For Quick Alerts
ALLOW NOTIFICATIONS  
For Daily Alerts

ರಾತ್ರಿ ಮಲಗುವ ಮುನ್ನ ಎಂದಿಗೂ ಇಂಥಾ ತ್ವಚೆ ಕಾಳಜಿಯ ತಪ್ಪುಗಳನ್ನು ಮಾಡಲೇಬೇಡಿ

|

ಸೌಂದರ್ಯದ ಕಾಳಜಿ ಎಂದರೆ ಕೇವಲ ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸುವುದಲ್ಲ, ಮನೆಮದ್ದುಗಳ ಮೂಲಕ ನಿತ್ಯ ತ್ವಚೆಯನ್ನು ಕಾಳಜಿ ಮಾಡುವುದಷ್ಟೇ ಅಲ್ಲ ಹಗಲಿನಷ್ಟೇ ಇರಳು ಸಹ ಕಾಳಜಿ ಮಾಡುವುದು ಅತೀ ಮುಖ್ಯ.

Mistakes Youre Making During Your Nighttime Beauty Routine

ಆದರೆ, ಇರುಳಿನಲ್ಲಿ ಬಹುತೇಕ ಬಾರಿ ತ್ವಚೆಯ ಆರೈಕೆ ಮಾಡುವುದರಲ್ಲಿ ನಾವು ಎಡವುತ್ತೀವಿ. ಬೆಳಗಿನಿಂದ ಸಾಕಷ್ಟು ಕ್ರೀಂಗಳನ್ನು ಅನ್ವಯಿಸಿ, ಹೊರಗಡೆ ಎಲ್ಲಾ ಸುತ್ತಾಡಿ, ಧೂಳಿನ ನಡುವೆ ಓಡಾಡಿ ಸಂಜೆ ಮನೆಗೆ ಬಂದ ನಂತರ ತ್ವಚೆಯನ್ನು ಅಗತ್ಯವಾಗಿ ಕಾಳಜಿ ಮಾಡದೇ ಇದ್ದರೆ ಖಂಡಿತ ನಿಮ್ಮ ತ್ವಚೆ ದೀರ್ಘ ಕಾಲದಲ್ಲಿ ಸಾಕಷ್ಟು ಹಾನಿಗೆ ಒಳಗಾಗುವ ಸಾಧ್ಯತೆ ಇದೆ.

ಆದ್ದರಿಂದ ರಾತ್ರಿ ಮಲಗುವ ಮುನ್ನ ನಿಮ್ಮ ತ್ವಚೆಯ ಕಾಳಜಿ ಬಗ್ಗೆ ಮಾಡುವ ಪ್ರಮುಖ ತಪ್ಪುಗಳು ಯಾವುದು, ಹೇಗೆ ಕಾಳಜಿ ಮಾಡಬೇಕು, ಯಾವುದನ್ನು ತಪ್ಪದೇ ಮಾಡಲೇಬೇಕು ಎಂಬುದನ್ನು ಇಲ್ಲಿ ನಿಮಗೆ ಹೇಳಲಿದ್ದೇವೆ:

1. ಮೇಕಪ್ ತೆಗೆಯದೇ ಮಲಗುವುದು

1. ಮೇಕಪ್ ತೆಗೆಯದೇ ಮಲಗುವುದು

ನಿಮಗೂ ಗೊತ್ತದೆ ಮೇಕಪ್‌ ತೆಗೆದೇ ಮಲಗಬೇಕು ಎಂಬುದು, ಆದರೆ ನಿಮ್ಮ ನಿರ್ಲಕ್ಷ್ಯ ಅಥವಾ ಸೋಮಾರಿನತದಿಂದ ಮೇಕಪ್‌ ತೆಗೆಯದೇ ಮಲಗುತ್ತೀರಿ ಎನ್ನುವುದಾದರೆ ಇದು ತ್ವಚೆಗೆ ಭಾರೀ ಹಾನಿಕರ. ಅದರ ಪರಿಣಾಮಗಳನ್ನು ನಾವೇ ಎದುರಿಸುತ್ತೇವೆ. ರಾತ್ರಿಯಡೀ ಮೇಕಪ್‌ ತ್ವಚೆಯಲ್ಲೇ ಉಳಿಯುವುದರಿಂದ ಇದು ರಂಧ್ರಗಳನ್ನು ಮುಚ್ಚಿ ಚರ್ಮದ ಮೇಲೆ ಸ್ವತಂತ್ರ ರಾಡಿಕಲ್ ಗಳನ್ನು ಬಿಡುತ್ತದೆ, ಇದು ಮೊಡವೆಗಳಿಗೆ ಕಾರಣವಾಗಬಹುದು, ಬಣ್ಣ ಕಪ್ಪಾಗಬಹುದು ಮತ್ತು ಚರ್ಮ ವಯಸ್ಸಾದಂತೆ ಮಾಡುತ್ತದೆ. ನಿಮಗೆ ಸಂಪೂರ್ಣವಾಗಿ ಮುಖ ತೊಳೆಯಲು ಸಾಧ್ಯವಾಗದಿದ್ದರು, ಕನಿಷ್ಠ ಮೇಕಪ್ ಹೋಗಲಾಡಿಸುವಂಥ ವೆಟ್‌ ಟಿಶ್ಯು ಮೂಲಕ ತ್ವಚೆಯನ್ನು ಒರೆಸಿ.

