For Quick Alerts
ALLOW NOTIFICATIONS  
For Daily Alerts

ಈ 10 ಆಹಾರಗಳನ್ನು ತಿಂದರೆ ಮೊಡವೆ ಸಮಸ್ಯೆ ಮತ್ತಷ್ಟು ಹೆಚ್ಚುವುದು

|

ನೀವು ತ್ವಚೆಯ ಬಗ್ಗೆ ತುಂಬಾ ಕೇರ್ ಮಾಡುವಿರಿ, ಯಾವುದೇ ರಾಸಾಯನಿಕವಿರುವ ಮೇಕಪ್ ಹಚ್ಚುವುದಿಲ್ಲ, ಲೈಟ್ ಮೇಕಪ್ ಹಾಕಿದರೂ ಅದನ್ನು ಮಲಗುವ ಮುನ್ನ ತೊಳೆದು ತೆಗೆಯುತ್ತೀರಿ, ವಾರಕ್ಕೊಮ್ಮೆ ಎಕ್ಸ್‌ಫೋಲೆಟ್ ಮಾಡುತ್ತೀರಿ, ಮುಖದಲ್ಲಿ ಎಣ್ಣೆಯಂಶ ಕೂಡಲು ಬಿಡುವುದಿಲ್ಲ. ಇಷ್ಟೆಲ್ಲಾ ಮಾಡಿದರೂ ಏಕೆ ಮೊಡವೆ ಬರುತ್ತಿದೆ ಎಂಬ ಚಿಂತೆ ಕಾಡುತ್ತಿದೆಯೇ? ಹಾಗಾದರೆ ನೀವು ಸೇವಿಸುವ ಆಹಾರಗಳು ನಿಮ್ಮ ಮೊಡವೆ ಸಮಸ್ಯೆಗೆ ಕಾರಣವಾಗಿರಬಹುದು ನೋಡಿ.

List Of Foods Making Your Acne Even Worse

ಹದಿಹರೆಯದ ಸಮಯದಲ್ಲಿ ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಮೊಡವೆ ಸಮಸ್ಯೆ ಬರುವುದು ಸಹಜ. ಆದರೆ ಈ ಸಮಸ್ಯೆ ಅಧಿಕವಾಗಲು ಕಾರಣ ಕೆಲವೊಂದು ಆಹಾರಗಳಾಗಿವೆ. ನಿಮಗೆ ಮೊಡವೆ ಸಮಸ್ಯೆಯಿದ್ದರೆ ತ್ವಚೆ ಆರೈಕೆಗೆ ಗಮನ ನೀಡುವುದರ ಜೊತೆಗೆ ಈ ಆಹಾರಗಳನ್ನು ಸೇವಿಸದಿದ್ದರೆ ಮೊಡವೆ ಕಡಿಮೆಯಾಗುವುದು.

ಮೊಡವೆ ಸಮಸ್ಯೆ ಹೆಚ್ಚು ಮಾಡುವ ಆಹಾರಗಳಾವುವು ಎಂದು ನೋಡೋಣ:

ಕೆನೆ ತೆಗೆದ ಹಾಲು

ಕೆನೆ ತೆಗೆದ ಹಾಲು

ಕಡಿಮೆ ಕೊಬ್ಬಿನಂಶವಿರುವ ಹಾಲು ಆರೋಗ್ಯಕರ ಡಯಟ್‌ನ ಒಂದು ಭಾಗವಾಗಿದೆ. ತೂಕ ನಿಯಂತ್ರಣಕ್ಕೆ ಹಾಗೂ ಜೀರ್ಣಕ್ರಿಯೆ ಕೊಬ್ಬಿನಂಶ ಕಡಿಮೆ ಇರುವ ಹಾಲು ಒಳ್ಳೆಯದೆಂದು ಹೇಳಲಾಗುತ್ತದೆ. ಆದರೆ ಮೊಡವೆ ಸಮಸ್ಯೆ ಹೆಚ್ಚಾಗಲು ಹಾಲು ಒಂದು ಕಾರಣವೆಂದು 2006ರಲ್ಲಿ ನಡೆಸಿದ ಅಧ್ಯಯನ ಹೇಳಿದೆ.

