For Quick Alerts
ALLOW NOTIFICATIONS  
For Daily Alerts

ಮುಖಕ್ಕೆ ಸ್ಟೀಮ್ ತೆಗೆದುಕೊಳ್ಳುವಾಗ ಈ ತಪ್ಪುಗಳನ್ನ ಮಾಡದಿರಿ

|

ಮುಖವನ್ನು ರಿಫ್ರೆಶ್ ಮಾಡಲು ಮತ್ತು ತ್ವಚೆಯ ಸಮಸ್ಯೆಗಳನ್ನು ತೆಗೆದುಹಾಕಲು ಚರ್ಮದ ಆರೈಕೆಯ ದಿನಚರಿಯಲ್ಲಿ ಸ್ಟೀಮ್ ಚಿಕಿತ್ಸೆ ಸೇರಿಸುವುದು ಬಹಳ ಮುಖ್ಯ. ವಾರಕ್ಕೆ ಎರಡು ಬಾರಿಯಾದರೂ ಹಬೆಯನ್ನು ತೆಗೆದುಕೊಳ್ಳುವುದರಿಂದ ಮುಖದ ಕೊಳೆಯನ್ನು ಸ್ವಚ್ಛಗೊಳಿಸಬಹುದು, ಇದರಿಂದ ಮೊಡವೆ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಜೊತೆಗೆ ಸ್ಟೀಮ್ ತೆಗೆದುಕೊಳ್ಳುವುದರಿಂದ ಹಲವಾರು ಪ್ರಯೋಜನಗಳಿವೆ, ಆದರೆ ಕೆಲವರು ಸ್ಟೀಮ್ ತೆಗೆದುಕೊಳ್ಳುವಾಗ ಕೆಲವು ತಪ್ಪುಗಳ ನ್ನು ಮಾಡುತ್ತಾರೆ. ಇದು ಚರ್ಮಕ್ಕೆ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾದರೆ, ಆ ತಪ್ಪುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಮುಖಕ್ಕೆ ಹಬೆ ತೆಗೆದುಕೊಳ್ಳುವಾಗ ಮಾಡುವ ತಪ್ಪುಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮುಖ ತೊಳೆಯದಿರುವುದು:

ಮುಖ ತೊಳೆಯದಿರುವುದು:

ಕೆಲವರು ಸ್ಟೀಮ್ ತೆಗೆದುಕೊಳ್ಳುವ ಮೊದಲು ಮುಖ ತೊಳೆಯುವುದಿಲ್ಲ. ಇದರಿಂದ ತ್ವಚೆಯ ಮೇಲಿರುವ ಧೂಳು, ಕೊಳೆ ಮುಖದ ಮೇಲೆ ಸಂಗ್ರಹವಾಗಿ ಮೊಡವೆಗಳ ಸಮಸ್ಯೆ ಶುರುವಾಗುತ್ತದೆ. ಆದ್ದರಿಂದ ಸ್ಟೀಮ್ ಅಥವಾ ಹಬೆ ತೆಗೆದುಕೊಳ್ಳುವ ಕ್ಲೆನ್ಸರ್ ಬಳಸಿ ಮೊದಲು ಮುಖ ತೊಳೆಯುವುದು ತುಂಬಾ ಮುಖ್ಯ. ಇದರಿಂದ ಮುಖದಲ್ಲಿರುವ ಮೇಕಪ್, ಧೂಳು ತೆಗೆಯಬಹುದು. ಇಲ್ಲವಾದಲ್ಲಿ ಹಬೆ ಕೊಟ್ಟಾಗ, ಅವು ಚರ್ಮದೊಳಗೆ ಸೇರಿಕೊಂಡು, ಹಲವಾರು ಸಮಸ್ಯೆಗಳಿಗೆ ಕಾರಣವಾಗುವುದು.

ಸ್ಟೀಮರ್ ತುಂಬಾ ಹತ್ತಿರ ಇಡುವುದು:

ಸ್ಟೀಮರ್ ತುಂಬಾ ಹತ್ತಿರ ಇಡುವುದು:

