For Quick Alerts
ALLOW NOTIFICATIONS  
For Daily Alerts

ನಿಮ್ಮ ಮುಖಕ್ಕೆ ಫೌಂಡೇಷನ್ ಖರೀದಿಸುವಾಗ ಈ ವಿಚಾರ ಗಮನದಲ್ಲಿರಲಿ

|

ಮೇಕಪ್‌ನಲ್ಲಿ ಫೌಂಡೇಷನ್ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ವಿಷಯ ಹೊಸತೇನಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಹೆಸರೇ ಸೂಚಿಸುವಂತೆ ಉಳಿದೆಲ್ಲಾ ಮೇಕಪ್‌ನ ಹಂತಗಳಿಗೂ ಇದೇ ಅಡಿಪಾಯ. ಫೌಂಡೇಷನ್ ಸರಿಯಾಗಿದ್ದರೆ, ಮೇಕಪ್ ಕೂಡ ಸರಿಯಾಗಿರುವುದು. ಆದರೆ, ಹೆಚ್ಚಿನವರಿಗೆ ತಮ್ಮ ಮುಖಕ್ಕೆ ಯಾವ ರೀತಿಯ ಫೌಂಡೇಷನ್ ಖರೀದಿಸಬೇಕು ಎಂಬುದರ ಅರಿವಿರುವುದಿಲ್ಲ. ಅಂತಹವರಿಗೆ ನಾವಿಂದು, ಫೌಂಡೇಷನ್ ಖರೀದಿಸುವಾಗ ಗಮನಿಸಬೇಕಾದ ವಿಚಾರಗಳ ಬಗ್ಗೆ ನೀಡಲಾಗಿದೆ.

ಫೌಂಡೇಷನ್ ಖರೀದಿಸುವಾಗ ನೆನಪಿಡಬೇಕಾದ ವಿಚಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ನಿಮಗೆ ಹೊಂದಿಕೊಳ್ಳುವ ಶೇಡ್ ಹುಡುಕಿ:

ನಿಮಗೆ ಹೊಂದಿಕೊಳ್ಳುವ ಶೇಡ್ ಹುಡುಕಿ:

ಹೌದು, ಎಲ್ಲಕ್ಕಿಂತ ಇದು ಮುಖ್ಯ. ನಿಮ್ಮ ಮುಖದ ಟೋನ್ ಆಧರಿಸಿ, ಫೌಂಡೇಷನ್ ಆಯ್ಕೆ ಮಾಡಿ. ಅಷ್ಟೇ ಅಲ್ಲ, ಇದು ನಿಮ್ಮ ಕುತ್ತಿಗೆಯ ಬಣ್ಣಕ್ಕೂ ಸರಿಹೊಂದಬೇಕು. ಇಲ್ಲವಾದಲ್ಲಿ, ಕುತ್ತಿಗೆಯ ಬಣ್ಣ ಹಾಗೂ ಮುಖದ ಬಣ್ಣದ ನಡುವಿನ ವ್ಯತ್ಯಾಸ ಗೋಚರವಾಗುವುದು. ಆದ್ದರಿಂದ, ನಿಮ್ಮ ಮುಖಕ್ಕೆ ಲೈಟ್ ಫೀಲ್ ನೀಡುವ ಫೌಂಡೇಷನ್ ಶೇಡ್ ಆಯ್ಕೆ ಮಾಡಿಕೊಳ್ಳಿ. ಆದ್ದರಿಂದ ನೈಸರ್ಗಿಕ ಬೆಳಕಿನಡಿಯಲ್ಲಿ ನಿಮ್ಮ ಫೌಂಡೇಷನ್ ಪರೀಕ್ಷಿಸಿ ಆಯ್ಕೆ ಮಾಡಲು ಮರೆಯದಿರಿ. ಇದು ನಿಮ್ಮ ಮುಖಕ್ಕೆ ಯಾವುದು ಸೂಕ್ತ ಎಂಬುದನ್ನು ತಿಳಿಸುವುದು.

ನಿಮ್ಮ ಶೇಡ್ ಋತುಮಾನಕ್ಕೆ ತಕ್ಕಂತಿರಲಿ:

ನಿಮ್ಮ ಶೇಡ್ ಋತುಮಾನಕ್ಕೆ ತಕ್ಕಂತಿರಲಿ:

