For Quick Alerts
ALLOW NOTIFICATIONS  
For Daily Alerts

ಮೂಗಿನ ಮೇಲಿರುವ ಬ್ಲಾಕ್‌ಹೆಡ್ಸ್‌ನ್ನು ಈ ರೀತಿ ಮನೆಯಲ್ಲಿಯೇ ತೆಗೆಯಬಹುದು

|

ಮೂಗಿನ ಮೇಲಿನ ಬ್ಲಾಕ್‌ಹೆಡ್ಸ್‌ಗಳು ಮುಖದ ಸೌಂದರ್ಯವನ್ನೇ ಹಾಳು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಮೂಗಿನ ಚರ್ಮದ ರಂಧ್ರಗಳು ಸಾಮಾನ್ಯವಾಗಿ ನಿಮ್ಮ ಮುಖದ ಇತರ ಚರ್ಮ ರಂಧ್ರಗಳಿಗಿಂತ ದೊಡ್ಡದಾಗಿರುತ್ತವೆ. ಅದೇ ಕಾರಣಕ್ಕಾಗಿ ಕೊಳಕು, ಹೆಚ್ಚವರಿ ಎಣ್ಣೆಯಿಂದ ಆ ರಂಧ್ರಗಳು ತುಂಬಿಕೊಂಡು, ಬ್ಲಾಕ್‌ಹೆಡ್ಸ್‌ಗಳ ರೂಪದಲ್ಲಿ ಕಪ್ಪುಕಲೆಗಳಾಗಿ ಗೋಚರವಾಗುತ್ತವೆ.

ಆದ್ದರಿಂದ ಕಾಲಕಾಲಕ್ಕೆ ನಿಮ್ಮ ಮೂಗಿನಿಂದ ಈ ಬ್ಲಾಕ್‌ಹೆಡ್ಸ್‌ಗಳನ್ನು ತೆಗೆಯುತ್ತಿರಬೇಕು, ಇಲ್ಲವಾದಲ್ಲಿ ಅದು ಮುಖದ ಸೌಂದರ್ಯಕ್ಕೆ ಅಡ್ಡಿಯುಂಡುಮಾಡುವ ಕಲೆಗಳಾಗಿ ಉಳಿದುಬಿಡುತ್ತವೆ. ಹಾಗಾಗಿ ನೀವು ಮನೆಯಲ್ಲಿ ಮಾಡಬಹುದಾದ ಮೂಗಿನ ಬ್ಲಾಕ್‌ಹೆಡ್ ತೆಗೆಯಲು ಹಂತಗಳನ್ನು ವಿವರಿಸಿದ್ದೇವೆ.

ಹಂತ 1: ಫೇಸ್ ಸ್ಕ್ರಬ್‌ನೊಂದಿಗೆ ಪ್ರಾರಂಭಿಸಿ:

ಹಂತ 1: ಫೇಸ್ ಸ್ಕ್ರಬ್‌ನೊಂದಿಗೆ ಪ್ರಾರಂಭಿಸಿ:

ನಿಮ್ಮ ಮೂಗಿನ ಮೇಲಿರುವ ಬ್ಲಾಕ್‌ಹೆಡ್ಸ್ ತೆಗೆಯಲು ಮೊದಲಿಗೆ ಸೌಮ್ಯವಾದ ಎಕ್ಸ್‌ಫೋಲಿಯೇಟಿಂಗ್ ಫೇಸ್ ಸ್ಕ್ರಬ್ ಬಳಸಿ. ನಿಮ್ಮ ತ್ವಚೆಗೆ ಸರಿಹೊಂದುವಂತಹ ಸ್ಕ್ರಬ್ ಆಯ್ಕೆಮಾಡಿಕೊಂಡು, ಅದನ್ನು ಮೂಗಿನ ಮೇಲೆ ಹಚ್ಚಿನ, ಮೇಲ್ಮುಖ ಚಲನೆಯಲ್ಲಿ ನಿಮ್ಮ ಮೂಗಿನ ಮೇಲೆ ನಿಧಾನವಾಗಿ ಉಜ್ಜಿ. ಇದರಿಂದ ಡೆಡ್ ಸೆಲ್‌ಗಳು ಹಾಗೂ ಬ್ಲ್ಯಾಕ್‌ಹೆಡ್‌ಗಳೆಲ್ಲವೂ ದೂರವಾಗಿ, ಒರಟುತನವು ಕಡಿಮೆಯಾಗುತ್ತದೆ. ಜೊತೆಗೆ ಮೃದುವಾದ ಚರ್ಮವನ್ನು ಪಡೆಯುತ್ತೀರಿ. ಎಕ್ಸ್‌ಫೋಲಿಯೇಟಿಂಗ್ ಹಂತ ಮುಂದಿನ ಹಂತಕ್ಕಾಗಿ ನಿಮ್ಮ ಮೂಗಿನ ರಂಧ್ರಗಳನ್ನು ಸಿದ್ಧಪಡಿಸುತ್ತದೆ.

