For Quick Alerts
ALLOW NOTIFICATIONS  
For Daily Alerts

ಈ ಅಡುಗೆ ಮನೆಯ ಪದಾರ್ಥಗಳನ್ನು ಸನ್ ಸ್ಕ್ರೀನ್ ಆಗಿಯೂ ಬಳಸಬಹುದು!

|

ಸನ್‌ಸ್ಕ್ರೀನ್ ಎನ್ನುವುದು ನಮ್ಮ ಬ್ಯೂಟಿ ಕಾಪಾಡಿಕೊಳ್ಳಲು ಅಗತ್ಯವಾಗಿರುವ ಒಂದು ಪ್ರಮುಖ ಉತ್ಪನ್ನ. ಸೂರ್ಯನ ಹಾನಿಕಾರಕ ಕಿರಣಗಳು ಹಾಗೂ ಮೊಬೈಲ್, ಕಂಪ್ಯೂಟರ್ ನಿಂದ ಹೊರಬರುವ ಕಿರಣಗಳಿಂದ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ, ಪ್ರತೀ ಋತುಮಾನದಲ್ಲೂ ಸನ್ ಸ್ಕ್ರೀನ್ ಬಳಸಬೇಕು.

ಆದರೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಸನ್ ಸ್ಕ್ರೀನ್ ಗಳು ರಾಸಾಯನಿಕಗಳಿಂದ ಕೂಡಿದ್ದು, ಚರ್ಮಕ್ಕೆ ಹಾನಿಮಾಡುತ್ತವೆ. ಆದ್ದರಿಂದ ನೀವು ನೈಸರ್ಗಿಕವಾಗಿ ಸಿಗುವ ಕೆಲವೊಂದು ಪದಾರ್ಥಗಳನ್ನು ಸನ್ ಸ್ಕ್ರೀನ್ ಆಗಿ ಬಳಕೆ ಮಾಡಬಹುದು. ಇದು ಉತ್ತಮ ಫಲಿತಾಂಶ ನೀಡುವುದಲ್ಲದೇ, ತ್ವಚೆಗಾಗುವ ಅಡ್ಡಪರಿಣಾಮಗಳಿಂದ ನಿಮ್ಮನ್ನು ಕಾಪಾಡುತ್ತವೆ. ಹಾಗಾದರೆ ಅತಹ ಪದಾರ್ಥಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ನಿಮ್ಮ ಸಾಮಾನ್ಯ ಸನ್‌ಸ್ಕ್ರೀನ್‌ಗೆ ಕೆಲವು ನೈಸರ್ಗಿಕ, ಪರಿಣಾಮಕಾರಿಯಾದ ನೈಸರ್ಗಿಕ ಪರ್ಯಾಯಗಳನ್ನು ಈ ಕೆಳಗೆ ನೀಡಲಾಗಿದೆ:

1. ತೆಂಗಿನ ಎಣ್ಣೆ

1. ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯು ಸನ್ ಸ್ಕ್ರೀನ್ ಆಗಿ ಕೆಲಸ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ತೆಂಗಿನ ಎಣ್ಣೆ ನಿಮ್ಮ ದೇಹದ ಮೇಲೆ ಬೀಳುವ 20% ಸೂರ್ಯನ ಕಿರಣಗಳನ್ನು ತಡೆಯಬಹುದು. ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇರಲು ಬಯಸಿದರೆ, ತೆಂಗಿನ ಎಣ್ಣೆ ಸಾಕು. ಆದರೆ ಹೆಚ್ಚು ಕಾಲ ಇರಬೇಕಾದರೆ, ಅದನ್ನು ಆಗಾಗ ಹಚ್ಚುತ್ತಿರಬೇಕು. ತೆಂಗಿನ ಎಣ್ಣೆ ನಿಮ್ಮ ಚರ್ಮವನ್ನು ಸೂರ್ಯನ ಹಾನಿಯಿಂದ ತಡೆಯುವುದಲ್ಲದೇ, ತೇವಾಂಶಭರಿತವಾಗಿರಿಸುತ್ತದೆ, ಜೊತೆಗೆ ಉರಿಯೂತವನ್ನು ಕಡಿಮೆ ಮಾಡಿ, ಹೆಚ್ಚು ಕಾಲ ಮೃದುವಾಗಿರಿಸುತ್ತದೆ.

