For Quick Alerts
ALLOW NOTIFICATIONS  
For Daily Alerts

ಕೇನ್ಸ್‌ 2016: ಡ್ರೆಸ್ ವಿಷಯದಲ್ಲಿ ಇವರಿಗೆ ಜೀರೋ ಮಾರ್ಕ್ಸ್!

By Deepak
|

69 ನೇ ಕೇನ್ಸ್ ಚಲನಚಿತ್ರೋತ್ಸವ ರಂಗು ರಂಗಾಗಿ ನಡೆಯುತ್ತಿದೆ. ಇಲ್ಲಿ ಚಲನಚಿತ್ರಗಳು ಪ್ರದರ್ಶನಗೊಂಡು ಸುದ್ದಿಯಾಗುತ್ತವೆ. ಇನ್ನು ಚಲನಚಿತ್ರ ತಾರೆಯರು ಮತ್ತು ಅದಕ್ಕೆ ಸಂಬಂಧಪಟ್ಟ ಸೆಲೆಬ್ರಿಟಿಗಳಿಗೆ ಈ ಚಿತ್ರೋತ್ಸವ ತುಂಬಾ ಮುಖ್ಯವಾಗಿರುತ್ತದೆ. ಅದರಲ್ಲೂ ಇಲ್ಲಿ ಚಿತ್ರಗಳು ಎಷ್ಟು ಚರ್ಚೆಯಾಗುತ್ತವೆಯೋ, ಅಷ್ಟೇ ಮಟ್ಟಿಗೆ ಫ್ಯಾಷನ್ ಸಹ ಚರ್ಚೆಯಾಗುತ್ತದೆ. ಸೆಲೆಬ್ರಿಟಿಗಳು ಈ ಉತ್ಸವಕ್ಕೆಂದೆ ವರ್ಷವೆಲ್ಲಾ ತಲೆ ಕೆಡಿಸಿಕೊಂಡು ಹೊಸ ಹೊಸ ಬಗೆಯ ಉಡುಗೆಗಳನ್ನು ಧರಿಸಿ ಬರುತ್ತಾರೆ. ಆದರೆ ಪ್ರತಿದಿನ ನಮ್ಮ ದಿನವಾಗಿರುವುದಿಲ್ಲವೇ?

ಈ ಬಾರಿಯ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಬಂದ ಕೆಲವರು ತಮ್ಮ ಫ್ಯಾಷನ್‌ನಿಂದ ಗಮನ ಸೆಳೆದರೆ, ಇನ್ನೂ ಕೆಲವರು ತಮ್ಮ ಕೆಟ್ಟ ಉಡುಗೆಯಿಂದ ಗಮನ ಸೆಳೆದರು. ಇಂತಹ ಅದ್ಧೂರಿ ಸಮಾರಂಭದಲ್ಲಿ ಹೇಗಿರಬಾರದು ಎಂಬುದಕ್ಕೆ ಮಾದರಿಯನ್ನು ಒದಗಿಸಿಕೊಟ್ಟ ಆ ಸೆಲೆಬ್ರಿಟಿಗಳು ಯಾರೆಂದು ತಿಳಿದುಕೊಳ್ಳೋಣ ಬನ್ನಿ...

ರಿಲೆ ಕಿಯೋಫ್

ರಿಲೆ ಕಿಯೋಫ್

ಈ ಅದ್ಭುತ ನಟಿಯು ಗುಸ್ಸಿ ರಫಲ್‌ ಗೌನ್‌ನಲ್ಲಿ ಕಾಣಿಸಿಕೊಂಡಳು. ಈಕೆ ಧರಿಸಿದ ಉಡುಗೆಯು ಕೆಂಪು ಹಾಸಿನ ಈ ಸಮಾರಂಭಕ್ಕಿಂತ ಹಳೆಯ ಉಡುಗೆಯಾಗಿ ಕಂಡಿತು.

