For Quick Alerts
ALLOW NOTIFICATIONS  
For Daily Alerts

ಕೊರಿಯನ್ ಸ್ಕಿನ್ ಕೇರ್ ಕುರಿತು ಈ ವಿಚಾರಗಳನ್ನು ನೀವೂ ನಂಬಿದ್ದರೆ ಇಂದೇ ಬಿಟ್ಟುಬಿಡಿ

|

ಸಾಮಾನ್ಯವಾಗಿ ಕೊರಿಯನ್ನರು ತುಂಬಾ ಸೌಂದರ್ಯ ಪ್ರಜ್ಞೆಯುಳ್ಳವರು ಎಂದು ಹೇಳಲಾಗುತ್ತದೆ. ಜಗತ್ತಲ್ಲಿ ಕೊರಿಯನ್ ಬ್ಯೂಟಿ ಟಿಪ್ಸ್ ಗಳೇ ಭಾರೀ ಫೇಮಸ್. ಅವರು ಅನುಸರಿಸುವ ಎಲ್ಲಾ ವಿಧಾನಗಳು ಚರ್ಮ ರಕ್ಷಣೆಯ ವಿಚಾರದಲ್ಲಿ ಅದ್ಭುತವನ್ನೇ ಮಾಡುತ್ತದೆ. ಆದರೆ ಇಂತಹ ಕೊರಿಯನ್ ಸ್ಕಿನ್ ಕೇರ್ ಗೆ ಸಂಬಂಧಿಸಿದಂತೆ ನಮ್ಮಲ್ಲಿ ಕೆಲವು ಸುಳ್ಳು ನಂಬಿಕೆಗಳಿವೆ. ಅವುಗಳನ್ನೇ ನಿಜ ಎಂದುಕೊಂಡ ಕೆಲವರು ಅದನ್ನೇ ಪಾಲಿಸುತ್ತಿದ್ದಾರೆ. ಹಾಗಾದ್ರೆ ಆ ಸುಳ್ಳು ನಂಬಿಕೆಗಳಾವುವು ಎಂಬುದನ್ನು ವಿವರಿಸಲಾಗಿದೆ.

ಕೊರಿಯನ್ ಸ್ಕಿನ್ ಕೇರ್ ಗೆ ಸಂಬಂಧಿಸಿದಂತೆ ಇರುವ ಕೆಲವು ದಂತಕಥೆಗಳು ಈ ಕೆಳಗಿವೆ;

ಕೊರಿಯನ್ ಬ್ಯೂಟಿ ಟಿಪ್ಸ್ ಭಾರತೀಯರ ಚರ್ಮಕ್ಕೆ ಹೊಂದಿಕೊಳ್ಳುವುದಿಲ್ಲ:

ಕೊರಿಯನ್ ಬ್ಯೂಟಿ ಟಿಪ್ಸ್ ಭಾರತೀಯರ ಚರ್ಮಕ್ಕೆ ಹೊಂದಿಕೊಳ್ಳುವುದಿಲ್ಲ:

ಹೌದು, ಇದು ಹೆಚ್ಚು ಜನ ನಂಬಿಕೊಂಡಿರುವ ವಿಚಾರ. ಆದ್ರೆ ಇದು ಸುಳ್ಳು. ಭಾರತೀಯರಿಗೆ ಹೆಚ್ಚು ಕೊರಿಯನ್ ಸ್ಕಿನ್ ಕೇರ್ ನ ದಿನಚರಿ ಅಗತ್ಯವಿದೆ. ಇದರಲ್ಲಿ ಡೀಪ್ ಕ್ಲೆನ್ಸಿಂಗ್ ಒಳಗೊಂಡಿರುವುದರಿಂದ ನಮ್ಮ ತ್ವಚೆಯಲ್ಲರುವ ಎಲ್ಲಾ ಕೊಳಕು ಮತ್ತು ಧೂಳನ್ನು ತೆಗೆದುಹಾಕುತ್ತದೆ. ಅಲ್ಲದೆ, ಡಲ್ ಸ್ಕಿನ್ ನ್ನು ಪುನಶ್ಚೇತನಗೊಳಿಸಲು ಮತ್ತು ಹೈಡ್ರೇಟ್ ಮಾಡಲು ಹೈಡ್ರೇಶನ್ ಮಾಸ್ಕ್ ಅಗತ್ಯವಿದೆ.

ವಯಸ್ಸಾಗುವಿಕೆ ವಿರೋಧಿ ಚಿಕಿತ್ಸೆಗಳನ್ನು ವಯಸ್ಸಾದ ನಂತರ ಪ್ರಾರಂಭಿಸಬೇಕು:

ವಯಸ್ಸಾಗುವಿಕೆ ವಿರೋಧಿ ಚಿಕಿತ್ಸೆಗಳನ್ನು ವಯಸ್ಸಾದ ನಂತರ ಪ್ರಾರಂಭಿಸಬೇಕು:

