For Quick Alerts
ALLOW NOTIFICATIONS  
For Daily Alerts

ಲೆದರ್‌ ಬ್ಯಾಗ್‌ ಮನೆಯಲ್ಲಿಯೇ ಕ್ಲೀನ್‌ ಮಾಡಲು ಟಿಪ್ಸ್

|

ನಮ್ಮಲ್ಲಿರುವ ಲೆದರ್‌ ಬ್ಯಾಗ್, ಪರ್ಸ್‌ ಇವುಗಳ ಮೇಲೆ ನಮಗೊಂದು ವಿಶೇಷ ಪ್ರೀತಿ ಇದ್ದೇ ಇರುತ್ತದೆ. ಅದನ್ನು ಕೊಳ್ಳುವಾಗ ಸ್ವಲ್ಪ ದುಬಾರಿ ಹಣ ನೀಡಿರುತ್ತೇವೆ, ಅಲ್ಲ ನಮಗೆ ತುಂಬಾ ಇಷ್ಟವಾಗಿದ್ದನ್ನು ಖರೀದಿ ಮಾಡಿರುತ್ತೇವೆ. ಅಂಥ ವಸ್ತುಗಳು ಹಾಳಾದಾಗ ತುಂಬಾನೇ ಬೇಜಾರಾಗುತ್ತೆ.

ಲೆದರ್‌ ಬ್ಯಾಗ್‌, ವ್ಯಾನಿಟಿ ಬ್ಯಾಗ್ , ಪರ್ಸ್‌ ಇವೆಲ್ಲಾ ಬಳಸುತ್ತಿದ್ದರೆ ಚೆನ್ನಾಗಿರುತ್ತದೆ, ಬಳಸದೆ ಒಂದು ಕಡೆ ತೆಗೆದಿಟ್ಟರೆ ಲೆದರ್‌ ಬ್ಯಾಗ್‌ಗಳಲ್ಲಿ ಬಿಳಿ-ಬಿಳಿಯಾದ ಫಂಗಸ್‌ ಕಂಡು ಬರುವುದು. ನಾವಿಲ್ಲಿ ನಿಮ್ಮ ಲೆದರ್‌ ಬ್ಯಾಗ್‌ ಹಾಗೂ ಪರ್ಸ್‌ಗಳನ್ನು ಕ್ಲೀನ್‌ ಮಾಡುವ ಟಿಪ್ಸ್ ನೀಡಿದ್ದೇವೆ ನೋಡಿ:

ಲೆದರ್‌ ವಸ್ತುಗಳನ್ನು ಸ್ವಚ್ಛ ಮಾಡಲು ಬೇಕಾಗುವ ವಸ್ತುಗಳು

ಲೆದರ್‌ ವಸ್ತುಗಳನ್ನು ಸ್ವಚ್ಛ ಮಾಡಲು ಬೇಕಾಗುವ ವಸ್ತುಗಳು

1. ಬೇಬಿ ಶ್ಯಾಂಪೂ

2. ಡಿಸ್ಟಿಲ್ಡ್ ವಾಟರ್

3. ಸ್ಪ್ರೇ ಬಾಟಲ್

4. ಮೃದುವಾದ ಬ್ರೆಷ್

5. ಸ್ವಚ್ಛವಾದ ಬಟ್ಟೆ

6. ಟವೆಲ್‌

7. ಲೆದರ್‌ ಕ್ರೀಮ್‌

ಏನು ಮಾಡಬೇಕು?

ಏನು ಮಾಡಬೇಕು?

* ಮೊದಲು ನಿಮ್ಮ ಬ್ಯಾಗ್‌ನಲ್ಲಿರುವ ವಸ್ತುಗಳನ್ನು ತೆಗೆದು ಹೊರಗಿಡಿ.

* ನಂತರ ಮೃದುವಾದ ಬ್ರೆಷ್‌ನಿಂದ ಬ್ಯಾಗ್‌ ಅನ್ನು ಸ್ವಚ್ಛಗೊಳಿಸಿ.

* ಈಗ ಒಂದು ಕಪ್‌ಗೆ ಸ್ವಲ್ಪ ಡಿಸ್ಟಿಲ್ಡ್ ವಾಟರ್ ಹಾಕಿ ಅದಕ್ಕೆ ಬೇಬಿ ಶ್ಯಾಂಪೂ ಹಾಕಿ ಮಿಶ್ರ ಮಾಡಿ.

* ನಂತರ ಅದನ್ನು ಸ್ಪ್ರೇ ಬಾಟಲ್‌ಗೆ ಹಾಕಿ.

* ಅದನ್ನು ಸ್ವಚ್ಛವಾದ ಬಟ್ಟೆ ಮೇಲೆ ಸಿಂಪಡಿಸಿ.

* ಈಗ ಅದರಿಂದ ಬ್ಯಾಗ್‌ ನ್ನು ಒರೆಸಿ. ಬ್ಯಾಗ್‌ ಕೆಳ ಭಾಗ, ಬಟನ್ ಇರುವ ಕಡೆ, ಅದರ ಡಿಸೈನ್‌ ಇರುವ ಕಡೆ ದೂಳು ಕೂತಿರುತ್ತದೆ, ಅವುಗಳೆನ್ನೆಲ್ಲಾ ಒರೆಸಿ.

* ನಂತರ ಒಣ ಟವಲ್‌ನಿಂದ ಒರೆಸಿ ಅದರಲ್ಲಿರುವ ತೇವಾಂಶ ಸಂಪೂರ್ಣವಾಗಿ ತೆಗೆಯಿರಿ.

