For Quick Alerts
ALLOW NOTIFICATIONS  
For Daily Alerts

ಟ್ರೆಂಡಿಗ್‌ನಲ್ಲಿರುವ ನೈಲ್‌ ಪಾಲಿಶ್ ಬಣ್ಣ ಹಾಗೂ ವಿನ್ಯಾಸಗಳಿವು

|

ಫ್ಯಾಷನ್‌ ವಿಚಾರಕ್ಕೆ ಬಂದಾಗ ನಾವು ಯಾವಾಗಲೂ ಟ್ರೆಂಡ್‌ ಅಲ್ಲಿ ಏನಿದೆ ಎಂಬುದನ್ನು ನೋಡಿ ನಮ್ಮ ನಮ್ಮ ಫ್ಯಾಷನ್‌ ಪ್ರಾಡಕ್ಟ್‌ಗಳನ್ನು ಆಯ್ಕೆ ಮಾಡುತ್ತೇವೆ. ಅದು ಒಂದು ಸಣ್ಣ ಹೇರ್‌ ಪಿನ್‌ ಇಂದ ಉಡುವ ಸೀರೆ, ತೊಡುವ ಬಟ್ಟೆ, ಹೇರ್‌ ಸ್ಟೈಲ್‌ ಎಲ್ಲವೂ ಟ್ರೆಂಡ್‌ ಅನ್ನು ಪಾಲಿಸುತ್ತೇವೆ.

ಇದೇ ರೀತಿ ಇದೀಗ ಟ್ರೆಂಡ್‌ ಆಗುತ್ತಿರುವುದು ನೈಲ್‌ಪಾಲಿಶ್‌. ಈಗಾಗಲೇ ಸಾಕಷ್ಟು ಭಿನ್ನ ಭಿನ್ನ ವಿನ್ಯಾಸಗಳಲ್ಲಿ ಟ್ರೆಂಡ್‌ ಸೃಷ್ಟಿಸಿದ್ದ ನೈಲ್‌ ಪಾಲಿಶ್ ಇದೀಗ ಮತ್ತೆ ಹಳೇ ಮಾದರಿಯ ಸಿಂಪಲ್‌ ವಿನ್ಯಾಸದಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ.

ಆದರೆ ಇಲ್ಲಿ ಬಣ್ಣಗಳ ಆಯ್ಕೆಯೇ ವಿಶಿಷ್ಟ ಹಾಗೂ ಐದು ಬೆರಳಿಗೂ ಭಿನ್ನ ಭಿನ್ನ ಬಣ್ಣಗಳ ನೈಲ್‌ ಪಾಲಿಶ್‌ ಬಳಸುವ ಮೂಲಕ ವಿಭಿನ್ನ ಟ್ರೆಂಡ್‌ ಸೃಷ್ಟಿಸುತ್ತಿದೆ.

ಕಪ್ಪು ಹಾಗೂ ಲೈಟ್‌ ಕಲರ್‌ ಕಾಂಬಿನೇಷನ್‌

ಕಪ್ಪು ಹಾಗೂ ಲೈಟ್‌ ಕಲರ್‌ ಕಾಂಬಿನೇಷನ್‌

ಕಪ್ಪು ಹಾಗೂ ತ್ವಚೆಯ ಬಣ್ಣದ ಈ ನೈಲ್‌ ಪಾಲಿಶ್‌ ನಿಮ್ಮ ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಇಲ್ಲಿ ವಿಶೇಷ ಎಂದರೆ ಎರಡೂ ಬಣ್ಣಗಳಿದ್ದರೂ ಎರಡರ ಮಿಶ್ರಣ ಬೆರಳುಗಳಲ್ಲಿ ಹೈಲೈಟ್‌ ಆಗುತ್ತದೆ ಹಾಗೂ ನಿಮಗೆ ಇಷ್ಟವಾದ ವಿನ್ಯಾಸವನ್ನು ಇದೇ ರಚಿಸಿಕೊಳ್ಳಬಹುದು. ಇಲ್ಲಿ ಹೃದಯಾಕಾರ ವಿನ್ಯಾಸವೇ ಆಕರ್ಷಕ ಎನಿಸದೇ ಇರದು.

ಇದು ಈಗಾ ತುಂಬಾ ಟ್ರೆಂಡ್‌ ಆಗಿರೋ ನೈಲ್‌ ಪಾಲಿಶ್‌ ಬಣ್ಣವಾಗಿದೆ, ನೀವು ಒಮ್ಮೆ ಟ್ರೈ ಮಾಡಿ ನೋಡಿ.

