For Quick Alerts
ALLOW NOTIFICATIONS  
For Daily Alerts

ಗೌರಿ-ಗಣೇಶ ಹಬ್ಬದಲ್ಲಿ ಮಿರ-ಮಿರ ಮಿಂಚಿದ ಬಿಗ್‌ ಬಾಸ್‌ ಸೆಲೆಬ್ರಿಟಿಗಳು

|

ಹಬ್ಬ ಬಂತೆಂದರೆ ಸಾಂಪ್ರದಾಯಿಕ ಉಡುಗೆಗಳತ್ತ ನಮ್ಮ ಗಮನ ಹೆಚ್ಚುವುದು. ಹಬ್ಬಗಳಲ್ಲಿ ಸಾಂಪ್ರದಾಯಿಕ ಉಡುಗೆಗಳು ತುಂಬುವ ಮೆರಗು ಮಾಡರ್ನ್‌ ಡ್ರೆಸ್ಸಿಂಗ್‌ನಲ್ಲಿ ಸಿಗಲ್ಲ. ಹೆಣ್ಮಕ್ಕಳು ಸೀರೆ, ದಾವಣಿ, ಲಂಗ, ಬ್ಲೌಸ್‌ ಈ ರೀತಿ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಓಡಾಡುತ್ತಿದ್ದರೆ ತುಂಬಾ ಲಕ್ಷಣವಾಗಿ ಕಾಣುತ್ತಾರೆ.

ಗೌರಿ-ಗಣೇಶ ಹಬ್ಬವನ್ನು ನಾಡಿನಾದ್ಯಂತ ತುಂಬಾ ಅದ್ಧೂರಿಯಿಂದ ಅಲ್ಲದಿದ್ದರೂ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಕರೋನಾ ಕಾರಣದಿಂದಾಗಿ ಈ ಹಿಂದೆ ಬೀದಿ-ಬೀದಿಗಳಲ್ಲಿ ಗಣಪನ ಕೂರಿಸಲು ಅವಕಾಶ ನೀಡಲಿಲ್ಲ. ಆದ್ದರಿಂದ ಹೆಚ್ಚಿನವರು ತಮ್ಮ ಮನೆಯಲ್ಲಿಯೇ ಹಬ್ಬ ಮಾಡಿ ಸಂಭ್ರಮಿಸಿದ್ದಾರೆ.

ಇನ್ನು ತಾರೆಯರು ಕೂಡ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದಿದ್ದಾರೆ. ಈ ನಟಿಯರು ಗೌರಿ ಹಬ್ಬದಂದು ಎಷ್ಟು ಆಕರ್ಷಕವಾಗಿ ಡ್ರೆಸ್ಸಿಂಗ್‌ ಮಾಡಿ, ಗಮನ ಸೆಳೆದಿದ್ದಾರೆ ನೋಡಿ:

ಶುಭ ಪೂಂಜಾ

ಶುಭ ಪೂಂಜಾ

ತೆಳು ಗುಲಾಬಿ ಸೀರೆ, ದೊಡ್ಡ ಜಿಮುಕಿ, ನೆತ್ತಿರ, ನೆಕ್ಲೇಸ್‌, ದೊಡ್ಡ ಮೂಗುತಿ ಧರಿಸಿ ಸಾಂಪ್ರದಾಯಿಕ ಚೆಲುವಿನಲ್ಲಿ ಮಿಂಚಿದ ಶುಭ ಪೂಂಜಾ.

ದಿವ್ಯಾ ಸುರೇಶ್

ದಿವ್ಯಾ ಸುರೇಶ್

ಹಸಿರು ಲಂಗದ ಹುಡುಗಿಯಾದ ದಿವ್ಯಾ ಸುರೇಶ್‌. ಬಿಗ್‌ಬಾಸ್‌ನಲ್ಲಿರುವಾಗಲೂ ತಮ್ಮ ಡ್ರೆಸ್ಸಿಮಗ್‌ ಸ್ಟೈಲ್‌ನಿಂದ ಗಮನ ಸೆಳೆಯುತ್ತಿದ್ದ ದಿವ್ಯಾ ಸುರೇಶ್‌ ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಲಂಗ-ದಾವಣಿಯಲ್ಲಿ ಹೇಗೆ ಮಿಂಚಿದ್ದಾರೆ ನೋಡಿ.

ವೈಷ್ಣವಿ

ವೈಷ್ಣವಿ

ನೀಲಿ ಬಣ್ಣದ ಸ್ಯಾರಿಗೆ ಗ್ರ್ಯಾಂಡ್‌ ವರ್ಕ್‌ನ ಕೆಂಪು ಬ್ಲೌಸ್‌ ತೊಟ್ಟು ತುಂಬಾ ಗ್ರ್ಯಾಂಡ್‌ ಆಗಿ ಕಾಣುತ್ತಿರುವ ವೈಷ್ಣವಿ ಮುದ್ದು ಗಣೇಶನ ಕೈಯಲ್ಲಿ ಹಿಡಿದ ಲಕ್ಷ್ಮಿಯಂತೆ ಕಂಗೊಳಿಸುತ್ತಿದ್ದಾರೆ ಅಲ್ವಾ?

ಚಂದ್ರಿಕಾ

ಚಂದ್ರಿಕಾ

ಪಿಂಕ್‌ ಸೀರೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಂಗೊಳಿಸಿದ ಚಂದ್ರಿಕಾ.

ಅನುಪಮಾ ಗೌಡ

ಅನುಪಮಾ ಗೌಡ

ಹಬ್ಬದ ಸಮಯದಲ್ಲಿ ಹಳ್ಳಿ ಹುಡುಗಿಯ ಡ್ರೆಸ್ಸಿಂಗ್‌ನಲ್ಲಿ ಮಿಂಚಿದ ನಿರುಪಮಾ ಗೌಡ.

ನಿವೇದಿತಾ ಗೌಡ

ನಿವೇದಿತಾ ಗೌಡ

ಸದಾ ಗೌನ್‌ನಲ್ಲಿ ಮಿಂಚುತ್ತಿದ್ದ ನಿವೇದಿತಾ ಗೌಡ ಗೌರಿ-ಗಣೇಶ ಹಬ್ಬದಲ್ಲಿ ಲಂಗ-ದಾವಣಿಯಲ್ಲಿ ಕಂಗೊಳಿಸಿದ್ದಾರೆ.

English summary

Kannada Bigg Boss celebrities Traditional Look in Gowri Ganesha Festival

Sandalwood And Mini Screen Actress Traditional Look in Gowri Ganesha, Read on...
Story first published: Friday, September 10, 2021, 21:14 [IST]
X