Just In
- 5 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 7 hrs ago
ಭಾನುವಾರದ ದಿನ ಭವಿಷ್ಯ (08-12-2019)
- 24 hrs ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- Movies
ಮತ್ತೆ 'ಪುಟ್ಮಲ್ಲಿ'ಯಾದ ನಟಿ ಉಮಾಶ್ರೀ
- Finance
ಬೆಂಗಳೂರಿನಲ್ಲಿ ಕೇಜಿ ಈರುಳ್ಳಿಗೆ 200 ರುಪಾಯಿ; ಸೇಬು, ದಾಳಿಂಬೆಗಿಂತ ದುಬಾರಿ
- News
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ 'ಹೌದು ಹುಲಿಯಾ', ಇಲ್ಲಾಂದ್ರೆ!
- Technology
ಭಾರತದಲ್ಲಿ ಲಭ್ಯವಿರುವ ಟಾಪ್8 ಇಯರ್ ಫೋನ್ಗಳು!
- Automobiles
ಸಿಎನ್ಜಿ ಬಸ್ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ
- Sports
ಕ್ರಿಕೆಟ್, ಸೆಕ್ಸ್ ವೇಳೆ ಹೇಳಬಹುದಾದ ಪೋಲಿ ವಾಕ್ಯಗಳ ಟ್ವೀಟ್ಗಳು ವೈರಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಮದುವೆ ಫಂಕ್ಷನ್ಗೆ ಹೋಗುವಾಗ ಈ ಹೇರ್ಸ್ಟೈಲ್ ಟ್ರೈ ಮಾಡಿ
ಇನ್ನೇನು ಮದುವೆ ಸೀಸನ್ ಶುರುವಾಯಿತು, ಮದುವೆಗೆ ಹೊರಡುವುದೇ ಎಂದರೆ ಹೆಣ್ಮಕ್ಕಳಿಗೆ ಸಡಗರ. ಅದರಲ್ಲೂ ಫ್ರೆಂಡ್ಸ್, ಮನೆಯವರ ಮದುವೆ ಬಂದರಂತೂ ತಿಂಗಳ ಮುಂದೆಯೇ ಮದುವೆಗೆ ಹೇಗೆ ಅಲಂಕಾರ ಮಾಡಿಕೊಂಡು ಹೋಗಬೇಕೆಂದು ಆಲೋಚಿಸಿ, ಶಾಪಿಂಗ್ ಶುರು ಮಾಡುತ್ತಾರೆ. ಮದುವೆ ಮನೆಯಲ್ಲಿ ಮದುವೆ ಹೆಣ್ಣಿನ ಜತೆ ಅವಳ ಅಕ್ಕ-ಪಕ್ಕ ಸುಳಿದಾಡುವ ಗೆಳತಿಯರು ಕೂಡ ಅಲ್ಲಿದ್ದವರ ಗಮನ ಸೆಳೆಯುವಂತೆ ಅಲಂಕಾರ ಮಾಡಿಕೊಂಡಿರುತ್ತಾರೆ.
ಯಾರಾದರು ಮದುವೆಗೆ ಹೋಗುವಾಗ ಮದುವೆ ಡ್ರೆಸ್ಸಿಂಗ್ನಷ್ಟೇ ಮುಕ್ಯ ಹೇರ್ಸ್ಟೈಲ್ ಮಾಡುವುದು. ಮದುವೆಗೆ ಸೀರೆ, ಗೌನ್, ಗ್ರ್ಯಾಂಡ್ ಜೂಡದಾರ್, ಘಾಗ್ರ ಈ ರೀತಿ ಸಾಂಪ್ರದಾಯಿಕ ಹಾಗೂ ಫ್ಯಾಷನಬಲ್ ಗ್ರ್ಯಾಂಡ್ ಉಡುಗೆಗಳನ್ನು ತೊಟ್ಟಾಗ, ಸ್ವಲ್ಪ ಹೇರ್ ಸ್ಟೈಲ್ ಕಡೆಯೂ ಗಮನ ಕೊಟ್ಟರೆ ನಿಮ್ಮ ಲುಕ್ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಮದುವೆ ಸಮಾರಂಭದಲ್ಲಿ ಹೂ ಮುಡಿದರೆ ಲಕ್ಷಣವಾಗಿ ಕಾಣುವುದು, ಇಲ್ಲಿ ನಾವು ಮದುವೆಗೆ ಎಷ್ಟೆಲ್ಲಾ ಭಿನ್ನವಾಗಿ ಹೂ ಮುಡಿದು ಅಲಂಕಾರ ಮಾಡಬಹುದೆಂದು ಹೇಳಿದ್ದೇವೆ ನೋಡಿ.
