For Quick Alerts
ALLOW NOTIFICATIONS  
For Daily Alerts

ಕುಳ್ಳಗಿರುವವರು ಈ ಸ್ಟೈಲ್ ಡ್ರೆಸ್ ಹಾಕಿದ್ರೆ, ಉದ್ದವಾಗಿ ಕಾಣಿಸ್ತೀರಾ!

|

ಕುಳ್ಳಗಿರುವವರು ಕ್ಯೂಟ್ ಆಗಿರುತ್ತಾರೆ ಎಂಬ ಮಾತಿದೆ. ಆದರೆ, ಅವರ ಕಷ್ಟ ಅವರಿಗಲ್ಲದೇ ಬೇರಾರಿಗೂ ಅರ್ಥವಾಗದು. ಆದರೆ, ಆ ಎತ್ತರಕ್ಕೆ ತಕ್ಕಂತೆ ಉಡುಪು ಧರಿಸಿದರೆ, ಅಂತಹವರು ನಿಜವಾಗಿಯೂ ಮುದ್ದಾಗಿಯೇ ಕಾಣುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಕುಳ್ಳಗಿರುವರಿಗೆ ಎಂತಹ ಬಟ್ಟೆ ಸೂಕ್ತವಾಗುತ್ತದೆ ಎಂಬುದು ತಿಳಿದಿರಬೇಕು. ಅವರು ಧರಿಸುವ ಉಡುಪು ಅವರನ್ನು ತುಸು ಎತ್ತರವಾಗಿ ಕಾಣುವಂತೆ ಮಾಡಬೇಕೇ ಹೊರತು, ಮತ್ತಷ್ಟು ಕುಳ್ಳಕ್ಕೆ ಅಲ್ಲ. ಆದ್ದರಿಂದ ಅಂತಹವರು ಎಂಹ ಸ್ಟೈಲ್ ಬಟ್ಟೆ ಧರಿಸಬೇಕು ಎಂಬುದನ್ನು ಇಲ್ಲಿ ನೀಡಿದ್ದೇವೆ. ಇದರಿಂದ ನೀವು ಸುಂದರವಾಗಿ ಮತ್ತು ಕ್ಲಾಸಿಯಾಗಿ ಕಾಣಿಸಬಹುದು.

ಕುಳ್ಳಗಿರುವವರಿಗೆ ಎಂತಹ ಉಡುಪು ಸೂಕ್ತ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಬ್ಲಾಕ್ ಜೀನ್ಸ್:

1. ಬ್ಲಾಕ್ ಜೀನ್ಸ್:

ಕಪ್ಪು ಜೀನ್ಸ್ ಎಲ್ಲಾ ಮಹಿಳೆಯರು ಕಡ್ಡಾಯವಾಗಿ ಹೊಂದಿರಬೇಕಾದ ಬಟ್ಟೆಯಾಗಿದೆ, ಆದರೆ ಅವು ವಿಶೇಷವಾಗಿ ಕುಳ್ಳಕ್ಕೆ ಇರುವ ಮಹಿಳೆಯರಿಗೆ ಹೆಚ್ಚು ಸೂಕ್ತವಾಗಿವೆ. ಏಕೆಂದರೆ, ಇವುಗಳನ್ನು ಹೈ ಹೀಲ್ಸ್ ಜೊತೆ ಧರಿಸುವುದರಿಂದ ನಿಮ್ಮ ಕಾಲುಗಳನ್ನು ಉದ್ದವಾಗಿ ಕಾಣುವಂತೆ ಮಾಡುತ್ತವೆ, ಅಷ್ಟೇ ಅಲ್ಲ, ನಿಮ್ಮ ಕಾಲುಗಳಿಗೆ ಒಂದೊಳ್ಳೆ ಶೇಪ್ ನೀಡುವಂತಹ ಒಂದು ಉಡುಪಾಗಿದೆ. ಇದು ಕೇವಲ ಕುಳ್ಳಗಿರುವವರಿಗೆ ಅಷ್ಟೇ ಅಲ್ಲ, ದಪ್ಪಗಿರುವವರ ಕಾಲನ್ನು ಸ್ಲಿಮ್ ಆಗಿ ಕಾಣಲು ಸಹ ಸಹಾಯ ಮಾಡುತ್ತದೆ.

2. ಸ್ಕೇಟರ್ ಡ್ರೆಸ್:

2. ಸ್ಕೇಟರ್ ಡ್ರೆಸ್:

ಕುಳ್ಳಗಿರುವವರಿಗೆ ಈ ಸ್ಕೇಟರ್ ಡ್ರೆಸ್ ಉತ್ತಮ ಆಯ್ಕೆಯಾಗಿದೆ. ಇವು ಕೂಡ ನಿಮ್ಮ ಎತ್ತರಕ್ಕೆ ಸರಿಯಾಗಿ ಹೊಂದಿಕೊಳ್ಲುವುದಲ್ಲದೇ, ನೀವು ಕುಳ್ಳಗಿದ್ದೀರಾ ಎಂಬ ಭಾವನೆಯನ್ನು ಕ್ಷಣ ಕಾಲ ಮರೆಮಾಡುವುದು. ಉತ್ತಮ ಫಲಿತಾಂಶಗಳಿಗಾಗಿ, ಚಿಕ್ಕದಾದ, ವರ್ಣರಂಜಿತ ಸ್ಕೇಟರ್ ಡ್ರೆಸ್‌ನ್ನು ಬಳಸಿ.

