For Quick Alerts
ALLOW NOTIFICATIONS  
For Daily Alerts

ಪ್ರತಿಷ್ಠಿತ ಮೆಟ್‌ ಗಾಲಾದಲ್ಲಿ ಗಣೇಶ ಮೂರ್ತಿ ಜೊತೆ ಕಾಣಿಸಿದ ಸುಧಾ ರೆಡ್ಡಿ, ಯಾರಿವರು?

|

ಮೆಟ್‌ ಗಾಲಾ ಎನ್ನುವುದು ಜಗತ್ತಿನ ಪ್ರತಿಷ್ಠಿತ ಫ್ಯಾಷನ್‌ ಶೋ ಆಗಿದೆ. ಈ ಶೋದಲ್ಲಿ ಪಾಲ್ಗೊಳ್ಳಲು ಬಾಲಿವುಡ್‌, ಹಾಲಿವುಡ್‌ನಿಂದ ದೊಡ್ಡ-ದೊಡ್ಡ ಸ್ಟಾರ್‌ಗಳು ಬರುತ್ತಾರೆ. ಮೆಟ್‌ ಗಾಲಾದಲ್ಲಿ ಭಾಗವಹಿಸುವವರ ಡ್ರೆಸ್ಸಿಂಗ್‌ ಇಡೀ ಜಗತ್ತಿನ ಗಮನ ಸೆಳೆಯುವುದು.

1948ರಿಂದ ಈ ಫ್ಯಾಷನ್‌ ಶೂ ನಡೆಯುತ್ತಿದೆ, ಅಮೆರಿಕದ ನ್ಯೂಯಾರ್ಕ್ ಮೆಟ್ರೋಪಾಲಿಟಿನ್ ಕಲಾ ವಸ್ತು ಸಂಗ್ರಹಾಲಯಕ್ಕೆ ನಿಧಿ ಸಂಗ್ರಹಾರ್ಥವಾಗಿ ಈ ಫ್ಯಾಷನ್ ಶೋ ನಡೆಸಲಾಗುವುದು. ಕೊರೊನಾ ಕಾರಣದಿಂದ ಕಳೆದ ವರ್ಷ ಈ ಫ್ಯಾಷನ್‌ ಶೋ ನಡೆದಿರಲಿಲ್ಲ. ಕೋಟ್ಯಾಧಿಪತಿಗಳು ಮಾತ್ರ ಈ ಫ್ಯಾಷನ್‌ ಶೋದಲ್ಲಿ ಭಾಗವಹಿಸಬಹುದು.

ತುಂಬಾ ಚಿತ್ರ-ವಿಚಿತ್ರವಾದ ಡ್ರೆಸ್ಸಿಂಗ್‌ಗಳನ್ನೂ ಈ ಫ್ಯಾಷನ್‌ ಶೋದಲ್ಲಿ ನೋಡಬಹುದು. ಈ ಭಾರಿ ಈ ಪ್ರತಿಷ್ಠಿತ ಶೋದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವ ಏಕೈಕ ಭಾರತೀಯ ಅಂದ್ರೆ ಸುಧಾ ರೆಡ್ಡಿ.

ಅಮೆರಿಕದಲ್ಲಿರುವ ಬಿಲಿಯನೇರ್ ಹಾಗೂ ಮೇಘಾ ಎಂಜಿನಿಯರಿಂಗ್ ಅಂಡ್‌ ಇನ್‌ಫ್ರಾಸ್ಟ್ರಕ್ಚರ್‌ನ ಎಂಡಿ ಮೇಘ ಕೃಷ್ಣ ರೆಡ್ಡಿ ಅವರ ಪತ್ನಿ ಸುಧಾ ರೆಡ್ಡಿ. ಈ ಫ್ಯಾಷನ್‌ ಶೋದಲ್ಲಿ ಭಾಗವಹಿಸಲು ಕೋಟ್ಯಾಧಿಪತಿಗಳಿಗೆ ಮಾತ್ರ ಸಾಧ್ಯ. ಈ ಹಿಂದೆ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಅಂಬಾನಿ ಪುತ್ರಿ ಇಶಾ ಅಂಬಾಬಿ, ನಟಾಶಾ ಪೂನಾವಾಲಾ ಭಾಗವಹಿಸಿದ್ದಾರೆ. ಈ ವರ್ಷ ಸುಧಾ ರೆಡ್ಡಿ ಭಾರತದಿಂದ ಆಯ್ಕೆ ಆಗಿದ್ದಾರೆ.