ಲೈಟ್‌ ಪಿಂಕ್‌ ಮತ್ತು ಗ್ಲಿಟರ್‌

ಲೈಟ್‌ ಪಿಂಕ್‌ ಮತ್ತು ಗ್ಲಿಟರ್‌

ಲೈಟ್‌ ಪಿಂಕ್‌ ಬಣ್ಣದ ನೈಲ್‌ ಪಾಲಿಶ್‌ ಹಚ್ಚಿನ ನಂತರ ಐದು ಬೆರಳುಗಳಲ್ಲಿ ಯಾವುದಾದರೂ ಎರಡು ಅಥವಾ ಮೂರು ಬೆರಳಿಗೆ ಮಾತ್ರ ನಿಮಗೆ ಇಷ್ಟವಾದ ವಿನ್ಯಾಸದಲ್ಲಿ ಗ್ಲಿಟರ್‌ ಮೂಲಕ ಡಿಸೈನ್‌ ಮಾಡಿಕೊಂಡರೆ ಸಾಮಾನಕ್ಕಿಂತ ಹೆಚ್ಚು ವಿಭಿನ್ನ ಲುಕ್‌ ನಿಮ್ಮ ಬೆರುಗಳಿಗೆ ನೀಡುತ್ತದೆ. ನೀವು ಇಲ್ಲಿ ಯಾವುದೇ ಲೈಟ್‌ ಬಣ್ಣಗಳಿಗೂ ಸಹ ಗಾಢ ಬಣ್ಣದ ಗ್ಲಿಟರ್‌ ಬಳಸಿ ಈ ಶೈಲಿ ಪ್ರಯತ್ನಿಸಬಹುದು.

ಸೋಬರ್‌ ಕಲರ್‌

ಸೋಬರ್‌ ಕಲರ್‌

ನೀವು ಸಿಂಪಲ್‌ ಹಾಗೂ ಕ್ಲಾಸಿ ಲುಕ್‌ ಬಣ್ಣ ಇಷ್ಟಪಡುವವರಾದರೆ ತಿಳಿ ಬೂದು ಬಣ್ಣದ ನೈಲ್‌ ಪಾಲಿಶ್‌ ಖಂಡಿತ ಇಷ್ಟವಾಗುತ್ತದೆ. ಇದೇ ರೀತಿ ತಿಳಿ ಗ್ರೀನ್‌, ನೀಲಿ, ಹಳದಿ ಅಂಥಾ ಸೋಬರ್‌ ಬಣ್ಣಗಳು ಇತ್ತೀಚೆಗೆ ಹೆಚ್ಚು ಟ್ರೆಂಡ್‌ ಆಗ್ತಿದೆ.

ಪಿಂಕ್‌ ಮತ್ತು ಗೋಲ್ಡನ್‌

ಪಿಂಕ್‌ ಮತ್ತು ಗೋಲ್ಡನ್‌

ಪಿಂಕ್‌ ಹಾಗೂ ಗೋಲ್ಡನ್‌ ಬಣ್ಣದ ಕಾಂಬಿನೇಷನ್‌ ನೀವು ಒಮ್ಮೆ ಟ್ರೈ ಮಾಡಲೇಬೇಕು. ಹಬ್ಬಗಳು, ಮದುವೆ ಅಥವಾ ಯಾವುದೇ ಶುಭ ಸಮಾರಂಭಗಳಿಗೆ ಹೆಚ್ಚು ಆಪ್ತವಾಗಿದೆ ಹಾಗೂ ರಿಚ್‌ ಲುಕ್‌ ನೀಡುತ್ತದೆ. ಇಲ್ಲಿ ವಿಭಿನ್ನತೆ ಎಂದರೆ ಸಂಪೂರ್ಣ ಪಿಂಕ್‌ ಬಣ್ಣ ಅನ್ವಯಿಸಿದ ನಂತರ ಗೋಲ್ಡನ್‌ ಬಣ್ಣದಲ್ಲಿ ಕೇವಲ ಅಂಚನ್ನು ಮಾತ್ರ ರಚಿಸಿ. ಒಂದು ಬೆರಳಿಗೆ ಮಾತ್ರ ಗೋಲ್ಡನ್‌ ಬಣ್ಣ ಅನ್ವಯಿಸಿ. ಇದು ಬೆರಳುಗಳ ಅಂದ ಖಂಡಿತವಾಗಿ ದ್ವಿಗುಣಗೊಳಿಸುತ್ತದೆ.

ಗ್ಲಿಟರ್‌

ಗ್ಲಿಟರ್‌

ಗ್ಲಿಟರ್‌ ಯಾವಾಗಲೂ ಟ್ರೆಂಡಿಗ್‌ ಆದರೆ ಯಾವ ಬಣ್ಣದ್ದು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಪಾಚಿ ಗ್ರೀನ್‌, ನೇರಳೆ, ರೆಡ್‌ ಹಾಗೂ ಪಿಂಕ್‌ ಬಣ್ಣ ಗ್ಲಿಟರ್‌ ನೈಲ್‌ ಪಾಲಿಶ್‌ ಇದೀಗ ಹೆಚ್ಚು ಟ್ರೆಂಡಿಗ್‌ ಇದೆ.

English summary

Most Trending Nail Colors Of This Season in Kannada

Here we are discussing about Most Trending Nail Colors Of This Season in Kannada. Read more.
Story first published: Monday, October 4, 2021, 18:06 [IST]
X
Desktop Bottom Promotion