For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಸಮಯದಲ್ಲಿ ಕಾಡುವ ಮೊಡವೆ ತಡೆಗಟ್ಟುವುದು ಹೇಗೆ?

|

ಮುಟ್ಟಿನ ಅವಧಿಯಲ್ಲಿ ಮೊಡವೆಗಳು: ಮುಟ್ಟಾದಾಗ ಕಾಣಿಸುವ ಮೊಡವೆಗಳನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ

Pimples During Periods: Here’s How To Treat Pimples During Menstrual Cycle

ಮುಟ್ಟಿನ ಅವಧಿಯಲ್ಲಿ ಬಹುತೇಕ ಹೆಂಗಳೆಯರಿಗೆ ಮೊಡವೆಗಳು ಕಾಣಿಸಿಕೊಳ್ಳುತ್ತಾ ಇರುತ್ತವೆ. ಇದನ್ನು ನಿಭಾಯಿಸುವುದು ಅಷ್ಟು ಸುಲಭವೇನಲ್ಲ. ಏಕೆಂದರೆ ಮುಟ್ಟಿನ ಸಮಯದಲ್ಲಿ ಹೆಂಗಸರು ಸ್ನಾಯು ನೋವು ಮತ್ತು ಹೊಟ್ಟೆ ನೋವುಗಳಿಂದ ಬಳಲುತ್ತಿರುತ್ತಾರೆ. ಜೊತೆಗೆ ಈ ತ್ವಚೆಯ ಸಮಸ್ಯೆಯ ಕಡೆಗೆ ಅವರು ಗಮನ ನೀಡಲು ಸಾಧ್ಯವಾಗುವುದಿಲ್ಲ. ಆದರೂ ಪರವಾಗಿಲ್ಲ, ಬನ್ನಿ ಅದನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯೋಣ.

ಮೊಡವೆಯ ವಿಧವನ್ನು ಮೊದಲು ತಿಳಿದುಕೊಳ್ಳಿ

ಮೊಡವೆಯ ವಿಧವನ್ನು ಮೊದಲು ತಿಳಿದುಕೊಳ್ಳಿ

ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು, ಮೊಡವೆ ಎಂತಹದು ಅದರ ವಿಧವೇನು ಎಂದು ಮೊದಲು ತಿಳಿದುಕೊಳ್ಳಿ. ಮುಟ್ಟಿನ ಅವಧಿಯಲ್ಲಿ ಕಾಣಿಸಿಕೊಳ್ಳುವ ಮೊಡವೆಯು ಹಾರ್ಮೋನ್‌ಗಳ ವಿಘಟನೆಯ ಕಾರಣದಿಂದಾಗಿ, ಸಾಮಾನ್ಯ ಮೊಡವೆಗಿಂತ ವಿಭಿನ್ನವಾದ ಮೊಡವೆಯಾಗಿ ಕಾಣಿಸಿಕೊಳ್ಳುತ್ತದೆ. ಈ ಮೊಡವೆಗಳು ಮುಟ್ಟಿನ ಸಮಯದಲ್ಲಿ ಕಾಣಿಸಿಕೊಂಡು, ವಾರ ಇಲ್ಲವೇ ಅದಕ್ಕಿಂತ ಮೊದಲೇ ಒಡೆದು ಹೋಗುತ್ತದೆ.

ನಿಮಗೆ ಈಗಾಗಲೇ ಮೊಡವೆ ಇದೆಯೇ? ಹಾಗಾದರೆ ನಿಮಗೆ ಮುಟ್ಟಿನ ಸಮಯದಲ್ಲಿ ಮೊಡವೆಗಳು ಇನ್ನೂ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಒಂದು ವೇಳೆ ನಿಮಗೆ ಶುಭ್ರವಾದ ತ್ವಚೆ ಇದ್ದರೆ, ಈ ಸಮಯದಲ್ಲಿ ನಿಮ್ಮ ತ್ವಚೆಯು ಸಣ್ಣ ಮಟ್ಟಿಗೆ ಕೆಂಪಾಗುವುದು ಮತ್ತು ಮೊಡವೆಗಳು ತಕ್ಷಣ ಕಾಣಿಸಿಕೊಳ್ಳುವುದನ್ನು ಗಮನಿಸಬಹುದು.