ಭಾರತೀಯ ಸಂಪ್ರದಾಯದ ಲುಕ್‌ನಲ್ಲಿ ಕಂಗೊಳಿಸಿದ ಸುಧಾ ರೆಡ್ಡಿ

ಭಾರತೀಯ ಸಂಪ್ರದಾಯದ ಲುಕ್‌ನಲ್ಲಿ ಕಂಗೊಳಿಸಿದ ಸುಧಾ ರೆಡ್ಡಿ

ಸುಧಾ ರೆಡ್ಡಿ ಗೋಲ್ಡನ್‌ ಕಲರ್‌ನ ಅದ್ಭುತವಾದ ವಿನ್ಯಾಸದ ಡ್ರೆಸ್‌ನಲ್ಲಿ ಗಮನ ಸೆಳೆದರು. ಈ ಉಡುಪನ್ನು ಫಲ್ಗುಣಿ ಹಾಗೂ ಶೇನ್‌ ಪಿಕಾಕ್ ಸಿದ್ಧಪಡಿಸಿದ್ದಾರೆ. ಗೋಲ್ಡನ್‌ , ಬ್ಲ್ಯಾಕ್, ರೆಡ್‌ ಮಿಶ್ರಿತ ವಿನ್ಯಾಸ ಉಡುಪು ನೋಡಲು ತುಂಬಾ ಸುಂದರವಾಗಿದೆ.

ಮೆಟ್‌ ಗಾಲಾದಲ್ಲಿ ಗಮನ ಸೆಳೆದ ಗಣೇಶ ಮೂರ್ತಿ

ಮೆಟ್‌ ಗಾಲಾದಲ್ಲಿ ಗಮನ ಸೆಳೆದ ಗಣೇಶ ಮೂರ್ತಿ

ಹೈದ್ರಾಬಾದ್‌ ಮೂಲದ ಸುಧಾ ರೆಡ್ಡಿ ಅದ್ಭುತ ವಿನ್ಯಾಸದ ಉಡುಗೆಯಲ್ಲಿ ಕೈಯಲ್ಲಿ ಗಣೇಶನ ಮೂರ್ತಿ ಹಿಡಿದು ಗಮನ ಸೆಳೆದಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆಯುವ ಫ್ಯಾಷನ್‌ ಶೋದಲ್ಲಿ ವಿಘ್ನ ನಿವಾರಕನನ್ನು ಕೈಯಲ್ಲಿ ಹಿಡಿದು ಗಮನ ಸೆಳೆದಿದ್ದಾರೆ.

ಸುಧಾ ರೆಡ್ಡಿ ಸಮಾಜ ಸೇವೆಯಲ್ಲಿ ಎತ್ತಿದ ಕೈ

ಸುಧಾ ರೆಡ್ಡಿ ಸಮಾಜ ಸೇವೆಯಲ್ಲಿ ಎತ್ತಿದ ಕೈ

ಸುಧಾರೆಡ್ಡಿ ತಮ್ಮ ಪ್ರತಿಷ್ಠಿತ ಕಂಪನಿ ಮೂಲಕ ಲಕ್ಷಾಂತರ ಜನರಿಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ನೆರವಾಗಿದ್ದಾರೆ. ಇವರು ಬಡ ಮಕ್ಕಳ ಶಿಕ್ಷಣಕ್ಕೆ, ಜನರಿಗೆ ಕೈಗೆಟುಕುವ ದರದಲ್ಲಿ ಔಷಧಗಳನ್ನು ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. The Global Of Empowerment Of Woman ಎಂಬ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಈ ಬಾರಿ ಚಲನ ಚಿತ್ರಯೇತರ ಕ್ಷೇತ್ರದಿಂದ ಮೆಟ್‌ ಗಾಲಾಗೆ ಆಯ್ಕೆ ಆಗುವ ಮೂಲಕ ಗಮನ ಸೆಳೆದಿದ್ದಾರೆ.

English summary

Who is Sudha Reddy, only Indian at MET Gala 2021; Check out her red carpet outfit photos

Who is Sudha Reddy, only Indian at MET Gala 2021; Check out her red carpet outfit photos, read on...
X