For Quick Alerts
ALLOW NOTIFICATIONS  
For Daily Alerts

ಪ್ರತಿಯೊಬ್ಬ ಮಹಿಳೆಯರು ತಿಳಿಯಲೇಬೇಕಾದ ಮಳೆಗಾಲದ ಡ್ರೆಸ್ಸಿಂಗ್ ಟಿಪ್ಸ್

|

ಮಳೆಗಾಲ ಬಂದರೆ ಸಾಕು, ಅದು ನಮಗೆ ತುಂಬಾ ಸಂತೋಷ ಹಾಗೂ ಉತ್ಸಾಹ ಉಂಟು ಮಾಡುತ್ತದೆ. ಅದರಲ್ಲೂ ತುಂಬಾ ಬಿಸಿಯಾಗಿರುವಂತಹ ಬೇಸಗೆ ಕಳೆದ ಬಳಿಕ ನಾವು ಮಳೆಗಾಗಿ ತುಂಬಾ ಕಾತರದಿಂದ ಕಾಯುತ್ತಾ ಇರುತ್ತೇವೆ. ಮಳೆ ಬಂದ ಬಳಿಕ ಆಗುವಂತಹ ಸಂಭ್ರಮವೇ ಬೇರೆ. ಮನೆಯಲ್ಲೇ ಕುಳಿತುಕೊಂಡು ಮಳೆ ಬರುವುದನ್ನು ನೋಡುತ್ತಾ ಬಿಸಿ ಬಿಸಿಯಾದ ತಿಂಡಿ ತಿಂದು ಚಾ ಹೀರಬೇಕು ಎಂದು ಅನಿಸುತ್ತದೆ. ಅದಾಗ್ಯೂ, ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ಎಲ್ಲವೂ ಬದಲಾಗುವುದು. ಯಾಕೆಂದರೆ ರಸ್ತೆಯಲ್ಲಿ ನಿಂತಿರುವ ನೀರು, ಕೆಸರು ಇತ್ಯಾದಿಗಳನ್ನು ದಾಟಿಕೊಂಡು ಕಚೇರಿಗೋ ಅಥವಾ ಉದ್ಯೋಗದ ಸ್ಥಳಕ್ಕೂ ಹೋಗಬೇಕಾಗುತ್ತದೆ. ಇದರಿಂದ ಬಟ್ಟೆಗಳಿಗೆ ಕೆಸರು ಮೆತ್ತಿಕೊಳ್ಳಬಹುದು, ನೀರಿನಿಂದಾಗಿ ಒದ್ದೆ ಆಗಬಹುದು. ಇಂತಹ ಸಂದರ್ಭದಲ್ಲಿ ಮಹಿಳೆಯರಿಗಾಗಿ ನಾವು ಮಳೆಗಾಲದ ಸೌಂದರ್ಯದ ಸಲಹೆಗಳನ್ನು ಈ ಲೇಖನದಲ್ಲಿ ನೀಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಗಾಢ ಬಣ್ಣ ಮತ್ತು ಬಣ್ಣಬಣ್ಣದ ಛತ್ರಿ ಆಯ್ಕೆ ಮಾಡಿ

ಗಾಢ ಬಣ್ಣ ಮತ್ತು ಬಣ್ಣಬಣ್ಣದ ಛತ್ರಿ ಆಯ್ಕೆ ಮಾಡಿ

ಬೇಸಗೆ ಅಥವಾ ಮಳೆಗಾಲವಾಗಿರಲಿ, ಛತ್ರಿ ನಿಮ್ಮ ನೆಚ್ಚಿನ ಮಿತ್ರನಾಗಿರುವುದು. ಇಂದಿನ ದಿನಗಳಲ್ಲಿ ತುಂಬಾ ಟ್ರೆಂಡ್ ಆಗಿರುವಂತಹ ಛತ್ರಿಗಳನ್ನು ಆಯ್ಕೆ ಮಾಡಿಕೊಳ್ಳಿ. ನಿಮಗೆ ಒಂದೇ ಬಣ್ಣವು ಇಷ್ಟವಾಗಿದ್ದರೆ ಆಗ ನೀವು ಪ್ರಿಂಟ್ ಇರುವ ಅಥವಾ ಕೇವಲ ಒಂದೇ ಬಣ್ಣದನ್ನು ಆಯ್ಕೆ ಮಾಡಬಹುದು. ಗಾಢ ಮತ್ತು ಬಣ್ಣಬಣ್ಣದ ಛತ್ರಿಗಳನ್ನು ಬಳಸಿಕೊಳ್ಳಬೇಕು. ಇದರಿಂದ ಮಳೆಗಾಲದಲ್ಲಿ ಕತ್ತಲೆಯಾದರೆ ನೀವು ಎದ್ದು ಕಾಣುತ್ತೀರಿ.

