For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮಳೆಗಾಲದಲ್ಲೂ ಸನ್‌ಸ್ಕ್ರೀನ್ ಬಳಸಬೇಕಾ?

|

ಸನ್‌ಸ್ಕ್ರೀನ್ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಬಳಸುವ ಒಂದು ಬಹುಮುಖ್ಯ ವಸ್ತು. ಇದು ನಮ್ಮನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ ನೀಡುವುದು. ಆದ್ದರಿಂದ ಸಾಮಾನ್ಯವಾಗಿ ಸೂರ್ಯನ ಬಿಸಿಲಿಗೆ ಹೋಗುವ ಮುನ್ನ ಸನ್‌ಸ್ಕ್ರೀನ್ ಹಚ್ಚಿಕೊಳ್ಳುತ್ತಾರೆ. ಆದರೆ, ಮಳೆಗಾಲದಲ್ಲಿ ಬಿಸಿಲೇ ಇಲ್ವಲ್ಲ, ಈ ಟೈಮಲ್ಲೂ ಸನ್‌ಸ್ಕ್ರಿನ್ ಬಳಸಬೇಕೇ ಎಂಬ ಪ್ರಶ್ನೆ ಮೂಡಬಹುದು. ಇದಕ್ಕೆ ಉತ್ತರ ಈ ಕೆಳಗಿದೆ, ಬನ್ನಿ ನೋಡೋಣ.

ಸನ್‌ಸ್ಕ್ರೀನ್ ಮಳೆಗಾಲದಲ್ಲೂ ಬಳಸಬೇಕೇ?:

ಸನ್‌ಸ್ಕ್ರೀನ್ ಮಳೆಗಾಲದಲ್ಲೂ ಬಳಸಬೇಕೇ?:

ಹೌದು, ಮಳೆಗಾಲ ಅಂದ್ರೆ ಮೋಡದ ವಾತಾವರಣ, ಸೂರ್ಯನಿಲ್ಲದ ಸಮಯ. ಸನ್‌ಸ್ಕ್ರೀನ್ ಬೇಕೇ ಎಂಬ ಪ್ರಶ್ನೆ ಹಲವರನ್ನ ಕಾಡಬಹುದು. ಆದರೆ, ನಿಮ್ಮ ತ್ವಚೆಗೆ ಸನ್‌ಸ್ಕೀನ್ ಮೂಲಭೂತವಾಗಿ ಅಗತ್ಯವಾಗಿರುವ ಒಂದು ವಸ್ತು. ಇದು ನಿಮ್ಮ ಚರ್ಮವನ್ನು ಸೂರ್ಯನ ನೇರಳಾತೀತ (UV) ಕಿರಣಗಳಿಂದ ರಕ್ಷಿಸುತ್ತದೆ. ಆದ್ದರಿಂದ ಸೂರ್ಯ ಎಲ್ಲಾ ಕಾಲದಲ್ಲೂ ಬರುವುದರಿಂದ, ಸನ್‌ಸ್ಕ್ರೀನ್‌ನನ್ನೂ ಸಹ ಮಳೆಗಾಲದ ಸೇರಿದಂತೆ ಎಲ್ಲಾ ಕಾಲದಲ್ಲೂ ಬಳಸಬೇಕು. ಅಷ್ಟೇ ಅಲ್ಲ, ನೀವು ಮನೆಯೊಳಗಿದ್ದರೂ ಸಹ ಸನ್‌ಸ್ಕ್ರೀನ್ ಹಚ್ಚಿಕೊಳ್ಳಲೇಬೇಕು. ಏಕೆಂದರೆ, ಹಾನಿಕಾರಕ ಕಿರಣಗಳು ಮೋಡ ಮತ್ತು ಕಿಟಕಿ ಫಲಕಗಳ ಮೂಲಕವೂ ನಿಮ್ಮನ್ನು ತಲುಪಬಲ್ಲವು. ಆದ್ದರಿಂದ, ಮಳೆಗಾಲದಲ್ಲೂ, ನಿಮ್ಮ ಚರ್ಮಕ್ಕೆ ಸೂರ್ಯನ ಬೆಳಕಿನಿಂದ ರಕ್ಷಣೆಯ ಅಗತ್ಯವಿದೆ. ಈ ಕಿರಣಗಳ ಮಾನ್ಯತೆ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ಅತಿ ಹೆಚ್ಚು ಇರುವುದು. ಆದ್ದರಿಂದ ಈ ಸಮಯದಲ್ಲಿ ಸನ್‌ಸ್ಕ್ರೀನ್ ಹಚ್ಚಲು ಮರೆಯದಿರಿ.

