For Quick Alerts
ALLOW NOTIFICATIONS  
For Daily Alerts

ಸಂಗಾತಿಯ ಪೋಷಕರನ್ನು ಮೊದಲ ಬಾರಿ ಭೇಟಿಯಾಗುತ್ತಿದ್ದೀರಾ..? ಹೀಗಿರಲಿ ನಿಮ್ಮ ವರ್ತನೆ

|

ಹಿಂದೆ ಮದುವೆಯಾಗುವ ಹುಡುಗ ಅಥವಾ ಹುಡುಗಿಯ ಪೋಷಕರನ್ನು ಮದುವೆ ನಿಶ್ಚಯವಾಗುವ ಮೊದಲೇ ಭೇಟಿಯಾಗುವಂತಿರಲಿಲ್ಲ. ಈಗ ಕಾಲ ಬದಲಾಗಿದೆ.. ಜನರೇಷನ್‌ ಕೂಡಾ. ಈಗಂತೂ ಹುಡುಗ ಹುಡುಗಿ ಸಾಮಾಜಿಕ ಜಾಲತಾಣದಲ್ಲೋ ಅಥವಾ ಕೆಲಸದ ಸ್ಥಳದಲ್ಲೋ ನೋಡಿ ಇಷ್ಟವಾದ ಆಯ್ಕೆಯ ಸಂಗಾತಿಯನ್ನು ಮದುವೆಯಾಗುವ ಕಾಲವಿದು. ಅದರಲ್ಲೂ ಇಷ್ಟವಾದ ಹುಡುಗಿ ಅಥವಾ ಹುಡುಗನನ್ನೋ ಮೊದಲು ತಂದೆತಾಯಿಗೆ ಪರಿಚಯಿಸುವಂತಹ ಒಳ್ಳೆಯ ಅಭ್ಯಾಸ ಈಗಿನ ಯುವಜನರಲ್ಲಿದೆ. ಪರಿಚಯಿಸುವುದೇನೋ ನಿಜ. ಅವರನ್ನು ಇಂಪ್ರೆಸ್‌ ಕೂಡಾ ಮಾಡಬೇಕಲ್ಲವೇ..?. ಮೊದಲ ಭೇಟಿಯಲ್ಲೇ ಅವರನ್ನು ತಿಳಿದುಕೊಳ್ಳಲು, ಅವರನ್ನು ಇಂಪ್ರೆಸ್‌ ಮಾಡಲು ಈ ಟಿಪ್ಸ್ ತಪ್ಪದೇ ಓದಿ.

