For Quick Alerts
ALLOW NOTIFICATIONS  
For Daily Alerts

ದುರ್ಗಾ ಪೂಜೆಗೆ ಪುರುಷರಿಗೆ ಬಂಗಾಳಿ ಶೈಲಿಯ ಕುರ್ತಾಗಳು

By Hemanth
|

ನವರಾತ್ರಿಯ ಸಂದರ್ಭದಲ್ಲಿ ಧರಿಸುವಂತಹ ಬಟ್ಟೆಬರೆಗಳ ಕಡೆ ಕೂಡ ಆಕರ್ಷಣೀಯವಾಗಿರುವುದು. ದುರ್ಗೆಯ ಪೂಜೆಯ ವೇಳೆ ಧರಿಸಲು ಡಿಸೈನರ್ ಗಳು ವಿವಿಧ ರೀತಿಯ ವಸ್ತ್ರಗಳನ್ನು ವಿನ್ಯಾಸ ಮಾಡುತ್ತಾರೆ. ಅದರಲ್ಲೂ ಮಹಿಳೆಯರಿಗಾಗಿ ವಿವಿಧ ರೀತಿಯ ವಸ್ತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೇವಲ ಮಹಿಳೆಯರು ಮಾತ್ರ ದುರ್ಗಾ ಪೂಜೆಯ ವೇಳೆ ಸಿಂಗರಿಸಿಕೊಂಡರೆ ಸಾಕೇ?

ಪುರುಷರು ಕೂಡ ಸುಂದರವಾಗಿ ಕಾಣುವುದು ಬೇಡವೇ? ಪುರುಷರಿಗಾಗಿಯೇ ಹಲವಾರು ರೀತಿಯ ವಸ್ತ್ರಗಳು ಈಗ ಮಾರುಕಟ್ಟೆಗೆ ಬಂದಿದೆ. ಅದರಲ್ಲೂ ದುರ್ಗಾ ಪೂಜೆಗೆ ಬಂಗಾಳಿ ಕುರ್ತಾ ಧರಿಸುವುದು ಪುರುಷರ ಸೌಂದರ್ಯ ಇನ್ನಷ್ಟು ಹೆಚ್ಚಿಸಲಿದೆ. ಇದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ....

ಮೊತಿಫ ಫ್ರಿಂಟ್ಸ್

ಮೊತಿಫ ಫ್ರಿಂಟ್ಸ್

ಮೊತಿಫ ಪ್ರಿಂಟ್ ಬ್ಲಾಕ್ ಪ್ರಿಂಟ್ ನ ಒಂದು ಬಗೆಯಾಗಿದ್ದು, ಇದನ್ನು ಪುರುಷರು ಹಾಗೂ ಮಹಿಳೆಯರು ಹೆಚ್ಚು ಇಷ್ಟಪಡುತ್ತಾರೆ. ಮೊತಿಫ ಪ್ರಿಂಟ್ ಮೊದಲು ಕೇವಲ ಹತ್ತಿ ಬಟ್ಟೆಯಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆದರೆ ಈಗ ಇದು ಟ್ರೆಂಡ್ ಆಗಿ ಹೋಗಿದೆ. ಕಡು ಬಣ್ಣದ ಕುರ್ತಾಗಳಲ್ಲಿಯೂ ಮೊತಿಫ ಪ್ರಿಂಟ್ ಸಿಗುವುದು.

ಎಂಬ್ರೊಡರ್ಡ್(ಕಸೂತಿ)

ಎಂಬ್ರೊಡರ್ಡ್(ಕಸೂತಿ)

ಬೆಂಗಾಳಿ ಕಸೂತಿಯನ್ನು ಕುರ್ತಾದ ಕತ್ತು ಹಾಗೂ ಸುತ್ತಲು ಅಳವಡಿಸುತ್ತಿದ್ದರು. ಇದು ತುಂಬಾ ಏಕತಾನತೆ ಉಂಟು ಮಾಡುತ್ತಿತ್ತು. ಆದರೆ ಈಗ ಕುರ್ತಾದ ಸಂಪೂರ್ಣ ದೇಹದಲ್ಲಿ ಕಸೂತಿ ಮಾಡಲಾಗುತ್ತದೆ. ಇದು ತುಂಬಾ ಕಡುವಾಗಿ ಕಂಡುಬಂದು ಪುರುಷರ ಸೊಬಗು ಹೆಚ್ಚಿಸುವುದು.