ಸೂರ್ಯನ ಕಿರಣಗಳಿಗೆ ಹೆಚ್ಚು ತೆರೆದುಕೊಳ್ಳುವುದರಿಂದ ಆಗುವ ಅಪಾಯಗಳು:

ಸೂರ್ಯನ ಕಿರಣಗಳಿಗೆ ಹೆಚ್ಚು ತೆರೆದುಕೊಳ್ಳುವುದರಿಂದ ಆಗುವ ಅಪಾಯಗಳು:

ನಿಮ್ಮ ಚರ್ಮವು ಸೂರ್ಯನ ಬೆಳಕಿಗೆ ತಾಗಿದಾಗ, ಮೆಲನಿನ್ ಉತ್ಪಾದನೆ ಹೆಚ್ಚಾಗುವುದು. ಕಾಲಾನಂತರದಲ್ಲಿ, ಹೆಚ್ಚಿದ ಮೆಲನಿನ್ ಮಟ್ಟವು ಚರ್ಮ ಕಪ್ಪಾಗಲು ಕಾರಣವಾಗುತ್ತವೆ, ಇದನ್ನು ಟ್ಯಾನ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಪರಿಸ್ಥಿತಿ ತೀವ್ರವಾಗಿ ಇದು ಸನ್‌ಬರ್ನ್‌ ಆಗಿಯೂ ಬದಲಾಗುವುದು.

ಒಡ್ಡಿಕೊಂಡ ತಕ್ಷಣ ನೀವು ಬಿಸಿಲು ಅನುಭವಿಸದಿರಬಹುದು. ನೋವಿನ ಕೆಂಪು ತೇಪೆಗಳು ಅಥವಾ ಗುಳ್ಳೆಗಳು ಸೂರ್ಯನಿಗೆ ಒಡ್ಡಿಕೊಂಡ 6-48 ಗಂಟೆಗಳ ನಂತರ ಸಾಮಾನ್ಯವಾಗಿ ಬೆಳೆಯುವ ಬಿಸಿಲಿನ ಚಿಹ್ನೆಗಳಾಗಿವೆ. ಗುಳ್ಳೆಗಳು ಅಂತಿಮವಾಗಿ ಸಿಪ್ಪೆ ಸುಲಿಯಬಹುದು ಮತ್ತು ತುರಿಕೆಗೆ ಕಾರಣವಾಗಬಹುದು. ತೀವ್ರತರವಾದ ಪ್ರಕರಣಗಳಲ್ಲಿ, ಬಿಸಿಲು ಜ್ವರ, ವಾಕರಿಕೆ ಮತ್ತು ಶೀತವನ್ನು ಸಹ ಉಂಟುಮಾಡಬಹುದು.

ಸೂರ್ಯನ ಬೆಳಕಿಗೆ ಹೆಚ್ಚು ತೆರೆದುಕೊಳ್ಳುವುದರಿಂದ, ಸುಕ್ಕುಗಳು ಮತ್ತು ಸೂಕ್ಷ್ಮರೇಖೆಗಳಂತಹ ವಯೋ ಸಹಜ ಚರ್ಮ ಸಮಸ್ಯೆಗಳು ಬೇಗನೇ ಕಾಣಿಸಿಕೊಳ್ಳುತ್ತವೆ. ಏಕೆಂದರೆ ಸೂರ್ಯನ ಬೆಳಕು ಚರ್ಮದ ಮೃದುತ್ವವನ್ನು ಕಾಪಾಡುವ ನಾರಿನಂಶವನ್ನು ಹಾನಿಗೊಳಿಸುತ್ತವೆ. ಇದರಿಂದ ಚರ್ಮವು ಅದರ ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಂಡು, ಕುಗ್ಗುತ್ತದೆ. ಇದು ಸೂಕ್ಷ್ಮ ರೇಖೆಗಳ ನೋಟಕ್ಕೆ ಕಾರಣವಾಗುತ್ತದೆ.

