For Quick Alerts
ALLOW NOTIFICATIONS  
For Daily Alerts

ಬಾಡಿ ಲೋಷನ್ ಮುಖಕ್ಕೆ ಹಚ್ಚಲೇಬಾರದು, ಏಕೆ?

|
ದೇಹಕ್ಕೆ ಹಚ್ಚುವ ಬಾಡಿ ಲೋಷನ್ ಮುಖಕ್ಕೆ ಹಚ್ಚಿದ್ರೆ ಏನಾಗುತ್ತೆ? | Oneindia Kannada

ಚಳಿಗಾಲದಲ್ಲಿ ಮೈ, ಕೈ, ಕಾಲು, ಮುಖ ಒಡೆಯಲಾರಂಭಿಸುತ್ತದೆ. ಕೆಲವರಿಗಂತೂ ಚಳಿಗಾಳಿ ಸ್ವಲ್ಪ ಸೋಕಿದರೂ ಸಾಕು ತ್ವಚೆ ಒಡೆದು ನೋವು ಕಂಡು ಬರುವುದು. ಇನ್ನು ಕೆಲವರಿಗೆ ಪಾದಗಳು ಬಿರುಕು ಒಡೆದು ರಕ್ತ ಬರಲಾರಂಭಿಸುತ್ತದೆ, ಕೈ ಕಾಲುಗಳು ಒಡೆದು ಕಪ್ಪಾಗಿರುತ್ತದೆ. ಮುಖ ಒಡೆದು ಉರಿ-ನೋವು ಕಂಡು ಬರುವುದು. ಈ ಎಲ್ಲಾ ಸಮಸ್ಯೆ ಹೋಗಲಾಡಿಸಲು ಬಾಡಿ ಲೋಷನ್ ಒಂದಿದ್ದರೆ ಸಾಕು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಬಾಡಿಲೋಷನ್ ನಿಮ್ಮ ದೇಹದ ಆರೈಕೆ ಮಾಡುತ್ತದೆ, ಆದರೆ ಮುಖದ ಆರೈಕೆ ಮಾಡಲು ಮುಖಕ್ಕೆ ಹಚ್ಚುವ ಮಾಯಿಶ್ಚರೈಸರ್‌ ಕ್ರೀಮ್ ಹಚ್ಚಬೇಕು.

ದೇಹಕ್ಕೆ ಹಚ್ಚುವ ಬಾಡಿಲೋಷನ್‌ ಮುಖಕ್ಕೆ ಏಕೆ ಹಚ್ಚಬಾರದು, ಬಾಡಿ ಲೋಷನ್‌ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲೆ ಬೀಳುವ ಪರಿಣಾಮಗಳೇನು ಎಂಬುವುದರ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ:

Body Lotion

1. ನಿಮ್ಮ ದೇಹದ ತ್ವಚೆ ಹಾಗೂ ಮುಖದ ತ್ವಚೆ ಭಿನ್ನವಾಗಿರುತ್ತದೆ

ದೇಹದ ತ್ವಚೆಗೆ ಹೋಲಿಸಿದರೆ ಮುಖದ ತ್ವಚೆ ತುಂಬಾ ಮೃದು ಹಾಗೂ ಸೂಕ್ಷ್ಮ.ಆದ್ದರಿಂದ ಮುಖ ಹಾಗೂ ದೇಹದ ತ್ವಚೆಯ ಆರೈಕೆಯನ್ನು ಭಿನ್ನ ರೀತಿಯಲ್ಲೇ ಮಾಡಬೇಕಾಗುತ್ತದೆ. ಮುಖದ ತ್ವಚೆಯಲ್ಲಿ ದೇಹದ ತ್ಚಚೆಗಿಂತ ಹೆಚ್ಚು ಸೆಬಮ್‌ ಉತ್ಪತ್ತಿಯಾಗುತ್ತದೆ. pH ಪ್ರಮಾಣ, ಉಷ್ಣಾಂಶ, ನೀರಿನಂಶ ಹಾಗೂ ರಕ್ತ ಸಂಚಾರ ದೇಹ ಹಾಗೂ ಮುಖದಲ್ಲಿ ಭಿನ್ನವಾಗಿರುತ್ತದೆ. ಇನ್ನು ಬಿಸಿಲಿನಲ್ಲಿ ಓಡಾಡುವಾಗ, ಚಳಿಗಾಲದಲ್ಲಿ ವಾತಾವರಣದ ಪ್ರಭಾವ ದೇಹದ ಇತರ ಭಾಗಕ್ಕಿಂತ ಮುಖದ ಮೇಲೆ ಹೆಚ್ಚು ಬೀರುವುದರಿಂದ ಬಾಡಿಲೋಷನ್‌ ಹಚ್ಚಿ ಸನ್‌ಟ್ಯಾನ್‌, ಮುಖದ ತ್ವಚೆ ಒಡೆಯುವುದು, ತುಟಿ ಒಡೆಯುವುದು ಈ ರೀತಿಯ ಸೌಂದರ್ಯ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ.