ಸಮಯಕ್ಕೆ ಸರಿಯಾಗಿ ಹೋಗಿ

ಸಮಯಕ್ಕೆ ಸರಿಯಾಗಿ ಹೋಗಿ

ಸಂಗಾತಿಯನ್ನು ಸರಿಯಾದ ಸಮಯಕ್ಕೆ ಮೀಟ್‌ ಆಗದಿದ್ದರೂ ಪರವಾಗಿಲ್ಲ. ಅವರ ಪೋಷಕರನ್ನು ಭೇಟಿ ಮಾಡಲು ಹೋಗುವಾಗ ಅಲರಾಂ ಇಟ್ಟುಕೊಳ್ಳುವುದಂತೂ ಮರೆಯಬೇಡಿ. ಸಮಯಕ್ಕೆ ಸರಿಯಾಗಿ ಹೋಗಿ. ಇದರಿಂದಾಗಿ ಇತರ ವ್ಯಕ್ತಿಯ ಸಮಯವನ್ನೂ ನೀವು ಗೌರವಿಸುತ್ತೀರಿ ಎಂದುಕೊಳ್ಳುತ್ತಾರೆ. ಮೊದಲ ಭೇಟಿಗೆ ತಡವಾಗಿ ಹೋದರೆ ನಿಮ್ಮ ಮೇಲೆ ಬ್ಯಾಡ್‌ ಇಂಪ್ರೆಷನ್‌ ಬರಬಹುದು, ಸಮಯಕ್ಕೆ ಸರಿಯಾಗಿ ಹೋಗದೇ ಅವರನ್ನು ಕಾಯುವಂತೆ ಮಾಡುವುದು ರೂಡ್‌ ಎಂದೂ ಅರ್ಥಮಾಡಿಕೊಳ್ಳಬಹುದು. ಅಲ್ಲದೇ ಮೊದಲ ಬಾರಿ ಸಂಗಾತಿಯ ಮನೆಗೆ ಹೋಗುತ್ತೀದ್ದೀರಿ ಎಂದಾದರೆ ಬರಿಕೈಯಲ್ಲಿ ಹೋಗಬೇಡಿ. ಅವರಿಷ್ಟದ ಸಿಹಿತಿಂಡಿ, ಹೂವಿನ ಬೊಕೆ, ಒಣಹಣ್ಣುಗಳನ್ನು ತೆಗೆದುಕೊಂಡು ಹೋಗಿ. ಅವರ ಇಷ್ಟಗಳ ಬಗ್ಗೆ ಸಂಗಾತಿಯಿಂದ ಮೊದಲೇ ಕೇಳಿ ತಿಳಿದುಕೊಂಡಿರಿ.

ನಿಮ್ಮ ಸಂಗಾತಿ ಇಲ್ಲದಿದ್ದರೂ ಮಾತು ಆರಂಭಿಸಿ

ನಿಮ್ಮ ಸಂಗಾತಿ ಇಲ್ಲದಿದ್ದರೂ ಮಾತು ಆರಂಭಿಸಿ

ನೀವು ಸಂಗಾತಿಯ ಮನೆಗೆ ಬೇಗ ತಲುಪಿದರೂ, ನಿಮ್ಮ ಸಂಗಾತಿ ಅಲ್ಲಿಲ್ಲದಿದ್ದರೆ ನೀವು ಮೂಕಪ್ರಾಣಿಯಂತೆ ಕೂರಬೇಡಿ ಅವರನ್ನು ನಿರ್ಲಕ್ಷ್ಯಿಸಬೇಡಿ. ಅಲ್ಲಿರುವ ಅವರ ಕುಟುಂಬದ ಸದಸ್ಯರೊಂದಿಗೆ ಮಾತು ಆರಂಭಿಸಿ. ಮಾತು ಆರಂಭಿಸಲು ನಿಮ್ಮ ಸಂಗಾತಿಯೇ ಬರಬೇಕೆಂದಿಲ್ಲ. ನೀವು ಮಾನಾಡಲು ಆರಂಭಿಸಿದ ಮೇಲೆ ಶೀಘ್ರವೇ ನೀವು ಮತ್ತು ಸುತ್ತಮುತ್ತಲಿರುವ ಇತರರೂ ಆರಾಮದಾಯಕವಾಗಿ ಸಂಭಾಷನೆ ನಡೆಸುವಿರಿ.