2. ಅಲೋವೆರಾ ಜೆಲ್:

2. ಅಲೋವೆರಾ ಜೆಲ್:

ಸಾಮಾನ್ಯವಾಗಿ, ಅಲೋವೆರಾವನ್ನು ಸೂರ್ಯನ ಬಿಸಿಲಿಗೆ ಹೋಗಿ ಬಂದ ನಂತರ ಚರ್ಮಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಬಿಸಿಲಿನ ಬೇಗೆ, ಉರಿಯೂತ ಮತ್ತು ರೆಡ್ ನೆಸ್ ಕಡಿಮೆ ಮಾಡಲು ಇದು ಪರಿಣಾಮಕಾರಿ ಎಂದು ತಿಳಿದುಬಂದಿದೆ. ಆದರೆ ಇದನ್ನು ಸನ್ ಸ್ಕ್ರೀನ್ ಆಗಿ ಬಳಸಬಹುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಇದು 20% ಸೂರ್ಯನ ಬೆಳಕನ್ನು ತಡೆಯುವ ಮೂಲಕ ಚರ್ಮಕ್ಕೆ ರಕ್ಷಣೆ ನೀಡುತ್ತದೆ, ಆದ್ದರಿಂದ ಆಗಾಗ ಇದನ್ನು ಬಳಸುತ್ತಿರಬೇಕು. ಅಲೋವೆರಾ ಕೇವಲ ಸನ್‌ಸ್ಕ್ರೀನ್‌ನಂತೆ ಅಲ್ಲ, ಚರ್ಮವನ್ನು ತೇವಗೊಳಿಸಿ, ಕಲೆಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.

 3. ಎಳ್ಳೆಣ್ಣೆ:

3. ಎಳ್ಳೆಣ್ಣೆ:

ಸೂರ್ಯನ ಬಿಸಿಲಿಗೆ ಹೋಗುವ ಮುನ್ನ ಎಳ್ಳೆಣ್ಣೆಯ ಲೇಪನವು ನಿಮ್ಮ ಚರ್ಮವನ್ನು ಬಿಸಿಲಿನಿಂದ ತಡೆಯಲು ಸಹಾಯ ಮಾಡುತ್ತದೆ. ಈ ಎಣ್ಣೆ ತ್ವಚೆಯನ್ನು 30% ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ನೀವು ಹೆಚ್ಚು ಹೊತ್ತು ಬಿಸಿಲಿನಲ್ಲಿ ಇರಲು ಬಯಸಿದರೆ ನೀವು ಎಣ್ಣೆಯನ್ನು ಪುನಃ ಹಚ್ಚಬಹುದು. ಎಳ್ಳೆಣ್ಣೆ ಚರ್ಮಕ್ಕೆ ಒಳ್ಳೆಯದು. ಇದು ವಿಟಮಿನ್ ಇ ಅನ್ನು ಹೊಂದಿದ್ದು, ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ಮಾತ್ರವಲ್ಲದೆ ಕಲ್ಮಷ ಮತ್ತು ಕಲುಷಿತ ಗಾಳಿಯಿಂದಲೂ ರಕ್ಷಿಸುತ್ತದೆ.