View this post on InstagramA post shared by Neera Kaushik (@kaushikneera) on Oct 8, 2019 at 4:28am PDT
ಸೈಡ್ ಜಡೆಯಲ್ಲಿ ಹುವಿನ ಅಲಂಕಾರ
ಈ ಹೇರ್ಸ್ಟೈಲ್ಗೆ ಇಲ್ಲಿ ತೋರಿಸಿರುವಂಥ ಹೂಗಳೇ ಬೇಕೆಂದಿಲ್ಲ. ಮಲ್ಲಿಗೆ ಹಾಗೂ ಗುಲಾಬಿ ಹೂಗಳಿಂದಲೂ ಈ ಹೇರ್ಸ್ಟೈಲ್ ಮಾಡಬಹುದು. ಜೂಡಿದಾರ್, ಗೌನ್ ಈ ರೀತಿಯ ಡ್ರೆಸ್ಗಳಿಗೆ ಈ ಹೇರ್ಸ್ಟೈಲ್ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಸ್ಟೆಪ್ ಜಡೆಯನ್ನು ಹಾಕಿ, ಕೂದಲು ಒಂದು ಭುಜದ ಮೇಲೆ ಬೀಳುವಂತೆ ಜಡೆ ಎಳೆದು ನಂತರ ಹೂ ಮುಡಿಯಿರಿ. ಈ ಹೇರ್ ಸ್ಟೈಲ್ ಹದಿ ಹರೆಯದ ಹಾಗೂ ಯೌವನ ಪ್ರಾಯದ ಹೆಣ್ಮಕ್ಕಳಿಗೆ ತುಂಬಾ ಆಕರ್ಷಕವಾಗಿ ಕಾಣುತ್ತದೆ.
View this post on InstagramA post shared by ᴍᴇᴇɴǫᴜᴇᴇɴs 👑 ʜᴀʀᴍᴇᴇɴ (@meenqueens) on Oct 5, 2019 at 12:05am PDT
ಸರಳವಾಗಿದ್ದರೂ ಆಕರ್ಷಕ ಲುಕ್ ನಿಡುವ ಹೇರ್ಸ್ಟೈಲ್
ಇನ್ನು ಈ ಹೇರ್ಸ್ಟೈಲ್ ತುಂಬಾ ಸರಳವಾಗಿದ್ದರೂ ಈ ಹೇರ್ ಸ್ಟೈಲ್ ಅಲಂಕಾರಕ್ಕೆ ಅಗಲವಾದ ಕ್ಲಿಪ್ಗಳನ್ನು ಬಳಸಿ. ನಂತರ ಗುಲಾಬಿ ಹೂಗಳನ್ನು ಈ ರೀತಿ ಅಲಂಕರಿಸಿದರೆ ಆಕರ್ಷಕವಾಗಿ ಕಾಣುವುದು. ಸೆಲ್ವಾರ್ಗೆ ಈ ಬಗೆಯ ಹೇರ್ಸ್ಟೈಲ್ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುವುದು.
View this post on InstagramA post shared by South Indian Brides (@southindianbridalfashion) on Oct 21, 2019 at 9:06am PDT
ಮುಡಿಗೆ ಮಲ್ಲಿಗೆ ದಂಡಿನ ಅಲಂಕಾರ
ಇದೊಂದು ಸರಳವಾದ ಹೇರ್ಸ್ಟೈಲ್ ಆಗಿದ್ದು, ಘಾಗ್ರ ರೀತಿಯ ಡ್ರೆಸ್ಸಿಂಗ್ ಹೇರ್ ಸ್ಟೈಲ್ ತುಂಬಾ ಆಕರ್ಷಕವಾಗಿ ಕಾಣುವುದು. ಇನ್ನು ರಿಸೆಪ್ಷನ್ಗೆ ಈ ಬಗೆಯ ಹೇರ್ಸ್ಟೈಲ್ ತುಂಬಾ ಆಕರ್ಷಕವಾಗಿ ಕಾಣುವುದು. ಈ ಹೇರ್ಸ್ಟೈಲ್ ಮಾಡುವಾಗ ಮುಂದಿಗಡೆ ಸ್ವಲ್ಪ ಬಫ್ ರೀತಿಯಲ್ಲಿರಲಿ.
