For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತ್ವಚೆ ಒಣಗುವುದನ್ನು ತಡೆಯುವುದು ಹೇಗೆ?

|

ಚಳಿಗಾಲದ ಆರಂಭವಾಗುತ್ತಿದ್ದ ಹಾಗೆಯೇ ಒಣ, ಬಿರುಕು ಬಿಟ್ಟ ಚರ್ಮ-ತುಟಿ, ತುರಿಕೆ, ಒರಟಾದ ಕೈಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ತ್ವಚೆಗೆ ಕಾಳಜಿಯನ್ನು ತೆಗೆದುಕೊಂಡರೆ, ಈ ಸಮಸ್ಯೆಗಳಿಂದ ಪಾರಾಗಬಹುದು. ಅದಕ್ಕೆ ಸಹಾಯ ಮಾಡಬಹುದಾದ ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ಹಂಚಿಕೊಂಡಿದ್ದೇವೆ. ಇದನ್ನು ಅನುಸರಿಸುವುದರ ಮೂಲಕ, ಚಳಿಗಾಲದಲ್ಲಿ ಆರೋಗ್ಯಕರ ತ್ವಚೆಯನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯಕರ ತ್ವಚೆಗೆ ಚಳಿಗಾಲದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬದನ್ನು ಈ ಕೆಳಗೆ ನೀಡಲಾಗಿದೆ:

Tips to Get Rid of Dryness in Winter in Kannada

1. ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಿ. ಬದಲಾಗಿ, ಉಗುರು ಬೆಚ್ಚಗಿನ ನೀರನ್ನು ಬಳಸಿ. ಬಿಸಿನೀರಿನ ಸ್ನಾನವು ದೇಹದಿಂದ ಅಗತ್ಯ ಅಂಶಗಳನ್ನು ತೆಗೆದುಹಾಕುತ್ತದೆ. ಆದ್ದರಿಂದ, ನಿಮ್ಮ ಸ್ನಾನದ ಸಮಯವನ್ನು ಗರಿಷ್ಠ 10 ನಿಮಿಷಗಳವರೆಗೆ ಮಿತಿಗೊಳಿಸುವುದು ಮತ್ತು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡದಿರುವುದು ಅತ್ಯಗತ್ಯ.

2. ನಿಮ್ಮ ತ್ವಚೆಯನ್ನು ತೇವಗೊಳಿಸುವಂತಹ ಬಾಡಿ ವಾಶ್ ಅನ್ನು ಆರಿಸಿಕೊಳ್ಳಿ. ಏಕೆಂದರೆ, ಕೆಲವು ರೀತಿಯ ಸೋಪ್ ತ್ವಚೆಯ ಮೇಲೆ ಕಠಿಣವಾಗಿರುವುದರಿಂದ ನೈಸರ್ಗಿಕ ಅಥವಾ ಸಾವಯವವಾಗಿರುವ ಸೋಪ್ ಅನ್ನು ಆರಿಸಿಕೊಳ್ಳಿ.

3. ಚರ್ಮಕ್ಕೆ ಹಾನಿಯಾಗದಂತಹ ಬಾಡಿ ಬ್ರಷ್‌ಗಳನ್ನು ಬಳಸಿ.

4. ಚರ್ಮವನ್ನು ಕೆರಳಿಸುವ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ನಿಮ್ಮ ಸ್ವೆಟರ್‌ಗಳು ಮತ್ತು ಕೋಟ್‌ಗಳ ಅಡಿಯಲ್ಲಿ ಹತ್ತಿ ಶರ್ಟ್ ಧರಿಸಿ ಇದರಿಂದ ಉಣ್ಣೆಯು ಚರ್ಮಕ್ಕೆ ಕಿರಿಕಿರಿಯಾಗುವುದಿಲ್ಲ ಮತ್ತು ಒಣಗುವುದಿಲ್ಲ.

5. ನೀವು ಸ್ನಾನ ಮಾಡಿದ ನಂತರ, ನಿಮ್ಮ ದೇಹವನ್ನು ಒಣಗಿಸಿ ಮತ್ತು ತಕ್ಷಣವೇ ಮಾಯಿಶ್ಚರೈಸರ್ ಅನ್ನು ಹಚ್ಚಿ.

6. ನಿಮ್ಮ ದೈನಂದಿನ ದಿನಚರಿಯಲ್ಲಿ ಆಲ್ಕೋಹಾಲ್ ಮುಕ್ತ ಕ್ಲೆನ್ಸರ್ ಮತ್ತು ಟೋನರನ್ನು ಬಳಸಿ. ಹಾಲು ಆಧಾರಿತ ಕ್ಲೀನರ್‌ಗಳು ಚರ್ಮವನ್ನು ನಯವಾಗಿಡಲು ಮತ್ತು ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತದೆ.

7. ನಿಮ್ಮ ಕೈಗಳ ಚರ್ಮವು ತೆಳ್ಳಗಿರುವುದರಿಂದ, ತ್ವರಿತ ಹಾನಿಗೆ ಒಳಗಾಗುತ್ತದೆ. ಆದ್ದರಿಂದ ಅವುಗಳಿಗೆ ಮಾಯಿಶ್ಚರೈಸರ್ ಮತ್ತು ಎಣ್ಣೆಯನ್ನು ಹಚ್ಚುವ ಮೂಲಕ ಮತ್ತು ಅವುಗಳನ್ನು ಕೈಗವಸುಗಳು ಮತ್ತು ಸಾಕ್ಸ್‌ಗಳಿಂದ ಮುಚ್ಚುವ ಮೂಲಕ ರಕ್ಷಿಸಿ.

