For Quick Alerts
ALLOW NOTIFICATIONS  
For Daily Alerts

ಆರೋಗ್ಯ ಸ್ನೇಹಿ ಗ್ರೀನ್ ಟೀಯ ಸೌಂದರ್ಯ ಲಾಭಗಳು ಇಲ್ಲಿವೆ

|

ಆರೋಗ್ಯದ ವಿಚಾರದಲ್ಲಿ ಗ್ರೀನ್ ಟೀ ಮಹತ್ತರ ಪ್ರಯೋಜನವನ್ನು ಪಡೆದಿದೆ. ಅದರಲ್ಲಿರುವ ಉತ್ತಮ ಉತ್ಕರ್ಷಣ ನಿರೋಧಕ ಅಂಶದಿಂದಾಗಿ ಗ್ರೀನ್ ಟೀ ಕುಡಿಯುವುದು ಬೇರೆ ಯಾವುದೇ ಪಾನೀಯಗಳಿಗಿಂತ ಉತ್ತಮವೆಂದು ಹೇಳಲಾಗುತ್ತದೆ. ಆದರೆ ಇದರಿಂದ ನಿಮ್ಮ ಸೌಂದರ್ಯಕ್ಕೂ ಸಹಾಯವಾಗುವುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇದರಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ವಯಸ್ಸಾಗುವಿಕೆಯ ಲಕ್ಷಣಗಳನ್ನು ದೂರಮಾಡುವುದು. ಹಾಗಾದರೆ ಬನ್ನಿ ಈ ಗ್ರೀನ್ ಟೀ ಯಿಂದ ಸಿಗುವ ಇತರ ಸೌಂದರ್ಯ ಪ್ರಯೋಜನಗಳನ್ನು ನೋಡೋಣ.

ಗ್ರೀನ್ ಟೀಯ ಸಾಮಾನ್ಯ ಪ್ರಯೋಜನಗಳು ಹೀಗಿವೆ:

ಗ್ರೀನ್ ಟೀಯ ಸಾಮಾನ್ಯ ಪ್ರಯೋಜನಗಳು ಹೀಗಿವೆ:

ಪ್ರತಿದಿನ ಗ್ರೀನ್ ಟೀ ಕುಡಿಯುವುದು ಉತ್ತಮ ಆಯ್ಕೆಯಾಗಿದೆ, ಏಕೆಂದರೆ ಇದು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ, ನಿಯಮಿತವಾಗಿ ಇದನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ದೇಹದಿಂದ ಹೆಚ್ಚಿನ ಪ್ರಮಾಣದ ನೀರನ್ನು ತೆಗೆದುಹಾಕುತ್ತದೆ. ಈ ಚಹಾದಲ್ಲಿ ಟ್ಯಾನಿನ್ ಇರುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಈ ಪಾನೀಯದ ಮತ್ತೊಂದು ಪ್ರಯೋಜನವೆಂದರೆ ಅದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು. ಇದನ್ನು ಕುಡಿಯುವುದರಿಂದ ಹಲ್ಲುಗಳಿಗ ಉತ್ತಮ ಲಾಭವಿದ್ದು ಮತ್ತು ಉಸಿರಾಟವನ್ನು ಸಹ ಉಲ್ಲಾಸಗೊಳಿಸುತ್ತದೆ.

ಗ್ರೀನ್ ಟೀಯ ಸೌಂದರ್ಯ ಪ್ರಯೋಜನಕ್ಕಾಗಿ ಅದನ್ನ ಈ ರೀತಿ ಬಳಸಿ:

ಗ್ರೀನ್ ಟೀಯ ಸೌಂದರ್ಯ ಪ್ರಯೋಜನಕ್ಕಾಗಿ ಅದನ್ನ ಈ ರೀತಿ ಬಳಸಿ:

ಸ್ಕ್ರಬ್ ಆಗಿ ಬಳಸಲು:

ಗ್ರೀನ್ ಟೀ ಯ ಸ್ಚ್ರಬ್ ನಿಮ್ಮ ಮುಖವನ್ನು ಸ್ವಚ್ಛಗೊಳಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದು. ಅದಕ್ಕಾಗಿ ನೀವು ಬಾದಾಮಿ, ಗ್ರೀನ್ ಟೀ ಎಲೆ ಮತ್ತು ಮೊಸರು ಮಿಶ್ರಣ ಮಾಡಿ, ಮುಖ ಮತ್ತು ದೇಹದ ಸ್ಕ್ರಬ್ ಬಳಸಿ.

