For Quick Alerts
ALLOW NOTIFICATIONS  
For Daily Alerts

ಈ ತಪ್ಪುಗಳಿಂದ ನಿಮ್ಮ ಟ್ರೆಡಿಷನಲ್‌ ಡ್ರೆಸ್‌ ನ ಅಂದ ಹಾಳಾಗಬಹುದು!

|

ಇನ್ನೇನು, ಮದುವೆ ಸೀಸನ್‌ ಶುರುವಾಗಲಿದೆ. ಸಾಮಾನ್ಯವಾಗಿ ಮದುವೆ ಅಂದ್ರೆ, ಸಾಂಪ್ರದಾಯಿಕ ಉಡುಗೆಗಳ ಅನಾವರಣ ಅಂತಾನೇ ಹೇಳ್ಬೋದು. ಮದುವೆಯ ವಿವಿಧ ಶಾಸ್ತ್ರಗಳಿಗೆ ಅನುಗುಣವಾಗಿ, ಸಾಂಪ್ರದಾಯಿಕ ಉಡುಗೊರೆಗಳನ್ನು ಸೀರೆ, ಲೆಹಂಗಾ ಎಂದು ಆಯ್ಕೆ ಮಾಡಿಕೊಳ್ಳುತ್ತಾರೆ.

ಆದರೆ, ಸಾಂಪ್ರದಾಯಿಕ ಉಡುಗೆ ಅಂದ್ರೆ ಕೇವಲ, ದುಬಾರಿ ಹಾಗೂ ಭಾರವಾದ ಬಟ್ಟೆಗಳನ್ನು ಧರಿಸುವುದೆಂಬ ಅರ್ಥವಲ್ಲ. ನೀವು ನಿಜವಾಗಿಯೂ ಅದರಲ್ಲಿ ಸುಂದರವಾಗಿ ಕಾಣಬೇಕಾದರೆ, ಬಟ್ಟೆಗಳ ಜೊತೆಗೆ ಇತರ ವಿಷಯಗಳತ್ತ ಗಮನ ಹರಿಸಬೇಕು. ಆ ವಿಷಯಗಳು ಯಾವುವು, ಅವುಗಳ ಬಗ್ಗೆ ತಿಳಿಯೋಣ.

ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವಾಗ ನೆನಪಿಡಬೇಕಾದ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

1. ಸರಿಯಾದ ಫಿಟ್ಟಿಂಗ್ :

1. ಸರಿಯಾದ ಫಿಟ್ಟಿಂಗ್ :

ಉಡುಗೆಯ ಫಿಟ್ಟಿಂಗ್‌ ಸರಿಯಿಲ್ಲದಿದ್ದರೆ ಸಾಂಪ್ರದಾಯಿಕ ಉಡುಗೆಯಾಗಲಿ ಅಥವಾ ಪಾಶ್ಚಿಮಾತ್ಯ ಉಡುಗೆಗಳಾಗಲಿ ಅದು ಚೆನ್ನಾಗಿ ಕಾಣುವುದಿಲ್ಲ. ಆದ್ದರಿಂದ ಮೊದಲು ಈ ಬಗ್ಗೆ ಗಮನ ಕೊಡಿ. ನೀವು ಧರಿಸಲು ಯೋಚಿಸುತ್ತಿರುವ ಯಾವುದೇ ಬಟ್ಟೆಗಳನ್ನು ಹಾಕಿಕೊಂಡು ಹೋಗುವ ಮೊದಲು ಅದನ್ನು ಒಂದೆರಡು ಬಾರಿ ಮನೆಯಲ್ಲಿ ಹಾಕಿಕೊಂಡು ಪರೀಕ್ಷಿಸಿ. ಇದರಿಂದಾಗಿ ಫಿಟ್ಟಿಂಗ್ ಬಗ್ಗೆ ಗಮನ ಕೊಡಬಹುದು ಮತ್ತು ಸಮಯಕ್ಕೆ ಸರಿಯಾಗಿ ಸರಿಪಡಿಸಬಹುದು.

