For Quick Alerts
ALLOW NOTIFICATIONS  
For Daily Alerts

ನೀವು ಧರಿಸುವ ಡ್ರೆಸ್ ಕಲರ್‌ಗಿದೆ ನಿಮ್ಮ ಮೂಡ್ ಸರಿ ಮಾಡುವ ಶಕ್ತಿ! ಮೂಡ್ ಸರಿಹೋಗಲು ಯಾವ ಬಣ್ಣದ ಬಟ್ಟೆ ಧರಿಸಬೇಕು?

|

ಕೆಲವೊಮ್ಮೆ ವಿನಾಕಾರಣ ನಮ್ಮ ಮೂಡ್ ಕೆಟ್ಟುಹೋಗುವುದನ್ನು ಕಂಡಿರುತ್ತೀರಿ. ಯಾವುದೇ ಕೆಲಸಕ್ಕೂ ಮನಸ್ಸಿರುವುದಿಲ್ಲ, ಒಂದು ರೀತಿಯ ಆಲಸ್ಯ ಮತ್ತು ಜಡತ್ವವನ್ನು ಅನುಭವಿಸುತ್ತೇವೆ. ಅಂತಹ ಪರಿಸ್ಥಿತಿಯಿಂದ ಹೊರಬರಲು ಸಹಾಯ ಮಾಡುವ ಒಂದು ಕಾರಣವೆಂದರೆ, ನಮ್ಮ ಪ್ರೀತಿಪಾತ್ರರ ಜೊತೆಗಿನ ಸಂವಹನ. ಅದನ್ನು ಹೊರತುಪಡಿಸಿ, ನಮ್ಮ ಮೂಡ್ ಸರಿಮಾಡುವ ಇನ್ನೊಂದು ವಿಧಾನವೆಂದರೆ, ನಾವು ಧರಿಸುವ ಬಟ್ಟೆ.

ಹೌದು, ಹಲವಾರು ಅಧ್ಯಯನಗಳ ಪ್ರಕಾರ, ನಾವು ಧರಿಸುವ ಬಟ್ಟೆಯ ಬಣ್ಣವು ನಿಮ್ಮ ಮನಸ್ಥಿತಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇವುಗಳು ನಿಮ್ಮ ಮನಸ್ಸನ್ನು ಸುಧಾರಿಸಬಹುದು ಅಥವಾ ನಮ್ಮ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. ಹಾಗಾದರೆ, ಮೂಡ್ ಸರಿಹೋಗಲು ಯಾವ ಕಲರ್ ಬಟ್ಟೆ ಧರಿಸಬೇಕು ಎಂಬುದನ್ನು ಇಲ್ಲಿ ನೋಡೋಣ.

ಮೂಡ್ ಲಿಫ್ಟಿಂಗ್‌ನಂತೆ ಕಾರ್ಯನಿರ್ವಹಿಸುವ ಬಣ್ಣಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಹಳದಿ:

1. ಹಳದಿ:

ಹಳದಿಯನ್ನು ಸಂತೋಷದ ಬಣ್ಣ ಎಂದೂ ಕರೆಯುತ್ತಾರೆ. ಇದು ಖುಷಿಯ ಕಂಪನವನ್ನು ಹೊರಹಾಕಿ, ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ನೀವು "ನಾನು ಇದನ್ನು ಖಂಡಿತವಾಗಿ ಮಾಡಬಲ್ಲೆ" ಎಂಬ ಆತ್ಮವಿಶ್ವಾಸವನ್ನು ಪಡೆಯಲು ಬಯಸಿದರೆ, ನಂತರ ಹಳದಿ ಬಟ್ಟೆಗಳನ್ನು ಧರಿಸಿ. ಅದರ ನಂತರ ಆಗುವ ಸಕಾರಾತ್ಮಕ ಬದಲಾವಣೆಗಳನ್ನು ನೀವು ಗಮನಿಸಬಹುದು. ನಿಂಬೆ ಹಳದಿ, ನಿಯಾನ್ ಹಳದಿ, ಡಾರ್ಕ್ ಹಳದಿ, ಪ್ರಕಾಶಮಾನವಾದ ಹಳದಿ, ಇತ್ಯಾದಿಗಳಂತಹ ಹಳದಿ ಬಣ್ಣದ ವಿವಿಧ ಶೇಡ್‌ಗಳನ್ನು ಆರಿಸಿಕೊಳ್ಳಬಹುದು.

