For Quick Alerts
ALLOW NOTIFICATIONS  
For Daily Alerts

ಮದುವೆಯೇ? ಮನೆಯಲ್ಲಿಯೇ ಈ ರೀತಿ ಸ್ಕಿನ್‌ಕೇರ್ ಮಾಡಿ, ಪಾರ್ಲರ್‌ ಅಗ್ಯತವೇ ಬೀಳಲ್ಲ

|

ಮದುವೆ ದಿನಾಂಕ ಗೊತ್ತಾದಾಗಿನಿಂದ ಮದುಮಗಳು ತನ್ನ ಸೌಂದರ್ಯದ ಕಡೆಗೆ ತುಂಬಾನೇ ಗಮನ ಕೊಡುತ್ತಾಳೆ. ನನ್ನ ಮದುವೆಯಲ್ಲಿ ನಾನು ಸುಂದರವಾಗಿ ಕಾಣಬೇಕು ಎಂದು ಪ್ರತಿಯೊಬ್ಬ ಹೆಣ್ಣು ಬಯಸುತ್ತಾಳೆ ಹಾಗಾಗಿ ಪಾರ್ಲರ್‌, ಶಾಪಿಂಗ್ ಅಂತ ತುಂಬಾ ಸಮಯ ಕಳೆಯುತ್ತಾರೆ. ಅದರಲ್ಲೂ ಪಾರ್ಲರ್‌ಗಳಿಗೆ ಸಾವಿರಾರು ರುಪಾಯಿ ಖರ್ಚು ಮಾಡುತ್ತಾರೆ. ಬ್ಲೀಚ್, ಫೇಶಿಯಲ್‌ ಅಂತ ಮಾಡಿಸಿದಾಗ ಸಾವಿರಾರು ರುಪಾಯಿ ಖರ್ಚಾಗುವುದು. ಆದರೆ ನೀವು ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ತ್ವಚೆ ಆರೈಕೆ ಮಾಡಿ ಹೊಳೆಯುವ ಮುಖ ಕಾಂತಿಯನ್ನು ಪಡೆಯಬಹುದು.

ಮದುವೆ ಹತ್ತಿರ ಬರುತ್ತಿದ್ದಂತೆ ನಿಮ್ಮ ತ್ವಚೆ ಹೊಂದುವಂತೆ ಆರೈಕೆ ಮಾಡಿದರೆ ಆ ಸಮಯದಲ್ಲಿ ತ್ವಚೆಯ ಆರೈಕೆ ಹಾಗೂ ಮದುವೆ ಕಳೆ ಸರಿ ನೀವು ತುಂಬಾ ಆಕರ್ಷಕವಾಗಿ ಕಾಣುವಿರಿ. ಹೊಳೆಯುವ ಕಾಂತಿಗಾಗಿ ತ್ವಚೆ ಆರೈಕೆ ಹೇಗೆ ಮಾಡಬೇಕೆಂಬ ಟಿಪ್ಸ್ ನೀಡಿದ್ದೇವೆ ನೋಡಿ:

1. ವಿಟಮಿನ್ ಸಿ ಸೆರಮ್ ಬಳಸಿ

1. ವಿಟಮಿನ್ ಸಿ ಸೆರಮ್ ಬಳಸಿ

ಬೆಳಗ್ಗೆ ಮತ್ತು ರಾತ್ರಿ ವಿಟಮಿನ್‌ ಸೆರಮ್ ಬಳಸಬೇಕು. ಇದು ಮುಖದಲ್ಲಿರುವ ಕಲೆಯನ್ನು ಕಡಿಮೆ ಮಾಡಿ ತ್ವಚೆಯ ಬಿಳುಪು ಹೆಚ್ಚಿಸಲು ಸಹಕಾರಿ, ಅಲ್ಲದೆ ತ್ವಚೆಯ ಕಾಂತಿ ಹೆಚ್ಚಿಸುವುದು. ಆದರೆ ಇದನ್ನು ಇದೇ ಮೊದಲು ಮಾಡುತ್ತಿದ್ದರೆ ಮೊದ-ಮೊದಲಿಗೆ ಅಲ್ಪ ಪ್ರಮಾಣದಲ್ಲಿ ಬಳಸಬೇಕು.

