For Quick Alerts
ALLOW NOTIFICATIONS  
For Daily Alerts

ಈ ಟೊಮೊಟೋ ಫೇಸ್ ಮಾಸ್ಕ್ ಬಳಸಿ, ಚಳಿಗಾಲದಲ್ಲಿ ಕಾಂತಿಯುತ ತ್ವಚೆ ಪಡೆಯಿರಿ

|

ಟೊಮೆಟೋ ಅಂದಾಕ್ಷಣ ತಲೆಗೆ ಬರುವ ಮೊದಲ ಆಲೋಚನೆ ಅಂದ್ರೆ ಆಹಾರ ತಯಾರಿಕೆ ಅಷ್ಟೇ. ಆದರೆ ಅದನ್ನು ತಮ್ಮ ತ್ವಚೆಯ ದಿನಚರಿಯ ಭಾಗವಾಗಿ ಬಳಸುವ ಅನೇಕ ಜನರಿದ್ದಾರೆ.

ಟೊಮ್ಯಾಟೋಗಳಲ್ಲಿ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದ್ದು, ನಿಮ್ಮ ಮುಖದ ಅಂಗಾಂಶಗಳಲ್ಲಿ ರಕ್ತಪರಿಚಲನೆಯ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ನಿಮ್ಮ ಮುಖಕ್ಕೆ ನೈಸರ್ಗಿಕ ಬ್ಲಶ್ ಸಿಗುತ್ತದೆ. ಜೊತೆಗೆ ಟೊಮೆಟೊ ಫೇಸ್ ಮಾಸ್ಕ್ ನಿಮ್ಮ ಚರ್ಮವನ್ನು ಚಳಿಗಾಲದ ಶುಷ್ಕತೆ ಮತ್ತು ಇತರ ತ್ವಚೆಯ ಸಮಸ್ಯೆಯಿಂದ ಸಂಪೂರ್ಣ ರಕ್ಷಣೆ ನೀಡುತ್ತದೆ.

ಟೊಮೆಟೊಗಳ ಸಹಾಯದಿಂದ ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ರಕ್ಷಿಸಲು ಟಾಪ್ 4 ಟೊಮೆಟೊ ಮಾಸ್ಕ್ಗಳನ್ನು ಕೆಳಗೆ ಉಲ್ಲೇಖಿಸಿದ್ದೇವೆ.

ಟೊಮೆಟೊ ಮತ್ತು ಅರಿಶಿನ:

ಟೊಮೆಟೊ ಮತ್ತು ಅರಿಶಿನ:

ಟೊಮೆಟೊದಿಂದ ಬೀಜಗಳನ್ನು ತೆಗೆದು, ಉತ್ತಮವಾದ ಪೇಸ್ಟ್ ಅನ್ನು ರೂಪಿಸಲು ಅವುಗಳನ್ನು ಮ್ಯಾಶ್ ಮಾಡಿ. ಇದಕ್ಕೆ 2-3 ಚಮಚ ಅರಿಶಿನವನ್ನು ಸೇರಿಸಿ , ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ, ಒಣಗಲು ಬಿಡಿ. ಈ ಪೇಸ್ಟ್ ಸರಿಯಾಗಿ ಒಣಗಿದ ನಂತರ, ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈಗ ನಿಮ್ಮ ಚರ್ಮದ ಟೋನ್ ನಲ್ಲಿ ಗಮನಾರ್ಹ ಬದಲಾವಣೆಯನ್ನು ಗಮನಿಸಬಹುದು ಜೊತೆಗೆ ನಿಮ್ಮ ಕಲೆಗಳ ಕಡಿತವನ್ನು ಗಮನಿಸಬಹುದು.

ಪ್ರಯೋಜನಗಳು:

ಮಾಸ್ಕ್ ನಿಮ್ಮ ತ್ವಚೆಯನ್ನು ಸುಂದರವಾಗಿಸುವುದಲ್ಲದೇ, ಉತ್ತಮ ಟೋನ್ ನೀಡುತ್ತದೆ, ಹಾಗೆಯೇ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳ ನೋಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮೊಡವೆ ಮತ್ತು ಕೆಲವು ಚರ್ಮದ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಟೊಮೆಟೊ ಮತ್ತು ಮೊಸರು:

ಟೊಮೆಟೊ ಮತ್ತು ಮೊಸರು:

ಟೊಮೆಟೊವನ್ನು ಮ್ಯಾಶ್ ಮಾಡಿ , ಅದಕ್ಕೆ ಕೆಲವು ಚಮಚ ಮೊಸರು ಸೇರಿಸಿ. ಈ ಪೇಸ್ಟ್ ಅನ್ನು ಫೇಸ್ ಮಾಸ್ಕ್ ಆಗಿ ಹಚ್ಚಿ, ಸುಮಾರು 5-10 ನಿಮಿಷಗಳ ನಂತರ ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆಯಿರಿ.