ಇದು ನಿಜ, ನೀವು ವರ್ಷಪೂರ್ತಿ ಒಂದೇ ಶೇಡ್‌ನ ಫೌಂಡೇಷನ್‌ಗೆ ಅಂಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಯಾ ಋತುಮಾನಕ್ಕೆ ತಕ್ಕಂತೆ ನಿಮ್ಮ ಫೌಂಡೇಷನ್‌ ಶೇಡ್‌ ಕೂಡ ಬದಲಾಗಬೇಕು. ಏಕೆಂದರೆ, ಕಡಿಮೆ ಬಿಸಿಲು, ಮಳೆಗಾಲಕ್ಕೆ ಹೆಚ್ಚು ಸೂಕ್ತವಾಗುವ ಫೌಂಡೇಷನ್ ಸೂರ್ಯನ ಬೆಳಕಿನಡಿಯಲ್ಲಿ ಸರಿಯಾಗಿ ಹೊಂದಿಕೊಳ್ಳದೇ ಇರಬಹುದು ಅಥವಾ ಬಹಳ ಬೇಗ ನಿಮ್ಮ ಮುಖದ ಹೊಳಪನ್ನು ಮಾಸಿ ಬಿಡಬಹುದು. ಆದ್ದರಿಂದ ಋತುಮಾನಕ್ಕೆ ತಕ್ಕಂತಿರುವ ಫೌಂಡೇಷನ್ ಶೇಡ್ ಆಯ್ಕೆ ಮಾಡಿ.

ವರ್ಚುವಲ್ ಟ್ರೈ-ಆನ್ ಟೂಲ್‌ಗಳ ಪ್ರಯೋಜನವನ್ನು ಪಡೆದುಕೊಳ್ಳಿ:

ವರ್ಚುವಲ್ ಟ್ರೈ-ಆನ್ ಟೂಲ್‌ಗಳ ಪ್ರಯೋಜನವನ್ನು ಪಡೆದುಕೊಳ್ಳಿ:

ಹೌದು, ಇನ್-ಸ್ಟೋರ್ ಟೆಸ್ಟರ್‌ಗಳನ್ನು ಬಳಸುವುದಕ್ಕಿಂತ ಹೆಚ್ಚಾಗಿ ವರ್ಚುವಲ್ ಮೇಕಪ್ ಟ್ರೈ-ಆನ್ ಟೂಲ್ ಅನ್ನು ಆಯ್ಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ಆದರೆ, ನೀವು ಮೊದಲ ಬಾರಿಗೆ ಫೌಂಡೇಷನ್ ಖರೀದಿಸುವವರು ಶಾಪ್‌ಗೆ ತೆರಳಿ, ಫೌಂಡೇಷನ್ ಶೇಡ್ ಆಯ್ಕೆ ಮಾಡುವುದು ಉತ್ತಮವಾಗಿದೆ. ಆದರೆ, ಈಗಾಗಲೇ ಇದರ ಬಗ್ಗೆ ಅರಿವಿರುವವರು ಸೆಲ್ಫಿ, ಮೊದಲಾದ ವರ್ಚುವಲ್ ಟ್ರೈಯಲ್‌ಗಳನ್ನು ಬಳಸಿಕೊಳ್ಳಿ.

ತ್ವಚೆಯ ಅಂಡರ್ಟೋನ್ಗಳ ಬಗ್ಗೆ ಮರೆಯದಿರಿ:

ತ್ವಚೆಯ ಅಂಡರ್ಟೋನ್ಗಳ ಬಗ್ಗೆ ಮರೆಯದಿರಿ:

ನಿಮ್ಮ ಮುಖದ ಬಣ್ಣ ಸರಿಪಡಿಸಲು ಫೌಂಡೇಷನ್ ಬಳಸುವುದು ಸರಿ. ಆದರೆ, ನಿಮ್ಮ ಚರ್ಮದ ನೈಸರ್ಗಿಕ ಅಂಡರ್‌ಟೋನ್ ಬಗ್ಗೆಯೂ ಎಚ್ಚರ ವಹಿಸಬೇಕು. ಏಕೆಂದರೆ ತ್ವಚೆಯ ಬಣ್ಣ, ಋತುಮಾನದ ಹೊಡೆತಕ್ಕೆ ಸಿಲುಕಿ ಆಗಾಗ ಬದಲಾಗುತ್ತಿರುತ್ತದೆ. ಆದರೆ, ಅಂಡರ್‌ಟೋನ್‌ಗಳು ಯಾವಾಗಲೂ ಒಂದೇ ಆಗಿರುತ್ತದೆ. ಆದ್ದರಿಂದ ನಿಮ್ಮ ಚರ್ಮದ ಅಂಡರ್‌ಟೋನ್ ಗಮನಿಸಿ, ಅದಕ್ಕೆ ತಕ್ಕಂತೆ ಹಳದಿ, ಗೋಲ್ಡ್ ಅಥವಾ ಪಿಂಕ್ ಶೇಡ್ ಫೌಂಡೇಷನ್ ಆಯ್ಕೆ ಮಾಡಿ.