ಕ್ರಿಸ್ಟೆನ್ ಸ್ಟಿವರ್ಟ್

ಕ್ರಿಸ್ಟೆನ್ ಸ್ಟಿವರ್ಟ್

ರಾಕ್ ಲುಕ್‌ನಲಿ ಕಾಣಿಸಿಕೊಂಡು ರಾಕಿಂಗ್ ಆಗಲು ಬಂದ ಕ್ರಿಸ್ಟೆನ್ ಸ್ಟಿವರ್ಟ್ ಸ್ವಲ್ಪ ಎಡವಿ ಬಿಟ್ಟರು. ಅದಕ್ಕೆ ಕಾರಣ ಅವರು ಧರಿಸಿದ್ದ ಲಾಂಗ್ ಪ್ಲೀಟೆಡ್ ಸ್ಕರ್ಟ್ ಮತ್ತು ಬಟನ್ ಡೌನ್ ಶರ್ಟ್.

ಜೂಲಿಯನ್ ಮೂರ್

ಜೂಲಿಯನ್ ಮೂರ್

ಈ ನಟಿ ಲೂಯಿಸಿ ವ್ಯೂಟೀನ್ ಔಟ್‌ಫಿಟ್ ಅನ್ನು ಧರಿಸಿ ಬಂದಿದ್ದಳು. ಸುಮ್ಮನೆ ಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತೇನೋ, ಆದರೆ ರೆಡ್‌ ಕಾರ್ಪೆಟ್ ಮೇಲೆ ಆ ಫ್ರಿಂಗ್‌ಗಳು ಆಕ್ಟೋಪಸ್‍ನಂತೆ ಹಾರಾಡಿ ಆಕರ್ಷಣೆಯನ್ನು ಕಳೆದು ಬಿಟ್ಟವು.

ಎಲೆನಾ ಲೆನಿನಾ

ಎಲೆನಾ ಲೆನಿನಾ

ಇದನ್ನು ವರ್ಣಿಸಿ ಹೇಳಬೇಕೆ? ಏನು ತಪ್ಪಾಗಿದೆ ಈ ಉಡುಗೆಯಲ್ಲಿ ಎಂದು? ಮಕ್ಕಳಿಗೆ ವಿನೋದ ನೀಡುವ ಮಾಯಾವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬದಲು ಈಕೆ ಇಲ್ಲಿಗೆ ದಾರಿ ತಪ್ಪಿ ಬಂದಿರುತ್ತಾಳೆ ಎನಿಸದೆ.

ಮಾ ರೋಸಾ ಗರ್ಲ್

ಮಾ ರೋಸಾ ಗರ್ಲ್

ನೋಡಲು ಚೆನ್ನಾಗಿಯೇ ಇದೆ. ಆದರೆ ಈ ಸಾಗರ ಜೀವ ಜಗತ್ತಿನಿಂದ ಪ್ರೇರಣೆ ಪಡೆದಿರುವ ಈ ಉಡುಗೆಯು ಕ್ಯಾನೆಯ ಸಮಾರಂಭಕ್ಕೆ ಒಪ್ಪುತ್ತಿರಲಿಲ್ಲ.

ವೆನೆಸ್ಸಾ ಪ್ಯಾರಡಿಸ್

ವೆನೆಸ್ಸಾ ಪ್ಯಾರಡಿಸ್

ಈ ಗೌನ್ ನೋಡಿ, ಇದನ್ನು ಧರಿಸಿದ ಈ ಫ್ರೆಂಚ್ ಗಾಯಕಿ, ಕ್ಯಾನೆಯ ಸಮಾರಂಭಕ್ಕೆ ಕಿಟಕಿಯ ಕರ್ಟೇನ್ ಬಟ್ಟೆ ಧರಿಸಿ ಬಂದ ಹಾಗೆ ತೋರುತ್ತಿದೆ.