ನಿಮ್ಮಿಬ್ಬರ ನಡುವಿನ ಜಗಳವನ್ನು ಬದಿಗೆ ಸರಿಸಿ

ನಿಮ್ಮಿಬ್ಬರ ನಡುವಿನ ಜಗಳವನ್ನು ಬದಿಗೆ ಸರಿಸಿ

ಸಂಬಂದಲ್ಲಿ ಭಿನ್ನಾಭಿಪ್ರಾಯಗಳು ಸಹಜವೇ. ಪರಸ್ಪರ ಮಾತಿನ ಬಿರುಸು ಬಿಸಿಯಾದ ಚರ್ಚೆಗಳಿಗೆ ಕಾರಣವಾಗಬಹುದು.ಆದರೆ ನೀವೆಷ್ಟೇ ಕೋಪವನ್ನು ಹೊಂದಿದ್ದರೂ, ಸಂಗಾತಿಯ ಪೋಷಕರನ್ನು ಭೇಟಿಯಾಗುವ ಸಂದರ್ಭದಲ್ಲಿ ಅವೆಲ್ಲವನ್ನೂ ದೂರ ಸರಿಸಿ. ನೀವು ಸಂಗಾತಿಯನ್ನು ನಿರ್ಲಕ್ಷ್ಯಿಸುವುದನ್ನು ಕಂಡರೆ, ಸಂಗಾತಿಯ ಎದುರು ಖಾರವಾಗಿ ಮಾತನಾಡುತ್ತಿದ್ದರೆ ಅಲ್ಲಿರುವ ಎಲ್ಲರೂ ಗಮನಿಸುತ್ತಿರುತ್ತಾರೆ. ನಿಮ್ಮ ಕೋಪವು ಅಲ್ಲಿರುವ ಇತರರ ಮನಃಸ್ಥಿತಿಯನ್ನು ಕೆರಳಿಸಬಹುದು.

ಫೋನ್‌ ಕೈಯಲ್ಲಿಟ್ಟುಕೊಳ್ಳಬೇಡಿ

ಫೋನ್‌ ಕೈಯಲ್ಲಿಟ್ಟುಕೊಳ್ಳಬೇಡಿ

ಸಂಗಾತಿಯ ಪೋಷಕರನ್ನು ಭೇಟಿಯಾಗುವುದು ಅವರೊಂದಿಗೆ ಮಾತನಾಡಲು, ಪರಸ್ಪರ ತಿಳಿದುಕೊಳ್ಳಲು. ಹೆಚ್ಚಿನವರಿಗೆ ಒಂದು ಅಭ್ಯಾಸವಿರುತ್ತೆ, ಒಂದು ಕೈಯಲ್ಲಿ ಫೋನ್‌ ಇಟ್ಟುಕೊಂಡು ಇತರರೊಂದಿಗೆ ಮಾತನಾಡುವ ಮಧ್ಯೆ ಆಗಾಗ ಪೋನ್‌ ನೋಡುವುದು.ಇದು ಇತರರಿಗೆ ನೀವು ಮಾತನಾಡಲು ಇಷ್ಟಪಡದಿರುವಂತೆ ಅನಿಸಬಹುದು. ಹಾಗಾಗಿ ನಿಮ್ಮ ಸಂಗಾತಿಯ ಪೋಷಕರೊಂದಿಗೆ ಮಾತನಾಡುವಾ ಅವರ ಮಾತಿನ ಮೇಲೆ ಗಮನ ವಹಿಸಿ. ಮೊಬೈಲ್ ಅಗತ್ಯವಿಲ್ಲದಿದ್ದರೆ ದೂರವಿಡಿ. ಅವರ ಪೋಷಕರೊಂದಿಗೆ ಮುಕ್ತವಾಗಿ ಮಾತನಾಡಿ ಅವರನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಮತ್ತು ಅವರೊಂದಿಗೆ ಊಟವನ್ನು ಆನಂದಿಸಿ.

ಪರಸ್ಪರ ಸ್ಪರ್ಶ ಬೇಡ

ಪರಸ್ಪರ ಸ್ಪರ್ಶ ಬೇಡ

ನೀವಿನ್ನೂ ಯುವಕರು. ಪ್ರೀತಿಯಲ್ಲಿ ಎಷ್ಟೇ ಮುಂದುವರಿದಿದ್ದರೂ ಸಂಗಾತಿಯ ಪೋಷಕರ ಮುಂದೆ ಸಂಗಾತಿಯನ್ನು ಸ್ಪರ್ಶಿಸುವುದು ಮಾಡಬೇಡಿ. ಇದು ಅವರಿಗೆ ಮುಜುಗರವನ್ನುಂಟು ಮಾಡಬಹುದು. ಅದಷ್ಟು ಸ್ಪರ್ಶಿಸುವುದನ್ನು ತಪ್ಪಿಸಿ.

