For Quick Alerts
ALLOW NOTIFICATIONS  
For Daily Alerts

ನಿಮ್ಮ ತ್ವಚೆ ಅಂದವಾಗಿರಬೇಕೆ? ಇವುಗಳನ್ನು ಕಡ್ಡಾಯವಾಗಿ ಮಾಡಲೇಬೇಡಿ

|

ದೀರ್ಘ ಕಾಲದ ಸೌಂದರ್ಯ ನಮ್ಮದಾಗಬೇಕು ಎಂಬ ಬಯಕೆ ಯಾರಿಗೆ ತಾನೆ ಇರುವುದಿಲ್ಲ. ಮೊದಲು ಹೆಣ್ಣು ಮಕ್ಕಳಿಗೆ ಮಾತ್ರ ಇದ್ದ ಸೌಂದರ್ಯ ಪ್ರಜ್ಞೆ ಈಗ ಪುರುಷರಲ್ಲೂ ಹೆಚ್ಚಾಗಿದೆ. ಯಾಂತ್ರಿಕ ಬದುಕಿನಲ್ಲಿ ಆರೋಗ್ಯ, ಆಹಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ತ್ವಚೆಗೂ ನೀಡುತ್ತಿದ್ದೇವೆ ಎಂದರೆ ತಪ್ಪಾಗಲಾರದು.

ತ್ವಚೆಯ ಆರೈಕೆ ಬಗ್ಗೆ ಹಲವು ಮೂಲಗಳು, ತಜ್ಞರು, ವೈದ್ಯರ ಬಳಿ ಸಲಹೆ ಪಡೆದು ಪಾಲಿಸುತ್ತೇವೆ. ಆದರೆ ದೀರ್ಘ ಕಾಲದಿಂದ ಕಾಪಾಡಿಕೊಂಡು ಬಂದಿದ್ದ ಸೌಂದರ್ಯ ಕೆಲವೊಂದು ಸೂಕ್ಷ್ಮ ತಪ್ಪುಗಳಿಂದ ಸಂಪೂರ್ಣ ಕಾಂತಿಯನ್ನೇ ಕಳೆದುಕೊಳ್ಳುತ್ತದೆ ಅಥವಾ ತ್ವಚೆ ಸಂಪೂರ್ಣ ಹಾಳಾಗಲೂಬಹುದು.

ಪುರುಷ ಹಾಗೂ ಯುವತಿಯರು ತ್ವಚೆಯ ವಿಷಯದಲ್ಲಿ ಸಾಮಾನ್ಯವಾಗಿ ಎಸಗುವ ತಪ್ಪುಗಳ ಬಗ್ಗೆ ಹಾಗೂ ಅದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ನಿಮ್ಮ ತ್ವಚೆಯ ಆರೈಕೆ ವೇಳೆ ಯಾವುದೇ ಕಾರಣಕ್ಕೂ ಇಂಥಹ ಪ್ರಮಾದ ಎಸಗದಿರಿ...

ಅತಿಯಾದ ಮಾರ್ಜಕ ಬಳಕೆ

ಅತಿಯಾದ ಮಾರ್ಜಕ ಬಳಕೆ

ಸಾಮಾನ್ಯವಾಗಿ ಇದನ್ನು ಎಲ್ಲರೂ ಮಾಡುತ್ತೇವೆ. ಮುಖದ ಕಾಂತಿ ಹೆಚ್ಚಾಗಲೆಂದು ಅತಿಯಾಗಿ ಸೋಪನ್ನು ಹಾಕಿ ಸ್ವಚ್ಚಗೊಳಿಸುತ್ತೇವೆ. ಆದರೆ ತ್ವಚೆಯ ಮೇಲ್ಪದರವು ಹೊರಗಿನ ಸೋಂಕು, ಕಲ್ಮಶಗಳನ್ನು ತಡೆಯಲು ನೈಸರ್ಗಿಕವಾಗಿ ರಚನೆಯಾಗಿರುತ್ತದೆ. ಇದನ್ನು ಅತಿಯಾದ ಮಾರ್ಜಕ ಬಳಸಿ ಶುಚಿಗೊಳಿಸಿದರೆ ಗಂಭೀರ ಸಮಸ್ಎ ಎದುರಾಗಬಹುದು. ಸೋಪಿನಿಂದ ತ್ವಚೆಯನ್ನು ನಯವಾಗಿ ಮಸಾಜ್ ಮಾಡಿದರೆ ಸಾಕು. ಹೆಚ್ಚಿನ ಒತ್ತಡ ಅಗತ್ಯವಿಲ್ಲ.