ಹಬೆಯನ್ನು ತೆಗೆದುಕೊಳ್ಳುವಾಗ, ಸ್ಟೀಮರ್ ಅನ್ನು ಬಾಯಿಯಿಂದ ಸ್ವಲ್ಪ ದೂರದಲ್ಲಿ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ ಏಕೆಂದರೆ ಸ್ಟೀಮರ್ ಅನ್ನು ಮುಖದ ಹತ್ತಿರ ಇಡುವುದರಿಂದ ಚರ್ಮದ ಮೇಲೆ ಶಾಖ ಹೆಚ್ಚಾಗಿ ಸುಡುವ ಅಪಾಯವಿರುತ್ತದೆ. ತಜ್ಞರ ಪ್ರಕಾರ, ಮುಖದಿಂದ 20ಸೆ.ಮಿ ದೂರದಲ್ಲಿ ನೀರು ಇರಬೇಕು. ಹಾಗೆಯೇ, ಕುದಿಯುತ್ತಿರುವ ನೀರಿಗೆ ಮುಖ ಕೊಡಬೇಡಿ. ನೀರು ಕುದಿಸಿ, ಅದನ್ನು ಸ್ಟವ್‌ನಿಂದ ಇಳಿಸಿ, ತದನಂತರ ಸ್ಟೀಮ್ ತೆಗೆದುಕೊಳ್ಳಿ.

ಸ್ಟೀಮರ್ ಸ್ವಚ್ಛಗೊಳಿಸುವುದು:

ಸ್ಟೀಮರ್ ಸ್ವಚ್ಛಗೊಳಿಸುವುದು:

ಸ್ಟೀಮರ್ ಬಳಸುವ ಮೊದಲು ಅದನ್ನು ಪ್ರತಿ ಬಾರಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಸ್ಟೀಮರ್ ಅನ್ನು ನೀರಿನಿಂದ ಸ್ವಚ್ಛಗೊಳಿಸಿದ ನಂತರ, ಅದರೊಳಗೆ ಫ್ರೆಶ್ ನೀರು ತುಂಬಿಸಿ, ಸ್ಟೀಮ್ ತೆಗೆದುಕೊಳ್ಳಿ. ಏಕೆಂದರೆ, ಕಲುಷಿತ ಸ್ಟೀಮ್ ತ್ವಚೆಯನ್ನು ಮತ್ತಷ್ಟು ಹಾಳು ಮಾಡಬಹುದು.

ಸ್ವಲ್ಪ ಹೊತ್ತು ಹೊರಗೆ ಹೋಗಬೇಡಿ:

ಸ್ವಲ್ಪ ಹೊತ್ತು ಹೊರಗೆ ಹೋಗಬೇಡಿ:

ಚಳಿಗಾಲದಲ್ಲಿ ಸ್ಟೀಮ್ ತೆಗೆದುಕೊಳ್ಳದೇ ಇರುವುದು ಉತ್ತಮ. ಒಂದು ವೇಳೆ ತೆಗೆದುಕೊಂಡರೂ, ತಕ್ಷಣವೇ ಹೊರಗಿರುವ ಚಳಿಗೆ ಹೋಗಬೇಡಿ. ಇದರಿಂದ ತ್ವಚೆ ಹಾಳಾಗುವ ಸಾಧ್ಯತೆ ಇದೆ. ಆದ್ದರಿಂದ ಸ್ಟೀಮ್ ತೆಗೆದುಕೊಂಡು ಸ್ವಲ್ಪ ಸಮಯ ಬಿಟ್ಟು, ತದನಂತರ ಹೊರಗೆ ಹೋಗಿ.

ಮಾಯಿಶ್ವರೈಸ್ ಮಾಡಿ:

ಮಾಯಿಶ್ವರೈಸ್ ಮಾಡಿ:

ಸ್ಟೀಮ್ ತೆಗೆದುಕೊಂಡ ನಂತರ ಅಲೋವೆರಾ ಜೆಲ್ ಅನ್ನು ಹಚ್ಚಲು ಮರೆಯಬೇಡಿ. ಏಕೆಂದರೆ, ಹಬೆ ತೆಗೆದುಕೊಂಡ ನಂತರ ಚರ್ಮವು ತುಂಬಾ ಒಣಗುತ್ತದೆ. ಆದ್ದರಿಂದ ನೀವು ಅಲೋವೆರಾ ಜೆಲ್ ಅಥವಾ ಯಾವುದೇ ಲೈಟ್ ಕ್ರೀಮ್ ಹಚ್ಚಿ, ಮುಖವನ್ನು ಮಸಾಜ್ ಮಾಡಬೇಕು.

English summary

Mistakes to Avoid while Taking Facial Steam on Face in Kannada

Here we talking about Mistakes to avoid while taking facial steam on face in kannada, read on
Story first published: Saturday, October 23, 2021, 16:03 [IST]
X
Desktop Bottom Promotion