ಮೊಡವೆ ಚಿಕಿತ್ಸೆಗಾಗಿ:

ಮೊಡವೆ ಚಿಕಿತ್ಸೆಗಾಗಿ:

ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳನ್ನು ಹೊಂದಿದ್ದು, ಮೊಡವೆಗಳನ್ನು ನಿಯಂತ್ರಿಸಲು ಬಳಸಬಹುದು. ಗ್ರೀನ್ ಟೀ ಎಲೆಗಳ ಪುಡಿಯನ್ನು ತಯಾರಿಸಿ, ಸ್ವಲ್ಪ ದಾಲ್ಚಿನ್ನಿ ಪುಡಿ ಮತ್ತು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಇದನ್ನು ಮೊಡವೆಗಳ ಮೇಲೆ ನೇರವಾಗಿ ಹಚ್ಚಿ ಮತ್ತು 20 ನಿಮಿಷಗಳ ನಂತರ ಸರಳ ನೀರಿನಿಂದ ತೊಳೆಯಿರಿ.

ಕಣ್ಣುಗಳ ಪಫಿನೆಸ್ ಕಡಿಮೆ ಮಾಡಲು:

ಕಣ್ಣುಗಳ ಪಫಿನೆಸ್ ಕಡಿಮೆ ಮಾಡಲು:

ಕಣ್ಣಿನ ಪ್ಯಾಡ್‌ಗಳಾಗಿ ಬಳಸುವ ಟೀ ಬ್ಯಾಗ್‌ಗಳು ಕಣ್ಣುಗಳ ಸುತ್ತಲಿನ ಪಫಿನೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ಕಣ್ಣಿಗೆ ವಿಶ್ರಾಂತಿಯನ್ನು ನೀಡುವುದು. ಅಷ್ಟೇ ಅಲ್ಲ, ಒತ್ತಡವನ್ನು ಕಡಿಮೆ ಮಾಡಲು ಕೂಡ ನೆರವಾಗುವುದು. ಇದಕ್ಕಾಗಿ ನೀವು ಬಿಸಿನೀರಿನಲ್ಲಿ ಗ್ರೀನ್ ಟೀ ಬ್ಯಾಗ್ ಇರಿಸಿ, ಅವುಗಳನ್ನು ತಣ್ಣಗಾಗಲು ಬಿಡಿ, ನಂತರ ಅವುಗಳನ್ನು ಕಣ್ಣಿನ ಪ್ಯಾಡ್‌ಗಳಾಗಿ ಬಳಸಿ.

ಉಗುರುಗಳು ಹೊಳೆಯಲು:

ಉಗುರುಗಳು ಹೊಳೆಯಲು:

ಇದು ಹೆಚ್ಚಿನವರಿಗೆ ತಿಳಿದೇ ಇದೆ. ನಿಮ್ಮ ಉಗುರುಗಳನ್ನು ಹೊಳೆಯುವಂತೆ ಮಾಡಲು ಗ್ರೀನ್ ಟೀಯಲ್ಲಿ ಬೆರಳುಗಳನ್ನ ಅದ್ದಿ ಇಡಿ. ಹೀಗೆ ಮಾಡುವುದರಿಂದ ನಿಮ್ಮ ಉಗುರುಗಳು ನಿಧಾನವಾಗಿ ಹೊಳೆಯಲು ಪ್ರಾರಂಭವಾಗುವುದು.

ಕೂದಲಿನ ಚಿಕಿತ್ಸೆಗಾಗಿ:

ಕೂದಲಿನ ಚಿಕಿತ್ಸೆಗಾಗಿ:

ಹಸಿರು ಚಹಾವು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೇ, ಸೋರಿಯಾಸಿಸ್ ಮತ್ತು ತಲೆಹೊಟ್ಟು ಮುಂತಾದ ಪರಿಸ್ಥಿತಿಗಳನ್ನು ಎದುರಿಸುವಲ್ಲಿ ಪರಿಣಾಮಕಾರಿ ಎಂದು ಸಂಶೋಧನೆ ಸೂಚಿಸುತ್ತದೆ. ಅದಕ್ಕಾಗಿ ಪ್ರತಿದಿನ ಗ್ರೀನ್ ಟೀ ಕುಡಿಯುವುದು ಉತ್ತಮ.

English summary

The Beauty Benefits of Green Tea in Kannada

Here we talking about The Beauty Benefits of Green Tea in Kannada, read on
Story first published: Saturday, June 19, 2021, 13:40 [IST]
X
Desktop Bottom Promotion