For Quick Alerts
ALLOW NOTIFICATIONS  
For Daily Alerts

ಆಗಾಗ ಮುಖಕ್ಕೆ ಬ್ಲೀಚಿಂಗ್ ಮಾಡಿಸುತ್ತಿದ್ದೀರಾ? ಈ ಲೇಖನ ನಿಮಗಾಗಿ

|

ವಯಸ್ಸು 30 ದಾಟುತ್ತಿದ್ದಂತೆ ಕೆಲ ಮಹಿಳೆಯರು ಸೌಂದರ್ಯ ಹೆಚ್ಚಿಸಲು ಬ್ಲೀಚ್‌ನ ಮೊರೆ ಹೋಗುತ್ತಾರೆ. ಸ್ವಲ್ಪ ಕೃಷ್ಣ ವರ್ಣದವರಾದರೆ ಬೆಳಗ್ಗೆ ಕಾಣಬೇಕು ಎಂಬ ಉದ್ದೇಶದಿಂದ ಬ್ಲೀಚ್‌ ಮಾಡಿಸಿದರೆ, ಬೆಳಗ್ಗಿದ್ದವರು ತಮ್ಮ ತ್ವಚೆ ಮತ್ತಷ್ಟು ಬೆಳಗ್ಗೆ, ಚೆನ್ನಾಗಿ ಕಾಣಲಿ ಎಂದು ಬ್ಲೀಚ್‌ ಮಾಡಿಸುವುದುಂಟು.

ಇನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವೊಂದು ಬ್ಲೀಚ್‌ನ ಮೇಲೆ ಇದು ತ್ವಚೆಗೆ ಹಾನಿಕಾರವಲ್ಲ ಎಂದು ಬರೆದಿರುತ್ತದೆ. ಇನ್ನು ಬ್ಲೀಚ್ ಮಾಡಿಸಿ ಅಭ್ಯಾಸ ಇರುವವರಿಗೆ 15 ದಿನಕ್ಕೊಮ್ಮೆ, ಇಲ್ಲದಿದ್ದರೆ ತಿಂಗಳಿಗೊಮ್ಮೆ ಬ್ಲೀಚ್‌ ಮಾಡಿಸಿಕೊಳ್ಳುತ್ತಾರೆ. ಹಾಗೇ ಮಾಡಿಸದಿದ್ದರೆ ಅವರಿಗೆ ತಮ್ಮ ತ್ವಚೆಯ ಬಣ್ಣ ಸ್ವಲ್ಪ ಮಂಕಾಗಿದೆ ಎಂದು ಅನಿಸಲಾರಂಭಿಸುತ್ತದೆ.

Frequent Bleaching Side effect

ಆದರೆ ರೂಪವತಿಯಾಗಿ ಕಾಣಿಸಲು ಆಗಾಗ ಬ್ಲೀಚ್‌ ಮಾಡಿಸುತ್ತಿದ್ದರೆ ನೀವು ಹಾನಿಕಾರಕವಲ್ಲ ಎಂದು ಬಳಸುತ್ತಿರುವ ಬ್ಲೀಚ್‌ ನಿಮ್ಮ ಮೇಲೆ ಬೀರುವ ಗಂಭೀರ ಅಡ್ಡಪರಿಣಾಗಳ ಕುರಿತು ತಿಳಿಯುವುದು ಒಳ್ಳೆಯದು.

ತ್ವಚೆ ಬ್ಲೀಚಿಂಗ್‌ ಮಾಡುವುದರಿಂದ ಉಂಟಾಗುವ ತೊಂದರೆಗಳು

ತ್ವಚೆ ಬ್ಲೀಚಿಂಗ್‌ ಮಾಡುವುದರಿಂದ ಉಂಟಾಗುವ ತೊಂದರೆಗಳು

ಮಾರುಕಟ್ಟೆಯಲ್ಲಿ ದೊರೆಯುವ ತುಂಬಾ ಸ್ಕಿನ್‌ ಬ್ಲೀಚಿಂಗ್ ಸಾಧನಗಳಲ್ಲಿ ತ್ವಚೆಯನ್ನು ಬೆಳ್ಳಗೆ ಮಾಡುವ ಹೈಡ್ರೋಕ್ವಿಯೋನಿನೆ, ಸ್ಟಿರಾಯ್ಡ್ ಅಥವಾ AHAs ಅಂಶವಿರುತ್ತದೆ.