2. ಕೆಂಪು:

2. ಕೆಂಪು:

ಕೆಂಪು ಬಣ್ಣವು ನಿಮ್ಮನ್ನು ಚೈತನ್ಯಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನಿಮಗೆ ಆಯಾಸವಾಗಿದ್ದರೆ, ಬೇಗನೆ ಎದ್ದೇಳಿ, ಸ್ನಾನ ಮಾಡಿ ಮತ್ತು ಪ್ರಕಾಶಮಾನವಾದ ಕೆಂಪು ಬಟ್ಟೆ ಧರಿಸಿ. ಕೆಂಪು ಬಣ್ಣವು ಚಿತ್ತ-ವರ್ಧಕ ಬಣ್ಣವಾಗಿದ್ದು, ನಿಮಗೆ ಸಂತೋಷವನ್ನು ನೀಡುತ್ತದೆ ಜೊತೆಗೆ ಆತ್ಮವಿಶ್ವಾಸವನ್ನು ತುಂಬುತ್ತದೆ.

3. ಕಿತ್ತಳೆ ಬಣ್ಣ:

3. ಕಿತ್ತಳೆ ಬಣ್ಣ:

ಕಿತ್ತಳೆ ಬಣ್ಣವು ಪ್ರಕಾಶಮಾನವಾದ ಮತ್ತು ಆಕರ್ಷಕ ಬಣ್ಣವಾಗಿದ್ದು, ಇದು ಶಕ್ತಿ ಮತ್ತು ಉತ್ಸಾಹಕ್ಕೆ ಸಂಬಂಧಿಸಿದೆ. ಇದು ಸಂತೋಷವನ್ನು ತರುವ ಸಾಮರ್ಥ್ಯವನ್ನು ಹೊಂದಿದೆ. ನೀವು ಸಾಮಾಜಿಕ ಚಿಟ್ಟೆಯಂತೆ ಬಹಿರ್ಮುಖಿಯಾಗಲು ಬಯಸಿದಾಗ, ಕಿತ್ತಳೆ ಬಣ್ಣವನ್ನು ಧರಿಸಿ.

4. ಗುಲಾಬಿ ಅಥವಾ ಪಿಂಕ್:

4. ಗುಲಾಬಿ ಅಥವಾ ಪಿಂಕ್:

ಗುಲಾಬಿ ಬಣ್ಣದ ಉಡುಪುಗಳು ನಿಮಗೆ ಶಾಂತ ಪ್ರಜ್ಞೆಯನ್ನು ನೀಡಲು ಹಾಗೂ ಸಂತೋಷವನ್ನು ಉತ್ತೇಜಿಸಲು ಅತ್ಯುತ್ತಮವಾಗಿವೆ. ಇದು ಸಾಮಾನ್ಯವಾಗಿ ಸ್ವ-ಪ್ರೀತಿಗೆ ಸಂಬಂಧಿಸಿದೆ. ಬಬಲ್ಗಮ್ ಗುಲಾಬಿ, ನಿಯಾನ್ ಗುಲಾಬಿ, ತಿಳಿ ಗುಲಾಬಿ, ಬೇಬಿ ಪಿಂಕ್ ಸೇರಿದಂತೆ ಹಲವಾರು ಶೇಡ್‌ಗಳು ಲಭ್ಯವಿದ್ದರೂ, ಡಾರ್ಕ್ ಪಿಂಕ್ ಉತ್ತಮ ಆಯ್ಕೆಯಾಗಿದೆ. ಏಕಕಾಲದಲ್ಲಿ ಹೆಚ್ಚು ಆತ್ಮವಿಶ್ವಾಸ, ಹರಟೆ ಮತ್ತು ಸ್ನೇಹಪರತೆಯನ್ನು ಅನುಭವಿಸಲು ಬಯಸಿದರೆ ಈ ಬಣ್ಣವನ್ನು ಧರಿಸಿ.