4. ಶಿಯಾ ಬೆಣ್ಣೆ:

4. ಶಿಯಾ ಬೆಣ್ಣೆ:

ಶಿಯಾ ಬೆಣ್ಣೆಯಲ್ಲಿ ಎಸ್‌ಪಿಎಫ್ ಮಟ್ಟವು ತುಂಬಾ ಕಡಿಮೆಯಾಗಿದ್ದರೂ, ಹೆಚ್ಚು ಕಾಲ ಬಿಸಿಲಿನಲ್ಲಿರಲು ಬಯಸದ ದಿನಗಳಲ್ಲಿ ಇದನ್ನು ಬಳಸಬಹುದು. ಇದು ನಿಮ್ಮ ಚರ್ಮದ ಮೇಲೆ ಬಳಸಲು ಉತ್ತಮವಾದ ಅಂಶವಾಗಿದೆ ಏಕೆಂದರೆ ಇದು ವಿಟಮಿನ್ ಎ ಮತ್ತು ಇ ಯನ್ನ ಹೊಂದಿದ್ದು, ನಿಮ್ಮ ತ್ವಚೆಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಶಿಯಾ ಬೆಣ್ಣೆಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಚರ್ಮದ ಕ್ಯಾನ್ಸರ್ ಅನ್ನು ತಡೆಯುತ್ತದೆ. ಶಿಯಾ ಬೆಣ್ಣೆಯ ದಪ್ಪ ಪದರವನ್ನು ಹಚ್ಚಿಕೊಳ್ಳುವುದರಿಂದ, ನಿಮ್ಮ ಚರ್ಮ ಸುಡುವುದನ್ನು ತಡೆಯಬಹುದು.

5. ಬಾದಾಮಿ ಎಣ್ಣೆ ಮತ್ತು ಆಲಿವ್ ಎಣ್ಣೆ:

5. ಬಾದಾಮಿ ಎಣ್ಣೆ ಮತ್ತು ಆಲಿವ್ ಎಣ್ಣೆ:

ಈ ಎರಡೂ ಎಣ್ಣೆಗಳು ಸಾಮಾನ್ಯವಾಗಿ ನಮ್ಮೆಲ್ಲರ ಅಡುಗೆಮನೆಯಲ್ಲಿ ಕಂಡುಬರುತ್ತವೆ. ಇವುಗಳನ್ನು ಕೇವಲ ತಯಾರಿಕೆಗೆ ಮಾತ್ರವಲ್ಲ, ಚರ್ಮ ಮತ್ತು ಕೂದಲಿಗೂ ಬಳಸಲಾಗುತ್ತದೆ. ಬಾದಾಮಿ ಎಣ್ಣೆ ಮತ್ತು ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಚರ್ಮಕ್ಕೆ ಉತ್ತಮವಾಗಿದೆ. ನಿಮ್ಮ ಸನ್ ಸ್ಕ್ರೀನ್ ತಯಾರಿಸಲು, ಒಂದು ಗಾಜಿನ ಜಾರ್ನಲ್ಲಿ, ಬಾದಾಮಿ ಎಣ್ಣೆ, ಆಲಿವ್ ಎಣ್ಣೆ, ತೆಂಗಿನ ನೀರು, ಜೇನುಮೇಣವನ್ನು ಸೇರಿಸಿ, ಅದನ್ನು ಬಿಸಿ ನೀರಿನಲ್ಲಿ ಇಡಿ. ಮಿಶ್ರಣಕ್ಕೆ ಸತು ಆಕ್ಸೈಡ್ ಸೇರಿಸಿ ಮತ್ತು ಬೆರೆಸಿ. ಮನೆಯಲ್ಲಿ ತಯಾರಿಸಿದ ಸನ್‌ಸ್ಕ್ರೀನ್ ನ್ನು ನಿಮ್ಮ ತ್ವಚೆಗೆ ಹಚ್ಚಿ.

English summary

Natural Sunscreen Alternatives : Natural Ingredients As Your Everyday Sunscreen in Kannada

Here we talking about Natural Sunscreen Alternatives : Natural Ingredients As Your Everyday Sunscreen in Kannada, read on
Story first published: Thursday, September 2, 2021, 12:14 [IST]
X
Desktop Bottom Promotion