ಇದು ಕೂಡ ನೀವು ನಂಬಿರುವ ಸುಳ್ಳು ಕಥೆ. ಏಕೆಂದರೆ ಕೊರಿಯನ್ ಮಹಿಳೆಯರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ವಯಸ್ಸಾಗುವಿಕೆ ವಿರೋಧಿ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ಅದೇ ಕಾರಣಕ್ಕಾಗಿಯೇ ಅವರು ವಯಸ್ಸಾದ ಮೇಲೂ ದೋಷರಹಿತ ಚರ್ಮವನ್ನು ಹೊಂದಿರುತ್ತಾರೆ. ಆದರೆ ಇದನ್ನು ನಂಬಿ ವಯಸ್ಸಾದ ಮೇಲೆ ಈ ಚಿಕಿತ್ಸೆಗಳನ್ನು ಆರಂಭಿಸಿದವರೂ ಇದ್ದಾರೆ. ಆದ್ದರಿಂದ ನೀವು ಆಂಟಿ ಆಜಿಂಗ್ ಕ್ರೀಮ್ಗಳು ಮತ್ತು ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸಿದರೆ, ಅದು ನಿಮ್ಮ ಚರ್ಮಕ್ಕೆ ಬೇಗ ವಯಸ್ಸಾಗುವುದನ್ನು ತಡೆಯುತ್ತದೆ.

ಫೇಶಿಯಲ್ ಎಣ್ಣೆಗಳು ಎಣ್ಣೆಯುಕ್ತ ಚರ್ಮಕ್ಕೆ ಆಗುವುದಿಲ್ಲ:

ಫೇಶಿಯಲ್ ಎಣ್ಣೆಗಳು ಎಣ್ಣೆಯುಕ್ತ ಚರ್ಮಕ್ಕೆ ಆಗುವುದಿಲ್ಲ:

ಬಹಳಷ್ಟು ಜನರು ನಿಜವೆಂದು ಭಾವಿಸುವ ಮತ್ತೊಂದು ದಂತಕಥೆ ಇದು. ಫೇಶಿಯಲ್ ಆಯಿಲ್ ನ್ನು ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಸಹ ಬಳಸಬಹುದು. ಕಾಮೆಡೋಜೆನಿಕ್ ಅಂಶವಿಲ್ಲದ ಎಣ್ಣೆಗಳಾದ ಗ್ರೇಪ್ಸೀಡ್, ಸೂರ್ಯಕಾಂತಿ ಫೇಶಿಯಲ್ ಎಣ್ಣೆಯು ಎಣ್ಣೆಯುಕ್ತ ಚರ್ಮಕ್ಕೆ ತುಂಬಾ ಒಳ್ಳೆಯದು.

ಕೊರಿಯನ್ ಸೌಂದರ್ಯ ಉತ್ಪನ್ನಗಳು ಪುರುಷರು ಮತ್ತು ಮಹಿಳೆಯರಿಗೆ ವಿಭಿನ್ನವಾಗಿರುತ್ತವೆ:

ಕೊರಿಯನ್ ಸೌಂದರ್ಯ ಉತ್ಪನ್ನಗಳು ಪುರುಷರು ಮತ್ತು ಮಹಿಳೆಯರಿಗೆ ವಿಭಿನ್ನವಾಗಿರುತ್ತವೆ:

ಪುರುಷರು ಮತ್ತು ಮಹಿಳೆಯರು ಇಬ್ಬರೂ ವಿಭಿನ್ನ ರೀತಿಯ ಚರ್ಮದ ಪ್ರಕಾರಗಳನ್ನು ಹೊಂದಿದ್ದರೂ, ಮಹಿಳೆಯರು ಬಳಸುವ ಸೌಂದರ್ಯ ಉತ್ಪನ್ನಗಳಿಂದ ಪುರುಷರು ಪ್ರಯೋಜನ ಪಡೆಯುವುದಿಲ್ಲ ಎಂಬುದು ಸುಳ್ಳು. ಮಹಿಳೆಯರ ಸೌಂದರ್ಯ ಉತ್ಪನ್ನಗಳಿಂದ ಪುರುಷರೂ ಪ್ರಯೋಜನ ಪಡೆಯಬಹುದು.

ಡಬಲ್ ಕ್ಲೆನ್ಸಿಂಗ್ ನ್ನು ಸಂಜೆ ಮಾತ್ರ ಮಾಡಬೇಕು:

ಡಬಲ್ ಕ್ಲೆನ್ಸಿಂಗ್ ನ್ನು ಸಂಜೆ ಮಾತ್ರ ಮಾಡಬೇಕು:

ಇದು ನಿಜವಲ್ಲ. ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ನೀವು ಡಬಲ್ ಕ್ಲೆನ್ಸಿಂಗ್ ಮಾಡಬೇಕು. ಬೆಳಗ್ಗೆ ಎದ್ದ ನಂತರ ಡಬಲ್ ಕ್ಲೆನ್ಸಿಂಗ್ ಮಾಡುವುದರಿಂದ ಸಂಜೆ ಉಳಿದ ಹೆಚ್ಚುವರಿ ಉತ್ಪನ್ನವನ್ನು ತೆಗೆದುಹಾಕಬಹುದು. ಆದ್ದರಿಂದ ದಿನಕ್ಕೆ ಎರಡು ಬಾರಿ ಡಬಲ್ ಕ್ಲೆನ್ಸಿಂಗ್ ಮಾಡುವುದು ಸೂಕ್ತವೆಂಬುದು ಕೊರಿಯನ್ನರ ಅಭಿಪ್ರಾಯವಾಗಿದೆ.

English summary

Myths About Korean Skin Care Routine Debunked in Kannada

Here we talking about Myths about Korean skin care routine debunked in kannada,read on
Story first published: Thursday, May 20, 2021, 17:30 [IST]
X
Desktop Bottom Promotion