For Quick Alerts
ALLOW NOTIFICATIONS  
For Daily Alerts

ಅಯ್ಯಂಗಾರಿ ಸ್ಯಾರಿ ಲುಕ್‌ನಲ್ಲಿ ಮಿಂಚಿದ ಧನುಶ್ರೀ

|

ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಧನುಶ್ರೀ ಇತ್ತೀಚೆಗೆ ಮಾಡಿಸಿರುವ ಫೋಟೋ ಶೂಟ್‌ ನೆಟ್ಟಿಗರ ಮನ ಗೆದ್ದಿದೆ. ಅಯ್ಯಂಗಾರಿ ಮದುಮಗಳ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಧನುಶ್ರೀ ಈ ಲುಕ್‌ನಲ್ಲಿ ಸಕತ್‌ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ.

ಭಾರತೀಯ ನಾರಿಯ ಉಡುಗೆ ಸೀರೆಯಾದರೂ ಆ ಸೀರೆಯನ್ನು ಹಲವು ರೀತಿಯಲ್ಲಿ ಧರಿಸಲಾಗುವುದು. ಕನ್ನಡ ಸೀರೆ, ಕಚ್ಚೆ ಸೀರೆ, ಕೊಡವ ಸೀರೆ, ಗೌಡ ಸೀರೆ, ಅಯ್ಯಂಗಾರಿ ಸೀರೆ, ಕೇರಳ ಸೀರೆ ಹೀಗೆ ವಿವಿಧ ಕಡೆ ವಿಧ ಬಗೆಯಲ್ಲಿ ಸೀರೆ ಧರಿಸಲಾಗುವುದು.

ಧನುಶ್ರೀ ಅವರು ಧರಿಸಿರುವುದು ಪಕ್ಕಾ ಅಯ್ಯಂಗಾರಿ ಸ್ಟೈಲ್‌. ಅಯ್ಯಂಗಾರಿ ಸೀರೆಯನ್ನು ಎರಡು ರೀತಿಯಲ್ಲಿ ಧರಿಸುತ್ತಾರೆ. ಕೆಲವರು ಕಚ್ಚೆ ರೀತಿ, ನೆರಿಗೆ ರೀತಿ ಕೂಡ ಬಳಸಲಾಗುವುದು. ಅದರಲ್ಲಿ ಸೀರೆಯ ಸೆರಗನ್ನು ಮಾಮೂಲಿ ಸೀರೆಗೆ ಹಾಕುವಂತೆ ಹಾಕಿ ನಂತರ ಮುಂದೆ ತಂದು ಸಿಕ್ಕಿಸಲಾಗುವುದು. ಧನುಶ್ರೀ ಗೋಲ್ಡನ್, ಪಿಂಕ್‌ ಕಾಂಬಿನೇಷನ್‌ನಲ್ಲಿ ಮಿಂಚಿದ್ದಾರೆ. ಇನ್ನು ಹೇರ್‌ ಸ್ಟೈಲ್ ಕೂಡ ಒಂದು ಬದಿಗೆ ತುರುಬು ಕಟ್ಟಿ ಸಕತ್‌ ಟ್ರೆಡಿಷನಲ್‌ ಲುಕ್‌ನಲ್ಲಿ ಮಿಂಚಿದ್ದಾರೆ. ನಿಮಗೆ ಏನು ಅನಿಸ್ತು ಈ ಲುಕ್ ಬಗ್ಗೆ?

English summary

Bigboss Dhanushree In Ayangari Saree Look

Here is bigboss Dhanushree in ayangari saree look, have a look,
Story first published: Saturday, October 2, 2021, 16:51 [IST]
X