For Quick Alerts
ALLOW NOTIFICATIONS  
For Daily Alerts

ಮುಖದಲ್ಲಿರುವ ಕಪ್ಪುಕಲೆಗಳಿಗೆ ಈ ಅಡುಗೆಮನೆ ಪದಾರ್ಥಗಳಿಂದ ಮುಕ್ತಿ ನೀಡಬಹುದು

|

ಕ್ಲೀನ್ ಹಾಗೂ ಕ್ಲಿಯರ್ ತ್ವಚೆ ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರ ಆಸೆಯೇ ಇದು. ಆದರೆ, ಒತ್ತಡ, ಅನಾರೋಗ್ಯಕರ ಜೀವನಶೈಲಿ ಮೊದಲಾದ ಕಾರಣಗಳಿಂದ ತ್ವಚೆ ಮೇಲೆ ಪಿಗ್ಮೆಂಟೇಶನ್, ಕಪ್ಪು ಕಲೆ ಹಾಗೂ ಡಾರ್ಕ್ ಸರ್ಕಲ್ ತುಂಬರುತ್ತವೆ. ಇದನ್ನು ಹೋಗಲಾಡಿಸಲು ನಾನಾ ಕಸರತ್ತು ನಡೆಸಿದರೂ ಯಾವುದೇ ಫಲ ನೀಡಿರುವುದಿಲ್ಲ.

ಆದ್ರೆ, ಅಡುಗೆಮನೆಯಲ್ಲಿ ಸಿಗುವ ಈ ವಸ್ತುಗಳಿಂದ ನಿಮ್ಮ ತ್ವಚೆ ಸಮಸ್ಯೆಗಳಿಗೆ ಮುಕ್ತಿ ನೀಡಬಹುದು. ಆದರೆ ಇದಕ್ಕೆ ತಾಳ್ಮೆ ಬಹಳ ಮುಖ್ಯ. ಈ ನೈಸರ್ಗಿಕ ಪದಾರ್ಥಗಳು ಬದಲಾವಣೆ ಮಾಡಲು ಸಮಯ ತೆಗೆದುಕೊಳ್ಳುತ್ತವೆ. ಆದ್ದರಿಂದ ಫಲಿತಾಂಶಕ್ಕಾಗಿ ಕಾಯುವುದು ತುಂಬಾ ಮುಖ್ಯ. ಹಾಗಾದರೆ ಆ ವಸ್ತುಗಳಾವುವು ನೋಡೋಣ ಬನ್ನಿ.

ತ್ವಚೆ ಸಮಸ್ಯೆಗಳಿಗೆ ಪರಿಹಾರ ನೀಡುವ ಅಡುಗೆಮನೆಯ ವಸ್ತುಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಲೋಳೆಸರ:

ಲೋಳೆಸರ:

ಸೌಂದರ್ಯ ಮತ್ತು ತ್ವಚೆಯ ಆರೈಕೆಯ ವಿಚಾರದಲ್ಲಿ ಅಲೋವೆರಾ ಒಂದು ರತ್ನವಾಗಿದೆ. ಹೊಳೆಯುವ ಮತ್ತು ಆರೋಗ್ಯಕರ ಚರ್ಮದ ಜೊತೆಗೆ, ಇದು ಕಲೆಗಳು ಮತ್ತು ಪಿಗ್ಮಂಟೇಶನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಅಲೋವೆರಾದಲ್ಲಿ ಅಲೋಯಿನ್ ಮತ್ತು ಅಲೋಸಿನ್ ಇವೆ. ನಿಮ್ಮ ಕಪ್ಪುಕಲೆ ಅಥವಾ ಪಿಗ್ಮೇಂಟೇಶನ್ ಮೇಲೆ ಫ್ರೆಶ್ ಅಲೋವೆರಾ ಜೆಲ್‌ನ್ನು ಹಚ್ಚಿ, ಮಸಾಜ್ ಮಾಡಿ. ಇದು ನಿಮಗೆ ಖಂಡಿತ ಪರಿಹಾರ ನೀಡುವುದು.