ನಾವು ಮುಂದುವರಿಯುವ ಮೊದಲು, ಈ ಮೊಡವೆಗಳ ಕುರಿತಾಗಿ, ಅವುಗಳ ವಿಧದ ಕುರಿತಾಗಿ ಸ್ವಲ್ಪ ಮಟ್ಟಿಗೆ ತಿಳಿದುಕೊಂಡು ಬರೋಣ ಬನ್ನಿ.

ಆರು ಬಗೆಯ ಮೊಡವೆಗಳು

ಆರು ಬಗೆಯ ಮೊಡವೆಗಳು

ಮುಟ್ಟಿನ ಅವಧಿಯಲ್ಲಿ ಕಾಣಿಸಿಕೊಳ್ಳುವ ಮೊಡವೆಗಳನ್ನು ಅಥವಾ ಗುಳ್ಳೆಗಳನ್ನು ಮುಖ್ಯವಾಗಿ ಆರು ವಿಧಗಳಾಗಿ ವಿಂಗಡಿಸಬಹುದು. ಅವುಗಳು ಯಾವುವೆಂದರೆ,

ಬ್ಲಾಕ್ ಹೆಡ್ಸ್ : ತ್ವಚೆಯಲ್ಲಿರುವ ರಂಧ್ರವು ಕಟ್ಟಿಕೊಂಡು ಹಾಗೆಯೇ ತೆರೆದುಕೊಂಡು ಉಳಿದುಬಿಟ್ಟಾಗ, ಮೊಡವೆಗಳು ತ್ವಚೆಯ ಮೇಲೆ ಬೆಳೆಯಲು ಆರಂಭಿಸುತ್ತವೆ ಹಾಗೂ ನಿಮ್ಮ ತ್ವಚೆಯು ಕಪ್ಪಾಗಿ ಕಾಣಿಸಿಕೊಳ್ಳುತ್ತದೆ.

ವೈಟ್ ಹೆಡ್ಸ್: ಇವುಗಳು ತ್ವಚೆಯ ಒಳಗೆ ಕಾಣಿಸಿಕೊಳ್ಳುತ್ತವೆ. ಕಟ್ಟಿಕೊಂಡ ತ್ವಚೆಯ ರಂಧ್ರಗಳು ಮುಚ್ಚಿಕೊಂಡಾಗ ಇವುಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಇವುಗಳು ಬೆಳ್ಳಗೆ ಕಾಣಿಸಿಕೊಳ್ಳುವಂತೆ ಮಾಡುತ್ತವೆ.

ಪಾಪುಲ್ಸ್: ಇದೊಂದು ಬಗೆಯ ಮೊಡವೆಯಾಗಿದ್ದೂ, ನಿಜಕ್ಕೂ ಇದು ಒಂದು ಉರಿಯೂತವಾಗಿರುತ್ತದೆ. ಇವುಗಳು ತುದಿಯು ಕೆಂಪುಗುಳ್ಳೆಗಳ ರೀತಿ ಕಾಣಿಸಿಕೊಳ್ಳುವ ಮೊಡವೆಯಾಗಿರುತ್ತವೆ. ಇವುಗಳು ಸಹ ನೋವನ್ನು ಉಂಟು ಮಾಡುತ್ತವೆ.

ಪುಸ್ಚುಲ್‌ಗಳು: ಇದು ಇನ್ನೊಂದು ಬಗೆಯ ಮೊಡವೆಯಾಗಿದ್ದೂ, ಇದು ಸಹ ಉರಿಯೂತದ ಮೊಡವೆಯಾಗಿರುತ್ತದೆ. ಪುಸ್ಚುಲ್‌ಗಳು ಬುಡದಲ್ಲಿ ಕೆಂಪಗೆ ಇರುತ್ತವೆ. ಇದರ ತುದಿಯು ಬೆಳ್ಳಗೆ ಇದ್ದು, ಅವುಗಳಲ್ಲಿ ಕೀವು ತುಂಬಿಕೊಂಡಿರುತ್ತವೆ.