ಖಾದಿ

ಖಾದಿ

ಸಾಂಪ್ರದಾಯಿಕವಾದ ಕೈಮಗ್ಗದಿಂದ ಖಾದಿ ಕುರ್ತಾಗಳನ್ನು ತಯಾರಿಸಲಾಗುವುದು. ಇದು ಎಲ್ಲಾ ವಯಸ್ಸಿನ ಪುರುಷರಿಗೆ ತುಂಬಾ ಒಗ್ಗಿಕೊಳ್ಳುವುದು. ಖಾದಿ ಎಂದರೆ ಕಡು ಬಣ್ಣವಿಲ್ಲವೆನ್ನುವ ಭಾವನೆಯಿತ್ತು. ಆದರೆ ಈ ವರ್ಷ ಹಬ್ಬಕ್ಕೆ ಖಾದಿಯಲ್ಲೂ ಕಡು ಬಣ್ಣ ಲಭ್ಯವಿದೆ.

ಜಮಿದಾರ್ (ಜಮೀನ್ದಾರ)

ಜಮಿದಾರ್ (ಜಮೀನ್ದಾರ)

ಬಂಗಾಳದಲ್ಲಿ ಜಮೀನ್ದಾರರು ಅಥವಾ ಜಮೀದಾರರು ಧರಿಸುತ್ತಿದ್ದ ಕುರ್ತಾಗಳಲ್ಲಿ ಅವರ ಎದೆಯ ಭಾಗದಲ್ಲಿ ಒಂದು ನೂಲು ತೂಗುತ್ತಾ ಇರುತ್ತಿತ್ತು. ಇದು ಗುಜರಾತಿ ಗರ್ಬಾ ನೃತ್ಯಗಾರರ ಶೈಲಿಯಲ್ಲಿರುತ್ತಿತ್ತು. ಇದು ತುಂಬಾ ರಾಜಮನೆತನದ ಮತ್ತು ಸಾಂಪ್ರದಾಯಿಕವಾಗಿ ಕಾಣಿಸುತ್ತಾ ಇತ್ತು. ಇದನ್ನು ಬಂಗಾಳಿ ಧೋತಿ ಜತೆ ಧರಿಸಿದಾಗ ಅದು ತುಂಬಾ ಅದ್ಭುತವಾಗಿರುತ್ತಿತ್ತು.

ತುಸ್ಸಾರ್

ತುಸ್ಸಾರ್

ತುಸ್ಸಾರ್ ಸಿಲ್ಕ್ ಬಂಗಾಳಿಗಳ ಸಾಂಪ್ರದಾಯಿಕ ಧಿರಿಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದನ್ನು ಶತಮಾನಗಳಿಂದಲೂ ಧರಿಸುತ್ತಾ ಬರಲಾಗುತ್ತಾ ಇದೆ. ಹೊಸ ಹೊಸ ಸಂಶೋಧನೆ ಹಾಗೂ ಆಧುನೀಕರಣದೊಂದಿಗೆ ಈ ಕುರ್ತಾಗಳು ಇಂದಿನ ದಿನಗಳಲ್ಲಿ ತುಂಬಾ ಗಾಢವಾಗಿರುವ ಬಣ್ಣಗಳಲ್ಲೂ ಲಭ್ಯವಿರುತ್ತದೆ. ಯುವಜನಾಂಗವು ಹೆಚ್ಚಾಗಿ ಇಷ್ಟಪಡುವ ಬಣ್ಣಗಳು ಈ ಕುರ್ತಾಗಳಲ್ಲಿ ಇವೆ.

