For Quick Alerts
ALLOW NOTIFICATIONS  
For Daily Alerts

ಇನ್‌ಸ್ಟಾಗ್ರಾಮ್‌ನಲ್ಲಿ ಮಿಂಚುತ್ತಿರುವ ಮಿಂಚು ಕಣ್ಣಿನ ಬೆಡಗಿ ದಿಶಾ ಪಟಾನಿ!

By Jaya Subramanya
|

ಇಂದಿನ ವೇಗದ ಯುಗದಲ್ಲಿ ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟ್ಟರ್ ಹೆಚ್ಚಾಗಿ ಜನರ ಮನ್ನಣೆಯನ್ನು ಗಳಿಸುತ್ತಿದೆ. ಸೆಲೆಬ್ರಿಟಿ ಕೂಡ ಈ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಫಾಲೋವರ್‌ಗಳನ್ನು ಹೊಂದಿದ್ದರೆ ಅವರೇ ರಾಣಿಗಳು, ರಾಜರು ಎಂದೆನಿಸಿಬಿಡುತ್ತಾರೆ. ಬಾಲಿವುಡ್‌ನಲ್ಲಿ ದಿಶಾ ಪಟಾನಿ ಇನ್‌ಸ್ಟಾಗ್ರಾಮ್‌ನಂತಹ ಖಾತೆಯಲ್ಲಿ ಹೆಚ್ಚಿನ ಅನುಯಾಯಿಗಳನ್ನು ಪಡೆದುಕೊಂಡು ಸ್ಟಾರ್ ಎನಿಸಿಬಿಟ್ಟಿದ್ದಾರೆ.

ಸುಂದರಿಯಾಗಿರುವ ದಿಶಾ ಹಾಕುವ ಫೋಟೋಗಳು ಮತ್ತು ಸ್ಟೇಟಸ್‌ಗಳಿಗೆ ಹೆಚ್ಚಿನವರು ಫಿದಾ ಆಗಿದ್ದಾರೆ ಮತ್ತು ಹೆಚ್ಚಿನ ಫ್ಯಾನ್ ಫಾಲೋವರ್ಸ್‌ಗಳನ್ನು ಇವರು ಪಡೆದುಕೊಂಡಿದ್ದಾರೆ. ಕಡಿಮೆ ಚಿತ್ರದಲ್ಲಿ ನಟಿಸಿದ್ದರೂ ಕೂಡ ಜಾಲತಾಣದಲ್ಲಿ ದಿಶಾ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹೆಚ್ಚಿನ ನಟಿಯರು ಚಿತ್ರ ಅಂಗಳದಲ್ಲಿ ಬಂದು ಹೋಗುವ ಈ ಸಮಯದಲ್ಲಿ ದಿಶಾ ಹೆಚ್ಚಿನ ಫ್ಯಾನ್‌ಗಳನ್ನು ಪಡೆದುಕೊಂಡಿದ್ದು ಆಕೆಗಿರುವ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.

Disha Patanis

ಫ್ಯಾಷನ್ ಬಗ್ಗೆ ತಮ್ಮದೇ ಆದ ಬುದ್ಧಿವಂತಿಕೆಯನ್ನು ಹೊಂದಿರುವ ದಿಶಾ, ಏನೇ ಮಾಡಿದರೂ ಡಿಫರೆಂಟ್ ಆಗಿ ಅದನ್ನು ತೋರ್ಪಡಿಸುತ್ತಾರೆ. ತಾವು ಧರಿಸುವ ದಿರಿಸಿಗೆ ಆಕೆ ಸರಿಯಾಗಿ ನ್ಯಾಯವನ್ನು ಒದಗಿಸುತ್ತಿದ್ದು ತಮ್ಮ ಅದ್ಭುತ ನೃತ್ಯ ಕೌಶಲ್ಯಗಳಿಂದ ಪಡ್ಡೆ ಹುಡುಗರ ಮನಸ್ಸಿಗೆ ಲಗ್ಗೆ ಹಾಕಿದ್ದಾರೆ. ಆದಾಗ್ಯೂ ಒಮ್ಮೊಮ್ಮೆ ಈ ಸುಂದರಿ ಫ್ಯಾಷನ್‌ನಲ್ಲಿ ಕೆಲವು ತಪ್ಪುಗಳನ್ನು ಎಸಗಿ ತಮ್ಮ ಫ್ಯಾನ್‌ಗಳ ಟ್ರೋಲ್‌ಗೂ ಬಲಿಯಾಗುತ್ತಾರೆ. ಪ್ರಸ್ತುತ ನಟಿ ವದಂತಿ ಗೆಳೆಯನಾಗಿರುವ ಟೈಗರ್ ಶ್ರಾಫ್ ಜೊತೆ ನಟಿಸಿರುವ ಬಾಗಿ 2 ನ ಪ್ರಚಾರದಲ್ಲಿ ನಿರತರಾಗಿದ್ದಾರೆ.

Disha Patanis

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ದಿಶಾ ಅಪ್‌ಲೋಡ್ ಮಾಡಿದ ಫೋಟೋ 1.1 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದ್ದು ಆಕೆಯ ಫೋಟೋಗಳು ಇನ್‌ಸ್ಟಾದಲ್ಲಿ ಕ್ರೇಜಿ ಎಂದೆನಿಸುತ್ತಿದೆ. ಚಿತ್ರದಲ್ಲಿ ಆಕೆ ಬಾಂಬರ್ ಜಾಕೆಟ್‌ನಲ್ಲಿ ತನ್ನ ಸೌಂದರ್ಯವನ್ನು ಪ್ರಸ್ತುತಪಡಿಸಿದ್ದು, ಕಪ್ಪು ಟ್ಯಾಂಕ್ ಟಾಪ್‌ ಅನ್ನು ಧರಿಸಿದ್ದಾರೆ. ಡೆನೀಮ್ ಪ್ಯಾಂಟ್ ಅನ್ನು ಇದಕ್ಕೆ ಜೊತೆಯಾಗಿ ಧರಿಸಿದ್ದು ಸನ್ ಗ್ಲಾಸ್, ಮೇಲಕ್ಕೆ ಎತ್ತಿ ಕಟ್ಟಿದ ತುರುಬು ಮತ್ತು ಬಿಳಿ ಬಣ್ಣದ ಸ್ನೀಕರ್‌ನಲ್ಲಿ ಮುದ್ದು ಗೊಂಬೆಯಂತೆ ಕಂಡುಬಂದಿದ್ದಾರೆ.

Disha Patanis

ಆಕೆಯ ನೀಳ ಕಾಯ ಮತ್ತು ಸಣ್ಣಗಿನ ಬಳುಕುವ ದೇಹ ಅಂತೆಯೇ ಸುಂದರ ನಗು ಆಕೆಯ ಪ್ಲಸ್ ಪಾಯಿಂಟ್ ಎಂದೆನಿಸಿದೆ. ಕೆಲವೇ ದಿನಗಳಲ್ಲಿ ಫ್ಯಾಷನ್ ಲೋಕವನ್ನು ಆಳುತ್ತಿರುವ ಸೋನಂ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದ್ದಾರೆ ಎಂಬುದು ಈ ಖಾತೆಗಳ ಫಾಲೋವರ್‌ಗಳಿಂದಲೇ ತಿಳಿದು ಬರಲಿದೆ.

English summary

Disha Patani's Latest Look Is Every Girl's Dream

Bollywood has seen many young and beautiful actresses who've become a rage momentarily and before you could comprehend, fade away in oblivion. But the actress we are talking about here has an edge over all such beauties.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more