For Quick Alerts
ALLOW NOTIFICATIONS  
For Daily Alerts

ಮೇಕಪ್ ಇಲ್ಲದೇ, ಮುಖದ ಗ್ಲೋ ಹೆಚ್ಚಿಸಲು ಇಲ್ಲಿವೆ ಸಿಂಪಲ್ ಟಿಪ್ಸ್‌ಗಳು

|

ಮುಖದ ಬಣ್ಣ ಕಳೆಗುಂದಿದರೆ ಹುಡುಗಿಯರು ಕಂಗಾಲಾಗುತ್ತಾರೆ. ಏಕೆಂದರೆ, ಪ್ರತಿಯೊಬ್ಬರಿಗೂ ತಮ್ಮ ಮುಖವು ಕಲೆರಹಿತವಾಗಿ, ಹೊಳೆಯಬೇಕೆಂದು ಬಯಸುತ್ತಾರೆ. ಆದರೆ ಧೂಳು-ಮಣ್ಣು ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಮುಖದ ಕಾಂತಿಯನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತದೆ. ಇಂದಿನ ಲೇಖನದಲ್ಲಿ, ನಾವು ಅಂತಹ ಕೆಲವು ಸಲಹೆಗಳ ಬಗ್ಗೆ ಮಾತನಾಡಲಿದ್ದೇವೆ. ಇಅದರ ಸಹಾಯದಿಂದ ನಿಮ್ಮ ತ್ವಚೆಯ ಕಾಂತಿ ಕಾಪಾಡಿಕೊಳ್ಳಬಹುದು.

ಮೇಕಪ್ ಇಲ್ಲದೇ, ಮುಖದ ಕಾಂತಿ ಹೆಚ್ಚಿಸಲು ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ತೆಂಗಿನ ಎಣ್ಣೆ ಮತ್ತು ಕರ್ಪೂರ:

ತೆಂಗಿನ ಎಣ್ಣೆ ಮತ್ತು ಕರ್ಪೂರ:

ಧೂಳು, ಮಾಲಿನ್ಯವು ಚರ್ಮದ ದದ್ದು ಮತ್ತು ಮೊಡವೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಈ ಎರಡು ಪದಾರ್ಥಗಳು ಮುಖದ ಕೊಳೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿವೆ. ಅದಕ್ಕಾಗಿ ತೆಂಗಿನ ಎಣ್ಣೆಯಲ್ಲಿ ಒಂದು ಕಪ್ ಕರ್ಪೂರವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಲಘು ಕೈಗಳಿಂದ ಮಸಾಜ್ ಮಾಡುವ ಮೂಲಕ ಅದನ್ನು ಮುಖದ ಮೇಲೆ ಹಚ್ಚಿ. 10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಜೊತೆಗೆ ಪ್ರತಿದಿನ ಬೆಳಗ್ಗೆ ಹಸಿ ಹಾಲಿನಿಂದ ಮುಖವನ್ನು ಸ್ವಚ್ಛಗೊಳಿಸುವುದರಿಂದ ಕಲೆಗಳು ನಿವಾರಣೆಯಾಗುತ್ತದೆ. ಒಂದು ತಿಂಗಳ ಕಾಲ ಈ ಪರಿಹಾರವನ್ನು ಪ್ರಯತ್ನಿಸಿ.

ತೆಂಗಿನ ನೀರು:

ತೆಂಗಿನ ನೀರು:

ತ್ವಚೆಯ ಕಲೆಗಳನ್ನು ಹೋಗಲಾಡಿಸಲು ತೆಂಗಿನ ನೀರು ತುಂಬಾ ಪರಿಣಾಮಕಾರಿ. ತೆಂಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಐಸ್ ಟ್ರೇನಲ್ಲಿ ಹಾಕಿ ಫ್ರೀಜ್ ಮಾಡಿ. ನಂತರ ಪ್ರತಿದಿನ ಒಂದು ತುಂಡನ್ನು ತೆಗೆದುಕೊಂಡು ಅದನ್ನು ಲಘು ಕೈಗಳಿಂದ ಮುಖದ ಮೇಲೆ ಉಜ್ಜಿಕೊಳ್ಳಿ. 10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ತೆಂಗಿನ ನೀರು ಕೆರಾಟಿನ್ ಅನ್ನು ಹೊಂದಿದ್ದು, ಇದು ಚರ್ಮದ ಮೇಲಿನ ಪದರವನ್ನು ತೆಗೆದುಹಾಕುತ್ತದೆ ಮತ್ತು ಹೊಸ ಚರ್ಮವನ್ನು ಅಭಿವೃದ್ಧಿಪಡಿಸುತ್ತದೆ.