ಹಾಲು ಕುಡಿದಾಗ ದೇಹದ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ, ದೇಹದಲ್ಲಿ ಇನ್ಸುಲಿನ್ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಿ ಇದರಿಂದ ದೇಹದಲ್ಲಿ ಎಣ್ಣೆಯಂಶ ಉತ್ಪತ್ತಿ ಅಧಿಕವಾಗಿ ಮೊಡವೆ ಸಮಸ್ಯೆ ಹೆಚ್ಚಾಗುವುದು.

ಸೋಡಾ

ಸೋಡಾ

ಸೋಡಾ ಮೊಡವೆ ಸಮಸ್ಯೆ ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದಲ್ಲ. ಇದರಲ್ಲಿರುವ ಕೃತಕ ಸಿಹಿಯಂಶ ಮೊಡವೆ ಸಮಸ್ಯೆ ಹೆಚ್ಚು ಮಾಡುವುದು, ಅಲ್ಲದೆ ಸೋಡಾ ಬಳಸುವುದರಿಂದ ಮೈ ತೂಕ ಕೂಡ ಹೆಚ್ಚುವುದು. ಮೊಡವೆ ಸಮಸ್ಯೆ ಕಡಿಮೆಯಾಗಬೇಕೆಂದು ಬಯಸುವುದಾದರೆ ಇಂಥ ಆಹಾರಗಳಿಂದ ದೂರವಿರಿ ಹಾಗೂ ಸಕ್ಕರೆ ಅಥವಾ ಸಿಹಿ ಪದಾರ್ಥ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ.

ಪಿಜ್ಜಾ

ಪಿಜ್ಜಾ

ಪಿಜ್ಜಾ ನೋಡಿದ ತಕ್ಷಣ ಬಾಯಲ್ಲಿ ನೀರೂರುವುದು. ಆದರೆ ನಿಮಗೆ ಮೊಡವೆ ಸಮಸ್ಯೆಯಿದ್ದರೆ ಪಿಜ್ಜಾ ರುಚಿ ನೋಡದಿರುವುದೇ ಒಳ್ಳೆಯದು. ಪಿಜ್ಜಾ ತಿಂದಾಗ ಗಮನಿಸಿ ನೋಡಿ ಮಾರನೇಯ ದಿನ ನಿಮ್ಮ ಮುಖದಲ್ಲಿ ಮೊಡವೆ ಹೆಚ್ಚಾಗಿರುತ್ತದೆ. ಆದ್ದರಿಂದ ಸ್ವಚ್ಛವಾದ ತ್ವಚೆಗಾಗಿ ಪಿಜ್ಜಾ ತಿನ್ನದಿರುವುದೇ ಒಳ್ಳೆಯದು.

 ಮೊಟ್ಟೆಯ ಬಿಳಿ

ಮೊಟ್ಟೆಯ ಬಿಳಿ

ನೀವು ಬರೀ ಮೊಟ್ಟೆಯ ಬಿಳಿ ಮಾತ್ರ ತಿನ್ನುವುದಾದರೆ ನಿಮ್ಮ ತ್ವಚೆಗೆ ಒಳ್ಳೆಯದಲ್ಲ ನೋಡಿ, ಇದು ನಿಮ್ಮ ಮೊಡವೆ ಸಮಸ್ಯೆ ಮತ್ತಷ್ಟು ಹೆಚ್ಚು ಮಾಡುತ್ತದೆ. ಮೊಟ್ಟೆಯ ಹಳದಿ ಒಳ್ಳೆಯದಲ್ಲ ಎನ್ನುವುದು ತಪ್ಪು ಕಲ್ಪನೆ. ನೀವು ಮೊಟ್ಟೆ ತಿನ್ನುವುದಾದರೆ ಇಡೀ ಮೊಟ್ಟೆ ತಿನ್ನುವುದು ಆರೋಗ್ಯಕರ. ಅಲ್ಲದೆ ಮೊಟ್ಟೆಯ ಹಳದಿಯಲ್ಲಿ ತ್ವಚೆ ಆರೋಗ್ಯ ಹೆಚ್ಚಿಸುವ ಬಯೋಟಿನ್ ವಿಟಮಿನ್ಸ್ ಇದೆ. ಮೊಟ್ಟೆಯ ಹಳದಿ ಮೊಡವೆ ಕಡಿಮೆ ಮಾಡುವುದರ ಜೊತೆಗೆ ಮುಖ ಡ್ರೈಯಾಗುವುದನ್ನು ತಪ್ಪಿಸುತ್ತದೆ.