View this post on InstagramA post shared by Neetu Josh | Makeup Artist (@neetujosh_artco) on Oct 14, 2019 at 9:00pm PDT
ತುರುಬಿನ ಹೇರ್ಸ್ಟೈಲ್
ಈ ಹೇರ್ಸ್ಟೈಲ್ ಮದುಮಗಳು ರಿಸೆಪ್ಷನ್ಗೆ ಟ್ರೈ ಮಾಡಬಹುದು. ಇನ್ನು ಸ್ವಲ್ಪ ಗ್ರ್ಯಾಂಡ್ ಆಗಿ ಕಾಣಬೇಕೆಂದು ಬಯಸುವುದಾದರೆ ತುರುಬು ಹಾಕಿ ಈ ರೀತಿ ಹೇರ್ಸ್ಟೈಲ್ ಮಾಡಿದರೆ ಸಾಕು ಆಕರ್ಷಕವಾಗಿ ಕಾಣುವುದು. ಈ ಹೇರ್ಸ್ಟೈಲ್ಗೆ ಗುಲಾಬಿ ಅಥವಾ ಮಲ್ಲಿಗೆ ದಂಡು ಆಕರ್ಷಕವಾಗಿ ಕಾಣುವುದು.
ಫ್ಲವರ್ ಕ್ಲಿಪ್ ಹೇರ್ ಸ್ಟೈಲ್
ಮದುವೆಯಲ್ಲಿ ಫ್ರೀ ಹೇರ್ಗಿಂತ ಈ ಬಗೆಯ ಹೇರ್ ಸ್ಟೈಲ್ ಆಕರ್ಷಕ ಲುಕ್ ನೀಡುತ್ತದೆ. ಕೂದಲನ್ನು ಬಾಚಿ, ಸಯಡ್ನಿಂದ ಎರಡು ಭಾಗ ತೆಗೆದು ಅದನ್ನು ಸುರುಳಿ ಸುತ್ತಿ ಕ್ಲಿಪ್ ಹಾಕಿ ನಂತರ ಈ ರೀತಿ ಹೂ ಮುಡಿದರೆ ಆಕರ್ಷಕವಾಗಿ ಕಾಣುವುದು.
View this post on InstagramA post shared by South Indian Brides (@southindianbridalfashion) on Oct 21, 2019 at 9:06am PDT
ಜಡೆಗೆ ಮಲ್ಲಿಗೆ ಅಲಂಕಾರ
ನಿಮಗೆ ಉದ್ದ ಕೂದಲಿದ್ದರೆ ಈ ಹೇರ್ ಸ್ಟೈಲ್ ಡ್ರೈ ಮಾಡಬಹುದು ನೋಡಿ. ಮಲ್ಲಿಗೆ ಮೊಗ್ಗಿನಿಂದ ಕೇಶ ಅಲಂಕಾರ ಮಾಡಿದರೆ ತುಂಬಾ ಆಕರ್ಷಕವಾಗಿ ಕಾಣುವುದು. ಈ ರೀತಿಯ ಹೇರ್ಸ್ಟೈಲ್ ಮಾಡಬಯಸುವುದಾದರೆ ಮೊದಲೇ ಹೂ ಕಟ್ಟುವವರ ಬಳಿ ಹೇಳಿ ಮಾಡಿಸಬೇಕಾಗುತ್ತದೆ. ಮಲ್ಲಿಗೆ ಮೊಗ್ಗುಗಳನ್ನು ದಪ್ಪವಾಗಿ ಪೋಣಿಸಿರುತ್ತಾರೆ. ಇದನ್ನು ಉದ್ದವಾದ ಜಡೆಗೆ ಮುಡಿಯಬಹುದು, ಇಲ್ಲಾ ತುರುಬು ಕಟ್ಟಿಯೂ ಹೂವನ್ನು ಈ ರೀತಿ ಮುಡಿದರೆ ಸೀರೆಗೆ ತುಂಬಾ ಆಕರ್ಷಕವಾಗಿ ಕಾಣುವುದು.
View this post on Instagram#bridalhairstylist #flowerbun #bridalhairbunstyle #indianbridalhairstyle
A post shared by Bonika Kardam (@makeupbybonika) on Nov 8, 2019 at 12:20am PST
ಫ್ಲವರ್ ಬನ್ ಹೇರ್ ಸ್ಟೈಲ್
ಈ ಹೇರ್ಸ್ಟೈಲ್ ಮಾಡಲು ಇಷ್ಟಪಡುವುದಾರೆ ಬ್ಯೂಟ ಎಕ್ಸ್ಫರ್ಟ್ ಅವರ ಬಳಿ ಹೇಳಿ ಮಾಡಿಸಿಕೊಳ್ಳಿ. ನಂತರ ಕಡುಗೆಂಪು ಬಣ್ಣದ ಗುಲಾಬಿ ಮುಡಿದರೆ ತುಂಬಾ ಆಕರ್ಷಕವಾಗಿ ಕಾಣುವುದು. ಗ್ರ್ಯಾಂಡ್ ಸೀರೆಗೆ ಫ್ಲವರ್ ಬನ್ ಹೇರ್ಸ್ಟೈಲ್ ಮತ್ತಷ್ಟ ಆಕರ್ಷಕ ಲುಕ್ ನೀಡುವುದು.