For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಈ ಬ್ಯೂಟಿ ಪ್ರಾಡೆಕ್ಟ್ಸ್ ಬಳಸಲೇಬಾರದು

|

ಬೇಸಿಗೆ, ಮಳೆಗಾಲಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ತ್ವಚೆ ಸಮಸ್ಯೆ ಸ್ವಲ್ಪ ಹೆಚ್ಚಾಗಿಯೇ ಕಂಡು ಬರುತ್ತದೆ. ನಿಮ್ಮದು ಒಣ ತ್ವಚೆ ಆಗಿರದಿದ್ದರೂ ಕೂಡ ತ್ವಚೆ ಒಣಗುವುದು. ಇನ್ನು ಒಣ ತ್ವಚೆಯವರಿಗೆ ತ್ವಚೆಯಲ್ಲಿ ಉರಿ, ಪಾದಗಳಲ್ಲಿ ಬಿರುಕು ಮುಂತಾದ ತೊಂದರೆ ಉಂಟಾಗುವುದು. ಆದ್ದರಿಂದ ಚಳಿಗಾಲದಲ್ಲಿ ತುಸು ಹೆಚ್ಚಾಗಿಯೇ ತ್ವಚೆ ಆರೈಕೆ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನಾವು ಬಳಸುವ ಸೌಂದರ್ಯವರ್ಧಕಗಳು ಅಂದರೆ ಬ್ಯೂಟಿ ಪ್ರಾಡೆಕ್ಟ್ಸ್ ಇವುಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.

Winter Season skin Care

ಅದರೆ ಹೆಚ್ಚಿಹನವರು ಇಲ್ಲೇ ತಪ್ಪು ಮಾಡುತ್ತಾರೆ, ಕಾಲಕ್ಕೆ ತಕ್ಕಂತೆ ತಮ್ಮ ಕ್ರೀಮ್‌, ಮಾಯಿಶ್ಚರೈಸರ್‌, ಸೋಪುಗಳಲ್ಲಿ ಬದಲಾವಣೆ ತರುವುದಿಲ್ಲ. ಇಲ್ಲಿ ನಾವು ನಿಮ್ಮ ತ್ವಚೆ ಸೌಂದರ್ಯ ರಕ್ಷಣೆ ಮಾಡಲು ಚಳಿಗಾಲದಲ್ಲಿ ಯಾವ ಬಗೆಯ ಸೌಂದರ್ಯವರ್ಧಕಗಳನ್ನು ಬಳಸಬಾರದು ಎಂದು ಟಿಪ್ಸ್ ನೀಡಿದ್ದೇವೆ ನೋಡಿ:

ಆಲ್ಕೋಹಾಲ್(ಮದ್ಯ) ಇರುವ ಸೌಂದರ್ಯ ವರ್ಧಕ

ಆಲ್ಕೋಹಾಲ್(ಮದ್ಯ) ಇರುವ ಸೌಂದರ್ಯ ವರ್ಧಕ

ಆಲ್ಕೋಹಾಲ್ ಇರುವ ಸೌಂದರ್ಯವರ್ಧಕ ಬಳಸಿದರೆ ತ್ವಚೆ ಮತ್ತಷ್ಟು ಒಣಗುವುದು. ಅದರಲ್ಲೂ ಒಣ ತ್ವಚೆಯವರು ಆಲ್ಕೋಹಾಲ್ ಅಂಶವಿರುವ ಸೌಂದರ್ಯವರ್ಧಕಗಳನ್ನು ಬಳಸಲೇಬಾರದು. ಆದ್ದರಿಂದ ಯಾವುದೇ ಸೌಂದರ್ಯವರ್ಧಕ ಕೊಳ್ಳುವಾಗ ಅವುಗಳಲ್ಲಿ ಆಲ್ಕೋಹಾಲ್ ಅಂಶವಿದೆಯೇ ಎಂದು ಪರೀಕ್ಷಿಸಿ ಕೊಂಡುಕೊಳ್ಳುವುದು ಒಳ್ಳೆಯದು. ಆಲ್ಕೋಹಾಲ್‌ ಅಂಶವಿರುವ ಟೋನರ್ ತ್ವಚೆಯಲ್ಲಿರುವ ಕೊಳೆಯಂಶವನ್ನು ಸುಲಭವಾಗಿ ತೆಗೆಯುವುದಾದರೂ ಈ ರೀತಿಯ ವಸ್ತುಗಳು ಚಳಿಗಾಲಕ್ಕೆ ಸೂಕ್ತವಲ್ಲ.