2. ದಿನದ ಮಾಯಿಶ್ಚರೈಸರ್ ಇರಳಲ್ಲು ಬಳಸುವುದು ತಪ್ಪು

2. ದಿನದ ಮಾಯಿಶ್ಚರೈಸರ್ ಇರಳಲ್ಲು ಬಳಸುವುದು ತಪ್ಪು

ಹಗಲಿನಲ್ಲಿ ನಾವು ಬಳಸುವ ಬಹುತೇಕ ಮಾಯಿಶ್ಚರೈಸರ್‌ಗಳಲ್ಲಿ ಸನ್‌ಸ್ಕ್ರೀನ್ ಅನ್ನು ಒಳಗೊಂಡಿರುತ್ತವೆ, ಇದು ಹಗಲಿಗೆಅತ್ಯಗತ್ಯವಿದ್ದರೂ ರಾತ್ರಿಯ ಸಮಯದಲ್ಲಿ ಅಗತ್ಯವಿಲ್ಲ. ಹಾಗೂ ಬಳಸಿದ್ದೇ ಅದರೆ ಅತಿಯಾದ ನೀವು ಸೂರ್ಯನ ಬೆಳಕಿನಲ್ಲಿಲ್ಲದ ಕಾರಣ ತ್ವಚೆಗೆ ಇದು ಅತಿಯಾದ ರಾಸಾಯನಿಕ ಎನಿಸಬಹುದು, ಇದು ನಕಾರಾತ್ಮಕ ಪರಿಣಾಮ ಸಹ ಬೀರಬಹುದು. ನಿಮ್ಮ ತ್ವಚೆ ಎಷ್ಟು ಕಡಿಮೆ ಪುನಃಸ್ಥಾಪನೆ ಕೆಲಸವನ್ನು ಮಾಡುತ್ತದೆಯೋ ಅಷ್ಟು ತ್ವಚೆಗೆ ಉತ್ತಮ.

3. ಪ್ರತಿ ರಾತ್ರಿ ಬಾಯಿ ಸ್ವಚ್ಛಗೊಳಿಸುವುದು

3. ಪ್ರತಿ ರಾತ್ರಿ ಬಾಯಿ ಸ್ವಚ್ಛಗೊಳಿಸುವುದು

ನೀವು ನಿತ್ಯ ಮಲಗುವ ಮುನ್ನ ಬಾಯಿ ಮುಕ್ಕಳಿದೇ ಮಲಗುವುದಾದರೆ ಇದು ಹಲ್ಲಿನ ಆರೋಗ್ಯ ಮಾತ್ರವಲ್ಲ, ಚರ್ಮವನ್ನು ಸಹ ಹಾಳು ಮಾಡುತ್ತದೆ ನೆನಪಿರಲಿ. ಬಾಯಿ ಸ್ವಚ್ಛವಿಲ್ಲದಿದ್ದರೆ ಕೆಟ್ಟ ಉಸಿರಾಟ ಮತ್ತು ಒಸಡು ಕಾಯಿಲೆಗೆ ಕಾರಣವಾಗಬಹುದು, ಜತೆಗೆ ತ್ವಚೆಯು ಬೇಗ ವಯಸ್ಸಾದಂತೆ ಕಾಣುವಂತೆಯೂ ಮಾಡುತ್ತದೆ ಎಂದರೆ ನೀವು ಅಚ್ಚರಿಪಡಬೇಕಿಲ್ಲ.

