For Quick Alerts
ALLOW NOTIFICATIONS  
For Daily Alerts

ಅನಾನಸ್‌ನ ಈ ಫೇಸ್‌ ಪ್ಯಾಕ್‌ಗಳಿಂದ ಆರೋಗ್ಯಕರ ಹಾಗೂ ಕಾಂತಿಯುತ ತ್ವಚೆ ಪಡೆಯಿರಿ

|

ತ್ವಚೆಯ ಆರೈಕೆಗಾಗಿ ಅದೆಷ್ಟೇ ದುಬಾರಿ ಉತ್ಪನ್ನಗಳಿದ್ದರೂ, ನೈಸರ್ಗಿಕವಾಗಿ ಸಿಗುವ ಹಣ್ನು-ತರಕಾರಿಗಳು ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತವಾಗಿರುತ್ತದೆ. ಅಂತಹ ಒಂದು ಹಣ್ಣೆಂದರೆ, ಅನಾನಸ್. ಹುಳಿ-ಸಿಹಿ ರುಚಿಯ ಅನಾನಸ್ ತಿನ್ನಲು ರುಚಿಕರವಾಗಿರುವುದಲ್ಲದೇ, ಇದು ಚರ್ಮಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ.

ಅನಾನಸ್ ನಲ್ಲಿ ವಿಟಮಿನ್ ಬಿ ಮತ್ತು ಸಿ ಇದ್ದು, ಇದು ಒಣ ತ್ವಚೆಯನ್ನು ಹೋಗಲಾಡಿಸಲು ತುಂಬಾ ಸಹಕಾರಿ. ಅನಾನಸ್ ಕಾಲಜನ್ ಅನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದ್ದು, ಇದು ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಇಂತಹ ಹತ್ತು ಹಲವಾರು ಪ್ರಯೋಜನಗಳನ್ನು ಅನಾನಸ್ ತ್ವಚೆಗೆ ನೀಡುತ್ತದೆ.

ನೀವೇನಾದರು ನಿಮ್ಮ ತ್ವಚೆಯನ್ನು ಸುಧಾರಿಸಲು ಬಯಸಿದರೆ, ನಿಮ್ಮ ಸೌಂದರ್ಯ ಉತ್ಪನ್ನದಲ್ಲಿ ಅನಾನಸ್ ಅನ್ನು ಸೇರಿಸಿ. ಅದಕ್ಕಾಗಿ ಕೆಲವು ಫೇಸ್ ಮಾಸ್ಕ್‌ಗಳನ್ನು ತಯಾರಿಸುವ ಮೂಲಕ ಅನಾನಸ್ ಬಳಸಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಕಾಂತಿಯುತ ತ್ವಚೆಗೆ ಅನಾನಸ್‌ನ ವಿವಿಧ ಫೇಸ್ ಮಾಸ್ಕ್ಕಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಅನಾನಸ್ ಮತ್ತು ಹಾಲಿನ ಮಾಸ್ಕ್:

ಅನಾನಸ್ ಮತ್ತು ಹಾಲಿನ ಮಾಸ್ಕ್:

ಹಾಲು ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ ಒಳ್ಳೆಯದು. ಹಾಲು ಚರ್ಮದಲ್ಲಿನ ತೇವಾಂಶವನ್ನು ಲಾಕ್ ಮಾಡಿ, ತ್ವಚೆಗೆ ಹೊಳಪು ನೀಡುತ್ತದೆ. ಇದನ್ನು ಅನಾನಸ್‌ನೊಂದಿಗೆ ಬೆರೆಸಿ ಹಚ್ಚಿದರೆ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ. ಒಣ ಚರ್ಮಕ್ಕೆ ಈ ಫೇಸ್ ಪ್ಯಾಕ್ ಸೂಕ್ತವಾಗಿದೆ.

ಮಾಸ್ಕ್‌ ಹೇಗೆ ತಯಾರಿಸುವುದು?:

ಈ ಮುಖವಾಡವನ್ನು ತಯಾರಿಸಲು, ಅರ್ಧ ಅನಾನಸ್ ತೆಗೆದುಕೊಂಡು ಅದನ್ನು ಮ್ಯಾಶ್ ಮಾಡಿ. ಈಗ ಅದಕ್ಕೆ 2-3 ಚಮಚ ಹಾಲು ಸೇರಿಸಿ. ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ, ಕನಿಷ್ಠ ಅರ್ಧ ಘಂಟೆಯವರೆಗೆ ಬಿಡಿ. 30 ನಿಮಿಷಗಳ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ಮತ್ತೆ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿಯಾದರೂ ಮುಖಕ್ಕೆ ಹಚ್ಚಿಕೊಳ್ಳಿ.