ಬಿಳಿ ಅಥವಾ ಬಣ್ಣದ ಟ್ಯಾಟೂ ಇಂಕ್ ಬೇಡವೇ ಬೇಡ

ಬಿಳಿ ಅಥವಾ ಬಣ್ಣದ ಟ್ಯಾಟೂ ಇಂಕ್ ಬೇಡವೇ ಬೇಡ

ಟ್ಯಾಟೂ ಹಾಕಿಸಿಕೊಳ್ಳುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಟ್ಯಾಟೂ ಶಾಶ್ವತ ಎಂದು ಹೇಳಿದರು ಬೇಡವೆನಿಸಿದಾಗ ಲೇಸರ್ ಚಿಕಿತ್ಸೆ ಮೂಲಕ ತೆಗೆಸಿಕೊಳ್ಳಬಹುದು. ಆದರೆ ಎಚ್ಚರವಿರಲಿ ಯಾವುದೇ ಕಾರಣಕ್ಕೂ ಟ್ಯಾಟೂ ಹಾಕಿಸಿಕೊಳ್ಳುವಾಗ ಬಿಳಿ ಬಣ್ಣವನ್ನು ಮಾತ್ರ ಅಪ್ಪಿತಪ್ಪಿಯೂ ಹಾಕಿಸಿಕೊಳ್ಳಬೇಡಿ. ಬಿಳಿ ಬಣ್ಣದ ವಿನ್ಯಾಸವುಳ್ಳ ಟ್ಯಾಟೂವನ್ನು ಲೇಸರ್ ಚಿಕಿತ್ಸೆ ಮೂಲಕ ತೆಗೆಯುವಾಘ ಅದು ಕಪ್ಪು ಬಣ್ಣಗೆ ತಿರುಗುತ್ತದೆ. ಅಲ್ಲದೆ ಚರ್ಮ ಬಣ್ಣ, ಹಳದಿ, ನೀಲಿ ಸಹ ಇದೇ ಸಮಸ್ಯೆಯನ್ನು ಹೊಂದಿದೆ ಎನ್ನುತ್ತಾರೆ ಚರ್ಮ ತಜ್ಞರು.

ಮೊಡವೆಗೆ ಟೂತ್ ಪೇಸ್ಟ್ ಹಚ್ಚುವುದು

ಮೊಡವೆಗೆ ಟೂತ್ ಪೇಸ್ಟ್ ಹಚ್ಚುವುದು

ಮೊಡವೆಗಳಿಗೆ ಟೂತ್ ಪೇಸ್ಟ್ ಹಚ್ಚುವುದರಿಂದ ಅದರಲ್ಲಿರುವ ರಾಸಾಯನಿಕಗಳಿಂದ ಅದು ತ್ವಚೆಯನ್ನು ಒಣಗಿಸುತ್ತದೆ, ಕೆರೆತ ಉಂಟಾಗಬಹುದು ಅಲ್ಲದೇ ಮೊಡವೆಯ ಭಾಗ ಇನ್ನೂ ಕಪ್ಪಾಗಿ ಕಾಣುವ ಸಾಧ್ಯತೆ ಇದೆ. ಮೊಡವೆಗಿಂತ ಹೆಚ್ಚಿನ ಅಡ್ಡ ಪರಿಣಾಮವನ್ನು ಟೂಥ್ ಪೇಸ್ಟ್ ಉಂಟು ಮಾಡುತ್ತದೆ. ಕೋಮಲ ತ್ವಚೆಗೆ ಟೂಥ್ ಪೇಸ್ಟ ಬಳಕೆ ಸಲ್ಲದು.

ಕಾಲಿನ ಹೇರ್ ರಿಮೂವಲ್ ಕ್ರೀಮ್ ಗಳನ್ನು ಮುಖಕ್ಕೆ ಹಚ್ಚುವುದು

ಕಾಲಿನ ಹೇರ್ ರಿಮೂವಲ್ ಕ್ರೀಮ್ ಗಳನ್ನು ಮುಖಕ್ಕೆ ಹಚ್ಚುವುದು

ಕಾಲಿನ ಕೂದಲು ತೆಗೆಯಲು ಬಳಸುವ ಕ್ರೀಮ್ ಗಳನ್ನು ಅಪ್ಪಿತಪ್ಪಿಯೂ ಮುಖಕ್ಕೆ ಹಚ್ಚಬೇಡಿ. ಕಾಲಿಗಿಂತ ಮುಖ ಹೆಚ್ಚು ಸೂಕ್ಷ್ಮವಾಗಿದ್ದು, ಕ್ರೀಮ್ ರಾಸಾಯನಿಕ ಅಂಶಗಳು ಮುಖದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮುಖದ ಕೋಮಲತೆ ಹಾಳಾಗಬಹುದು, ಕಲೆಗಳು ಮೂಡಬಹುದು ಅಥವಾ ಕಪ್ಪಾಗಬಹುದು.

 ರಹಸ್ಯ ಪದಾರ್ಥಗಳನ್ನು ಬಳಸಿದ ಕ್ರೀಮ್ ಬೇಡ

ರಹಸ್ಯ ಪದಾರ್ಥಗಳನ್ನು ಬಳಸಿದ ಕ್ರೀಮ್ ಬೇಡ

ಯಾವುದೇ ಕ್ರೀಮುಗಳನ್ನು ಖರೀದಿಸಿದರು ಅದರ ಮೇಲೆ ಯಾವ ವಸ್ತುಗಳನ್ನು ಇದಕ್ಕೆ ಬಳಸಲಾಗಿದೆ ಎಂಬುದನ್ನು ಉಲ್ಲೇಖಿಸಿರುತ್ತಾರೆ. ಆದರೆ ಕೆಲವು ಕ್ರೀಮ್ ಗಳ ಮೇಲೆ ಕೆಲವಷ್ಟೇ ವಸ್ತುಗಳ ಪಟ್ಟಿ ಮಾಡಿ, ಕೆಲವನ್ನು ರಹಸ್ಯವಾಗಿಟ್ಟಿರುತ್ತಾರೆ. ವೈದ್ಯರ ಸಲಹೆ ಇಲ್ಲದೆ ಇಂತಹ ಕ್ರೀಮ್ ಗಳ ಬಳಕೆ ಬೇಡವೇ ಬೇಡ.

English summary

Things You Should Never Do to Your Skin

The skin is your largest, most accessible organ, making self-diagnosis and treatment a common occurrence. You probably know better than scour your face like a bathtub, but some of the skin care no-nos are more subtle. Here, top advice on what not to do your sensitive skin.
Story first published: Monday, August 19, 2019, 17:45 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X