Just In
- 1 hr ago
Mental Health: ಅತಿಯಾಗಿ ಯೋಚನೆ ಮಾಡುವುದರಿಂದ ಹೀಗೂ ಆಗಬಹುದು ಗೊತ್ತಾ..?
- 3 hrs ago
ಈ 4 ರಾಶಿಯವರನ್ನು ಜನ ಸುಲಭವಾಗಿ ಯಾಮಾರಿಸುತ್ತಾರೆ...ನೀವು ಈ ರಾಶಿಯವರೇ? ಹುಷಾರು ಕಣ್ರಿ!
- 5 hrs ago
ಓವರ್ಆ್ಯಕ್ಟಿವ್ ಬ್ಲಾಡರ್ ಸಮಸ್ಯೆಗೆ ಯಾವ ಆಹಾರ ಹಾಗೂ ಪಾನೀಯ ಒಳ್ಳೆಯದು?
- 9 hrs ago
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಮೇಷ, ಸೇರಿದಂತೆ ಈ ರಾಶಿಯ ಉದ್ಯೋಗಿಗಳಿಗೆ ಉತ್ತಮ ದಿನ
Don't Miss
- Sports
ಕೊಹ್ಲಿ ಮಾಡುತ್ತಿದ್ದ ಈ ತಪ್ಪನ್ನು ಡು ಪ್ಲೆಸಿಸ್ ಮಾಡಲಿಲ್ಲ ಹೀಗಾಗಿ ಆರ್ಸಿಬಿ ಯಶಸ್ಸು ಕಂಡಿದೆ ಎಂದ ಸೆಹ್ವಾಗ್!
- Finance
ವಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್
- Movies
ಜೇನುಗೂಡು: ನಡುಕೋಟೆ ಮನೆಯಲ್ಲಿ ಭಾಸ್ಕರ್: ಡಾಕ್ಟರ್ ಮನೆಯಲ್ಲಿ ಶುಭಾಗ್ನಿ ಕಾಟ!
- News
ಯುವಕ-ಯುವತಿಯರೇ ಎಚ್ಚರ: ಮದುವೆ ಆಗದಿದ್ದರೆ 'ಹೃದಯ'ಕ್ಕೆ ಆಪತ್ತು!
- Automobiles
ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ
- Education
KCET 2022 Application Correction : ಅರ್ಜಿ ತಿದ್ದುಪಡಿಗೆ ಇಂದು ಕೊನೆಯ ದಿನ
- Technology
ನೀವು ಬಳಸಬಹುದಾದ ಅತ್ಯುತ್ತಮ ಪಾಸ್ವರ್ಡ್ ಮ್ಯಾನೇಜರ್ಗಳ ವಿವರ ಇಲ್ಲಿದೆ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಂಪ್ಯೂಟರ್ ವಿಕಿರಣದಿಂದ ತ್ವಚೆಯ ರಕ್ಷಣೆಗೆ ಸಿಂಪಲ್ ಟಿಪ್ಸ್
ತಂತ್ರಜ್ಞಾನವು ನಮ್ಮ ಜೀವನವನ್ನು ಸರಳಗೊಳಿಸಿರುವುದೇನೋ ನಿಜ, ಅಲ್ಲದೇ, ಸಾಕಷ್ಟು ತನ್ನದೇ ಆದ ಅನುಕೂಲಗಳನ್ನು ಹೊಂದಿದೆ ಆದರೆ, ಅಷ್ಟೇ ಅನಾನುಕೂಲಗಳು ಇವೆ ಎಚ್ಚರ.
ಅಂಥಾ ಆಧುನಿಕ ತಂತ್ರಜ್ಞಾನದಲ್ಲಿ ಕಂಪ್ಯೂಟರ್ ಪಾತ್ರ ಮಹತ್ವಪೂರ್ಣ. ನಾವಿಂದು ಎಷ್ಟೆಲ್ಲಾ ತಂತ್ರಜ್ಞಾನ ಬಳಸುತ್ತಿದೇವೆಯೋ ಅದೆಲ್ಲದರ ಮೂಲ ಕಂಪ್ಯೂಟರ್ ಎಂದರೆ ತಪ್ಪಾಗಲಾರದು. ಇದರ ಪರಿಣಾಮ ನಾವೆಲ್ಲಾ ಇಂದು ಕಂಪ್ಯೂಟರ್ ಪರದೆ ಮುಂದೆ ಕೂರುವಂತಾಗದೆ.
ಆದರೆ ಈ ಕಂಪ್ಯೂಟರ್ ವಿಕಿರಣಗಳು ಅಥವಾ ವಿದ್ಯುತ್ಕಾಂತೀಯ ಕ್ಷೇತ್ರಗಳನ್ನು (ಇಎಂಎಫ್) ಹೊರಸೂಸುವುದರಿಂದ ನಮ್ಮ ಕಣ್ಣು ಮಾತ್ರವಲ್ಲ ತ್ವಚೆಯ ಮೇಲೂ ಪರಿಣಾಮ ಬೀರುತ್ತವೆ. ಈ ಇಎಂಎಫ್ಗಳು ನಿಮ್ಮ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ. ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಕ್ಯಾನ್ಸರ್ನಂಥಹ ತೀವ್ರ ಆರೋಗ್ಯ ಸ್ಥಿತಿಗಳಿಗೆ ಕಾರಣವಾಗಬಹುದು. ಕಂಪ್ಯೂಟರ್ ವಿಕಿರಣದಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಇಲ್ಲಿದೆ ಕೆಲವು ಸಲಹೆಗಳು ಇಲ್ಲಿವೆ.