2. ನಿಯಮಿತವಾಗಿ ಮಾಡಬೇಕು

2. ನಿಯಮಿತವಾಗಿ ಮಾಡಬೇಕು

ಎಷ್ಟೋ ಜನರಿಗೆ ಇವತ್ತು ಏನಾದರೂ ಮಾಡಿದರೆ ಅಂದ್ರೆ ಮೊಡವೆ ಅಥವಾ ಕಲೆ ಹೋಗಲು ಏನಾದರೂ ಹಚ್ಚಿದ್ದರೆ ಅದರ ಫಲಿತಾಂಶ ನಾಳೆಯೇ ಕಾಣಬೇಕು. ಅಲ್ಲದೆ ಈ ರೀತಿಯ ಫಲಿತಾಂಶ ಬೇಕೆಂದು ಕೆಲವರು ತುಂಬಾ ರಾಸಾಯನಿಕವಿರುವ ಕ್ರೀಮ್‌ಗಳನ್ನು ಬಳಸುತ್ತಾರೆ, ಆದರೆ ಅವೆಲ್ಲಾ ತ್ವಚೆಗೆ ಒಳ್ಳೆಯದಲ್ಲ, ತ್ವಚೆ ಮೇಲೆ ಕೆಟ್ಟ ಪರಿಣಾಮ ಬೀರುವುದು, ಅದರ ಬದಲಿಗೆ ತ್ವಚೆಗೆ ಹಾನಿಯಾಗದಂತೆ ತ್ವಚೆಯನ್ನು ಆರೈಕೆ ಮಾಡಬೇಕು. ಇದರಿಂದ ಮೊಡವೆ, ಬ್ಲ್ಯಾಕ್‌ಹೆಡ್ಸ್‌ ಮತ್ತಷ್ಟು ಹೆಚ್ಚಬಹುದು. ನಿಮ್ಮ ತ್ವಚೆ ಡಲ್‌ ಅಥವಾ ಪಿಗ್ಮೆಂಟೆಡ್ ಆಗಿದ್ದರೆ AHAs ಅಥವಾ ಆಲ್ಫಾ ಹೈಡ್ರೋಕ್ಸಿ ಆಮ್ಲ ನಿಮಗೆ ಒಳ್ಳೆಯದು. ಇದು ಕಲೆಯನ್ನು ಹೋಗಲಾಡಿಸುವುದು ತ್ವಚೆಯ ಹೊಳಪನ್ನು ಕೂಡ ಹೆಚ್ಚಿಸುವುದು. ಬ್ಲ್ಯಾಕ್‌ ಹೆಡ್ಸ್‌ ಅಥವಾ ವೈಟ್‌ ಹೆಡ್ಸ್ ಇದ್ದರೆ BHA ಕ್ರೀಮ್‌ ಬಳಸುವುದು ಒಳ್ಳೆಯದು. ಇವುಗಳಿಂದ ಎಕ್ಸ್‌ಫೋಲೆಟ್‌ ಮಾಡುವುದಾದರೆ ಮುಖದಲ್ಲಿರುವ ಕಲೆಗಳು ಕಡಿಮೆಯಾಗುವುದು.

3. ಹೀಗೆ ಕಾಳಜಿ ಮಾಡಿ

3. ಹೀಗೆ ಕಾಳಜಿ ಮಾಡಿ

ನಿಮ್ಮ ತ್ವಚೆಯನ್ನು ಆರೈಕೆ ಮಾಡುವಾಗ ಅದರ ಪರಿಣಾಮವನ್ನು ಉಳಿಸಲು ಪ್ರಯತ್ನವೂ ಮಾಡಬೇಕು. ಪ್ರತೀ 3 ಗಂಟೆಗೊಮ್ಮೆ ಸನ್‌ಸ್ಕ್ರೀನ್‌ ಲೋಷನ್ ಹಚ್ಚಿ. ಅಲ್ಲದೆ ತುಂಬಾ ಬಿಸಿಲಿನಲ್ಲಿ ಓಡಾಡಬೇಡಿ.

