For Quick Alerts
ALLOW NOTIFICATIONS  
For Daily Alerts

ಮುಖದ ಅಂದಕ್ಕೆ ಕ್ರೀಮ್‌ಗಿಂತ ವರ್ಕ್ ಆಗುವುದು ಇವೇ ನೋಡಿ

|

ಮೃದುವಾದ, ಸುಂದರವಾದ ಮತ್ತು ನಗುವಂತಹ ತ್ವಚೆ ಪಡೆಯಬೇಕೆಂಬುದು ನಮ್ಮಲ್ಲಿ ಹೆಚ್ಚಿನವರ ಕನಸು. ಅದಕ್ಕಾಗಿ ಹಲವಾರು ಉತ್ಪನ್ನಗಳನ್ನೂ ಪ್ರಯತ್ನಿಸುವುದೂ ಉಂಟು. ಆದರೆ ಮೂಲಭೂತ ಅಂಶಗಳನ್ನೇ ಮರೆತರೆ, ಕಾಂತಿಯುತ ತ್ವಚೆ ಪಡೆಯುವುದು ಹೇಗೆ? ಆದ್ದರಿಂದ ತ್ವಚೆಗೆ ಅಗತ್ಯವಾಗಿರುವ ಮೂಲಭೂತ ಆರೈಕೆಯ ಕ್ರಮಗಳನ್ನು ಎಂದಿಗೂ ಮರೆಯಬಾರದು. ಹಾಗಾದರೆ ಆ ಮೂಲಭೂತ ಕಾರ್ಯಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ತ್ವಚೆ ನಗಬೇಕಾದರೆ ಮಾಡಬೇಕಾದ ಮೂಲಭೂತ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ:

ಕ್ಲೆನ್ಸಿಂಗ್ ಹಾಗೂ ಮಾಯಿಶ್ಚರೈಸಿಂಗ್:

ಕ್ಲೆನ್ಸಿಂಗ್ ಹಾಗೂ ಮಾಯಿಶ್ಚರೈಸಿಂಗ್:

ಆರೋಗ್ಯಕರ ತ್ವಚೆಯ ಮೊದಲ ಮತ್ತು ಸರಳವಾದ ಹೆಜ್ಜೆಯೆಂದರೆ, ನಿಯಮಿತವಾದ ಶುಚಿಗೊಳಿಸುವಿಕೆ ಮತ್ತು ತೇವಗೊಳಿಸುವಿಕೆ. ಮುಖವನ್ನು ಕಾಲಕಾಲಕ್ಕೆ ಕ್ಲೆನ್ಸಿಂಗ್ ಹಾಗೂ ಮಾಯಿಶ್ಚರೈಸಿಂಗ್ ಮಾಡುವುದರಿಂದ ಚರ್ಮವು ಸರಿಯಾದ ಪೋಷಕಾಂಶಗಳನ್ನು ಪಡೆಯುತ್ತದೆ. ಆದ್ದರಿಂದ ಮುಖಕ್ಕೆ ಮಾಯಿಶ್ಚರೈಸರ್ ಹಾಗೂ ಇಡೀ ದೇಹಕ್ಕೆ ಮಾಯಿಶ್ಚರೈಸಿಂಗ್ ಸೋಪ್ ಬಳಸುವುದು ಮುಖ್ಯವಾಗಿರುತ್ತದೆ.

ಸಮತೋಲಿತ ಆಹಾರ:

ಸಮತೋಲಿತ ಆಹಾರ:

ಆರೋಗ್ಯಕರ ಚರ್ಮವು ಸಮತೋಲಿತ ಆಹಾರದ ಫಲಿತಾಂಶವಾಗಿದೆ. ನಾವು ಸೇವಿಸುವ ಆಹಾರವು ನಮ್ಮ ದೇಹದ ಆರೋಗ್ಯಕರ ಕಾರ್ಯನಿರ್ವಹಣೆಗೆ ಬಿಲ್ಡಿಂಗ್ ಬ್ಲಾಕ್‌ಗಳನ್ನು ಒದಗಿಸುತ್ತದೆ. ನಮ್ಮ ಆಹಾರವು ನಮ್ಮ ಚರ್ಮದ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲವನ್ನೂ ಹೊಂದಿರುತ್ತದೆ. ಆಹಾರದಲ್ಲಿ ಕಂಡುಬರುವ ಪೋಷಕಾಂಶಗಳು, ಖನಿಜಗಳು ಮತ್ತು ಪ್ರೋಟೀನ್ಗಳು ಕಾಲಜನ್ ಉತ್ಪಾದನೆ ಮತ್ತು ಆರೋಗ್ಯಕರ ಜೀವಕೋಶಗಳನ್ನು ಬೆಂಬಲಿಸುತ್ತವೆ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತವೆ.