ಸೂರ್ಯನ ಬೆಳಕಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಸಣ್ಣ ಕಂದು ಕಲೆಗಳು ಅಥವಾ ನಸುಕಂದು ಮಚ್ಚೆಗಳು ಸೇರಿದಂತೆ ವಿವಿಧ ರೀತಿಯ ಪಿಗ್ಮೆಂಟೇಶನ್ ಉಂಟಾಗುತ್ತದೆ. ಇದರ ಜೊತೆಗೆ, ಹಾನಿಕಾರಕ ಯುವಿ ಕಿರಣಗಳು ಕ್ಯಾನ್ಸರ್ ಉಂಟು ಮಾಡುವ ಗೆಡ್ಡೆಗಳಿಗೆ ಕಾರಣವಾಗಬಹುದು.

ಸನ್‌ಸ್ಕ್ರೀನ್ ಬಳಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು:

ಸನ್‌ಸ್ಕ್ರೀನ್ ಬಳಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು:

ಮನೆಯಿಂದ ಹೊರಡುವ ಅಥವಾ ಬಿಸಿಲಿನಲ್ಲಿ ಹೋಗುವ ಸುಮಾರು 30 ನಿಮಿಷಗಳ ಮೊದಲು ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ. ಇದು ಸನ್‌ಸ್ಕ್ರೀನ್ ಚರ್ಮಕ್ಕೆ ಹೀರಿಕೊಳ್ಳಲು ಅನುವು ಮಾಡಿಕೊಡುವುದಲ್ಲದೇ, ಬೆವರಿದಾಗ ಸನ್‌ಸ್ಕ್ರೀನ್ ಕರಗಿ ಹೋಗುವುದನ್ನು ತಡೆಯುತ್ತದೆ.

ಕಿವಿ, ಬೆನ್ನು, ಭುಜಗಳು ಮತ್ತು ಮೊಣಕಾಲುಗಳು ಮತ್ತು ಕಾಲುಗಳ ಹಿಂಭಾಗ ಸೇರಿದಂತೆ, ಸೂರ್ಯನ ಬೆಳಕು ತಾಗುವ ಎಲ್ಲಾ ದೇಹದ ಭಾಗಗಳಿಗೂ ಸನ್‌ಸ್ಕೀನ್ ಹಚ್ಚುವುದನ್ನ ಮರೆಯಬೇಡಿ.

ಯಾವ ಸನ್‌ಸ್ಕ್ರೀನ್ ಒಳ್ಳೆಯದು?

ಯಾವ ಸನ್‌ಸ್ಕ್ರೀನ್ ಒಳ್ಳೆಯದು?

ನೀವು ಹೆಚ್ಚು ಬೆವರುತ್ತಿದ್ದರೆ, ವ್ಯಾಯಾಮ ಮಾಡುತ್ತಿದ್ದರೆ ಅಥವಾ ಈಜುತ್ತಿದ್ದರೆ ಕನಿಷ್ಠ ಪ್ರತಿ 2 ಗಂಟೆಗಳಿಗೊಮ್ಮೆ ಹಚ್ಚಿಕೊಳ್ಳುತ್ತಿರಿ.

ನೀವು ಸನ್‌ಸ್ಕ್ರೀನ್ ಖರೀದಿಸುವಾಗ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (SPF) ಇರುವ ವಿಶಾಲ-ಸ್ಪೆಕ್ಟ್ರಮ್ ಸನ್‌ಸ್ಕ್ರೀನ್‌ ಆಯ್ಕೆ ಮಾಡಿ. ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ (AAD) 30 SPF ಅಥವಾ ಅದಕ್ಕಿಂತ ಹೆಚ್ಚಿರುವ ಸನ್‌ಸ್ಕ್ರೀನ್ ಅನ್ನು ಬಳಸಲು ಶಿಫಾರಸು ಮಾಡುತ್ತದೆ.

ನೀವು ಹೊರಗೆ ಕೆಲಸ ಮಾಡುವವರಾದರೆ ಅಥವಾ ಈಜುತ್ತಿದ್ದರೆ, ವಾಟರ್‌ ಪ್ರೂಪ್ ಬ್ರ್ಯಾಂಡ್ ಆರಿಸಿ. ಎಣ್ಣೆಯುಕ್ತ ಚರ್ಮವನ್ನು ಹೊಂದಿರುವವರು ಅಥವಾ ಮೊಡವೆಗಳಿಗೆ ಗುರಿಯಾಗುವ ಜನರು ವಾಟರ್ ಬೇಸ್ಡ್ ಸನ್‌ಸ್ಕ್ರೀನ್ ಅನ್ನು ಬಳಸಬೇಕು.

English summary

Should You Apply Sunscreen During the Monsoon Too in Kannada

Here we talking about Should you apply sunscreen during the monsoon too in Kannada, read on
X
Desktop Bottom Promotion