ಅರಿಶಿನ:

ಅರಿಶಿನ:

ಅರಿಶಿನವು ಭಾರತೀಯರ ಸೌಂದರ್ಯ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದು, ಅನೇಕ ತಲೆಮಾರುಗಳಿಂದಲೂ ಬಳಕೆ ಮಾಡಲಾಗುತ್ತಿದೆ. ಅರಿಶಿನವನ್ನು ಮದುವೆಯ ಮುಂಚಿನ ಆಚರಣೆಯಾಗಿ ಹಚ್ಚುವುದರಿಂದ ಹಿಡಿದು, ಫೇಸ್ ಮಾಸ್ಕ್ ಬಳಸುವವರೆಗೆ, ಅರಿಶಿನ ಸಹಕಾರಿ. ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಮುಖಕ್ಕೆ ಹೊಳಪು ನೀಡುವ ವಸ್ತುವಾಗಿದೆ. ಕಾಂತಿಯುತ ಮೈಬಣ್ಣಕ್ಕಾಗಿ ಮಂದತೆ ಮತ್ತು ಕಲೆಯನ್ನು ಕಡಿಮೆಮಾಡಲು ಅರಿಶಿನ, ಶ್ರೀಗಂಧದ ಪುಡಿ, ಕಡಲೆಹಿಟ್ಟು, ಜೇನುತುಪ್ಪ ಮತ್ತು ಮೊಸರನ್ನು ಸೇರಿಸಿ, ಫೇಸ್ ಮಾಸ್ಕ್‌ ತಯಾರಿಸಿ, ಬಳಸಿ.

ಕಾಫಿ:

ಕಾಫಿ:

ಕಾಫಿ, ಎಕ್ಸ್‌ಫೋಲಿಯೇಶನ್‌ಗೆ ಉತ್ತಮವಾಗಿದ್ದು, ಇತರ ಹಲವು ಪ್ರಯೋಜನಗಳನ್ನು ಹೊಂದಿದೆ. ಉತ್ಕರ್ಷಣ ನಿರೋಧಕಗಳು ಮತ್ತು ಕೆಫೀನ್ ತುಂಬಿರುವ ಕಾಫಿ ಚರ್ಮವನ್ನು ಸ್ಪಷ್ಟಮಾಡುತ್ತದೆ. ಇದರರ್ಥ ಇದು ಪಿಗ್ಮೆಂಟೇಶನ್ ಮತ್ತು ಡಾರ್ಕ್ ಪ್ಯಾಚ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕಣ್ಣಿನಡಿ ಬರುವ ಡಾರ್ಕ್ ಸರ್ಕಲ್ ನಿವಾರಣೆಗೂ ಕಾಫಿ ಸಹಕಾರಿ.

ಮೊಸರು:

ಮೊಸರು:

ನಿಮ್ಮ ತ್ವಚೆ ಹಠಾತ್ ಸೂರ್ಯನ ಅತಿಯಾದ ಪ್ರಭಾವದಿಂದಾಗಿ, ಬರ್ನ್ ಆಗಿದ್ದರೆ, ಅದನ್ನು ಕಡಿಮೆ ಮಾಡಲು ಡೈರಿ ಆಧಾರಿತ ಮೊಸರನ್ನು ಬಳಸಿ. ಹಾಲು ಆಧಾರಿತ ಮೊಸರುಗಳು ಲ್ಯಾಕ್ಟಿಕ್ ಆಮ್ಲದಿಂದ ತುಂಬಿದ್ದು, ಇದು ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆಗಳ ಗೋಚರತೆಯನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ತಣ್ಣನೆಯ ಮೊಸರನ್ನು ನೇರವಾಗಿ ಮುಖಕ್ಕೆ ಹಚ್ಚಿ ಮತ್ತು 15 ರಿಂದ 20 ನಿಮಿಷಗಳ ಕಾಲ ಬಿಡಿ, ನಂತರ ನೀವು ಅದನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

English summary

Kitchen Ingredients That Help With Pigmentation And Dark Spots in kannada

Here we talking about Kitchen Ingredients That Help With Pigmentation And Dark Spots in kannada, read on
Story first published: Saturday, October 16, 2021, 16:41 [IST]
X
Desktop Bottom Promotion