2. ಬಾಡಿಲೋಷನ್‌ ಹಾಗೂ ಮುಖಕ್ಕೆ ಹಚ್ಚುವ ಮಾಯಿಶ್ಚರೈಸರ್ ತಯಾರಿಸುವ ಮಾನದಂಡವೇ ಭಿನ್ನವಾಗಿರುತ್ತದೆ

ಮುಖಕ್ಕೆ ಹಚ್ಚುವ ಮಾಯಿಶ್ಚರೈಸರ್‌ಗೆ ಒಣ ತ್ವಚೆ ಹೋಗಲಾಡಿಸಿ, ತ್ವಚೆಯಲ್ಲಿ ತೇವಾಂಶ ಕಾಪಾಡುವ, ನೇರಳಾತೀತ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುವ, ಅಕಾಲಿಕ ನೆರಿಗೆಯನ್ನು ತಡೆಗಟ್ಟುವ ಫಾರ್ಮುಲಾ ಬಳಸಿರುತ್ತಾರೆ. ಆದರೆ ದೇಹದ ತ್ವಚೆ ಅಷ್ಟೊಂದು ಸೂಕ್ಷ್ಮವಾಗಿಲ್ಲದ ಕಾರಣ ಬಾಡಿಲೋಷನ್‌ ಕ್ರೀಮ್‌ನಲ್ಲಿ ಮಾಯಿಶ್ಚರೈಸರ್‌ಗಿಂತ ಸ್ವಲ್ಪ ಅಧಿಕ ರಾಸಾಯನಿಕ ಬಳಸಿ ತಯಾರಿಸಲಾಗುವುದು. ಆದ್ದರಿಂದ ಇದನ್ನು ಸೂಕ್ಷ್ಮ ತ್ವಚೆಗೆ ಹಚ್ಚಲು ಸಾಧ್ಯವಿಲ್ಲ.

3. ಮುಖಕ್ಕೆ ಬಾಡಿಲೋಷನ್‌ ಹಚ್ಚುವುದರಿಂದ ಬೇರೆ ರಿತಿಯ ಸಮಸ್ಯೆಗಳು ಬರಬಹುದು

* ಮುಖ ಒಡೆಯುತ್ತದೆ ಎಂದು ಮುಖಕ್ಕೆ ಬಾಡಿಲೋಷನ್ ಹಚ್ಚುವುದರಿಂದ ಮುಖದಲ್ಲಿ ಬ್ಲ್ಯಾಕ್‌ಹೆಡ್ಸ್‌ ಸಮಸ್ಯೆ ಹಚ್ಚಾಗುವುದು

* ಮುಖದ ರಂಧ್ರಗಳು ಹೆಚ್ಚಾಗುವುದು, ಇನ್ನು ಮೊಡವೆ ಸಮಸ್ಯೆ ಇರುವವರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.

*ಬಾಡಿಲೋಷನ್‌ನಲ್ಲಿ ಬಳಸುವ ಸುವಾಸನೆ ಮುಖದ ತ್ವಚೆಗೆ ಒಳ್ಳೆಯದಲ್ಲ, ಇದರಿಂದ ತ್ವಚೆಗೆ ಹಾನಿಯುಂಟಾಗುವುದು.

* ಬಾಡಿಲೋಷನ್‌ ಮುಖಕ್ಕೆ ಹಚ್ಚಿದರೆ ಅಲರ್ಜಿ ಸಮಸ್ಯೆ ಉಂಟಾಗುವುದು ಇದರಿಂದ ಮುಖದಲ್ಲಿ ಗುಳ್ಳೆಗಳು ಏಳುವುದು, ತುರಿಕೆ ಮುಂತಾದ ಸಮಸ್ಯೆ ಕಂಡು ಬರುವುದು.

* ಬಾಡಿ ಲೋಷನ್‌ ಮುಖಕ್ಕೆ ಹಚ್ಚಿದರೆ ಮುಖದಲ್ಲಿಜಿಡ್ಡಿನಂಶ ಅಧಿಕವಾಗುವುದರಿಂದ.

* ಬಾಡಿಲೋಷನ್‌ ಹಚ್ಚಿ ಮೇಕಪ್ ಮಾಡಿದರೆ ಮುಖದಲ್ಲಿ ಮೇಕಪ್‌ ಎದ್ದು ಕಾಣುವುದಿಲ್ಲ.

ಆದ್ದರಿಂದ ಮುಖದ ತ್ವಚೆ ಆರೈಕೆ ಮಾಡುವಾಗ ಸ್ವಲ್ಪ ಎಚ್ಚರಿಕೆವಹಿಸಬೇಕು, ಮುಖಕ್ಕೆ ಹಚ್ಚುವ ಕ್ರೀಮ್‌ ಅಥವಾ ಮಾಯಿಶ್ಚರೈಸರ್‌ ಬಿಟ್ಟು ಬಾಡಿಲೋಷನ್, ಬಾಡಿವಾಶ್‌ ಇವುಗಳನ್ನು ಬಳಸಬೇಡಿ.

English summary

Why you should not Use Body Lotion On Your Face

There are certain things you shouldn't find the shortcuts for facial care. So,bodylotion not meant for face. Here are how is body lotion different from a moisturiser and why shouldn't we use the body lotion on the skin? Read on to know.
Story first published: Thursday, November 14, 2019, 18:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more