ನಗು:

ನಗು:

ಹೌದು, ಸರಳವಾದ ನಗುವಿನಿಂದ ನಿಮ್ಮ ತ್ವಚೆ ಬೆಳಗುತ್ತದೆ. ಅದೇಗೆ ಎಂದರೆ, ನಗುವಾಗ ರಕ್ತದ ಹರಿವು ಉತ್ತಮಗೊಳ್ಳುತ್ತದೆ ಮತ್ತು ಚರ್ಮವು ಹೆಚ್ಚು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪಡೆಯುತ್ತದೆ. ಇದು ನಿಮಗೆ ಆರೋಗ್ಯಕರ ಮೈಬಣ್ಣವನ್ನು ಪಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಒತ್ತಡ ಮುಕ್ತ ಮಾಡಿ, ನಿಮ್ಮನ್ನು ಸಂತೋಷದಿಂದ ಮತ್ತು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.

ಸಾಕಷ್ಟು ನೀರು ಕುಡಿಯಿರಿ:

ಸಾಕಷ್ಟು ನೀರು ಕುಡಿಯಿರಿ:

ನಮ್ಮ ದೇಹವು 70% ನೀರನ್ನು ಒಳಗೊಂಡಿರುವುದರಿಂದ, ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೈಡ್ರೇಟ್ ಆಗಿಡಲು ಸುಲಭವಾದ ಮಾರ್ಗವಾಗಿದೆ. ಸಾಕಷ್ಟು ನೀರು ಕುಡಿಯುವುದು ನಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ, ಮೊಡವೆಗಳನ್ನು ತಡೆಯುತ್ತದೆ ಮತ್ತು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ. ಅದಕ್ಕೆ ನೀರನ್ನು ಅಮೃತ ಎಂದು ಕರೆಯಲಾಗುತ್ತದೆ.

ದೇಹಕ್ಕೆ ಚಲನೆ ನೀಡಿ:

ದೇಹಕ್ಕೆ ಚಲನೆ ನೀಡಿ:

ಕ್ಲೆನ್ಸಿಂಗ್ ಮತ್ತು ಸರಿಯಾದ ಪೋಷಣೆಯ ಜೊತೆಗೆ, ಸಂತೋಷದ ಚರ್ಮಕ್ಕೆ ಮುಖ್ಯವಾದ ಇನ್ನೊಂದು ಅಂಶವೆಂದರೆ ಚಲನೆ. ನಾವು ಕ್ಯಾಲೊರಿಗಳನ್ನು ಸುಡುವಾಗ, ದೇಹವು ಎಂಡಾರ್ಫಿನ್ ಎಂಬ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ. ಈ ಎಂಡಾರ್ಫಿನ್‌ಗಳು ಮೆದುಳಿನಲ್ಲಿರುವ ಗ್ರಾಹಕಗಳೊಂದಿಗೆ ಸಂವಹನ ನಡೆಸುತ್ತವೆ. ಇವು ಧನಾತ್ಮಕ ಭಾವನೆಗಳನ್ನು ಮತ್ತು ಸಂತೋಷದ ಆಲೋಚನೆಗಳನ್ನು ಪ್ರಚೋದಿಸುತ್ತವೆ. ಇದು ಚರ್ಮದ ಮೇಲೆ ಪ್ರತಿಫಲಿಸುತ್ತದೆ, ಹೀಗಾಗಿ ವ್ಯಾಯಾಮ ಅಥವಾ ದೇಹದ ಚಲನೆಯು ನಿಮ್ಮ ಮನಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸುವ ಮತ್ತು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವ ಶಕ್ತಿಯನ್ನು ಹೊಂದಿದೆ.

English summary

Things to do for Soft Skin in Kannada

Here we talking about Things to do for soft skin in kannada, read on
X
Desktop Bottom Promotion