3. ಶಾರ್ಟ್ ಫ್ಲೇರ್ಡ್ ಸ್ಕರ್ಟ್

3. ಶಾರ್ಟ್ ಫ್ಲೇರ್ಡ್ ಸ್ಕರ್ಟ್

ಎತ್ತರ ಕಡಿಮೆ ಇರುವವರು ಮ್ಯಾಕ್ಸಿ ಸ್ಕರ್ಟ್‌ಗಳನ್ನು ಆಯ್ಕೆ ಮಾಡಬಹುದು. ಇದರಿಂದಾಗಿ ಅವರು ದಪ್ಪ ಮತ್ತು ಉದ್ದವಾಗಿ ಕಾಣುತ್ತಾರೆ. ಆದರೆ, ವಿರುದ್ಧ ಬಣ್ಣದ ಶರ್ಟ್ ಹಾಗೂ ಟಾಪ್ ಆರಿಸಿ. ಇದು ನಿಮ್ಮನ್ನು ಮತ್ತಷ್ಟು ಹೈಲೈಟ್ ಆಗಿ ಕಾಣುವಂತೆ ಮಾಡುವುದು. ಜೊತೆಗೆ ಸ್ಕರ್ಟ್ ಚಿಕ್ಕದಾಗಿದ್ದರೆ ಉತ್ತಮ. ಈ ರೀತಿಯ ಸ್ಕರ್ಟ್ ನಿಮ್ಮ ಸಣ್ಣ ಸೊಂಟದಿಂದ ಪ್ರಾರಂಭವಾಗಿ, ಮೊಣಕಾಲಿನ ಮೇಲೆ ಅಗಲವಾಗಿ ಬೀಳುವ ಮೂಲಕ ನಿಮ್ಮ ಕಾಲುಗಳನ್ನು ಹೆಚ್ಚು ಉದ್ದವಾಗಿ ಕಾಣುವಂತೆ ಮಾಡುತ್ತದೆ.

4. ಟರ್ಟಲ್ನೆಕ್:

4. ಟರ್ಟಲ್ನೆಕ್:

ನಿಮ್ಮ ಕುತ್ತಿಗೆಗೆ ಗಮನವನ್ನು ನೀಡುವುದು ನಿಮ್ಮ ದೇಹಕ್ಕೆ ಉದ್ದವನ್ನು ಸೇರಿಸಲು ಸುಲಭವಾದ ವಿಧಾನವಾಗಿದೆ. ಅದಕ್ಕಾಗಿ ಟರ್ಟಲ್ನೆಕ್ ಅನ್ನು ಧರಿಸುವುದು ಉತ್ತಮ. ಇದು ನಿಮಗೆ ಉದ್ದವಾದ ಕುತ್ತಿಗೆಯನ್ನು ಹೊಂದಿರುವ ನೋಟವನ್ನು ನೀಡುವುದು. ಅದಕ್ಕಾಗಿ ಬಿಗಿಯಾದ ಫಿಟ್‌ನೊಂದಿಗೆ ಕಪ್ಪು ಟರ್ಟಲ್‌ನೆಕ್ ಒಳ್ಳೆಯ ಆಯ್ಕೆಯಾಗಿದ್ದು, ಇದು ವೃತ್ತಿಪರ ನೋಟವನ್ನು ಸಹ ನೀಡುತ್ತದೆ .

5. ಕ್ಲಾಸಿ ಶಾರ್ಟ್ ಡ್ರೆಸ್:

5. ಕ್ಲಾಸಿ ಶಾರ್ಟ್ ಡ್ರೆಸ್:

ಕುಳ್ಳಗಿರುವವರ ಒಂದು ಪ್ರಯೋಜನವೆಂದರೆ ಹೆಚ್ಚು ಎಕ್ಸ್‌ಪೋಸ್ ಮಾಡದೇ, ಎಲ್ಲಾ ರೀತಿಯ ಶಾರ್ಟ್ ಡ್ರೆಸ್‌ಗಳನ್ನು ಧರಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಶಾರ್ಟ್ ಡ್ರೆಸ್ ಉತ್ತಮ ಆಯ್ಕೆ. ಇದು ನಿಮ್ಮನ್ನು ವೃತ್ತಿಪರವಾಗಿ ಕಾಣುವಂತೆ ಮಾಡುವ ಉಡುಪು. ಇದು ಮೊಣಕಾಲಿನಷ್ಟಿದ್ದರೂ, ಕೆಲಸ ಮಾಡಲು ಹಾಯಾಗಿರುವುದರ ಜೊತೆಗೆ, ನಿಮ್ಮನ್ನು ಎತ್ತರವಾಗಿ ಕಾಣುವಂತೆ ಮಾಡುತ್ತದೆ.

Read more about: fashion ಫ್ಯಾಷನ್
English summary

Styling Tips for Short Women : Types Of Clothes for Every Petite Woman in Kannada

Here we talking about styling tips for short women : types of clothes for every petite woman in kannada, read on
X
Desktop Bottom Promotion