ಹಾಲು ಮತ್ತು ಅರಿಶಿನ:

ಹಾಲು ಮತ್ತು ಅರಿಶಿನ:

ಒಂದು ಚಮಚ ಹಾಲಿಗೆ ಒಂದು ಚಿಟಿಕೆ ಅರಿಶಿನ ಪುಡಿ ಮತ್ತು 1/4 ಟೀಚಮಚ ರೋಸ್ ವಾಟರ್ ಮಿಶ್ರಣ ಮಾಡಿ. ಇದನ್ನು ಮುಖದ ಮೇಲೆ ವೃತ್ತಾಕಾರದ ಚಲನೆಯಲ್ಲಿ ಉಜ್ಜಿಕೊಳ್ಳಿ, ಇಪ್ಪತ್ತು ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರು ಅಥವಾ ತಾಜಾ ನೀರಿನಿಂದ ಮುಖವನ್ನು ತೊಳೆಯಿರಿ. ಪ್ರತಿನಿತ್ಯ ಎರಡು ತಿಂಗಳ ಕಾಲ ಹೀಗೆ ಮಾಡುವುದರಿಂದ ಕಲೆಗಳು ಮಾಯವಾಗುತ್ತದೆ ಜೊತೆಗೆ ಮೈಬಣ್ಣವೂ ಸುಧಾರಿಸುವುದು.

ಕಡ್ಲೆಹಿಟ್ಟು:

ಕಡ್ಲೆಹಿಟ್ಟು:

ಎರಡು ದೊಡ್ಡ ಚಮಚ ಕಡ್ಲೆಹಿಟ್ಟು, ಲಿಂಬೆರಸ ಮತ್ತು ಒಂದು ದೊಡ್ಡ ಚಮಚ ಹಾಲಿನ ಕೆನೆ ಇಷ್ಟನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗತಾನೇ ಚೆನ್ನಾಗಿ ತೊಳೆದುಕೊಂಡು ಗುಲಾಬಿ ನೀರಿನಿಂದ ಅಥವಾ ಕ್ಲೀನ್ಸರ್ ದ್ರಾವಣದಿಂದ ಒತ್ತಿ ಒರೆಸಿಕೊಂಡ ಮುಖಕ್ಕೆ ಈ ಲೇಪವನ್ನು ಮುಖದ ತುಂಬಾ ಹಚ್ಚಿಕೊಳ್ಳಿ. ಸುಮಾರು ಹದಿನೈದರಿಂದ ಮೂವತ್ತು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಬಳಿಕ ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಂಡು ಹೊಳೆಯುವ ತ್ವಚೆಯನ್ನು ಗಮನಿಸಿ.

ಸೌತೆಕಾಯಿ :

ಸೌತೆಕಾಯಿ :

ರಾತ್ರಿ ಮಲಗುವ ಮೊದಲು ಸೌತೆಕಾಯಿ ರಸ ಹಿಂಡಿ ಅದನ್ನು ಮುಖಕ್ಕೆ ಹಚ್ಚಿ. ಸೌತೆ ಕಾಯಿ ಮುಖದ ಕಾಂತಿಗೆ ಒಂದು ಸೂಪರ್ ಫುಡ್. ಸೌತೆಕಾಯಿ ಸಾರ ಚರ್ಮಕ್ಕೆ ತಂಪಿನ ಅನುಭವ ನೀಡುತ್ತದೆ. ತ್ವಚೆಯ ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ. ಉರಿ ಕಡಿಮೆ ಮಾಡುತ್ತದೆ. ಅರ್ಧ ಸೌತೆಕಾಯಿ ಕಟ್ ಮಾಡಿ ಅದರ ರಸ ತೆಗೆದು ಒಂದು ಹತ್ತಿ ಉಂಡೆಯ ನೆರವಿನಿಂದ ಮುಖಕ್ಕೆ ಹಚ್ಚಬಹುದು.

English summary

Tips To Create No-Makeup Makeup Look in Kannada

Here we talking about Tips To Create No-Makeup Makeup Look in Kannada, read on
Story first published: Monday, December 27, 2021, 17:58 [IST]
X
Desktop Bottom Promotion