 ಮಯೋನೈಸ್

ಮಯೋನೈಸ್

ಹೇಗೆ ಹಾಲು ಹಾರ್ಮೋನ್‌ಗಳ ಬದಲಾವಣೆಗೆ ಕಾರಣವಾಗುತ್ತದೆಯೋ ಅದೇ ರೀತಿ ಮಯೋನೈಸ್ ಕೂಡ ಮೊಡವೆ ಸಮಸ್ಯೆ ಹೆಚ್ಚು ಮಾಡುವುದು. ಮಯೋನೈಸ್ ಎಣ್ಣೆ ತ್ವಚೆ ಸಮಸ್ಯೆ ಹೆಚ್ಚು ಮಾಡುವುದು. ಅದರಲ್ಲೂ ಸೋಯಾ ಇರುವ ಮಯೋನೈಸ್ ಮೊಡವೆ ಸಮಸ್ಯೆ ಮತ್ತಷ್ಟು ಹೆಚ್ಚು ಮಾಡುವುದು. ಆದ್ದರಿಂದ ಮಯೋನೈಸ್ ಬಳಸುವ ಮುನ್ನ ಅದರಲ್ಲಿ ಸೋಯಾ ಅಂಶ ಇದೆಯೇ ಎಂದು ಗಮನಿಸಿ.

ಬಿಳಿ ಬ್ರೆಡ್

ಬಿಳಿ ಬ್ರೆಡ್

ಓಟ್‌ ಮೀಲ್ಸ್, ಪಾಸ್ತಾ, ಬ್ರೆಡ್ ಇವುಗಳು ಮೊಡವೆ ಸಮಸ್ಯೆಯನ್ನು ಹೆಚ್ಚು ಮಾಡುವುದು. ಇನ್ನು ತೂಕ ಇಳಿಕೆಗೆ ಅಂತ ಸಿಗುವ ವಸ್ತುಗಳು ತ್ವಚೆ ಆರೋಗ್ಯ ಹಾಳು ಮಾಡುವುದು. ವೈಟ್ ಬ್ರೆಡ್ ದೇಹದಲ್ಲಿ ಸಕ್ಕರೆಯಂಶ ಹೆಚ್ಚು ಮಾಡುವುದು. ಅಧಿಕ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರಕ್ಕಿಂತ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ ಒಳ್ಳೆಯದು.

ಫಾಸ್ಟ್ ಫುಡ್ಸ್

ಫಾಸ್ಟ್ ಫುಡ್ಸ್

ಫಾಸ್ಟ್‌ ಫುಡ್ಸ್ ಬಾಯಿಗೆ ರುಚಿ ಅನಿಸಿದರೂ ಯಾವುದೇ ರೀತಿಯಲ್ಲೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮೈ ತೂಕ ಹೆಚ್ಚಿಸುವುದು, ತ್ವಚೆ ಆರೋಗ್ಯ ಹಾಳು ಮಾಡುವುದು ಹಾಗೂ ತ್ವಚೆಯಲ್ಲಿ ಎಣ್ಣೆಯಂಶ ಹೆಚ್ಚಿಸಿ ಮೊಡವೆ ಹೆಚ್ಚಾಗುವಂತೆ ಮಾಡುವುದು. ಸೌಂದರ್ಯ ಹಾಗೂ ಆರೋಗ್ಯದ ದೃಷ್ಟಿಯಿಂದ ಫಾಸ್ಟ್ ಫುಡ್ಸ್ ದೂರವಿಡಿ.