ಹಂತ 2: ಮುಖಕ್ಕೆ ಸ್ಟೀಮ್ ನೀಡಿ:

ಹಂತ 2: ಮುಖಕ್ಕೆ ಸ್ಟೀಮ್ ನೀಡಿ:

ನಿಮ್ಮ ಮುಖವನ್ನು ನಿಧಾನವಾಗಿ ಉಜ್ಜಿದ ನಂತರ ಅದನ್ನು ಒದ್ದೆಯಾದ ಟಿಸ್ಯು ಪೇಪರ್‌ನಿಂದ ಒರೆಸಿ ನಂತರ ಮುಖದ ಸ್ಟೀಮರ್ ಬಳಸಿ. ಈ ಬಿಸಿ ಹಬೆಯು ನಿಮ್ಮ ಚರ್ಮದ ರಂಧ್ರಗಳನ್ನು ತೆರೆಯುತ್ತದೆ. ಇದರಿಂದ ಬ್ಲ್ಯಾಕ್ ಹೆಡ್ ತೆಗದುಹಾಕಲು ಸುಲಭವಾಗುತ್ತದೆ. ಇದಕ್ಕೆ ನೀವು ಸಾಮಾನ್ಯ ಸ್ಟೀಮರ್ ಬಳಸುವುದಕ್ಕಿಂತ ನ್ಯಾನೋ-ಸ್ಟೀಮ್ ತಂತ್ರಜ್ಞಾನವಿರುವ ಸ್ಟೀಮರ್ ಬಳಸುವುದು ಉತ್ತಮ. ಇದು ಚರ್ಮದ ಮೇಲೆ ಮೃದುವಾಗಿರುವುದಲ್ಲದೇ ಕೆಮ್ಮು ಅಥವಾ ಆವಿಯಾಗುವಿಕೆಗೆ ಸಾಮಾನ್ಯ ಸ್ಟೀಮರ್‌ಗಳಿಗಿಂತ 10 ಪಟ್ಟು ಆಳವಾಗಿ ಚರ್ಮದೊಳಗೆ ಸೇರಿಕೊಳ್ಳುತ್ತವೆ.

ಹಂತ 3: ಟೂಲ್ ಮೂಲಕ ಬ್ಲ್ಯಾಕ್ ಹೆಡ್ಸ್ ತೆಗೆಯಿರಿ:

ಹಂತ 3: ಟೂಲ್ ಮೂಲಕ ಬ್ಲ್ಯಾಕ್ ಹೆಡ್ಸ್ ತೆಗೆಯಿರಿ:

ಸ್ಟೀಮರ್ ಆನ್ ಇರುವಾಗ, ಬ್ಲ್ಯಾಕ್ ಹೆಡ್ ತೆಗೆಯುವ ಉಪಕರಣವನ್ನು ಬಳಸಿ ಬ್ಲ್ಯಾಕ್ ಹೆಡ್ಸ್ ಮತ್ತು ಡೆಡ್ ಸೆಲ್‌ಗಳನ್ನು ತೆಗೆಯಿರಿ. ಈ ಉಪಕರಣವು ಕಪ್ಪು ಕಲೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಬ್ಲಾಕ್ ಹೆಡ್ಸ್ ತೆಗೆದ ನಂತರ, ಅದನ್ನು ಒದ್ದೆಯಾದ ಬಟ್ಟೆಯಿಂದ ಅಥವಾ ಒದ್ದೆಯಾದ ಟಿಸ್ಯು ಪೇಪರ್‌ನಿಂದ ಸ್ವಚ್ಛಗೊಳಿಸಿ.