ಬ್ಯಾಗ್ ನಲ್ಲಿ ರೈನ್ ಜಾಕೆಟ್ ಇಟ್ಟುಕೊಂಡರೆ ಹಾನಿಯಾಗದು

ಬ್ಯಾಗ್ ನಲ್ಲಿ ರೈನ್ ಜಾಕೆಟ್ ಇಟ್ಟುಕೊಂಡರೆ ಹಾನಿಯಾಗದು

ಮಳೆಗಾಲದಲ್ಲಿ ಛತ್ರಿ ಹಿಡಿದುಕೊಂಡು ಹೋಗಲು ನಿಮಗೆ ಇಷ್ಟವಿಲ್ಲವೆಂದಾದರೆ ಆಗ ನೀವು ರೈನ್ ಜಾಕೆಟ್ ನ್ನು ತೆಗೆದುಕೊಳ್ಳಬಹುದು. ನೀವು ಸಾರ್ವಜನಿಕ ಸಾರಿಗೆ ಬಳಸುತ್ತಿದ್ದರೆ ಆಗ ನೀವು ಪಾರದರ್ಶಕವಾದ ಜಾಕೆಟ್ ತೆಗೆದುಕೊಳ್ಳಿ ಮತ್ತು ನಿಮ್ಮದೇ ಆಗಿರುವ ವಾಹನದಲ್ಲಿ ಪ್ರಯಾಣಿಸುತ್ತಿದ್ದರೆ ಆಗ ನೀವು ತುಂಬಾ ಟ್ರೆಂಡ್ ಆಗಿರುವ ಜಾಕೆಟ್ ಬಳಕೆ ಮಾಡಬಹುದು.

ಚಪ್ಪಲಿಗಳು ಮಾತನಾಡಲಿ

ಚಪ್ಪಲಿಗಳು ಮಾತನಾಡಲಿ

ಮಳೆಗಾಲದಲ್ಲಿ ನಿಮ್ಮ ಡ್ರೆಸ್ಸಿಂಗ್ ಗೆ ಅನುಗುಣವಾಗಿ ಇರುವಂತಹ ಚಪ್ಪಲಿ ಧರಿಸುವುದು ಕೂಡ ಒಂದು ಉತ್ತಮ ಆಯ್ಕೆಯಾಗಿರುವುದು. ಬಣ್ಣ ಬಣ್ಣದ ಶೂಗಳನ್ನು ಧರಿಸುವ ಮೂಲಕವಾಗಿ ನೀವು ನಿಮ್ಮ ಫ್ಯಾಶನ್ ಗೆ ಸ್ವಲ್ಪ ವಿಶೇಷವನ್ನು ಸೇರಿಸಿ ಕೊಳ್ಳಬಹುದು. ಮಳೆಗಾಲದಲ್ಲಿ ಧರಿಸಬಹುದಾದ ಕೆಲವೊಂದು ಶೂಗಳನ್ನು ನೀವು ತೆಗೆದುಕೊಳ್ಳಿ.

