For Quick Alerts
ALLOW NOTIFICATIONS  
For Daily Alerts

ಈ ಬಣ್ಣದ ಉಡುಪುಗಳು ಪ್ರತಿಯೊಬ್ಬರಿಗೂ ಹೊಂದುವುದು

|

ನಾವು ಭಾರತೀಯರು ಅದ್ಭುತವಾದ ಮುಖದ ವೈಶಿಷ್ಟ್ಯಗಳನ್ನು ಹೊಂದಿದ್ದೇವೆ. ಅದರಲ್ಲೂ ಚರ್ಮದ ಟೋನ್‌ಗೆ ಬಂದರೆ, ನಾವು ತುಂಬಾ ಬಿಳಿಯೂ ಇಲ್ಲ, ಹಾಗಂತ ತುಂಬಾ ಗಾಢ ಬಣ್ಣವನ್ನು ಹೊಂದಿಲ್ಲ. ಬಿಳಿ-ಕಂದು ಮಿಶ್ರಿತ ಮೈಬಣ್ಣ ಹೊಂದಿರುವವರು ನಾವು. ಇದರಲ್ಲಿ ಸಾಕಷ್ಟು ಶೇಡ್‌ಗಳೂ ಇವೆ. ಅವರವರಿಗೆ ಸರಿಹೊಂದುವಂತಹ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡುವುದು ರೂಢಿ.

ಆದರೆ, ಯಾವುದೇ ಸರಳ ಅಥವಾ ದುಬಾರಿ ಉಡುಗೆ ತೊಟ್ಟಿದ್ದರೂ ಎಲ್ಲರಿಗೂ ಸರಿಹೊಂದುವಂತಹ ಕೆಲವು ಬಣ್ಣಗಳಿವೆ. ಈ ಬಣ್ಣ ಬಟ್ಟೆಗಳು ಮುಖ್ಯವಾಗಿ ಭಾರತೀಯ ಮೈಬಣ್ಣಕ್ಕೆ ಸೂಕ್ತವಾದವು. ಅಂತಹ ವರ್ಣಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಭಾರತೀಯರ ಮೈಬಣ್ಣಕ್ಕೆ ಹೊಂದುವಂತಹ ಬಣ್ಣಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಆಲಿವ್ ಬಣ್ಣ:

ಆಲಿವ್ ಬಣ್ಣ:

ಹಗಲಿನ ಸಮಾರಂಭ ಮತ್ತು ರಾತ್ರಿ ಪಾರ್ಟಿಯ ಸಮಯದಲ್ಲಿ ಎಲ್ಲರ ಗಮನ ಸೆಳೆಯುವಂತೆ ಮಾಡುವ ಅತ್ಯಂತ ಅದ್ಭುತವಾದ ಬಣ್ಣ. ಆಲಿವ್ ತುಂಬಾ ಗಾಢ ಬಣ್ಣವೂ ಅಲ್ಲ, ಅಥವಾ ತುಂಬಾ ತಿಳಿ ಬಣ್ಣವೂ ಅಲ್ಲ. ಇದು ಭಾರತೀಯರ ವಿವಿಧ ಚರ್ಮದ ಟೋನ್ಗಳಿಗೆ ಅದ್ಭುತವಾಗಿ ಕಾಣುವ ಶಕ್ತಿಯ್ನು ಹೊಂದಿದೆ. ಆಗೊಮ್ಮೆ ಈಗೊಮ್ಮೆ ಆಲಿವ್ ಜಂಪ್‌ಸೂಟ್‌ಗಳಲ್ಲಿ ಸಾಕಷ್ಟು ನಟಿಯರನ್ನು ನೋಡುತ್ತೇವೆ. ಅದರಂತೆ, ಈ ಬಣ್ಣದ ಸೀರೆಗಳು ಸಹ ಉತ್ತಮವಾಗಿರುತ್ತದೆ.

ಹಸಿರು:

ಹಸಿರು:

ಭಾರತದಲ್ಲಿನ ಹೆಚ್ಚಿನ ರಾಜಮನೆತನದವರಿಗೆ ಅತ್ಯಂತ ಪ್ರಿಯವಾದ ಒಂದು ಬಣ್ಣವೆಂದರೆ, ಅದು ಪಚ್ಚೆ ಹಸಿರು ಅಂತಾನೇ ಹೇಳಬಹುದು. ಆಭರಣಗಳ ತುಣುಕುಗಳಿಗೆ ಮಾತ್ರವಲ್ಲ, ಉಡುಪುಗಳ ನೋಟವನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತಿತ್ತು. ಈ ಬಣ್ಣವು ಎಲ್ಲರ ಚರ್ಮದ ಟೋನ್ಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ.

