For Quick Alerts
ALLOW NOTIFICATIONS  
For Daily Alerts

ಮೆಕ್ಸಿಕೋ ಸುಂದರಿಗೆ ಒಲಿದ ಭುವನ ಸುಂದರಿ ಪಟ್ಟ: ಈಕೆಗೆ ಕೇಳಿದ ಪ್ರಶ್ನೆ ಏನು ಗೊತ್ತಾ?

|

ಫ್ಯಾಷನ್‌ ಲೋಕ ತುಂಬಾ ಕಾತರದಿಂದ ಕಾಯುತ್ತಿರುವ ಮಿಸ್‌ ಯೂನಿವರ್ಸ್ ಈವೆಂಟ್‌ ನಡೆದಿದೆ. ಕೊರೊನಾ ಸಾಂಕ್ರಾಮಿಕ ಕಾರಣ ಫ್ಯಾಷನ್‌ ಜಗತ್ತಿನಲ್ಲಿ ಕಲರ್‌ ಫುಲ್ ಲೈಟ್ಸ್‌, ರೂಪಾವತಿಯರ ಕ್ಯಾಟ್‌ ವಾಕ್ ಇವೆಲ್ಲಾ ನೋಡಿ ವರ್ಷದ ಮೇಲಾಗಿದೆ. ಇದೀಗ ಫ್ಯಾಷನ್ ಜಗತ್ತು ತುಂಬಾ ಕಾತರದಿಂದ ಮಿಸ್‌ ಯೂನಿವರ್ಸ್ ಸ್ಪರ್ಧೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಮೇ 16ರಂದು ಫ್ಲೋರೆಡಾದ ಸೆಮಿನೋಲೆ ಹಾರ್ಡ್‌ ರಾಕ್‌ ಹೋಟೆಲ್ ಅಂಡ್‌ ಕ್ಯಾಸಿನೋ ಇನ್ ಹಾಲಿವುಡ್‌ನಲ್ಲಿ ನಡೆದ ಮಿಸ್‌ ಯೂನಿವರ್ಸ್ ಫ್ಯಾಷನ್ ಈವೆಂಟ್‌ನಲ್ಲಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ಮಿಸ್‌ ಯೂನಿವರ್ಸ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

69ನೇ ಮಿಸ್‌ ಯೂನಿವರ್ಸ್ ಆವೃತ್ತಿಯಲ್ಲಿ ಮಿಸ್‌ ಯೂನವರ್ಸ್ ಮೆಕ್ಸಿಕೋ ಪಾಲಾದರೆ ಬ್ರೆಜಿಲ್‌ನ ಜುಲಿಯಾ ಗಾಮಾ ರನ್ನರ್‌ ಅಪ್‌ ಆಗಿ ಆಯ್ಕೆ ಆಗಿದ್ದಾರೆ. ಭಾರತದ ಆಡ್‌ಲೈನ್ ಕ್ಸಯಾಸ್ಟಿಲಿನೋ ಮತ್ತು ಕಿಂಬರ್ಲಿ ಪೆರೇಜ್ 3ನೇ ಹಾಗೂ ನಾಲ್ಕನೇ ರನ್ನರ್‌ ಅಪ್‌ ಆಗಿ ಆಯ್ಕೆ ಆಗಿದ್ದಾರೆ.

ಮಿಸ್‌ ಯೂನಿವರ್ಸ್‌ಗೆ ಕೇಳಲಾದ ಪ್ರಶ್ನೆ

* ಆಂಡ್ರಿಯಾಗೆ 'ನೀವು ದೇಶದ ನಾಯಕರಾಗಿದ್ದರೆ ಕೋವಿಡ್‌ 19 ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್‌ ಹೇಗೆ ನಿಭಾಯಿಸುತ್ತಿದ್ದಿರಿ?" ಎಂದು ಕೇಳಲಾಗಿತ್ತು.

ಅದಕ್ಕೆ ಆಂಡ್ರಿಯಾ' ಇಂಥ ಕಠಿಣ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವ ಯಾವುದೇ ಮಾರ್ಗ ನಮ್ಮ ಮುಂದೆ ಇಲ್ಲ. ಆದರೆ ಸಾಂಕ್ರಾಮಿಕ ರೋಗ ತುಂಬಾ ಹರಡುವ ಮುನ್ನವೇ ಲಾಕ್‌ಡೌನ್‌ ಮಾಡುತ್ತಿದ್ದೆ, ಸೋಂಕು ಹರಡುವುದು ಅಧಿಕವಾದರೆ ಜನರು ಪ್ರಾಣಗಳನ್ನು ಕಳೆದುಕೊಳ್ಳುತ್ತಾರೆ, ನಮ್ಮ ಜನರ ರಕ್ಷಣೆ ಮಾಡಬೇಕಾಗಿದ. ಆದ್ದರಿಂದ ಪ್ರಾರಂಭದಲ್ಲಿಯೇ ಅವರ ರಕ್ಷಣೆ ಮಾಡುತ್ತಿದ್ದೆ". ಎಂದು ಉತ್ತರಿಸಿದರು.

English summary

Miss Universe 2021 Winner: Miss Mexico Andrea Meza crowned as the winner

Miss Universe 2021 Winner: Miss Mexico Andrea Meza crowned as the winner,Read on...
X