5. ನೇರಳೆ:

5. ನೇರಳೆ:

ನೇರಳೆ ಒಂದು ರಾಯಲ್ ಬಣ್ಣವಾಗಿದ್ದು, ಅದು ಐಷಾರಾಮಿ ಮತ್ತು ಸೃಜನಶೀಲತೆಗೆ ಸಂಬಂಧಿಸಿದೆ. ಕೆನ್ನೇರಳೆ ಬಣ್ಣವು ತುಂಬಾ ರೋಮಾಂಚನಕಾರಿ ಬಣ್ಣವಾಗಿದ್ದು, ಅದನ್ನು ನೋಡಿದಾಗ ನಿಮಗೆ ಹೆಚ್ಚು ಚೈತನ್ಯ ಸಿಗುತ್ತದೆ. ಜೊತೆಗೆ ಈ ಬಣ್ಣವು ಆಧ್ಯಾತ್ಮಿಕತೆ ಮತ್ತು ಅಂತಃಪ್ರಜ್ಞೆಯೊಂದಿಗೆ ಸಂಪರ್ಕ ಹೊಂದಿದ್ದು, ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳಲು ಕಷ್ಟವಾದರೆ, ಈ ಬಣ್ಣದ ಬಟ್ಟೆಯನ್ನು ಧರಿಸಿ, ಉತ್ತರವನ್ನು ನೋಡಿ.

6. ಹಸಿರು:

6. ಹಸಿರು:

ಹಸಿರು ನಿಮಗೆ ಶಾಂತಿಯ ಭಾವನೆಯನ್ನು ನೀಡುತ್ತದೆ. ಇದು ಸಾಮಾನ್ಯವಾಗಿ ಪ್ರಕೃತಿಯ ಚೈತನ್ಯದೊಂದಿಗೆ ಸಂಬಂಧಿಸಿದ್ದು, ಸಾಮರಸ್ಯ ಮತ್ತು ನವೀಕರಣವನ್ನು ಉತ್ತೇಜಿಸುತ್ತದೆ . ನೀವು ರಿಫ್ರೆಶ್ ಆಗಲು ಬಯಸಿದಾಗ, ಹಸಿರು ಬಣ್ಣದ ಬಟ್ಟೆ ಧರಿಸಿ. ಇದು ಹೊಸ ಜನರನ್ನು ಭೇಟಿ ಮಾಡಲು ಹೋಗುವಾಗ ಸೂಕ್ತವಾದ ಬಣ್ಣವಾಗಿದೆ.

7. ನೀಲಿ:

7. ನೀಲಿ:

ನೀವು ಯಾವುದರಿಂದಾದರೂ ಋಣಾತ್ಮಕ ಭಾವನೆಗಳನ್ನು ಪಡೆಯುತ್ತಿದ್ದರೆ, ಅದನ್ನು ಹೋಗಲಾಡಿಸಲು ನೀಲಿ ಬಣ್ಣವು ಉತ್ತಮ ಆಯ್ಕೆ. ತಜ್ಞರ ಪ್ರಕಾರ, ಇದು ಅಂತಃಪ್ರಜ್ಞೆಗೆ ಸಹಾಯ ಮಾಡುವುದಲ್ಲದೇ, ನೆಮ್ಮದಿಯನ್ನು ನೀಡುತ್ತದೆ. ನೀರು, ಸಾಗರಗಳು ಮತ್ತು ಆಕಾಶದೊಂದಿಗೆ ಸಂಬಂಧಿಸಿರುವ ನೀಲಿ ಬಣ್ಣದ ಬಟ್ಟೆ ಧರಿಸುವುದರಿಂದ, ಆಕಾಶವನ್ನು ನೋಡುವ ಅದೇ ಅನುಭವವನ್ನು ನೀಡುತ್ತದೆ. ಶಾಂತವಾಗಿ ಮತ್ತು ಸಂಯೋಜಿತವಾಗಿರಲು, ಆಕಾಶ ನೀಲಿ ಅಥವಾ ತಿಳಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿ.

English summary

Mood Lifting Colours to wear To Brighten Your Day in Kannada

Here we talking about Mood Lifting Colours to wear To Brighten Your Day in Kannada, read on
Story first published: Monday, October 11, 2021, 11:27 [IST]
X
Desktop Bottom Promotion