ಅತ್ಯಧಿಕ ಮಾಂಸಾಹಾರ ಸೇವನೆ

ಅತ್ಯಧಿಕ ಮಾಂಸಾಹಾರ ಸೇವನೆ

ನೀವು ನಾನ್‌ವೆಜ್ ಪ್ರಿಯರಾಗಿದ್ದು ಮೊಡವೆ ಸಮಸ್ಯೆಯಿದ್ದರೆ ಸುಂದರ ತ್ವಚೆಗಾಗಿ ನಿಮ್ಮ ಬಾಯಿ ರುಚಿಗೆ ಕಡಿವಾಣ ಹಾಕುವುದು ಒಳ್ಳೆಯದು. ಅಧಿಕ ಮಾಂಸಾಹಾರ ಸೇವನೆಯಿಂದ ಮೊಡವೆ ಸಮಸ್ಯೆ ಹೆಚ್ಚುವುದು. ಅದರಲ್ಲೂ ಚಿಕನ್ ಮೊಡವೆ ಮತ್ತಷ್ಟು ಹೆಚ್ಚು ಮಾಡುವುದು. ಆಹಾರದಲ್ಲಿ ನಾರಿನಂಶ ಅಧಿಕವಿರುವ ಆಹಾರ ಸೇವನೆ ಮಾಡಿ ಹಾಗೂ ಸಾಕಷ್ಟು ನೀರು ಕುಡಿಯಿರಿ.

ಮದ್ಯ

ಮದ್ಯ

ಮದ್ಯಪಾನ ಮಾಡಿದರೆ ದೇಹದಲ್ಲಿ ಸತುವಿನಂಶ ಹೀರಿಕೊಳ್ಳುವುದು ಕಡಿಮೆಯಾಗುತ್ತದೆ, ಅತ್ಯಧಿಕ ಮದ್ಯ ಸೇವನೆಯಿಂದ ಸತುವಿನ ಕೊರತೆ ಉಂಟಾಗುವುದು. ದೇಹದಲ್ಲಿ ಸತುವಿನಂಶ ಕಡಿಮೆಯಾದರೂ ಮೊಡವೆ ಸಮಸ್ಯೆ ಉಂಟಾಗುವುದು. ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿಗೆ ಹಾಗೂ ತ್ವಚೆ ಬಿಗಿಯಾಗಿರಲು ಸತುವಿನಂಶ ಅವಶ್ಯಕ.

 ಎನರ್ಜಿ ಡ್ರಿಂಕ್ಸ್

ಎನರ್ಜಿ ಡ್ರಿಂಕ್ಸ್

ಇನ್ನು ಎನರ್ಜಿ ಲಿಂಕ್ಸ್ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಲ್ಲಿ ಅತ್ಯಧಿಕ ಸಕ್ಕರೆಯಂಶ ಹಾಗೂ ತ್ವಚೆಗೆ ಕಿರಿಕಿರಿ ಮಾಡುವ ವಿಟಮಿನ್ ಬಿ ಇದ್ದು ಮೊಡವೆ ಸಮಸ್ಯೆ ಹೆಚ್ಚುವುದು. ರೆಡ್‌ ಬುಲ್‌ನಂಥ ಎನರ್ಜಿ ಡ್ರಿಂಕ್ಸ್ ಕುಡಿಯುವುದರಿಂದ ಮೊಡವೆ ಸಮಸ್ಯೆ ಹೆಚ್ಚುವುದು.

English summary

List Of Foods Making Your Acne Even Worse

Here are list of foods making your acne even worse, read on,
X
Desktop Bottom Promotion