4. ಸಾಕಷ್ಟು ನೀರು ಕುಡಿಯಿರಿ

4. ಸಾಕಷ್ಟು ನೀರು ಕುಡಿಯಿರಿ

ತ್ವಚೆ ಆರೈಕೆಯಲ್ಲಿ ಪ್ರಮುಖವಾದ ವಿಷಯವೆಂದರೆ ಸಾಕಷ್ಟು ನೀರು ಕುಡಿಯಬೇಕು, ತ್ವಚೆಯಲ್ಲಿ ನೀರಿನಂಶ ಕಡಿಮೆಯಾದರೆ ತ್ವಚೆ ಕಾಂತಿ ಮಂಕಾಗುವುದು, ಆದ್ದರಿಂದ ದಿನದಲ್ಲಿ 8 ಲೋಟ ನೀರು ಕುಡಿಯಿರಿ.

5. ಮಾಯಿಶ್ಚರೈಸರ್ ಮಾಡಿ

5. ಮಾಯಿಶ್ಚರೈಸರ್ ಮಾಡಿ

ತ್ವಚೆ ಆರೈಕೆಯಲ್ಲಿ ಇದು ತುಂಬಾನೇ ಮುಖ್ಯವಾದ ಅಂಶವಾಗಿದೆ. ದಿನದಲ್ಲಿ ಎರಡು ಬಾರಿ ಮುಖವನ್ನು ಮಾಯಿಶ್ಚರೈಸರ್ ಮಾಡಿ. ಮಲಗುವ ಮುನ್ನ ಮುಖಕ್ಕೆ ಮಾಯಿಶ್ಚರೈಸರ್‌ ಹಚ್ಚಿ. ಆದರೆ ಎಣ್ಣೆ ತ್ವಚೆಯವರು ಮಾಯಿಶ್ಚರೈಸರ್ ಮಾಡಬೇಡಿ, ಇದರಿಂದ ತ್ವಚೆಯಲ್ಲಿ ಎಣ್ಣೆಯಂಶ ಹೆಚ್ಚಿ ಮೊಡವೆ ಹೆಚ್ಚಬಹುದು. ನೀವು ಜೆಲ್‌ ರೀತಿಯ, ಲೈಟ್‌ ಮಾಯಿಶ್ಚರೈಸರ್‌ ಬಳಸುವುದು ಒಳ್ಳೆಯದು.

ಕೊನೆಯದಾಗಿ

ನೀವು ಮದುವೆಗೆ ಕೆಲವೇ ದಿನಗಳಿರುವಾಗ ಪರೀಕ್ಷಿಸಬೇಡಿ, ನಿಮ್ಮ ತ್ವಚೆಯ ಆರೈಕೆ ಒಂದೆರಡು ತಿಂಗಳುಗಳ ಮುನ್ನವೇ ಮಾಡಿ. ಅಲ್ಲದೆ ನೀವು ಯಾವುದಾದರೂ ಫೇಶಿಯಲ್‌ ಮಾಡಬೇಕೆಂದಿದ್ದರೆ ಅದನ್ನು ತಿಂಗಳ ಮುಂಚೆಯೇ ಟ್ರೈ ಮಾಡಿ ನೋಡಿ, ನಂತರ ಮದುವೆಗೆ ವಾರ ಇರುವಾಗ ಮಾಡಿಸಿ. ಕೆಲವರು ಮದುವೆಗೆ 4-5 ದಿನ ಇರುವಾಗ ಹೊಸದಾದ ಪೇಶಿಯಲ್ ಟ್ರೈ ಮಾಡಬಹುದು, ಅದು ತ್ವಚೆಯ ಮೇಲೆ ಅಡ್ಡಪರಿಣಾಮ ಬೀರುವುದು.

English summary

Tips For The Bridal Glow Skin At Home in kannada

Tips for the bridal glow skin at home in kannada,
Story first published: Saturday, January 22, 2022, 12:30 [IST]
X