For Quick Alerts
ALLOW NOTIFICATIONS  
For Daily Alerts

ಇತ್ತೀಚೆಗೆ ನೆಟ್ಟಿಗರ ಗಮನ ಸೆಳೆದ ಸಮಂತಾರ ಬೋಲ್ಡ್ ಲುಕ್‌

|

ಸಮಂತಾ ಸೌತ್‌ ಇಂಡಿಯಾದ ಮೋಸ್ಟ್‌ ಫ್ಯಾಷನಬಲ್‌ ಸೆಲೆಬ್ರಿಟಿಗಳಲ್ಲಿ ಒಬ್ಬರು. ಸಮಂತಾ ಮಾಡುವ ಸ್ಟೈಲ್‌ ಅನ್ನು ಅವರ ಫಾಲೋವರ್ಸ್‌ ಅನೇಕರು ಫಾಲೋ ಮಾಡುತ್ತಾರೆ. ಟ್ರೆಡಿಷನಲ್ ಲುಕ್‌ ಆಗಿರಲಿ, ಮಾಡರ್ನ್‌ ಲುಕ್‌ ಆಗಿರಲಿ ಸಮಂತಾ ಸದಾ ಯೂನಿಕ್‌ ಲುಕ್‌ನಲ್ಲಿ ಗಮನ ಸೆಳೆಯುತ್ತಾರೆ.

ಅದರಲ್ಲೂ ಇತ್ತೀಚೆಗೆ ಅವರ ಲುಕ್‌ ಸಕತ್‌ ಟ್ರೆಂಡ್‌ ಆಗಿದೆ. ಆ ಫೋಟೋಗೆ ಅವರ ಸ್ಟೈಲಿಸ್ಟ್‌ ನೀಡಿರುವ ಕ್ಯಾಪ್ಷನ್‌ ಕೂಡ ನೆಟ್ಟಿಗರ ಗಮನ ಸೆಳೆದಿದೆ. ವಿಚ್ಛೇದನದ ಬಳಿಕ ಸಮಂತಾ ಹಾಕಿರುವ ಮೊದಲ ಫೋಟೋ ಇದಾಗಿದೆ, ಆ ಫ್ಯಾಷನ್‌ ಲುಕ್‌ ನೋಡಿ ಅಭಿಮಾನಿಗಳು ವಾವ್! ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನು ಸಮಂತಾರ ಈ ಲುಕ್‌ನ ಹಿಂದಿರುವ ಸ್ಟೈಲಿಷ್ಟ್‌ ಪ್ರೀತಮ್ ಜುಕಾಲ್ಕರ್. ಅವರು ಕೂಡ ಸಮಂತಾರ ನ್ಯೂ ಲುಕ್‌ ಫೋಟೋ ಶೇರ್‌ ಮಾಡಿ ರಾತ್ರಿ ತುಂಬಾ ಕತ್ತಲಿದ್ದರೂ ಅದು ಕೊನೆಯಾಗಿ ಸೂರ್ಯ ಮೂಡಲೇಬೇಕು ಎಂಬ ಕ್ಯಾಪ್ಷನ್‌ ನೀಡಿದ್ದಾರೆ. ಸಮಂತಾ ಇತ್ತೀಚೆಗೆ ನಾಗ ಚೈತನ್ಯದಿಂದ ವಿಚ್ಛೇದನ ಪಡೆದುಕೊಂಡಿದ್ದರು. ಅವರು ಹಾಕಿರುವ ಕ್ಯಾಪ್ಷನ್‌ ಸಮಂತಾ ಬದುಕನ್ನು ಕುರಿತು ಹೇಳಿರುವಂತಿದೆ.

ಪ್ರೀತಮ್‌ ಸಮಂತಾರ ಸ್ಟೈಲಿಷ್ಟ್‌ ಆಗಿದ್ದು, ಅವರ ಕ್ರಿಯೇಟಿವ್‌ ನಿರ್ದೇಶನದಲ್ಲಿ ತೆಗೆದ ಸಮಂತಾರ ಇತರ ಫೋಟೋಗಳು ಸಕತ್‌ ಕ್ಯೂಟ್ ಆಗಿದೆ ನೋಡಿ:

 ಬಿಳಿ ವಸ್ತ್ರದಲ್ಲಿ ಸಮಂತಾ ಶೈನ್‌

ಬಿಳಿ ವಸ್ತ್ರದಲ್ಲಿ ಸಮಂತಾ ಶೈನ್‌

ಸಮಂತಾ ಬಿಳಿ ಬಣ್ಣದ ಲಾಂಗ್‌ ಫ್ರಾಕ್‌ ಧರಿಸಿದ್ದು, ಅವರ ಹೇರ್‌ ಸ್ಟೈಲ್‌ ತುಂಬಾ ಗಮನ ಸೆಳೆಯುವಂತಿದೆ. ವೇವಿ ಹೇರ್‌ಸ್ಟೈಲ್‌ಗೆ ಹೂವಿನಿಂದ ಸ್ಟೈಲ್‌ ಮಾಡಿದ್ದು ವಿಂಟರ್‌ಗೆ ತಕ್ಕ ಲುಕ್‌ ಇದಾಗಿದೆ. ಈ ಫ್ಯಾಷನ್‌ನಬಲ್ ಲುಕ್‌ ತುಂಬಾ ಗಮನ ಸೆಳೆದಿದೆ.