ವಾಟರ್ ಫ್ರೂಪ್ ಬ್ಯಾಗ್ ನಲ್ಲಿ ನಿಮ್ಮ ವಸ್ತುಗಳನ್ನು ಇಡಿ

ವಾಟರ್ ಫ್ರೂಪ್ ಬ್ಯಾಗ್ ನಲ್ಲಿ ನಿಮ್ಮ ವಸ್ತುಗಳನ್ನು ಇಡಿ

ತುಂಬಾ ಸ್ಟೈಲಿಶ್ ಆಗಿರುವಂತಹ ಹ್ಯಾಂಡ್ ಬ್ಯಾಗ್‌ನ್ನು ನೀವು ಮಳೆಗಾಲದಲ್ಲಿ ಹೊರಗೆ ಕೊಂಡು ಹೋಗಬೇಡಿ. ಯಾಕೆಂದರೆ ಅದರ ಕಾಂತಿ ಕಳೆದುಹೋಗಬಹುದು. ನೀವು ಮಳೆಗಾದಲ್ಲಿ ವಾಟರ್ ಫ್ರೂಪ್ ಆಗಿರುವಂತಹ ಹ್ಯಾಂಡ್ ಬ್ಯಾಗ್ ನ್ನು ತೆಗೆದುಕೊಳ್ಳಿ. ಇದು ಒಳ್ಳೆಯ ಸ್ಟೈಲಿಶ್, ಬಣ್ಣಬಣ್ಣದ ಮತ್ತು ಆಕರ್ಷಕವಾಗಿ ಕಾಣುತ್ತಿರಲಿ. ಇದರಲ್ಲಿ ನಿಮ್ಮ ಅಗತ್ಯತೆಯ ಸಾಮಗ್ರಿಗಳು ಇರಲಿ. ವಾಟರ್ ಫ್ರೂಪ್ ಬ್ಯಾಗ್ ಗಳು ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸ ಹಾಗೂ ಬಣ್ಣಗಳಲ್ಲಿ ಲಭ್ಯವಿದೆ. ವಾಟರ್ ಫ್ರೂಪ್ ಬ್ಯಾಗ್ ನಿಮ್ಮ ಹಣಕ್ಕೆ ಸರಿಯಾದ ಫಲ ನೀಡುವುದು.

ಸರಿಯಾದ ಬಟ್ಟೆಗಳನ್ನು ಧರಿಸಿ

ಸರಿಯಾದ ಬಟ್ಟೆಗಳನ್ನು ಧರಿಸಿ

ಮಳೆಗಾಲವನ್ನು ನೀವು ತುಂಬಾ ಸಣ್ಣದಾದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಯಾಕೆಂದರೆ ಮಳೆ ನೀರಿನಲ್ಲಿ ಬಟ್ಟೆಯ ಕೆಳಭಾಗವು ಒದ್ದೆಯಾಗುವುದು ಇದರಿಂದ ತಪ್ಪುವುದು. ಅದಾಗ್ಯೂ, ನೀವು ತುಂಬಾ ಸಾಂಪ್ರದಾಯಿಕವಾಗಿ ಇರುವಂತಹ ಬಟ್ಟೆಗಳನ್ನು ಧರಿಸುತ್ತಲಿದ್ದರೆ ಆಗ ನೀವು ಈ ಡ್ರೆಸ್ ಮೆಟಿರಿಯಲ್ ಅಥವಾ ಚಿಫೊನ್ ಸಾರಿ ಬಳಸಿ. ಇದು ಒಣಗಲು ಸುಲಭ ಮತ್ತು ಮಳೆಗಾಲದಲ್ಲಿ ಇದು ಒಳ್ಳೆಯ ಆಯ್ಕೆಯಾಗಿರುವುದು.

Most Read: ಮಳೆಗಾಲದಲ್ಲಿ ಆದಷ್ಟು ಇಂತಹ ಬಟ್ಟೆಗಳನ್ನು ಮಾತ್ರ ಧರಿಸಬೇಡಿ!

ಮೇಕಪ್ ಕೂಡ ಅದೇ ರೀತಿಯಲ್ಲಿರಲಿ

ಮೇಕಪ್ ಕೂಡ ಅದೇ ರೀತಿಯಲ್ಲಿರಲಿ

ಹೆಚ್ಚಿನ ಮಹಿಳೆಯರು ಮಳೆಗಾಲದಲ್ಲಿ ಮೇಕಪ್ ಹಚ್ಚಿಕೊಳ್ಳುವುದನ್ನು ಇಷ್ಟಪಡುವುದಿಲ್ಲ ಮತ್ತು ತಮ್ಮ ಸೌಂದರ್ಯ ಒಳ್ಳೆಯ ರೀತಿ ಕಾಣಿಸದೆ ಇದ್ದರೂ ಚಿಂತೆ ಮಾಡಲ್ಲ. ನೀವು ಸಾಮಾನ್ಯವಾಗಿ ಬಳಸುವ ಸಾಧನದ ಬದಲು ವಾಟರ್ ಫ್ರೂಫ್ ಹೈ ಲೈನರ್ ಮತ್ತು ಮಸ್ಕಾರ ಬಳಸಿ. ಇದು ಮಳೆಗಾಲದಲ್ಲಿ ನಿಮಗೆ ನೆರವಾಗುವುದು.

English summary

Monsoon Dressing Tips Every Woman Should Know

In this article we sharing with you simple monsoon dressing tips that every Woman Should Know..have a look...
Story first published: Saturday, July 13, 2019, 13:20 [IST]
X
Desktop Bottom Promotion