ಆದ್ದರಿಂದ ಬ್ಲೀಚಿಂಗ್ ಮಾಡಿಸಿದಾಗ ತಿಂಗಳುವರೆಗೆ ನಿಮ್ಮ ತ್ವಚೆ ಬೆಳ್ಳಗೆ ಕಾಣಿಸುವುದು, ನಂತರ ನಿಧಾನಕ್ಕೆ ಮುಖದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುವುದು.

ಈ ಬ್ಲೀಚಿಂಗ್ ಕ್ರೀಮ್ ಬಳಸಿದಾಗ ಮುಖದಲ್ಲಿ ಊತ, ತ್ವಚೆಯಲ್ಲಿ ವೈಟ್‌ ಪ್ಯಾಚ್ ಉಂಟಾಗುವುದು. ಇನ್ನು ಕೆಲವರಿಗೆ ಮುಖದಲ್ಲಿ ಉರಿ ಉಂಟಾಗುವುದು. ಈ ರೀತಿ ಕಂಡು ಬಂದರೆ ನೀವು ಚರ್ಮ ರೋಗ ತಜ್ಞರನ್ನು ಭೇಟಿಯಾಗಿ.

ತ್ವಚೆಯನ್ನು ತುಂಬಾ ಡ್ರೈಯಾಗಿಸುತ್ತದೆ

ತ್ವಚೆಯನ್ನು ತುಂಬಾ ಡ್ರೈಯಾಗಿಸುತ್ತದೆ

ನೀವು ಆಗಾಗ ಬ್ಲೀಚಿಂಗ್ ಮಾಡುತ್ತಿದ್ದರೆ ಗಮನಿಸಬಹುದು, ತ್ವಚೆಯನ್ನು ತುಂಬಾ ಡ್ರೈಯಾಗಿಸುತ್ತದೆ. ಬ್ಲೀಚಿಂಗ್‌ನಲ್ಲಿ PH ಪ್ರಮಾಣ ಅಧಿಕವಿರುವುದರಿಂದ ಇದು ತ್ವಚೆಯನ್ನು ತುಂಬಾ ಡ್ರೈಯಾಗಿಸುತ್ತದೆ.

ತ್ವಚೆಯನ್ನು ತುಂಬಾ ಸೆನ್ಸಿಟಿವ್ ಆಗಿರುತ್ತದೆ

ತ್ವಚೆಯನ್ನು ತುಂಬಾ ಸೆನ್ಸಿಟಿವ್ ಆಗಿರುತ್ತದೆ

ಇನ್ನು ಬ್ಲೀಚಿಂಗ್ ಮಾಡುವುದರಿಂದ ತ್ವಚೆ ತುಂಬಾ ಸೆನ್ಸಿಟಿವ್ ಮಾಡುತ್ತದೆ. ಆದ್ದರಿಂದ ನೀವು ಬಿಸಿಲಿನಲ್ಲಿ ಸ್ವಲ್ಪ ಓಡಾಡಿದರೂ ಮುಖ ಕಪ್ಪಾಗುತ್ತದೆ.

ತ್ವಚೆ ಕ್ಯಾನ್ಸರ್ ಬರುವ ಸಾಧ್ಯತೆಯೂ ಹೆಚ್ಚು

ತ್ವಚೆ ಕ್ಯಾನ್ಸರ್ ಬರುವ ಸಾಧ್ಯತೆಯೂ ಹೆಚ್ಚು

ಬ್ಲೀಚ್ ತ್ವಚೆಯಲ್ಲಿನ ಮೆಲನಿನ್ ಉತ್ಪತ್ತಿಯನ್ನು ತಗ್ಗಿಸುತ್ತದೆ, ಇದರಿಂದ ತ್ವಚೆ ಕ್ಯಾನ್ಸರ್ ಕೂಡ ಬರಬಹುದು. ಅಲ್ಲದೆ ಬ್ಲೀಚಿಂಗ್‌ನಲ್ಲಿರುವ ಹೈಡ್ರೋಜನ್ ಪರಾಕ್ಸೈಡ್, ಬೆಂಜೋಯಿಲ್ ಪೆರಾಕ್ಸೈಡ್, ಫಾಸ್ಪರಿಕ್ ಆಮ್ಲ ಇದು ತ್ವಚೆಯಲ್ಲಿನ ಎಪೈಡರ್‌ಮಿಸ್ ತೆಳ್ಳಗೆ ಮಾಡುವುದರಿಂದ ತ್ವಚೆ ಕ್ಯಾನ್ಸರ್ ಬರಬಹುದು.

English summary

Why Frequent Bleaching agent it face is not recommended?

Why Frequent Bleaching agent it face is not recommended? Read on...
Story first published: Wednesday, March 24, 2021, 14:21 [IST]
X
Desktop Bottom Promotion