ನೊಡ್ಯೂಲ್‌ಗಳು: ಇವುಗಳು ತ್ವಚೆಯ ಅಡಿಯಲ್ಲಿ ಒಳಗೆ ಕಾಣಿಸಿಕೊಳ್ಳುತ್ತವೆ. ಇವುಗಳು ದೊಡ್ಡದಾಗಿರುತ್ತವೆ, ಗಟ್ಟಿಯಾಗಿರುತ್ತವೆ ಮತ್ತು ನೋವಿನಿಂದ ಕೂಡಿರುತ್ತವೆ. ಇವುಗಳು ನಿಮ್ಮ ಇಡೀ ಮುಖಕ್ಕೆ ಹರಡಿಕೊಳ್ಳುತ್ತವೆ.

ಸಿಸ್ಟ್‌ಗಳು: ಈ ಬಗೆಯ ಮೊಡವೆಗಳು ತ್ವಚೆಯ ಆಳದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಕೀವು ಸಹ ತುಂಬಿಕೊಂಡಿರುತ್ತವೆ. ಇವುಗಳು ನೋವಿನಿಂದ ಕೂಡಿರುತ್ತವೆ ಹಾಗೂ ಕಲೆಗಳನ್ನು ಸಹ ಉಂಟು ಮಾಡುತ್ತವೆ.

ಓಹ್ ಈ ಹಾಳಾದ ಹಾರ್ಮೋನ್‌ಗಳು!

ಓಹ್ ಈ ಹಾಳಾದ ಹಾರ್ಮೋನ್‌ಗಳು!

ನಿಮ್ಮ ಹಾರ್ಮೋನ್‌ಗಳು ಋತುಚಕ್ರದ ಅವಧಿಯಲ್ಲಿ ತುಂಬಾ ಆಟವಾಡಿಸುತ್ತವೆ. ನಿಮ್ಮ ಮುಟ್ಟು ಆರಂಭವಾಗುವ ಮೊದಲು ಪ್ರೊಜೆಸ್ಟೆರೋನ್ ಮಟ್ಟಗಳು ಕಡಿಮೆಯಾಗುತ್ತವೆ ಹಾಗೂ ಈಸ್ಟ್ರೊಜೆನ್ ಮಟ್ಟಗಳು ಅಧಿಕಗೊಳ್ಳುತ್ತವೆ. ಇವುಗಳು ಸೆಬಾಶಿಯಸ್ ಗ್ರಂಥಿಗಳನ್ನು ಟ್ರಿಗ್ಗರ್ ಮಾಡಿ, ಸೆಬಮ್ ಅನ್ನು ಸ್ರವಿಸುವಂತೆ ಮಾಡುತ್ತವೆ. ಈ ಎಣ್ಣೆ ಜಿಡ್ಡಿನಂತಹ ದ್ರವವು ತ್ವಚೆಯನ್ನು ಲೂಬ್ರಿಕೇಟ್ ಮಾಡುವ ಕೆಲಸವನ್ನು ಮಾಡುತ್ತದೆ. ಅಧಿಕ ಪ್ರಮಾಣದ ಸೆಬಮ್ ತ್ವಚೆಯ ರಂಧ್ರಗಳು ಕಟ್ಟಿಕೊಳ್ಳುವಂತೆ ಮಾಡಿ, ಮೊಡವೆಗಳಿಗೆ ಕಾರಣವಾಗುತ್ತದೆ.