 ಸೋಪ್

ಸೋಪ್

ಕೆಲವರು ಫೇಸ್‌ ವಾಶ್‌ ಬಳಸುವುದಿಲ್ಲ, ಮುಖಕ್ಕೆ ಕೂಡ ಮೈಗೆ ಹಚ್ಚುವ ಸೋಪ್ ಬಳಸುತ್ತಾರೆ. ಆದರೆ ನಿಮ್ಮ ತ್ವಚೆ ಒಣಗಿದ್ದರೆ ಸೋಪ್ ಬಳಸುವುದರಿಂದ ಮತ್ತಷ್ಟು ಒಣಗುವುದು. ಇದರಿಂದ ಮುಖ ಉರಿಯುವುದು. ಸೋಪ್‌ನಲ್ಲಿ pH ಪ್ರಮಾಣ ನಿಮ್ಮ ತ್ವಚೆಯಲ್ಲಿ ಇರುವುದಕ್ಕಿಂತಲೂ ಅಧಿಕವಿರುತ್ತದೆ. ಆದ್ದರಿಂದ ಮುಖಕ್ಕೆ ಸೋಪ್ ಹಚ್ಚಿದಾಗ ಮುಖದಲ್ಲಿರುವ ತೇವಾಂಶವನ್ನು ತೆಗೆಯುವುದು. ಆದ್ದರಿಂದ ಚಳಿಗಾಲದಲ್ಲಿ ಸೋಪ್‌ಗಿಂತ ಫೇಸ್‌ವಾಸ್‌ ಬಳಸುವುದು ಉತ್ತಮ.

ಅಧಿಕ ಬಾರಿ ಸ್ಕ್ರಬ್ಬ್ರರ್‌ ಬಳಸುವುದು

ಅಧಿಕ ಬಾರಿ ಸ್ಕ್ರಬ್ಬ್ರರ್‌ ಬಳಸುವುದು

ಚಳಿಗಾಲದಲ್ಲಿ ಮುಖದ ಆರೈಕೆಗೆ ಎಕ್ಸ್ಫೋಲೆಟ್ ಮಾಡಬೇಕು, ಅದಕ್ಕೆ ಸ್ಕ್ರಬ್ಬರ್ ಬಳಸುವುದು ಒಳ್ಳೆಯದು. ಇದರಿಂದ ನಿರ್ಜೀವ ತ್ವಚೆಯನ್ನು ತೆಗೆಯಬಹುದು, ತ್ವಚೆ ಆಳದಿಂದ ಕ್ಲೆನ್ಸ್ ಆಗುತ್ತದೆ. ಆದರೆ ಚಳಿಗಾಲದಲ್ಲಿ ಎಕ್ಸ್‌ಫೋಲೆಟ್‌ ಮಾಡುವಾಗ ಈ ಕಾಲಕ್ಕೆ ಸೂಕ್ತವಾಗುವಂತೆ ಎಕ್ಸ್‌ಫೋಲೆಟ್‌ ಮಾಡಿ. ಅಂದರೆ ವಾರದಲ್ಲಿ ಒಂದು ಬಾರಿಯಷ್ಟೇ ಬಳಸಿ. ವಾರದಲ್ಲಿ 2-3 ಬಾರಿ ಬಳಸಬೇಡಿ. ಆಗಾಗ ಕ್ಲೆನ್ಸಿಂಗ್ ಮಾಡಿದರೆ ತ್ವಚೆ ಹಾಲಾಗಬಹುದು, ಹುಷಾರ್‌!