ಫೇಸ್ ಪ್ಯಾಕ್
ಸ್ಥಿರ ವಿದ್ಯುತ್ನಿಂದಾಗಿ ವಿಕಿರಣಗಳು ಗಾಳಿಯಲ್ಲಿನ ಧೂಳನ್ನು ಹೀರಿಕೊಳ್ಳುತ್ತವೆ ಮತ್ತು ಇದು ತ್ವಚೆಯ ರಂಧ್ರಗಳನ್ನು ಮುಚ್ಚುತ್ತದೆ. ಫೇಸ್ ಮಾಸ್ಕ್ ಅನ್ನು ಅನ್ವಯಿಸುವ ಮೂಲಕ ವಾರಕ್ಕೊಮ್ಮೆ ನಿಮ್ಮ ಚರ್ಮಕ್ಕೆ ವಿಶ್ರಾಂತಿ ನೀಡುತ್ತದೆ, ಏಕೆಂದರೆ ಅದು ನಿಮ್ಮ ಚರ್ಮಕ್ಕೆ ಒಂದು ಸೇಫ್ ಪದರವನ್ನು ನಿರ್ಮಿಸುತ್ತದೆ. ಟೊಮೆಟೊ, ಅನಾನಸ್, ಜೇನುತುಪ್ಪ ಅಥವಾ ನಿಮ್ಮ ತ್ವಚೆಗೆ ಹೊಂದುವ ಪದಾರ್ಥಗಳಿಂದ ತಯಾರಿಸಿದ ವಿವಿಧ ರೀತಿಯ ಫೇಸ್ ಪ್ಯಾಕ್ಗಳನ್ನು ನೀವು ಬಳಸಬಹುದು.

ಸನ್ಸ್ಕ್ರೀನ್
ನಾವು ಮಾಡಿದ ಹೂಡಿಕೆ ಎಂದಿಗೂ ವ್ಯರ್ಥವಾಗದ ಒಂದು ಉತ್ಪನ್ನವಿದ್ದರೆ ಅದು ಸನ್ಸ್ಕ್ರೀನ್. ಕನಿಷ್ಠ ಎರಡು ಅಥವಾ ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಸನ್ಸ್ಕ್ರೀನ್ ಅನ್ವಯಿಸಿ. ಸನ್ಸ್ಕ್ರೀನ್ ಕೇವಲ ಹೊರಾಂಗಣಕ್ಕೆ ಮಾತ್ರವಲ್ಲ, ತ್ವಚೆಯ ಮುಚ್ಚಿದ ರಂಧ್ರಗಳ ಒಳಗೆ ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.

ಕಣ್ಣಿನ ಕೆಳಗೆ ಜೆಲ್
ಮಾನವನ ಕಣ್ಣು ಅತ್ಯಂತ ಸೂಕ್ಷ್ಮವಾಗಿರುತ್ತದೆ ಮತ್ತು ವಿಕಿರಣಗಳು ಈ ಸ್ಥಳದಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಕಂಪ್ಯೂಟರ್ ಪರದೆಯನ್ನು ಉತ್ತಮವಾಗಿ ನೋಡಲು ನಿಮ್ಮ ಕಣ್ಣುಗಳನ್ನು ಕಿರಿದಾಗಿಸುವುದರಿಂದ ನಿಮ್ಮ ಕಣ್ಣುಗಳ ಸುತ್ತ ಸುಕ್ಕುಗಳು ಉಂಟಾಗಬಹುದು. ಕಣ್ಣುಗಳು ಮತ್ತು ಕಣ್ಣಿನ ಸುತ್ತಲು ಜೆಲ್ ಅಥವಾ ಕೆನೆ ಹಚ್ಚುವುದರಿಂದ ಚರ್ಮವು ಒಣಗುವುದನ್ನು ತಡೆಯುತ್ತದೆ.

ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳಿ
ಕಂಪ್ಯೂಟರ್ನ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಪ್ರತಿ 2 ಗಂಟೆಗಳಿಗೊಮ್ಮೆ ವಿರಾಮ ತೆಗೆದುಕೊಳ್ಳುವುದರಿಂದ ಈ ವಿಕಿರಣಗಳಿಗೆ ಹೆಚ್ಚು ಒಡ್ಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡಬಹುದು. ಸ್ವಲ್ಪ ತಾಜಾ ಗಾಳಿಯನ್ನು ಉಸಿರಾಡಿ, ದಿನದಲ್ಲಿ ನಿತ್ಯ ಸ್ವಲ್ಪ ಸಮಯದವರೆಗೆ ಕಂಪ್ಯೂಟರ್ ಮಾನಿಟರ್ನಿಂದ ದೂರವಿರಲು ಪ್ರಯತ್ನಿಸಿ.

ಮುಖ ತೊಳೆಯಿರಿ
ನಾವು ಎಷ್ಟೇ ಪ್ರಯತ್ನಿಸಿದರೂ ಈ ಅಪಾಯಕಾರಿ ವಿಕಿರಣಗಳನ್ನು ದೀರ್ಘಕಾಲದಲ್ಲಿ ನಮಗೆ ಹಾನಿ ಮಾಡುವುದಂತೂ ಸತ್ಯ. ಆಗಾಗ್ಗೆ ಮುಖ ತೊಳೆಯಿರಿ, ಇದು ಧೂಳನ್ನು ನಿಮ್ಮ ಚರ್ಮದ ಮೇಲೆ ದೀರ್ಘಕಾಲ ಉಳಿಯಲು ಅನುಮತಿಸದೆ ತಕ್ಷಣ ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ದೀರ್ಘಕಾಲದ ನಿಮ್ಮ ತ್ವಚೆಯ ರಕ್ಷಣೆಗೆ ಬೆಸ್ಟ್ ಆಯ್ಕೆಯಾಗಿದೆ.