For Quick Alerts
ALLOW NOTIFICATIONS  
For Daily Alerts

ಶುಭ ಪೂಂಜಾ ಮದುವೆ ಫೋಟೋಗಳು: ಸರಳ ಧರಿಸಿನಲ್ಲಿ ಮದುಮಗಳ ಲುಕ್

|

ಸ್ಯಾಂಡಲ್ವುಡ್ ನಟಿ, ಬಿಗ್‌ಬಾಸ್‌ ಖ್ಯಾತಿ ಶುಭ ಪೂಂಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಭ ಪೂಂಜಾ ತಮ್ಮ ಪ್ರೇಮಿ ಸುಮಂತ್‌ ಅವರೊಂದಿಗೆ ಮಜಲಬೆಟ್ಟುಬೀಡುವಿನಲ್ಲಿ ಸಪ್ತಪದಿ ತುಳಿದಿದ್ದಾರೆ.

ಸೆಲೆಬ್ರಿಟಿಯಾದರೂ ಸರಳ ವಿವಾಹವಾದ ಶುಭ ಪೂಂಜಾ

ಸೆಲೆಬ್ರಿಟಿಯಾದರೂ ಸರಳ ವಿವಾಹವಾದ ಶುಭ ಪೂಂಜಾ

ಅವರು ಶೇರ್‌ ಮಾಡಿರುವ ಮದುವೆ ಫೋಟೋದಲ್ಲಿ ತುಂಬಾನೇ ಮದುಮಗ-ಮಗಳು ಇಬ್ಬರೂ ತುಂಬಾ ಸರಳವಾದ ಅಲಂಕಾರದಲ್ಲಿ ಕಂಡು ಬಂದಿದ್ದಾರೆ. ಹೆಚ್ಚೇನು ಅಲಂಕಾರವವಿಲ್ಲದೆ ಸರಳವಾದ ಅಲಂಕಾರ ಹಾಗೂ ಧಿರಿಸಿನಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕವಾದ ಉಡುಗೆಯಾದ ಬಿಳಿ ರೇಷ್ಮೆ ಪಂಚೆಯನ್ನು ಮದುಮಗ ಧರಿಸಿದ್ದಾರೆ. ಶುಭ ಪೂಂಜಾ ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ.

ತಲೆಗೆ ಸರಳವಾದ ಅಲಂಕಾರ ಮಾಡಿಕೊಂಡ ಶುಭ ಪೂಂಜಾ

ತಲೆಗೆ ಸರಳವಾದ ಅಲಂಕಾರ ಮಾಡಿಕೊಂಡ ಶುಭ ಪೂಂಜಾ

ಶುಭ ಪೂಂಜಾ ಮದುವೆಯಲ್ಲಿ ತಲೆಗೆ ವಿಶೇಷವಾದ ಅಲಂಕಾರವೇನು ಮಾಡಿಕೊಳ್ಳಲಿಲ್ಲ, ಫ್ರಂಟ್‌ ಹೇರ್‌ಸ್ಟೈಲ್‌ ಅನ್ನು ಪ್ಲೀಟ್‌ ಮಾಡಿದ್ದು ಅದಕ್ಕೆ ಮುಡಿಗೆ ಸ್ವಲ್ಪ ಹೂ ಮುಡಿದು, ಜಡೆ ಹೇರ್‌ ಸ್ಟೈಲ್‌ಗೆ ಮಾಡಿಕೊಂಡಿದ್ದಾರೆ. ನೆತ್ತಿಗೆ ನೆತ್ತಿಸರ ಧರಿಸಿದ್ದಾರೆ. ಶುಭ ಅವರು ಇತರ ಸಂದರ್ಭಗಳಲ್ಲಿ ಇದಕ್ಕಿಂತ ಗ್ರ್ಯಾಂಡ್ ಆಗಿ ಕಾಣಸಿಕೊಳ್ಳುತ್ತಿದ್ದಾರೆ, ಆದರೆ ಸರಳ ವಿವಾಹದಲ್ಲಿ ತಮ್ಮ ಹೇರ್‌ ಸ್ಟೈಲ್‌ ಕೂಡ ತುಂಬಾ ಸರಳವಾಗಿ ಮಾಡಿದ್ದಾರೆ.

ಕೆಂಪು ಬಣ್ಣದ ದಾರೆ ಸೀರೆ

ಕೆಂಪು ಬಣ್ಣದ ದಾರೆ ಸೀರೆ

ಮ್ಯಾಂಗೊ ಡಿಸೈನ್‌ನ ಕೆಂಪು ಬಣ್ಣದ ಧಾರೆ ಸೀರೆಗೆ ತುಂಬಾ ಸಿಂಪಲ್‌ ಡಿಸೈನ್‌ ಬ್ಲೌಸ್‌ ಧರಿಸಿದ್ದಾರೆ, ಎಕ್ಸ್ಟ್ರಾ ವರ್ಕ್‌, ಎಂಬ್ರಾಯ್ಡರಿ ಏನೂ ಅದರಲ್ಲಿ ಇಲ್ಲ, ತುಂಬಾ ಸಿಂಪಲ್‌ ಬ್ಲೌಸ್‌ ಡಿಸೈನ್‌ ಆಗಿದೆ. ತಮ್ಮ ಸರಳ ಮದುವೆಯಲ್ಲಿ ಡ ಉಡುಗೆ ಕೂಡ ಸರಳವಾಗಿರುವಂತೆ ನೋಡಿಕೊಂಡಿದ್ದಾರೆ ಶುಭ ಪೂಂಜಾ.

ಸರಳವಾದ ಹೂವಿನ ಹಾರ

ಸರಳವಾದ ಹೂವಿನ ಹಾರ

ಸಾಮಾನ್ಯವಾಗಿ ಸೆಲೆಬ್ರಿಟಿ ಮದುವೆಗಳಲ್ಲಿ ಗ್ರ್ಯಾಂಡ್, ದುಬಾರಿ ಬೆಲೆಯ ಹೂವಿನ ಹಾರಗಳನ್ನು ನೋಡಬಹುದು, ಗುಲಾಬಿ ಮತ್ತಿತರ ಹೂವಿನ ಹಾರವನ್ನು ಧರಿಸುತ್ತಾರೆ. ಆದರೆ ಶುಭ ಅವರು ಮಲ್ಲಿಗೆ ಸರಳ ಹೂವಿನ ಹಾರ ಧರಿಸಿದ್ದಾರೆ. ಮದುವೆಯಲ್ಲಿ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡಿರುವ ಶುಭ ಪೂಂಜಾ ಮದುಮಗಳ ಕಳೆಯಲ್ಲಿ ಮಿಂಚಿದ್ದಾರೆ.

ಹೊಸ ಬಾಳಿನ ಹೊಸ್ತಿಲಿನಲ್ಲಿ ನಿಂತಿರುವ ಜೋಡಿಗೆ ನಮ್ಮ ಶುಭ ಹಾರೈಕೆಗಳು, ನಿಮ್ಮ ಬಾಳು ಹಸನಾಗಲಿ, ಬಾಳು ಬಂಗಾರವಾಗಲಿ...

English summary

Shubha Poonja Dressing Style On Her Wedding Looks Simple And Elegant

Shubha Poonja Dressing Style On Her Wedding Looks Simple And Elegant, have a look,
X