ಹಾರ್ಮೋನ್‌ಗಳು ಇನ್ನೂ ಏನು ಮಾಡುತ್ತವೆ ಎಂದು ನಿಮಗೆ ತಿಳಿದಿದೆಯೇ? ಇವುಗಳು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಿ, ಮೊಡವೆ ಹಾಗೂ ಉರಿಯೂತವನ್ನು ಉಂಟು ಮಾಡುತ್ತವೆ! ಈ ಹಾರ್ಮೋನ್‌ಗಳ ಏರು ಪೇರುಗಳು ಕೇವಲ ಮೊಡವೆಗಳಿಗಷ್ಟೇ ಕಾರಣವಾಗದೆ, ಮೂಡ್ ಬದಲಾವಣೆ, ಸ್ತನಗಳ ನೋವು ಹಾಗೂ ಭಾವನಾತ್ಮಕ ಅಸಮತೋಲನಕ್ಕೆ ಸಹ ಕಾರಣವಾಗುತ್ತವೆ.

ಮೊಡವೆ ಅಲ್ಲೂ ಸಹ ಬರುತ್ತೆ

ಮೊಡವೆ ಅಲ್ಲೂ ಸಹ ಬರುತ್ತೆ

ಮುಟ್ಟಿನ ಅವಧಿಯಲ್ಲಿ ಯೋನಿಯ ಭಾಗದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಒಂದು ಎಚ್ಚರಿಕೆಯ ಗಂಟೆಯಾಗಿರುತ್ತದೆ. ಆದರೆ ನೀವು ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಇವುಗಳು ಮುಟ್ಟಿನ ಅವಧಿಗೆ ಮೊದಲು ಒಡೆದು ಹೋಗುತ್ತವೆ ಎಂದು ಕೆಲವರು ತಿಳಿಸುತ್ತಾರೆ. ಈ ಭಾಗದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳಿಗೂ ಸಹ ಹಾರ್ಮೋನ್‌ಗಳೇ ಕಾರಣ. ಆದರೆ ಇದಕ್ಕೆ ಮುಟ್ಟಿಗೆ ಸಂಬಂಧಿಸಿದ ಇನ್ನಿತರ ಸಮಸ್ಯೆಗಳು ಸಹ ಕಾರಣವಾಗುತ್ತವೆ. ಮೆನ್‌ಸ್ಟ್ರುವಲ್ ಪ್ಯಾಡ್‌ಗಳನ್ನು ಧರಿಸಿದಾಗ, ಅದಕ್ಕೂ ತ್ವಚೆಯ ನಡುವಿನ ಘರ್ಷಣೆಯಿಂದ ಸಹ ಈ ಭಾಗದಲ್ಲಿ ಮೊಡವೆ ಕಾಣಿಸಿಕೊಳ್ಳಬಹುದು. ಈ ಎಲ್ಲಾ ಸಮಸ್ಯೆಗಳು, ಮುಟ್ಟಿನ ಮೊಡವೆಗಳಿಗೆ ಕಾರಣವಾಗಬಹುದು.

ಮುಟ್ಟಿನ ಮೊಡವೆಗಳ ನೋವನ್ನು ನಿಭಾಯಿಸುವುದು ಹೇಗೆ

ಮುಟ್ಟಿನ ಮೊಡವೆಗಳ ನೋವನ್ನು ನಿಭಾಯಿಸುವುದು ಹೇಗೆ

ತ್ವಚೆಯ ಆಳದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ಮತ್ತು ಸಿಸ್ಟ್‌ಗಳು ಕೆಲವೊಮ್ಮೆ ತುಂಬಾ ನೋವನ್ನು ಉಂಟು ಮಾಡುತ್ತವೆ. ಆದರೆ ಕೆಲವು ಪರಿಹಾರಗಳ ಮೂಲಕ ನೀವು ಆ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಆಗ ಈ ಸಲಹೆಗಳು ನಿಮ್ಮ ಸಹಾಯಕ್ಕೆ ಬರಬಹುದು.

English summary

Pimples During Periods: Here’s How To Treat Pimples During Menstrual Cycle

Pimples during periods: Here’s how to treat pimples during menstrual cycle, read on,
X
Desktop Bottom Promotion