dr Arpandev Bhattacharyya
|
How And When To Check Blood Sugar

ಬ್ಲಡ್ ಶುಗರ್ ಎಷ್ಟು ಬಾರಿ ಪರೀಕ್ಷೆ ಮಾಡಿಸಿಕೊಳ್ಳಬೇಕು?

ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕು, ಶುಗರ್ ಟೆಸ್ಟ್ ಗೆ ನಿರ್ದಿಷ್ಟ ವೈದ್ಯರೇ ಆಗಬೇಕೆಂದಿಲ್ಲ, ಸರಾಸರಿ 4 ರಿಂದ 6 ವಾರಗಳಲ್ಲಿ ಸಕ್ಕರೆ ಪ್ರಮಾಣದಲ್ಲಿ ಹೆಚ್ಚಿನ ಏರು ಪೇರು ಕಂಡು ಬಂದಲ್ಲಿ, ಚಿಕಿತ್ಸಾ ವಿಧಾನವನ್ನು ಬದಲಿಸುವುದು ಒಳ್ಳೆಯದು. ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿದ್ದರೆ 2ರಿಂದ 3 ತಿಂಗಳ ಅವಧಿಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು.

ಶುಗರ್ ಟೆಸ್ಟ್ ಯಾವಾಗ ಒಳ್ಳೆಯದು, ಊಟಕ್ಕೆ ಮೊದಲೊ, ಆಮೇಲೊ ಅಥವಾ ಯಾವಾಗದರೂ ಸರಿಯೇ?

ಉಪವಾಸ ಇದ್ದಾಗ ಸಕ್ಕರೆ ಪ್ರಮಾಣ ಪರೀಕ್ಷಿಸುವುದು ತುಂಬಾ ಒಳ್ಳೆಯದು. ಉಪವಾಸ ಸಮಯದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬಂದ ಮೇಲೆ ಊಟವಾದ 2 ಗಂಟೆ ನಂತರ [Postprandial (PP)] ಪರೀಕ್ಷೆ ಮಾಡಿಸಬೇಕು. ಗರ್ಭಿಣಿಯಲ್ಲಿ PP sugar ಪರೀಕ್ಷೆ ಬಹುಮುಖ್ಯ. ಅನಿಯಮಿತವಾಗಿ ಪರೀಕ್ಷೆ ನಡೆಸುವುದು ಡಯಾಬಿಟೀಸ್ ರೋಗ ಲಕ್ಷಣ ತಿಳಿಯಲು ಸಹಕಾರಿಯಾಗುವುದಿಲ್ಲ. ಆದರೆ, Low sugar ಇದ್ದವರಿಗೆ ಅಂದರೆ, ನಿಮಗೆ ಇದ್ದಕ್ಕಿದ್ದಂತೆ ಸುಸ್ತು, ಬಾಯಾರಿಕೆಯಾಗುವುದು, ತಕ್ಷಣಕ್ಕೆ ಶುಗಲ್ ಲೆವಲ್ ಪರೀಕ್ಷೆ ಮಾಡಬೇಕಾದಾಗ ಅಥವಾ ಡಯಾಬಿಟಿಕ್ ಕೊಮಾ( very high sugar level) ಪರಿಸ್ಥಿತಿ ಬಂದಾಗ ಮಾತ್ರ ಅನಿಯಮಿತವಾಗಿ ಪರೀಕ್ಷೆ ನಡೆಸಲಾಗುತ್ತದೆ.

ಮನೆಯಲ್ಲಿ ಶುಗರ್ ಟೆಸ್ಟ್ ಯಾರು ಮಾಡಬಹುದು?

ನಿಮ್ಮ ದೇಹದ ಸಕ್ಕರೆ ಪ್ರಮಾಣ ತಿಳಿಯಲು ನೀವೆ ಪ್ರಯತ್ನಿಸುವುದು ಒಳ್ಳೆಯದು.ಆದರೆ, ಗ್ಲುಕೋಮೀಟರ್ ಮುಂತಾದ ಸಾಧನಗಳು ಇವೆ ಎಂದು ಪ್ರತಿದಿನ ಡಯಾಬಿಟಿಸ್ ಚೆಕ್ ಮಾಡಿಕೊಳ್ಳುವುದು ಒಳ್ಳೆ ಕ್ರಮವಲ್ಲ. ಸರಿಯಾದ ಯೋಜನೆಯೊಂದಿಗೆ ನಿಯಮಿತವಾಗಿ ಪರೀಕ್ಷೆ ಮಾಡಿಕೊಳ್ಳಬಹುದು. ಇದರ ಜೊತೆಗೆ ಮನೆಯಲ್ಲಿರುವ ಸಾಧನ ತೋರಿಸುವ ಅಂಕಿ ಅಂಶಗಳ ಮೇಲೆ ನಂಬಿಕೆ ಇಲ್ಲದೆ ಲ್ಯಾಬ್ ಗೆ ಕೊಂಡೊಯ್ದು ಎರಡನ್ನು ತಾಳೆ ನೋಡುವ ಅವಶ್ಯಕತೆಯಿಲ್ಲ. ನಿಮಗೆ ಅನಾರೋಗ್ಯ ಉಂಟಾದಾಗ ಇನ್ನೊಬ್ಬರಿಗೆ ಕಾಯದೆ ಸ್ವತಃ ನೀವೇ ಸಕ್ಕರೆ ಪ್ರಮಾಣ ತಿಳಿಯಲು ಗ್ಲುಕೋಮೀಟರ್ ಸಹಾಯಕಾರಿಯಾಗಿದೆ. ಅಲ್ಲದೆ, ಸದ್ಯದ ಅನಾರೋಗ್ಯಕ್ಕೆ ಡಯಾಬಿಟಿಸ್ ಎಷ್ಟರಮಟ್ಟಿಗೆ ಕಾರಣ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಮನೆಯಲ್ಲಿ ಶುಗರ್ ಟೆಸ್ಟ್ ದುಬಾರಿಯಾಗುವುದಿಲ್ಲವೆ?

ಗ್ಲುಕೋಮೀಟರ್ ಸಾಧನದ ಬೆಲೆ 1,500 ರು ನಿಂದ 3,500 ರು ವರೆಗೂ ಇದೆ.(ಭಾರತದಲ್ಲಿ ವಿವಿಧ ಬಗೆಯ ಸಾಧನಗಳು ಈಗ ಲಭ್ಯವಿದೆ). 50 ಸ್ಟ್ರಿಪ್ ಪ್ಯಾಕ್ ನ ಬೆಲೆ ಸುಮಾರು 1,000 ರು ಆಗಬಹುದು. ಹೊರಗಡೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ಹೋಲಿಸಿದರೆ, ಮನೆಯಲ್ಲಿ ಶುಗರ್ ಟೆಸ್ಟ್ ಮಾಡಿಕೊಳ್ಳುವುದು ಅಷ್ಟು ದುಬಾರಿಯಾಗಲಾರದು.

English summary

ಬ್ಲಡ್ ಶುಗರ್ ಎಷ್ಟು ಬಾರಿ ಪರೀಕ್ಷೆ ಆಗಬೇಕು?

A Diabetic patient should check sugar level once in 4 to 7 weeks. The best time to check blood sugar is while fasting. Monitoring Diabetes at home is the best.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X