2. ಫ್ಯಾಬ್ರಿಕ್ ಗುಣಮಟ್ಟ:

2. ಫ್ಯಾಬ್ರಿಕ್ ಗುಣಮಟ್ಟ:

ಬಟ್ಟೆಗಳನ್ನು ಖರೀದಿಸುವಾಗ, ಬಣ್ಣ, ವಿನ್ಯಾಸ ಮತ್ತು ಶೈಲಿಯೊಂದಿಗೆ, ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ ಅದರ ಗುಣಮಟ್ಟ. ವೆಲ್ವೆಟ್, ಕಿಮ್‌ಖಾಬ್, ಉಣ್ಣೆ, ರೇಷ್ಮೆಗಳು ಚಳಿಗಾಲಕ್ಕೆ ಅತ್ಯುತ್ತಮವಾಗಿದ್ದು, ನಿಮ್ಮನ್ನು ಬೆಚ್ಚಗಿರಿಸುವುದಲ್ಲದೇ, ಉತ್ತಮ ಲುಕ್‌ ಕೂಡ ನೀಡುವುದು.

3. ಆಭರಣ:

3. ಆಭರಣ:

ಸಾಂಪ್ರದಾಯಿಕ ಉಡುಗೆ ಎಂದರೆ, ಭಾರೀ ಹೊಳೆಯುವ ಬಟ್ಟೆ ಮತ್ತು ಆಭರಣಗಳನ್ನು ಧರಿಸುವುದು ಎಂದಲ್ಲ. ಸರಳ ನಿಯಮವನ್ನು ಅರ್ಥಮಾಡಿಕೊಳ್ಳಿ, ನಿಮ್ಮ ಬಟ್ಟೆಗಳು ತುಂಬಾ ಭಾರವಾಗಿದ್ದರೆ, ಆಭರಣವನ್ನು ಹಗುರವಾಗಿ ಇರಿಸಿ. ಒಂದು ವೇಳೆ ಆಭರಣವನ್ನೇ ಹೈಲೈಟ್‌ ಮಾಡಬೇಕೆಂದು ಯೋಚಿಸುತ್ತಿದ್ದರೆ, ಸ್ವಲ್ಪ ಹಗುರವಾದ ಬಟ್ಟೆಗಳನ್ನು ಧರಿಸಿ. ಉದಾಹರಣೆಗೆ, ನೀವು ರೇಷ್ಮೆ ಸೀರೆಯ ಮೇಲೆ ತಿಳಿ ಗೋಲ್ಡನ್ ಚೈನ್ ಅಥವಾ ಕಿವಿಯೋಲೆಗಳನ್ನು ಧರಿಸಿದರೆ, ಎಲ್ಲರ ಕಣ್ಣು ನಿಮ್ಮ ಮೇಲೆ ಇರುವುದು.

4. ಪಾದರಕ್ಷೆಗಳು:

4. ಪಾದರಕ್ಷೆಗಳು:

ಅರೇ, ಲೆಹೆಂಗಾ, ಸೀರೆ ಧರಿಸಿರುವುದರಿಂದ, ಪಾದರಕ್ಷೆ ಅಥವಾ ಸ್ಲಿಪರ್‌ ಕಡೆ ಯಾರೂ ಗಮನಕೊಡುತ್ತಾರೆ ಎಂದು ನೀವು ಚಿಂತಿಸಬಹುದು. ಆದರೆ, ಇದು ತಪ್ಪು. ಏಕೆಂದರೆ, ಸೀರೆ, ಲೆಹೆಂಗಾ ಹಾಕಿಕೊಂಡು ವಾಕಿಂಗ್ ಮಾಡುವಾಗಲೂ ಪಾದರಕ್ಷೆಗಳು ಹೈಲೈಟ್ ಆಗುತ್ತವೆ, ಹಾಗಾಗಿ ಬಟ್ಟೆಗೆ ತಕ್ಕಂತೆ ಪಾದರಕ್ಷೆಗಳನ್ನು ಧರಿಸದಿದ್ದರೆ ಇಡೀ ನೋಟವೇ ಹಾಳಾಗುತ್ತದೆ.

English summary

Avoid Doing These Mistakes While Carrying Traditional Wears

Here we talking about Avoid Doing These Mistakes While Carrying Traditional Wears, read on
Story first published: Thursday, December 9, 2021, 15:45 [IST]
X
Desktop Bottom Promotion