For Quick Alerts
ALLOW NOTIFICATIONS  
For Daily Alerts

ಪಥ್ಯದಿಂದ ಸಕ್ಕರೆ ಕಾಯಿಲೆ ನಿಯಂತ್ರಣ ಸಾಧ್ಯವೆ?

By Dr Arpandev Bhattacharyya
|
Meal plan for diabetes control

ಡಯಾಬಿಟಿಸ್ ಚಿಕಿತ್ಸೆಯಲ್ಲಿ ಪಥ್ಯ ಮಹತ್ವದ ಪಾತ್ರವಹಿಸುತ್ತದೆ. ಆರಂಭಿಕ ಹಂತದಲ್ಲಿ ಪಥ್ಯದಿಂದಲೇ ಸಕ್ಕರೆ ಕಾಯಿಲೆಯನ್ನು ಹದ್ದುಬಸ್ತಿನಲ್ಲಿಟ್ಟಿದ್ದೇನೆ ಎಂದು ರೋಗಿ ಬೀಗಬಹುದು. ಆದರೆ, ಸಮಯ ಸರಿದಂತೆ ನಿಯಂತ್ರಣ ಅಸಾಧ್ಯ ಎಂಬುದು ಅರಿವಿಗೆ ಬರುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಮದ್ದು ಬೇಕೇಬೇಕು. ಇಲ್ಲಿ ಅವಧಿಯೂ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಕೆಲವರಿಗೆ ಕೆಲ ತಿಂಗಳು ಬೇಕಾದರೆ, ಕೆಲವರಿಗೆ ವರ್ಷಗಳೇ ಬೇಕಾಗಬಹುದು. ಪ್ರಾರಂಭದಲ್ಲಿ ಡಯಟ್ ಮಾಡುವುದು ಅತಿ ಮುಖ್ಯ. ಇದು ಡಯಟಿಂಗ್ ನಿಂದಾಗುವ ಪರಿಣಾಮ ಮತ್ತು ಔಷಧಿ ತೆಗೆಕೊಳ್ಳುವ ಮಹತ್ವವನ್ನು ಅರಿವಿಗೆ ತಂದುಕೊಡುತ್ತದೆ.

ಕಟ್ಟುನಿಟ್ಟಾಗಿ ಪಥ್ಯ ಮಾಡಬಹುದೆ?

ಕಟ್ಟುನಿಟ್ಟಿನ ಪಥ್ಯವನ್ನು ನಾವು ಇತ್ತೀಚಿನ ದಿನಗಳಲ್ಲಿ ಶಿಫಾರಸು ಮಾಡುತ್ತಿಲ್ಲ. ಡಯಟ್ ಚಾರ್ಟ್ ಅನುಸರಿಸುವುದು ಏಕತಾನತೆ ತರುವುದಲ್ಲದೆ ದಿನನಿತ್ಯ ಅನುಸರಿಸುವುದು ಕಠಿಣ ಕೂಡ. ವೃತ್ತಿ ಅಥವಾ ಇನ್ನಿತರ ಕಾರಣಗಳಿಂದಾಗಿ ಪ್ರವಾಸ ಹೋದಾಗ ಬೇಕಾದ ಆಹಾರಗಳನ್ನು ತಿನ್ನುವ ಸ್ವಾತಂತ್ರ್ಯವನ್ನು ಕಠಿಣ ಡಯಟ್ ಕಸಿದುಬಿಡುತ್ತದೆ. ಹೀಗಾಗಿ, ಡಯಟ್ ಚಾರ್ಟ್ ಬದಲು ಮೀಲ್ ಪ್ಲಾನ್ ಅನುಸರಿಸಬಹುದು.

ಡಯಾಬಿಟಿಕ್ ಪಥ್ಯದ ನಿಯಮಗಳು

ಆರೋಗ್ಯಕರ ಆಹಾರ ತಿನ್ನುವುದು ಯಶಸ್ಸಿನ ಗುಟ್ಟು. ಇದಕ್ಕಾಗಿ ಯಾವ ಆಹಾರ ತಿನ್ನಬೇಕು, ಎಷ್ಟು ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು ಎಂಬುದನ್ನು ಅರಿತಿರಬೇಕು. ತಿನ್ನಬೇಕೋ ಅಥವಾ ತಿನ್ನಬಾರದೋ ಎಂಬುದು ಸದ್ಯದ ಪ್ರಶ್ನೆಯೇ ಅಲ್ಲ. ತಿನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಇಲ್ಲಿ ಮಹತ್ವಪೂರ್ಣವಾದದ್ದು.