ಮೊತ್ಕಾ ಫ್ಯಾಬ್ರಿಕ್

ಮೊತ್ಕಾ ಫ್ಯಾಬ್ರಿಕ್

ಮೊತ್ಕಾ ತುಸ್ಸಾರ್ ಗೆ ಸಮಾನವಾಗಿರುವಂತದ್ದಾಗಿದೆ. ಮೊತ್ಕಾ ಫ್ಯಾಬ್ರಿಕ್ ಪುರುಷರಿಗೆ ತುಂಬಾ ಹೊಂದಿಕೊಳ್ಳುತ್ತದೆ ಮತ್ತು ಪುರುಷರು ಅತ್ಯಾಧುನಿಕವಾಗಿ ಕಾಣುವಂತೆ ಮಾಡುತ್ತದೆ. ಮೊತ್ಕಾ ಫ್ಯಾಬ್ರಿಕ್ ನಿಂದ ಮಾಡಿರುವ ಕುರ್ತಾವು ತುಂಬಾ ಹಗುರ ಬಣ್ಣಗಳಲ್ಲಿ ಕಂಡುಬರುವುದು.

ಸ್ಟ್ರಿಪ್ಡ್

ಸ್ಟ್ರಿಪ್ಡ್

ಸ್ಟ್ರಿಪ್ಡ್ ಕುರ್ತಾಗಳು ತುಂಬಾ ಹೊಸದು. ಆದರೆ ಈ ವರ್ಷ ಹೆಚ್ಚು ಜನಪ್ರಿಯವಾಗಿದೆ. ಸ್ಟ್ರಿಪ್ಡ್ ಈ ವರ್ಷದ ನವೀನ ಮಾದರಿಯಾಗಿದೆ ಮತ್ತು ಇದರಿಂದ ಕುರ್ತಾಗಳು ತುಂಬಾ ಹೊಸತನ ಪಡೆದುಕೊಂಡಿದೆ. ಹಲವಾರು ರೀತಿಯ ವಿನ್ಯಾಸದ ಕುರ್ತಾಗಳು ಇದರಲ್ಲಿ ಲಭ್ಯವಿದೆ. ಯಾವುದೇ ವಯಸ್ಸಿನ ಪುರುಷರು ಇದನ್ನು ಧರಿಸಬಹುದು.

ಚಿಂಕಾರಿ

ಚಿಂಕಾರಿ

ಕುರ್ತಾದ ಮೇಲೆ ನಡೆಸುವಂತಹ ಕಸೂತಿಯನ್ನು ಚಿಂಕಾರಿ ಎಂದು ಕರೆಯಲಾಗುತ್ತದೆ. ಇದು ಲಕ್ನೋದ ಮಾದರಿಯಲ್ಲಿರುತ್ತದೆ. ಹಗುರ ಹತ್ತಿ ಬಟ್ಟೆ ಮೇಲೆ ಬಿಳಿ ನೂಲಿನೊಂದಿಗೆ ಈ ಕಸೂತಿ ಮಾಡಲಾಗುತ್ತದೆ. ಚಿಂಕಾರಿ ತುಂಬಾ ಲಘು ಬಟ್ಟೆಯಾಗಿದೆ ಮತ್ತು ಅತ್ಯುತ್ತಮವಾಗಿ ಕಾಣುವುದು. ಹೆಚ್ಚಿನ ಕಸೂತಿಯು ನೀಲಿ ಬಣ್ಣದ ಛಾಯೆಯಾಗಿರುತ್ತದೆ. ದುರ್ಗಾ ಪೂಜೆಯ ವೇಳೆ ಇದು ತುಂಬಾ ಚೆನ್ನಾಗಿ ಕಾಣಿಸುವುದರಲ್ಲಿ ಸಂಶಯವೇ ಇಲ್ಲ.

English summary

Durga Puja Special: Types Of Bengali Kurtas For Men

While there is a range of outfits for women to choose from during Durga Puja, why are men left behind? It is said by none that women can be the only fashionistas. We have categorized the trending and authentic Bengali kurta designs for men that can be worn by them for any festival, especially Durga Puja.
X
Desktop Bottom Promotion