ವೈಟ್‌ ಬ್ಯಾಕ್‌ಲೆಸ್‌ ಟಾಪ್‌ನಲ್ಲಿ ಬೋಲ್ಡ್‌ ಲುಕ್‌

ವೈಟ್‌ ಬ್ಯಾಕ್‌ಲೆಸ್‌ ಟಾಪ್‌ನಲ್ಲಿ ಬೋಲ್ಡ್‌ ಲುಕ್‌

ವೈಟ್‌ಬ್ಯಾಕ್‌ಲೆಸ್‌ ಟಾಪ್‌, ಫ್ರಂಟ್‌ನಲ್ಲಿ ಫ್ರಿಲ್ಡ್‌ ಹೊಂದಿದ್ದು, ಅದಕ್ಕೆ ಮ್ಯಾಚ್‌ ಆಗುವ ಮುತ್ತು ಹಾಗೂ ವಜ್ರದ ಕಿವಿಯೋಲೆ ಧರಿಸಿ ಬೋಲ್ಡ್‌ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.

 ಡೇನಿಮ್ ಲುಕ್‌

ಡೇನಿಮ್ ಲುಕ್‌

ಡೇನಿಮ್‌ ಲುಕ್‌ನಲ್ಲಿ ಸಕತ್‌ ಬೋಲ್ಡ್‌ ಆಗಿ ಕಾಣಿಸಿದ್ದಾರೆ ಸಮಂತಾ. ಈ ಡ್ರೆಸ್‌ ವಿನ್ಯಾಸವನ್ನು ಪ್ರೀತಮ್ ಜುಕಾಲ್ಕರ್ ವಿನ್ಯಾಸಗೊಳಿಸಿದ್ದಾರೆ.

 ಬ್ಲೂ ಡ್ರೆಸ್‌ನಲ್ಲಿ ಟಾಪ್‌ ಲುಕ್‌

ಬ್ಲೂ ಡ್ರೆಸ್‌ನಲ್ಲಿ ಟಾಪ್‌ ಲುಕ್‌

ಪಾಕೆಟ್‌ ಇರುವ ಪಲೋಜೋ ಪ್ಯಾಂಟ್‌ಗೆ ಅದೇ ಬಣ್ಣ ಹಾಗೂ ಡಿಸೈನ್ ಇರುವ ಟಾಪ್ ಅದಕ್ಕೆ ಓವರ್‌ ಕೋಟ್‌ ಧರಿಸಿರುವ ಸಮಂತಾ ದೊಡ್ಡ ಇಯರಿಂಗ್‌ ಧರಿಸಿದ್ದಾರೆ. ರಾಯಲ್‌ ಬ್ಲೂ ಹಾಗೂ ಗ್ರೀನ್‌ ಮಿಶ್ರಿತ ಈ ಡ್ರೆಸ್‌ನಲ್ಲಿ ಬೋಲ್ಡ್‌ ಆಗಿ ಕಾಣಿಸಿದ್ದಾರೆ.

 ಟ್ರೆಡಿಷನಲ್ ಲುಕ್‌

ಟ್ರೆಡಿಷನಲ್ ಲುಕ್‌

ಬ್ಲೂ ಸೀರೆಗೆ ಸ್ಲೀವ್‌ಲೆಸ್‌ ಬ್ಲೌಸ್‌ ಧರಿಸಿರುವ ಸಮಂತಾ ಹೆವಿ ಇಯರಿಂಗ್ ಹಾಗೂ ನೆಕ್ಲೆಸ್‌ ಧರಿಸಿ, ಚಿಕ್ಕ ಬಿಂದಿ ತೊಟ್ಟು ಟ್ರೆಡಿಷನಲ್‌ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.

ಇಲ್ಲಿರುವ ಸಮಂತಾರ ಎಲ್ಲಾ ಲುಕ್‌ನ ಹಿಂದಿರುವ ಸ್ಟೈಲಿಷ್ಟ್‌ ಪ್ರೀತಮ್ ಜುಕಾಲ್ಕರ್ ಆಗಿದೆ.

English summary

Samantha's Recent Glamorous And Glittering look

Samantha's recent glamorous and glittering look, read on...
Story first published: Friday, October 8, 2021, 20:56 [IST]
X