4. ಕೂದಲು ಕಟ್ಟುವುದು

4. ಕೂದಲು ಕಟ್ಟುವುದು

ನಿಮಗೆ ರಾತ್ರಿ ಮಲಗುವಾಗ ಕೂದಲು ಕಟ್ಟುವ ಅಭ್ಯಾಸ ಇಲ್ಲ ಹಾಗೂ ನಿಮ್ಮ ಮುಖದಲ್ಲಿ ಮೊಡವೆಗಳಿದೆ ಎಂದರೆ ಖಂಡಿತವಾಗಿಯೂ ನೀವು ನಿತ್ಯ ಈ ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದರ್ಥ. ಏನೆಂದರೆ: ನಿತ್ಯ ಮಲಗುವ ಮುನ್ನ ನಿಮ್ಮ ಕೂದಲುಗಳನ್ನು ಕಟ್ಟಿ ಮಲಗಬೇಕು ಇಲ್ಲವಾದಲ್ಲಿ ಮಲಗಿದ್ದಾಗ ಕೂದಲು ಮುಖದ ಮೇಲೆ ಬರುವುದರಿಂದ ಅದರ ಎಣ್ಣೆ, ಜಿಡ್ಡಿನ ಅಂಶದಿಂದ ಮುಖದಲ್ಲಿ ಮೊಡವೆ ಹೆಚ್ಚಾಗುತ್ತದೆ ತಿಳಿದಿರಲಿ.

5. ಮಸಾಜ್‌

5. ಮಸಾಜ್‌

ತ್ವಚೆಯ ಕಾಳಜಿಗೆ ಮುಖ್ಯವಾದ ಅಂಶ ಇದು. ನಿತ್ಯ ರಾತ್ರಿ ಮಲಗುವ ಮುನ್ನ ಮುಖಕ್ಕೆ ನಯವಾಗಿ ಮಸಾಜ್‌ ಮಾಡಿ, ಇದಕ್ಕಾಗಿ ಹೆಚ್ಚೇನು ಸಮಯ ಬೇಕಿಲ್ಲ. ದಿನಕ್ಕೆ ಮೂರು ನಿಮಿಷ ನಾಲ್ಕು ನಿಮಿಷ ಮಸಾಜ್‌ ಮಾಡಿ. ಕಣ್ಣಿಗೆ ಹೆಚ್ಚಿನ ಒತ್ತಡ ಇಡುವುದರಿಂದ ಈ ವೇಳೆ ನಿಮ್ಮ ಕಣ್ಣಿನ ಸುತ್ತಲೂ ಮಸಾಜ್‌ ಮಾಡುವುದನ್ನು ಮರೆಯಬೇಡಿ.

6. ಅತಿಯಾದ ಎಫ್ಫೋಲಿಯೇಟಿಂಗ್, ಸ್ಕ್ರಬ್‌

6. ಅತಿಯಾದ ಎಫ್ಫೋಲಿಯೇಟಿಂಗ್, ಸ್ಕ್ರಬ್‌

ನಿಮ್ಮ ಮುಖ ಹೊಳೆಯಲು, ಸತ್ತ ಜೀವಕೋಶಗಳನ್ನು ತೊಡೆದುಹಾಕಲು ಸ್ಕ್ರಬ್ ಅಥವಾ ಗ್ಲೈಕೋಲಿಕ್ ಪೀಲ್‌ ಅನ್ನು ಬಳಸುವುದು ಸಾಮಾನ್ಯ, ಆದರೆ ಯಾವುದೇ ಅತಿಯಾಗಬಾರದು. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಿದರೆ ಸಾಕು. ವಿಶೇಷವಾಗಿ ನಿಮ್ಮ 30 ಹರೆಯದಲ್ಲಿ ನಿಮ್ಮ ಚರ್ಮವು ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ, ಆದ್ದರಿಂದ ಸ್ಕ್ರಬ್ ‌ಗಳು ಆ ಕ್ಷಣಕ್ಕೆ ತ್ವಚೆಯನ್ನು ಹೊಳೆಯುವಂತೆ ಮಾಡಬಹುದು, ಆದರೆ ದೀರ್ಘಕಾಲದಲ್ಲಿ ತ್ವಚೆಯ ಕೋಶಗಳನ್ನು ಹದಗೆಡಿಸಬಹುದು ಎಚ್ಚರ.

English summary

Mistakes You're Making During Your Nighttime Beauty Routine

Here we are discussing about Mistakes You're Making During Your Nighttime Beauty Routine. But there are a few small things you could be doing that are keeping you from being a literal sleeping beauty. Read more.
X
Desktop Bottom Promotion