ಪ್ರಯೋಜನಗಳು:

ಈ ಮಾಸ್ಕ್ ನಿಮ್ಮ ಚರ್ಮವನ್ನು ಆರ್ಧ್ರಕಗೊಳಿಸಲು ಸಹಾಯ ಮಾಡುತ್ತದೆ. ಮೊಸರು ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಹೊಂದಿದ್ದು, ನಿಮ್ಮ ಚರ್ಮದ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಅನಗತ್ಯ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಎದುರಿಸುತ್ತದೆ.

ಟೊಮೆಟೊ ಮತ್ತು ಜೇನುತುಪ್ಪ:

ಟೊಮೆಟೊ ಮತ್ತು ಜೇನುತುಪ್ಪ:

ಟೊಮೆಟೊವನ್ನು ಅರ್ಧದಷ್ಟು ಕತ್ತರಿಸಿ, ಬೀಜಗಳನ್ನು ತೆಗೆದ ನಂತರ ಮ್ಯಾಶ್ ಮಾಡಿ, ಅದಕ್ಕೆ ಕೆಲವು ಚಮಚ ಜೇನುತುಪ್ಪವನ್ನು ಸೇರಿಸಿ. ಈ ಪೇಸ್ಟ್ ನ್ನು ಫೇಸ್ ಮಾಸ್ಕ್ ಆಗಿ ಅನ್ವಯಿಸಿ ಮತ್ತು 15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ, ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಪ್ರಯೋಜನಗಳು:

ಜೇನುತುಪ್ಪ ಮತ್ತು ಟೊಮೆಟೊ ಫೇಸ್ ಮಾಸ್ಕ್ ನಿಮ್ಮ ಚರ್ಮದಿಂದ ಕಳೆದುಹೋದ ತೇವಾಂಶವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಜೊತೆಗೆ ನಿಮ್ಮ ಮುಖಕ್ಕೆ ಹೊಳಪನ್ನು ನೀಡುತ್ತದೆ .

ಟೊಮೆಟೊ ಮತ್ತು ಸಾರಭೂತ ತೈಲಗಳು:

ಟೊಮೆಟೊ ಮತ್ತು ಸಾರಭೂತ ತೈಲಗಳು:

ಟೊಮೆಟೊವನ್ನು ಪೇಸ್ಟ್ ಆಗಿ ಮ್ಯಾಶ್ ಮಾಡಿ ಮತ್ತು ಅದರಲ್ಲಿ ನಿಮ್ಮ ಆಯ್ಕೆಯ ಸಾರಭೂತ ತೈಲಗಳ ಕೆಲವು ಹನಿಗಳನ್ನು ಸೇರಿಸಿ . ಈಗ ಈ ಪೇಸ್ಟ್ ಅನ್ನು ವೃತ್ತಾಕಾರದ ಚಲನೆಯಲ್ಲಿ ಮುಖಕ್ಕೆಮಸಾಜ್ ಮಾಡಿ. ಅದರಲ್ಲಿರುವ ತೈಲಗಳು ಮತ್ತು ವಿಟಮಿನ್ಗಳನ್ನು ಅತ್ಯುತ್ತಮವಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಪ್ರಯೋಜನಗಳು:

ಈ ಫೇಸ್ ಮಾಸ್ಕ್ ನಿಮ್ಮ ಚರ್ಮದ ಅಂಗಾಂಶಗಳನ್ನು ಪುನರ್ಯೌವನಗೊಳಿಸಲು ಮತ್ತು ಪೋಷಿಸಲು ಸಹಾಯ ಮಾಡುತ್ತದೆ. ಜೊತೆಗೆ ತ್ವಚೆಯನ್ನು ಚೆನ್ನಾಗಿ ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ .

English summary

Tomato Face Masks to protect your skin in winters in Kannada

Here we talking about Tomato Face Masks to protect your skin in winters in Kannada, read on
Story first published: Tuesday, November 30, 2021, 10:47 [IST]
X
Desktop Bottom Promotion