ಅನಾನಸ್ ಮತ್ತು ಸೌತೆಕಾಯಿ:

ಅನಾನಸ್ ಮತ್ತು ಸೌತೆಕಾಯಿ:

ಸೌತೆಕಾಯಿಯು ತ್ವಚೆಗೆ ಕಾಂತಿ ನೀಡುವುದು ಮತ್ತು ಚರ್ಮದಲ್ಲಿನ ಧೂಳು ಹಾಗೂ ಕಲ್ಮಶವನ್ನು ತೆಗೆದು ಹಾಕುವುದು.

ಮಾಸ್ಕ್ ತಯಾರಿಸುವುದು ಹೇಗೆ?:

ಎರಡು ತುಂಡು ಅನಾನಸು ತೆಗೆದುಕೊಂಡು ಅದನ್ನು ಸರಿಯಾಗಿ ತುರಿದುಕೊಳ್ಳಿ. ಈಗ ತುರಿದ ಅನಾನಸನ್ನು ಹಾಗೆ ರುಬ್ಬಿಕೊಳ್ಳಿ. ಸೌತೆಕಾಯಿಯನ್ನು ಕೂಡ ಹೀಗೆ ಮಾಡಿ. ಎರಡು ಚಮಚ ಅನಾನಸು ಪೇಸ್ಟ್ ಮತ್ತು ಸೌತೆಕಾಯಿ ಪೇಸ್ಟ್ ನ್ನು ಹಾಕಿ. ಇದಕ್ಕೆ ತಾಜಾ ಕೆನೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಈ ಮಾಸ್ಕ್ ನ್ನು ಹಾಗೆ ಮುಖಕ್ಕೆ ಸರಿಯಾಗಿ ಹಚ್ಚಿಕೊಂಡು 15 ನಿಮಿಷ ಕಾಲ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ ಮತ್ತು ತ್ವಚೆಯು ಕಾಂತಿಯನ್ನು ಪಡೆಯುವುದು.

ಅನಾನಸ್ ಮತ್ತು ಕಡಲೆಹಿಟ್ಟಿನ ಮಾಸ್ಕ್:

ಅನಾನಸ್ ಮತ್ತು ಕಡಲೆಹಿಟ್ಟಿನ ಮಾಸ್ಕ್:

ಅನಾನಸ್ ನಿಮ್ಮ ಚರ್ಮದಿಂದ ಕಲ್ಮಶವನ್ನು ತೆಗೆದುಹಾಕುತ್ತದೆ ಮತ್ತು ಚರ್ಮದ ರಂಧ್ರಗಳನ್ನು ತೆರೆಯುತ್ತದೆ ಜೊತೆಗೆ ಕಡಲೆಹಿಟ್ಟು ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ. ಇದು ಚರ್ಮವನ್ನು ಹೊಳಪುಗೊಳಿಸುವ ಗುಣಗಳನ್ನು ಹೊಂದಿದೆ. ಮುಖದ ಬಣ್ಣ ಸುಧಾರಿಸಲು, ಕಡಲೆಹಿಟ್ಟು ಮತ್ತು ಅನಾನಸ್ ಅನ್ನು ಒಟ್ಟಿಗೆ ಸೇರಿಸಿ ಪೇಸ್ಟ್ ತಯಾರಿಸಿ. ಈ ಮಾಸ್ಕ್ ಕಪ್ಪು ಕಲೆಗಳು, ಮೊಡವೆಗಳು, ಸೂಕ್ಷ್ಮ ರೇಖೆಗಳು ಮತ್ತು ಸತ್ತ ಚರ್ಮದ ಕೋಶಗಳನ್ನು ಹೋಗಲಾಡಿಸುತ್ತದೆ.

ಮಾಸ್ಕ್ ತಯಾರಿಸುವುದು ಹೇಗೆ?