ಹಂತ 4: ಮಣ್ಣಿನ ಅಥವಾ ಕ್ಲೇ ಫೇಸ್‌ಪ್ಯಾಕ್ ಹಾಕಿ:

ಹಂತ 4: ಮಣ್ಣಿನ ಅಥವಾ ಕ್ಲೇ ಫೇಸ್‌ಪ್ಯಾಕ್ ಹಾಕಿ:

ಒಮ್ಮೆ ನೀವು ಬ್ಲ್ಯಾಕ್ ಹೆಡ್ಸ್ ತೆಗೆದು ಮುಗಿಸಿದ ನಂತರ, ಕ್ಲೆನ್ಸಿಂಗ್ ಕ್ಲೇ ಫೇಸ್‌ಪ್ಯಾಕ್ ಹಾಕಿಕೊಳ್ಳಿ. ಇದನ್ನು ನಿಮ್ಮ ಸಂಪೂರ್ಣ ಮುಖದ ಮೇಲೆ ಅಥವಾ ನಿಮ್ಮ ಮೂಗಿನ ಮೇಲೆ ಹಚ್ಚಿಕೊಳ್ಳಬಹುದು. ಈ ಫೇಸ್ ಪ್ಯಾಕ್ ಮುಖದ ಹೆಚ್ಚುವರಿ ಎಣ್ಣೆಯನ್ನು ಹೊರತೆಗೆದು, ದೈನಂದಿನ ಮಾಲಿನ್ಯಕಾರಕಗಳಿಂದ ರಕ್ಷಿಸುತ್ತದೆ, ಇದರ ಪರಿಣಾಮವಾಗಿ ತ್ವಚೆಯು ಸ್ಪಷ್ಟವಾಗಿ ಕಾಣುತ್ತದೆ. ಇದು ಮೇಲ್ಮೈ ಕಲ್ಮಶಗಳನ್ನು ತೆಗೆಯಲು ಮತ್ತು ಚರ್ಮದ ನೈಸರ್ಗಿಕ ತಡೆ ಕಾರ್ಯವನ್ನು ಬೆಂಬಲಿಸಲು ಕೆಲಸ ಮಾಡುತ್ತದೆ.

ಹಂತ 5: ಮಾಯಿಶ್ಚರೈಸರ್ ಬಳಸಿ ಮುಗಿಸಿ:

ಹಂತ 5: ಮಾಯಿಶ್ಚರೈಸರ್ ಬಳಸಿ ಮುಗಿಸಿ:

ಫೇಸ್‌ಮಾಸ್ಕನ್ನು 10 ನಿಮಿಷಗಳ ಕಾಲ ಬಿಡಿ, ನಂತರ ಉಗುರುಬೆಚ್ಚಗಿನ ನೀರು ಅಥವಾ ಒದ್ದೆಯಾದ ಬಟ್ಟೆಯಿಂದ ತೊಳೆಯಿರಿ. ಎಣ್ಣೆ ರಹಿತ ಮಾಯಿಶ್ಚರೈಸರ್ ಹಚ್ಚುವ ಮೂಲಕ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಮುಗಿಸಿ. ಈಮೂಲಕ ನಿಮ್ಮ ಬ್ಲಾಕ್‌ಹೆಡ್ಸ್‌ಗಳನ್ನು ಸುಲಭವಾಗಿ ಮನೆಯಲ್ಲಿಯೇ ತೆಗೆಯಬಹುದು.

English summary

Nose Clean Up Routine at Home to Get Rid of Blackheads in Kannada

Here we talking about Nose Clean Up Routine at Home to Get Rid of Blackheads in Kannada, read on
Story first published: Friday, September 24, 2021, 17:06 [IST]
X
Desktop Bottom Promotion