8. ನೀವು ಹೊರಗೆ ಹೋಗುವಾಗಲೆಲ್ಲಾ ಸನ್‌ಸ್ಕ್ರೀನ್ ಹಚ್ಚಿ. ಹವಾಮಾನವು ಮಂಜಿನಿಂದ ಕೂಡಿರುವಾಗಲೂ ನಿಮ್ಮ ಚರ್ಮಕ್ಕೆ ಸೂರ್ಯನಿಂದ ರಕ್ಷಣೆ ಬೇಕಾಗುತ್ತದೆ.

9. ನಿಮ್ಮನ್ನು ಹೈಡ್ರೇಟ್ ಮಾಡಲು ಮತ್ತು ಚರ್ಮದಲ್ಲಿ ಕಳೆದುಹೋದ ಕೆಲವು ಪೋಷಕಾಂಶಗಳನ್ನು ಪುನಃ ತುಂಬಿಸಲು ನೀರನ್ನು ಕುಡಿಯಿರಿ.

10. ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಚಳಿಗಾಲದ ಮಾಯಿಶ್ಚರೈಸರ್ ಅನ್ನು ಆಯ್ಕೆಮಾಡಿ. ಇದು ಮೂರು ಮುಖ್ಯ ಅಂಶಗಳನ್ನು ಒಳಗೊಂಡಿರಬೇಕು - ಸೆರಾಮಿಡ್‌ಗಳು, ಗ್ಲಿಸರಿನ್, ಸೋರ್ಬಿಟೋಲ್ ಮತ್ತು ಹೈಲುರಾನಿಕ್ ಆಮ್ಲದಂತಹ ಹ್ಯೂಮೆಕ್ಟಂಟ್‌ಗಳು. ಇವು ಚರ್ಮಕ್ಕೆ ತೇವಾಂಶವನ್ನು ನೀಡುತ್ತವೆ. ಇವುಗಳ ಹೊರತು, ಈ ಕೆಳಗೆ ನೀಡುರುವ ಸಲಹೆಗಳನ್ನು ಸಹ ಪಾಲಿಸಬಹುದು.

ಒಣತ್ವಚೆ ತಡೆಯಲು ಕೆಲವೊಂದು ಮನೆಮದ್ದುಗಳು:

ಸಲಹೆ-1: ಬೀಟ್ರೂಟ್ ಫೇಸ್ ಮಾಸ್ಕ್:

ಬೇಕಾಗುವ ಪದಾರ್ಥಗಳು:

ಬೀಟ್ರೂಟ್ (ತುರಿದ)

ಅರ್ಧ ನಿಂಬೆ ರಸ

ಲೋಳೆಸರ

ಬಳಸುವುದು ಹೇಗೆ?:

ಬೀಟ್ರೂಟ್‌ನ್ನು ಚೆನ್ನಾಗಿ ರುಬ್ಬಿಕೊಂಡು, ಸರಿಯಾಗಿ ಬೀಟ್ ಮಾಡಿ, ನಂತರ ಅದಕ್ಕೆ ನಿಂಬೆ ರಸವನ್ನು ಸೇರಿಸಿ. ಅಂತಿಮವಾಗಿ, ಅಲೋವೆರಾ ಜೆಲ್ ಅನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಅದು ಒಣಗಲು ಪ್ರಾರಂಭಿಸಿದಾಗ, ಮತ್ತೆ ಸ್ವಲ್ಪ ಪೇಸ್ಟ್ ಹಚ್ಚಿ. ಇದನ್ನು 30-45 ನಿಮಿಷಗಳ ಕಾಲ ಬಿಡಿ, ತೊಳೆಯಿರಿ. ಇದನ್ನು ವಾರಕ್ಕೆ 3 ಬಾರಿ ಹಚ್ಚಬಹುದು.

ಸಲಹೆ-2: ಪುದೀನಾ ಮತ್ತು ಅರಿಶಿನ ಪ್ಯಾಕ್:

ಕೆಲವು ಪುದೀನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ರೋಸ್ ವಾಟರ್ನೊಂದಿಗೆ ರುಬ್ಬಿಕೊಳ್ಳಿ. ಅದನ್ನು ಫಿಲ್ಟರ್ ಮಾಡಿ, ಅದಕ್ಕೆ ಒಂದು ಚಿಟಿಕೆ ಅರಿಶಿನ ಸೇರಿಸಿ. ನಂತರ ಇದನ್ನು ಮುಖ ಮತ್ತು ಕುತ್ತಿಗೆಗೆ ಚೆನ್ನಾಗಿ ಹಚ್ಚಿಕೊಳ್ಳಿ. ಕನಿಷ್ಠ 21 ದಿನಗಳ ಕಾಲ ಇದನ್ನು ಪ್ರತಿದಿನ ಮಾಡಿ ಮತ್ತು ನಿಮ್ಮ ಚರ್ಮದ ಬದಲಾವಣೆಗಳನ್ನು ನೋಡಿ. ಚರ್ಮವನ್ನು ಹೈಡ್ರೇಟ್ ಮಾಡಲು ನೀವು ಇದಕ್ಕೆ ಮೊಸರನ್ನು ಸೇರಿಸಬಹುದು.

English summary

Tips to Get Rid of Dryness in Winter in Kannada

Here we talking about Tips to get rid of dryness in winter in Kannada, read on
Story first published: Saturday, November 13, 2021, 13:53 [IST]
X
Desktop Bottom Promotion