ಈ ಫೇಸ್ ಪ್ಯಾಕ್ ಮಾಡಲು, 2 ಚಮಚ ಅನಾನಸ್ ತಿರುಳನ್ನು ಮತ್ತು 2 ಚಮಚ ಕಡಲೆಹಿಟ್ಟನ್ನು ಮಿಶ್ರಣ ಮಾಡಿ ಮತ್ತು ಅದಕ್ಕೆ ಕೆಲವು ಹನಿ ರೋಸ್ ವಾಟರ್ ಸೇರಿಸಿ. ಈ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು ಒಣಗಲು ಬಿಡಿ. ಅದರ ನಂತರ ನೀರಿನಿಂದ ಮುಖವನ್ನು ತೊಳೆಯಿರಿ.

ಅನಾನಸ್ ಮತ್ತು ಅರಶಿನ ಮಾಸ್ಕ್:

ಅನಾನಸ್ ಮತ್ತು ಅರಶಿನ ಮಾಸ್ಕ್:

ಅನಾನಸು ಚರ್ಮದಲ್ಲಿನ ಸತ್ತ ಕೋಶಗಳು, ಧೂಳು ಮತ್ತು ಬ್ಯಾಕ್ಟೀರಿಯಾವನ್ನು ಬೇಗನೆ ಕಿತ್ತು ಹಾಕುವುದು. ಅನಾನಸಿನಲ್ಲಿ ಇರುವ ಬ್ರೊಮೆಲೈನ್ ಅಂಶವು ಉರಿಯೂತ ಮತ್ತು ಊತ ಕಡಿಮೆ ಮಾಡುವುದು. ಜೊತೆಗೆ ಅರಿಶಿನದಲ್ಲಿ ಇರುವ ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ, ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಅರಶಿನದಲ್ಲಿನ ಬ್ಲೀಚಿಂಗ್ ಗುಣವು ಮೊಡವೆ ಕಲೆಗಳನ್ನು ನಿವಾರಣೆ ಮಾಡುವುದು.

ಮಾಸ್ಕ್ ಹೇಗೆ ತಯಾರಿಸುವುದು?:

ಅನಾನಸನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು ರುಬ್ಬಿಕೊಂಡು ಪ್ಯೂರಿ ತಯಾರಿಸಿ, ಇದನ್ನು ಒಂದು ಸಣ್ಣ ಪಿಂಗಾಣಿಗೆ ಹಾಕಿ. ಇದಕ್ಕೆ ಚಿಟಿಕೆಯಷ್ಟು ಅರಿಶಿನ ಕೂಡ ಹಾಕಿಕೊಂಡು ಮಿಶ್ರಣ ಮಾಡಿ. ದನ್ನು ಸರಿಯಾಗಿ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 10 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಮುಖ ತೊಳೆಯಿರಿ.

​ತೆಂಗಿನ ಕಾಯಿ ಮತ್ತು ಅನಾನಸಿನ ಫೇಸ್ ಮಾಸ್ಕ್:

​ತೆಂಗಿನ ಕಾಯಿ ಮತ್ತು ಅನಾನಸಿನ ಫೇಸ್ ಮಾಸ್ಕ್:

ಅನಾನಸಿನ ನಾಲ್ಕು ತುಂಡುಗಳನ್ನು ತೆಗೆದುಕೊಳ್ಳಿ ಮತ್ತು ಎರಡು ಚಮಚ ತೆಂಗಿನ ಹಾಲಿನ ಜತೆಗೆ ಇದನ್ನು ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ. ಕೊನೆಗೆ ಸ್ವಲ್ಪ ತಣ್ಣೀರನ್ನು ಮುಖಕ್ಕೆ ಹಾಕಿ. ಮುಖ ಸರಿಯಾಗಿ ಒರೆಸಿಕೊಂಡು ಮೊಶ್ಚಿರೈಸರ್ ಹಚ್ಚಿ. ಕಾಂತಿಯುತ ತ್ವಚೆ ಪಡೆಯಲು ಇದು ತುಂಬಾ ಪರಿಣಾಮಕಾರಿ.

English summary

Pineapple Base Face Masks for Healthy and Glowing Skin in Kannada

Here we talking about Pineapple Base Face Masks for Healthy and Glowing Skin in Kannada, read on
Story first published: Thursday, December 30, 2021, 16:30 [IST]
X
Desktop Bottom Promotion