 ಪೌಡರ್ ಹಚ್ಚುವುದು

ಪೌಡರ್ ಹಚ್ಚುವುದು

ಚಳಿಗಾಲದಲ್ಲಿ ತ್ವಚೆ ಡ್ರೈಯಾಗಿರುತ್ತದೆ, ಇದಕ್ಕೆ ಪೌಡರ್ ಹಚ್ಚಿದರೆ ಮತ್ತಷ್ಟು ಡ್ರೈಯಾಗುವುದು ಹಾಗೂ ಬಿಳಿ ಬಿಳಿ ಕಾಣುವುದು. ಪೌಡರ್ ಫೌಂಡೇಷನ್, ಬ್ಲಷರ್ ಮುಂತಾದ ವಸ್ತುಗಳನ್ನು ಬಳಸಬೇಡಿ. ಚಳಿಗಾಲದಲ್ಲಿ ತ್ವಚೆ ಸ್ವಲ್ಪ ಎಣ್ಣೆ-ಎಣ್ಣೆಯಾಗಿಡುವ ಕ್ರೀಮ್ ಬಳಸಿ ಹಾಗೂ ಮಾಯಿಶ್ಚರೈಸರ್ ಕೂಡ ಒಣ ತ್ವಚೆಗೆ ಬಳಸುವಂತಾಗಿರಲಿ. ಪೌಡರ್ ಬಳಕೆ ಬದಲು ಕ್ರೀಮ್ ಬಳಕೆ ಚಳಿಗಾಲಕ್ಕೆ ಸೂಕ್ತವಾಗಿದೆ.

ಕ್ಲೇ ಫೇಸ್ ಮಾಸ್ಕ್

ಕ್ಲೇ ಫೇಸ್ ಮಾಸ್ಕ್

ಕ್ಲೇ ಮಾಸ್ಕ್ ತುಂಬಾ ಜನಪ್ರಿಯವಾದ ಸೌಂದರ್ಯವರ್ಧಕವಾಗಿದೆ. ಇದು ತ್ವಚೆಯಲ್ಲಿರುವ ಎಣ್ಣೆಯಂಶ ಹೀರಿಕೊಂಡು ಮುಖದ ತ್ವಚೆಯನ್ನು ಆಳದಿಂದ ಕ್ಲೆನ್ಸ್ ಮಾಡುತ್ತದೆ. ಆದರೆ ಈ ಕ್ಲೇ ಮಾಸ್ಕ್ ಚಳಿಗಾಲಕ್ಕೆ ಸೂಕ್ತವಲ್ಲ. ಚಳಿಗಾಲದಲ್ಲಿ ಮುಲ್ತಾನಿಮಿಟಿ ಬಳಸುವ ಬದಲು ಹಣ್ಣಿನ ಫೇಸ್‌ ಮಾಸ್ಕ್ ಬಳಸುವುದು ಒಳ್ಳೆಯದು. ಇದರಿಂದ ತ್ವಚೆಯಲ್ಲಿ ತೇವಾಂಶ ಉಳಿಯುತ್ತದೆ ಹಾಗೂ ತ್ವಚೆ ಆಕರ್ಷಕವಾಗಿ ಕಾಣುವುದು.

ತುಂಬಾ ಸುವಾಸನೆ ಇರುವ ಸೌಂದರ್ಯವರ್ಧಕಗಳು

ತುಂಬಾ ಸುವಾಸನೆ ಇರುವ ಸೌಂದರ್ಯವರ್ಧಕಗಳು

ತುಂಬಾ ಸುವಾಸನೆ ಬೀರುವ ಸೌಂದರ್ಯವರ್ಧಕಗಳು ಇಷ್ಟವಾಗುತ್ತವೆ ಆದರೆ ಅದು ಒಣ ತ್ವಚೆಗೆ ಸೂಕ್ತವಲ್ಲ. ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ಸುವಾಸನೆ ಇರುವ ಸೌಂದರ್ಯವರ್ಧಕಗಳನ್ನು ಬಳಸಲೇಬೇಡಿ. ಇವುಗಳನ್ನು ಬಳಸುವುದರಿಂದ ತ್ವಚೆ ಮತ್ತಷ್ಟು ಒಣಗಿ ನೋವು ಉಂಟಾಗುವುದು. ಇದರಿಂದ ತ್ವಚೆಯಲ್ಲಿ ಉರಿ, ನೋವು ಕೂಡ ಉಂಟಾಗುವುದು. ಆದಷ್ಟು ಸುವಾಸನೆ ಕಡಿಮೆ ಇರುವ ಕ್ರೀಮ್, ಬಾಡಿ ಲೋಷನ್, ಮಾಯಿಶ್ಚರೈಸರ್ ಬಳಸುವುದು ಒಳ್ಳೆಯದು.

English summary

Winter Season skin Care Avoid These Beauty Products

During winter skin will become dry, so one must give more caret to skin, So that using certain beauty product is not good for skin, here are the beauty tips to protect your skin.
Story first published: Tuesday, January 21, 2020, 17:24 [IST]
X
Desktop Bottom Promotion