ನಿಮಗೆ ಯಾವ ಕವರೇಜ್ ಲೆವೆಲ್ ಬೇಕು ಎಂದು ತಿಳಿಯಿರಿ:

ನಿಮಗೆ ಯಾವ ಕವರೇಜ್ ಲೆವೆಲ್ ಬೇಕು ಎಂದು ತಿಳಿಯಿರಿ:

ನೀವು ಮೇಕಪ್ ಹಾಕಿಕೊಳ್ಳುವುದು ಇಷ್ಟವಿಲ್ಲದಿದ್ದರೆ, ಪೂರ್ಣ-ಕವರೇಜ್ ಫೌಂಡೇಷನ್ ಭಾರ ಎನಿಸಬಹುದು. ಅದಕ್ಕಾಗಿಯೇ ಪ್ರತಿ ಕವರೇಜ್ ಹಂತದ ನೋಟವನ್ನು ಅರ್ಥಮಾಡಿಕೊಳ್ಳಿ. ನಿಮಗೆ ಯಾವುದು ಸೂಕ್ತವೋ ಅದನ್ನೇ ಹಾಕಿಕೊಳ್ಳಿ.

ನಿಮ್ಮ ಚರ್ಮದ ಪ್ರಕಾರವನ್ನು ಪರಿಗಣಿಸಿ:

ನಿಮ್ಮ ಚರ್ಮದ ಪ್ರಕಾರವನ್ನು ಪರಿಗಣಿಸಿ:

ಸರಿಯಾದ ಉತ್ಪನ್ನಗಳನ್ನು ಹುಡುಕಲು ನಿಮ್ಮ ಚರ್ಮದ ಪ್ರಕಾರವನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಅದೇ ರೀತಿ ಮ್ಯಾಟ್ ಅಥವಾ ಡಿವೈ ಬೇಕೇ..? ಫೌಂಡೇಶನ್ ಶೇಡ್‌ಗಳನ್ನು ಬದಲಾಯಿಸುವ ಮೊದಲು ಕೇಳಬೇಕಾದ ಪ್ರಶ್ನೆ ಇದು. ಹೌದು, ಫೌಂಡೇಷನ್ ಆಯ್ಕೆಮಾಡುವಾಗ ನಿಮ್ಮ ಚರ್ಮದ ಪ್ರಕಾರವು ಒಂದು ಪ್ರಮುಖ ಅಂಶವಾಗಿದೆ. ಡಿವೈ ಫೌಂಡೇಷನ್‌ಗಳು ಸಾಮಾನ್ಯ ಮತ್ತು ಒಣ ಚರ್ಮದ ಪ್ರಕಾರಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಮ್ಯಾಟ್ ಫೌಂಡೇಶನ್ ಸಾಮಾನ್ಯವಾಗಿ ಎಣ್ಣೆಯುಕ್ತ ಚರ್ಮ ಇರುವವರಿಗೆ ಹೆಚ್ಚು ಸೂಕ್ತವಾಗಿದೆ. ಆದ್ದರಿಂದ ನಿಮ್ಮ ತ್ವಚೆಯ ಪ್ರಕಾರ ಅವಲಂಬಿಸಿ, ಫೌಂಡೇಷನ್ ಖರೀದಿಸಿ.

ತಾಳ್ಮೆ ಮುಖ್ಯ:

ತಾಳ್ಮೆ ಮುಖ್ಯ:

ಚರ್ಮದಿಂದ ಉಂಟಾಗುವ ಶಾಖದಿಂದಾಗಿ ಕೆಲವು ನಿಮಿಷಗಳ ನಂತರ ಫೌಂಡೇಷನ್ ಆಕ್ಸಿಡೀಕರಣಗೊಳ್ಳುತ್ತವೆ, ಇದು ಸ್ವಲ್ಪ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಇದು ಸಂಭವಿಸದಂತೆ ತಡೆಯಲು, ಫೌಂಡೇಷನ್ ಬದಲಾಯಿಸುವುದು ಮತ್ತು ಆಕ್ಸಿಡೀಕರಣಗೊಂಡ ನಂತರ ಅಡಿಪಾಯವು ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ನೋಡಲು ಸುಮಾರು 5-10 ನಿಮಿಷಗಳ ಕಾಲ ಕಾಯುವುದು ಮುಖ್ಯವಾಗಿದೆ. ನೀವು ಮೊದಲು ಹಚ್ಚಿದಾಗ ಹೊಂದಿಕೊಂಡಂತತೆ ಕಾಣುತ್ತಿದ್ದ ಫೌಂಡೇಷನ್ ಇದ್ದಕ್ಕಿದ್ದಂತೆ ಹೆವಿ ಆಗಬಹುದು. ಆದ್ದರಿಂದ, ಮುಂದಿನ ಬಾರಿ ಫೌಂಡೇಷನ್ ಟ್ರೈಯಲ್ ಮಾಡುವಾಗ, ಅದನ್ನು ಹಚ್ಚಿದ ಕೂಡಲೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ವಲ್ಪ ಸಮಯ ಕಾದು, ನಂತರ ಖರೀದಿಸಿ.

English summary

Things To Consider When Choosing Foundation in kannada

Here we talking about things to Consider When Choosing Foundation in kannada, read on
Story first published: Friday, June 10, 2022, 16:04 [IST]
X
Desktop Bottom Promotion