ಸೊಕೊ

ಸೊಕೊ

ಈ ಫ್ರೆಂಚ್ ನಟಿಯು ತನ್ನ ಲೇಸ್‌ನಿಂದ ಗೊಂದಲಕ್ಕೆ ಒಳಗಾದಂತೆ ತೋರುತ್ತಿದೆ. ಪ್ಲೇಡ್ ಸಾಕ್ಸ್‌ಗಳ್, ಕಪ್ಪು ಮತ್ತು ಚಿನ್ನದ ಬಣ್ಣದ ಶೂಗಳು, ರಫಲ್‌ಗಳು, ಪೋಲ್ಕಾ ಡಾಟ್‌ಗಳು. ಒಟ್ಟಿನಲ್ಲಿ ಈ ಉಡುಗೆಯಲ್ಲಿ ಎಲ್ಲವೂ ಇದೆ, ಆದರೆ ಆಕರ್ಷಣೆ ಮಾತ್ರ ಇಲ್ಲ.

ಪಜ್ ವೆಗಾ

ಪಜ್ ವೆಗಾ

ಈ ಉಡುಗೆಯಲ್ಲಿ ವರ್ಣ ವಿನ್ಯಾಸ ತುಂಬಾ ಚೆನ್ನಾಗಿದೆ. ಕಪ್ಪು ಮತ್ತು ಬಿಳಿ ಬಣ್ಣ ಅನುರೂಪವಾಗಿ ಆಕೆಗೆ ಹೊಂದುತ್ತದೆ. ಪ್ಲಂಗಿಂಗ್ ನೆಕ್‌ಲೈನ್, ಬೆಲ್ಟೆಡ್ ವೇಸ್ಟ್ ಎಲ್ಲವೂ ಓಕೆ. ಆದರೆ ಆ ದೊಗಳೆ ಕೈ (ಸ್ಲೀವ್) ಇಡೀ ಉಡುಗೆಯ ಲುಕ್ ಅನ್ನು ಹಾಳು ಮಾಡಿಬಿಟ್ಟಿದೆ.

ಜೂಲಿಯಾ ರೆಸ್ಟೊಯಿನ್ ರೊಯಿಟ್‌ಫೆಲ್ಡ್

ಜೂಲಿಯಾ ರೆಸ್ಟೊಯಿನ್ ರೊಯಿಟ್‌ಫೆಲ್ಡ್

ಸ್ಪಲ್ಪ ಭಾಗ ಮೈ ಮುಚ್ಚಿದ ಬಟ್ಟೆ, ಇನ್ನೂ ಸ್ವಲ್ಪ ಅರೆ ಪಾರದರ್ಶಕ, ಇನ್ನೂ ಸ್ವಲ್ಪ ಪಾರದರ್ಶಕ ಹೀಗೆ ಎಲ್ಲವನ್ನು ಒಂದೇ ಬಟ್ಟೆಯಲ್ಲಿ ತೋರಿಸಲು ಹೋದರೆ, ಏನಾಗುತ್ತದೆ? ಎಡವಟ್ಟಾಗುತ್ತದೆ.

ಹರಯಾ ಹರ್‌ಗೇಟ್

ಹರಯಾ ಹರ್‌ಗೇಟ್

ಸರಿಯಾಗಿ ಹೇಳಬೇಕು ಎಂದರೆ ಈ ಉಡುಗೆಯು ಅತ್ಯುತ್ತಮ ಉಡುಗೆಯ ಪಟ್ಟಿಯಲ್ಲಿರಬೇಕಿತ್ತು. ಆದರೆ ನಾಟೆಡ್ ನೆಕ್, ಫ್ರೇಯಡ್ ಎಡ್ಜ್‌ಗಳು ಮತ್ತು ಶೀರ್ ಕಟ್ ಈ ಉಡುಗೆಯನ್ನು ಕೆಟ್ಟ ಉಡುಗೆಯ ಪಟ್ಟಿಗೆ ಸೇರಿಸಿಬಿಟ್ಟಿವೆ.

English summary

10 Badly Dressed Celebs At The Cannes Red Carpet 2016

The Cannes Film Festival is such an elite event and it does deserve the best of fashion. So, here we give you a list of all the badly dressed celebrities that failed to impress us.
Story first published: Monday, May 23, 2016, 23:05 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more