ನಾವು ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಜೊತೆಗೆ ಮೂರು ಲಘು ತಿಂಡಿ ತಿನ್ನುವುದನ್ನು ಶಿಫಾರಸು ಮಾಡುತ್ತೇವೆ. ಜೀವನಕ್ರಮ ಮತ್ತು ವೃತ್ತಿಗೆ ತಕ್ಕಂತೆ ಮೊದಲ ಮೂವರ ನಡುವಿನ ಸಮಯದಲ್ಲಿ ಲಘುಪದಾರ್ಥಗಳನ್ನು ತಿನ್ನುವ ಪರಿಪಾಠ ಬೆಳೆಸಿಕೊಳ್ಳಬೇಕು. ಡಯಟಿಂಗಿನಲ್ಲಿ ಆರು ಅಂಶಗಳು ಅಡಕಗೊಂಡಿವೆ : ಶರ್ಕರಪಿಷ್ಟ (ಕಾರ್ಬೋಹೈಡ್ರೈಟ್), ಕೊಬ್ಬು (ಫ್ಯಾಟ್), ಪ್ರೊಟೀನ್, ಮಿನರಲ್, ವಿಟಮಿನ್ ಮತ್ತು ನೀರು. ಕಾರ್ಬೋಹೈಡ್ರೈಟನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಮಹತ್ವದ್ದು. ಅಕ್ಕಿ ಮತ್ತು ಗೋಧಿಯಲ್ಲಿ ಕ್ಯಾಲೋರಿ ಪ್ರಮಾಣ ಸಮವಿದ್ದರೂ ಗೋಧಿಯಲ್ಲಿ ಪ್ರೊಟೀನ್ ಅಂಶ ಜಾಸ್ತಿಯಿರುತ್ತದೆ ಮತ್ತು ನಾರಿನಂಶ ಅಕ್ಕಿಗಿಂತ ಹೆಚ್ಚಾಗಿರುತ್ತದೆ.

ಆಹಾರ ಸೇವನೆ ಕ್ರಮ ಈ ರೀತಿಯಿರಬಹುದು : ಬೆಳಗಿನ ತಿಂಡಿ - ಲಘುತಿಂಡಿ - ಮಧ್ಯಾಹ್ನದ ಊಟ - ಲಘುತಿಂಡಿ - ಲಘುತಿಂಡಿ - ರಾತ್ರಿ ಊಟ.

ಬಗೆಬಗೆಯ ಧಾನ್ಯ, ಹಣ್ಣು, ಕಂದು ಬ್ರೆಡ್, ದ್ವಿದಳ ಧಾನ್ಯಗಳಂಥ ಪದಾರ್ಥಗಳು ಸಕ್ಕರೆ ಕಾಯಿಲೆ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಇವು ಆಹಾರ ಕರಗುವಿಕೆ ಮತ್ತು ಕರುಳಿನ ಕಾರ್ಯನಿರ್ವಹಣೆ ಸುಗಮಗೊಳಿಸುತ್ತವೆ. ಅಕ್ಕಿ ಮತ್ತು ಗೋಧಿಯ ಮಿಶ್ರಣದ ಆಹಾರ ಸೇವನೆ ಉತ್ತಮ.

ನಿಯಮಿತ ಕಾಯಿಪಲ್ಯಗಳ ಸೇವನೆ ಆಹಾರದಲ್ಲಿ ಸಮತೋಲನ ತರುತ್ತದೆ. ತರಕಾರಿಗಳಲ್ಲಿ ವಿಟಮಿನ್, ಮಿನರಲ್ ಮತ್ತು ನಾರಿನಂಶಗಳು ಸ್ವಾಭಾವಿಕವಾಗಿ ಹೇರಳವಾಗಿರುತ್ತವೆ. ದೇಹತೂಕ ಅಗತ್ಯಕ್ಕಿಂತ ಹೆಚ್ಚಿದ್ದರೆ ತೂಕ ಇಳಿಸಿಕೊಳ್ಳುವತ್ತ ಗಮನಹರಿಸಬೇಕು. ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ನಾರಿನಂಶ ಇರುವ ಆಹಾರಗಳು ತೂಕವನ್ನು ತಹಬದಿಗೆ ತರಲು ಸಹಕಾರಿ.

ಮೂತ್ರಪಿಂಡ ತೊಂದರೆ ಇಲ್ಲದಲ್ಲಿ ಮಾಂಸಾಹಾರ ಸೇವನೆಗೆ ಯಾವುದು ನಿಬಂಧನೆ ಇರುವುದಿಲ್ಲ. ನೆನಪಿನಲ್ಲಿಡಿ, ರೆಡ್ ಮೀಟ್ ಗಿಂತ ಮೀನು ಮತ್ತು ಕೋಳಿ ಉತ್ತಮ, ಯಾಕೆಂದರೆ ಇವುಗಳಲ್ಲಿ ಕೊಬ್ಬಿನಂಶ ಕಡಿಮೆಯಿರುತ್ತದೆ. ಕೊಲೆಸ್ಟ್ರಾಲ್ ಪ್ರಮಾಣ ಅಧಿಕವಾಗಿದ್ದ ಪಕ್ಷದಲ್ಲಿ ಮೊಟ್ಟೆಯ ಹಳದಿ ಪದಾರ್ಥ ಮತ್ತು ರೆಡ್ ಮೀಟನ್ನು ತ್ಯಜಿಸುವುದು ವಿಹಿತ.

English summary

ಪಥ್ಯದಿಂದ ಸಕ್ಕರೆ ಕಾಯಿಲೆ ನಿಯಂತ್ರಣ ಸಾಧ್ಯವೆ?

It is possible to control Diabetes with Diet only?
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more