ಉತ್ತಮ ನಡವಳಿಕೆ ತೋರಿ

ಉತ್ತಮ ನಡವಳಿಕೆ ತೋರಿ

ನಿಮ್ಮ ಉತ್ತಮವಾದ ನಡವಳಿಕೆಯು ನಿಮ್ಮ ಸಂಗಾತಿಯ ಕುಟುಂಬದವರ ಮೇಲೆ ಉತ್ತಮ ಹಾಗೂ ಶಾಶ್ವತ ಪ್ರಭಾವ ಬೀರುತ್ತೆ. ಅವರ ಮನೆ, ಆಹಾರ ಅಥವಾ ಅವರ ಉಪಚಾರದ ಬಗ್ಗೆ ಪ್ರಶಂಸಿಲು ಮರೆಯಬೇಡಿ. ಊಟ ಮಾಡುವಾಗ ಪ್ಲೇಟ್‌ಗಳನ್ನು ತೆಗೆಯಲು ಸಹಾಯ ಮಾಡಿ. ಆದರೆ ಅತಿಯಾಗಿ ಮಾಡಲು ಹೋಗಬೇಡಿ ಯಾಕೆಂದರೆ ಅದು ನಕಲಿಯಾಗಿ ಕಾಣಬಹುದು. ಕೇವಲ ಸಣ್ಣಪುಟ್ಟ ಸಂಗತಿಗಳ ಬಗ್ಗೆ ಮುಂದುವರಿಯಿರಿ ಅಷ್ಟೇ.

ಎಲ್ಲವೂ ನಿಮಗೆ ತಿಳಿದಿದೆ ಎನ್ನುವಂತೆ ಆಡಬೇಡಿ

ಎಲ್ಲವೂ ನಿಮಗೆ ತಿಳಿದಿದೆ ಎನ್ನುವಂತೆ ಆಡಬೇಡಿ

ನಿಮ್ಮದು ಎರಡು ಮೂರು ವರ್ಷದ ಪ್ರೀತಿಯಾದರೂ ಸಂಗಾತಿಯನ್ನು ನೀವು ತುಂಬಾನೇ ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸಿದರೂ ಅವರ ಬಗ್ಗೆ ಎಲ್ಲವನ್ನೂ ತಿಳಿಯದೇ ಇರುವ ಸಾಧ್ಯತೆಗಳಿದೆ. ಅವರ ಹೆತ್ತವರಿಗಿಂತ ನೀವು ಅವರನ್ನು ತುಂಬಾನೇ ತಿಳಿದುಕೊಂಡಿದ್ದೀರಿ ಎನ್ನುವಂತೆ ವರ್ತಿಸಬೇಡಿ. ನಿಮಗೆ ತಿಳಿದಿದ್ದರೂ ಅವರ ಹೆತ್ತವರು ಅವರ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುವಾಗ ಕಿವಿಯಾಗಿ ಕೇಳಿ, ಅವರೊಂದಿಗೆ ನಕ್ಕುಬಿಡಿ.

ಸಾಧ್ಯವಾದಷ್ಟು ಸಂಗಾತಿಯ ಪೋಷಕರೊಂದಿಗೆ ಮುಕ್ತವಾಗಿ ಮಾತನಾಡಿ, ರಿಲ್ಯಾಕ್ಸ್‌ ಆಗಿ. ಸಂತೋಷದ ಸಮಯವನ್ನು ಕಳೆಯಿರಿ. ಬಿಗುಮಾನದಿಂದ ಇರಬೇಡಿ. ಹೊಸ ಜನರೊಂದಿಗೆ ನಿಮ್ಮ ಸಮಯವನ್ನು ಆನಂದಿಸಿ. ಮರಳುವಾಗ ಅವರನ್ನೂ ನಿಮ್ಮ ಮನೆಗೆ ಸ್ವಾಗತಿಸಲು ಮರೆಯಬೇಡಿ.

English summary

Tips to Meeting Your Partner’s Parents in Kannada

Here we are discussing about Tips to Meeting Your Partner’s Parents in Kannada. Read more.
X
Desktop Bottom Promotion