ಕಡುಗೆಂಪು:

ಕಡುಗೆಂಪು:

ಕಡುಗೆಂಪು ಬಣ್ಣವು ಸುಂದರವಾದ ಗಾಢ ಕೆಂಪು ಛಾಯೆಯಾಗಿದ್ದು, ಅದು ನೇರಳೆ ಬಣ್ಣದಿಂದ ಸ್ವಲ್ಪ ಪ್ರಭಾವವನ್ನು ಹೊಂದಿದೆ. ಮದುವೆಗಳು ಅಥವಾ ರೆಡ್ ಕಾರ್ಪೆಟ್‌ಗಳ ವಿಷಯಕ್ಕೆ ಬಂದಾಗ, ಕಡುಗೆಂಪು ಬಣ್ಣವೇ ಹೈಲೈಟ್. ನಿಮಗೆ ಮೇಕಪ್ ಇಷ್ಟವಿಲ್ಲದೇ, ಸರಳವಾಗಿರಲು ಬಯಸಿದರೆ, ಕಡುಗೆಂಪು ಬಣ್ಣದ ಉಡುಪನ್ನು ಧರಿಸಿದರೆ, ಸಾಕು. ಎಲ್ಲರ ತಲೆ ತಿರುಗುವಂತೆ ಮಾಡಬಹುದು!

ಬ್ಲಶ್ ಪಿಂಕ್:

ಬ್ಲಶ್ ಪಿಂಕ್:

ಅನೇಕ ಹುಡುಗಿಯರು ನೆಚ್ಚಿನ ಬಣ್ಣ ಅಂತಾನೇ ಹೇಳಬಹುದು. ಈ ಬ್ಲಶ್ ಗುಲಾಬಿಯು ಪ್ರತಿಯೊಬ್ಬರ ನೆಚ್ಚಿನದಾಗಿದೆ. ಈ ಬಣ್ಣವು ಮೃದುವಾದ ನೋಟವನ್ನು ನೀಡುತ್ತದೆ ಜೊತೆಗ ಧರಿಸಿದವರ ಸೊಬಗು ಮತ್ತು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಸರಳವಾದ ಡೈಮಂಡ್ ಸೆಟ್‌ಗಳೊಂದಿಗೆ ಅಥವಾ ನೆಕ್ಲಸ್‌ನೊಂದಿಗೆ ಅದನ್ನು ಮ್ಯಾಚ್ ಮಾಡಿ, ಇದರಿಂದ ಇತರರನ್ನು ಅಸೂಯೆ ಪಡುವುದರಲ್ಲಿ ಸಂದೇಹವಿಲ್ಲ.

ಬದನೆಕಾಯಿ ನೇರಳೆ:

ಬದನೆಕಾಯಿ ನೇರಳೆ:

ಇದು ಬಹುಕಾಂತೀಯ ಬಣ್ಣವಾಗಿದ್ದು, ಇದನ್ನು ವಿಶೇಷವಾಗಿ ಭಾರತೀಯ ಚರ್ಮದ ಟೋನ್ಗಳಿಗಾಗಿ ತಯಾರಿಸಲಾಗುತ್ತದೆ. ಕಂದು, ಮೆರೂನ್ ಇತ್ಯಾದಿಗಳನ್ನು ಇಷ್ಟಪಡದಿದ್ದರೆ ಈ ಬಣ್ಣ ಅತ್ಯಂತ ಸೂಕ್ತವಾದ ಪರಿಪೂರ್ಣ ಗಾಢ ಛಾಯೆಯಾಗಿದೆ.

ಕಪ್ಪು:

ಕಪ್ಪು:

ಹಲವಾರು ಕಾರಣಗಳಿಗಾಗಿ ಕಪ್ಪು ಬಹುತೇಕ ಎಲ್ಲರಿಗೂ ಪ್ರಿಯವಾಗಿದೆ, ಅದು ನಿಮ್ಮನ್ನು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತದೆ ಜೊತೆಗೆ ಹೊಳಪು ಕಾಣಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಸರಳವಾದ ಕಪ್ಪು ಸೀರೆಯನ್ನು ಧರಿಸಿದರೂ ಅಥವಾ ಕಪ್ಪು ಗೌನ್ ಅನ್ನು ಧರಿಸಿದ್ದರೂ ಸಹ, ಎಲ್ಲಾ ಲುಕ್ ನಿಮಗೆ ಅದ್ಭುತವಾಗಿರುತ್ತದೆ.

ಸಾಸಿವೆ ಹಳದಿ:

ಸಾಸಿವೆ ಹಳದಿ:

ಹಳದಿ ಭಾರತೀಯ ಹಿಂದೂಗಳಿಗೆ ಮಂಗಳಕರ ಬಣ್ಣ ಎಂದು ಪರಿಗಣಿಸಲಾಗಿದೆ. ಪವಿತ್ರ ಸಂದರ್ಭ ಬಂದಾಗಲೆಲ್ಲಾ, ಬಹುತೇಕ ಎಲ್ಲರೂ ಹಳದಿ ಧರಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಸಾಸಿವೆ ಹಳದಿ ಅಂತಹ ಪರಿಪೂರ್ಣ ಬಣ್ಣ, ಅದು ತುಂಬಾ ಗಾಢವಾಗಿಲ್ಲ ಮತ್ತು ತುಂಬಾ ಹಗುರವಾಗಿಲ್ಲ, ಭಾರತೀಯ ಚರ್ಮದ ಟೋನ್‌ಗೆ ಅದ್ಭುತವಾಗಿದೆ.

Read more about: fashion ಫ್ಯಾಷನ್
English summary

Colours that Suit Indian Skin Tone in Kannada

Here we talking about Colours that suit Indian skin tone in kannada, read on
Story first published: Saturday, January 8, 2022, 17:54 [IST]
X
Desktop Bottom Promotion