* ಈಗ ಬ್ಯಾಗ್‌ ಅನ್ನು 30 ನಿಮಿಷ ಬಿಸಿಲಿನಲ್ಲಿ ಒಣಗಲು ಇಡಿ. ಆದರೆ ತುಂಬಾ ಒಣಗಿಸಬೇಡಿ.

* ನಂತರ ಲೆದರ್ ಕ್ರೀಮ್ ಹಾಕಿ, ಒಂದು ಚಿಕ್ಕ ಹತ್ತಿಯ ಬಟ್ಟೆಯಿಂದ ವೃತ್ತಾಕಾರವಾಗಿ ಉಜ್ಜಿ. ಲೆದರ್ ಕ್ರೀಮ್‌ ಬ್ಯಾಗ್‌ನ ಹೊಳಪು ಹೆಚ್ಚಿಸುವುದು.

ಕೆಲವೊಂದು ಬಗೆಯ ಲೆದರ್‌ ಬ್ಯಾಗ್‌ಗಳನ್ನು ಮನೆಯಲ್ಲಿ ಸ್ವಚ್ಛಗೊಳಿಸುವಂತಿಲ್ಲ

ಕೆಲವೊಂದು ಬಗೆಯ ಲೆದರ್‌ ಬ್ಯಾಗ್‌ಗಳನ್ನು ಮನೆಯಲ್ಲಿ ಸ್ವಚ್ಛಗೊಳಿಸುವಂತಿಲ್ಲ

ಕಾಫ್‌ಸ್ಕಿನ್ ಅಥವಾ ಲ್ಯಾಂಬ್‌ಸ್ಕಿನ್ ಲೆದರ್‌ ಬ್ಯಾಗ್‌ಗಳನ್ನು ಲೆದರ್‌ ಕ್ಲೀನ್‌ ಮಾಡುವ ಸರಿಯಾದ ವಿಧಾನ ಬಳಸಿ ಮಾಡಬೇಕು, ನಂತರ ಲೆದರ್‌ ಕ್ರೀಮ್ ಹಚ್ಚಿ ಕಂಡೀಷನಿಂಗ್ ಮಾಡಬೇಕು. ಸೂಡೆ ಅಥವಾ ನ್ಯೂಬ್ಯಾಕ್ ಬ್ಯಾಗ್‌ಗಳನ್ನು ಸ್ವಚ್ಛ ಮಾಡುವುದು ಸ್ವಲ್ಪ ಕಷ್ಟ. ಇಂಥ ಬ್ಯಾಗ್‌ಗಳನ್ನು ಮನೆಯಲ್ಲಿ ಸ್ವಚ್ಛ ಮಾಡಬಾರದು.

ಇಂಕ್‌ ಕಲೆಗಳನ್ನು ತೆಗೆಯಲು ಪ್ರಯತ್ನಿಸಬೇಡಿ

ಇಂಕ್‌ ಕಲೆಗಳನ್ನು ತೆಗೆಯಲು ಪ್ರಯತ್ನಿಸಬೇಡಿ

ಬ್ಯಾಗ್‌ ಮೇಲೆ ಇಂಕ್‌ ಕಲೆಗಳು ಬಿದ್ದರೆ ಲೆದರ್‌ ಬ್ಯಾಗ್‌ ಸ್ವಚ್ಛ ಮಾಡುವವರಿಗೆ ನೀಡಿ, ಮನೆಯಲ್ಲಿಯೇ ಸ್ವಚ್ಛ ಮಾಡಲು ಪ್ರಯತ್ನಿಸಬೇಡಿ. ಮನೆಯಲ್ಲಿ ಸ್ವಚ್ಛ ಮಾಡಿದರೆ ಬ್ಯಾಗ್‌ ಹಾಳಾಗಬಹುದು.

* ಗ್ರೀಸ್‌ ಆಗಿದ್ದರೆ ನೀರಿನಲ್ಲಿ ತೊಳೆಯಬೇಡಿ

ಹೀಗೆ ಮಾಡಿದರೆ ಗ್ರೀಸ್‌ ಬ್ಯಾಗ್‌ನಲ್ಲಿ ಹರಡುವ ಸಾಧ್ಯತೆ ಹೆಚ್ಚು.

* ಬ್ಯಾಗ್‌ ಅನ್ನು ಕವರ್‌ನಲ್ಲಿ ಹಾಕಿಡಿ

ಅಪರೂಪಕ್ಕೆ ಕೊಂಡೊಯ್ಯುವ ದುಬಾರಿ ಬ್ಯಾಗ್‌ಗಳನ್ನು ಕವರ್‌ನಲ್ಲಿ ಹಾಕಿಡಿ, ಇದರಿಂದ ದೂಳಾಗುವುದನ್ನು ತಡೆಯಬಹುದು.

ಬ್ಯಾಗ್‌ ದುರ್ವಾಸನೆ ಬೀರುತ್ತಿದ್ದರೆ

ಕೆಲವೊಮ್ಮೆ ಬ್ಯಾಗ್‌ನಲ್ಲಿ ಏನಾದರೂ ಚೆಲ್ಲಿದರೆ ದುರ್ವಾಸನೆ ಬೀರಬಹುದು. ಸ್ವಲ್ಪ ಬೇಕಿಂಗ್ ಪೌಡರ್‌ ಹಾಕಿಟ್ಟು 5-6 ತಾಸು ಬಿಟ್ಟು ವ್ಯಾಕ್ಯೂಮ್‌ ಕ್ಲೀನರ್‌ನಿಂದ ಸ್ವಚ್ಛ ಮಾಡಿ.

English summary

How To Clean Your Leather Bag At Home In Kannada

How to clean your leather bag at home read on...
Story first published: Wednesday, June 23, 2021, 11:57 [IST]
X
Desktop Bottom Promotion