For Quick Alerts
ALLOW NOTIFICATIONS  
For Daily Alerts

ನೀವು ಬಳಸುತ್ತಿರುವ ಮಾಯಿಶ್ಚರೈಸರ್ ಕ್ಲೀನ್ ಆಗಿದೆಯೇ? ತಿಳಿಯುವುದು ಹೇಗೆ?

|

ಕೆಲವರಿಗೆ ತುಂಬಾನೇ ಡ್ರೈ ಸ್ಕಿನ್ ಇರುತ್ತದೆ, ಅವರಿಗೆ ವರ್ಷ ಪೂರ್ತಿ ಮಾಯಿಶ್ಚರೈಸರ್‌ ಬೇಕಾಗುತ್ತದೆ, ಇನ್ನು ಚಳಿಗಾಲದಲ್ಲಿ ಡ್ರೈ ಸ್ಕಿನ್‌ನ ಸಮಸ್ಯೆ ತುಂಬಾನೇ ಹೆಚ್ಚಾಗುವುದು. ಇದನ್ನು ತಡೆಗಟ್ಟಲು ಮಾಯಿಶ್ಚರೈಸರ್ ಹಚ್ಚಲೇಬೇಕು.

moisturizer

ಅದರಲ್ಲೂ ನೀವು ಸರಿಯಾದ ಮಾಯಿಶ್ಚರೈಸರ್ ಆಯ್ಕೆ ಮಾಡಿದ್ದೇ ಆದರೆ ತ್ವಚೆಯ ಆರೈಕೆಯನ್ನು ಅದು ಮಾಡುತ್ತದೆ. ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್‌ನ, ಹಲವು ಬಗೆಯ ಮಾಯಿಶ್ಚರೈಸರ್‌ಗಳು ದೊರೆಯುತ್ತದೆ. ಆದರೆ ನಾವು ಆಯ್ಕೆ ಮಾಡಿರುವ ಮಾಯಿಶ್ಚರೈಸರ್‌ ಕ್ಲೀನ್ ಆಗಿದೆಯೇ ಎಂದು ತಿಳಿದುಕೊಂಡರೆ ನಮ್ಮ ತ್ವಚೆಯನ್ನು ನಾವು ನಾವು ಮತ್ತಷ್ಟು ಚೆನ್ನಾಗಿ ಪೋಷಣೆ ಮಾಡಬಹುದು.

ಹಾಗಾದರೆ ನೀವು ಬಳಸುವ ಮಾಯಿಶ್ಚರೈಸರ್ ಕ್ಲೀನ್ ಆಗಿದೆಯೇ, ಇಲ್ಲವೇ ಎಂದು ತಿಳಿಯುವುದು ಹೇಗೆ ಎಂದು ನೋಡೋಣ ಬನ್ನಿ:

 ಮಾಯಿಶ್ಚರೈಸರ್‌ ಕ್ಲೀನ್ ಆಗಿಲ್ಲ ಎಂದು ತಿಳಿಯುವುದು ಹೇಗೆ?

ಮಾಯಿಶ್ಚರೈಸರ್‌ ಕ್ಲೀನ್ ಆಗಿಲ್ಲ ಎಂದು ತಿಳಿಯುವುದು ಹೇಗೆ?

ನಿಮ್ಮ ಮಾಯಿಶ್ಚರೈಸರ್‌ ಕ್ಲೀನ್ ಆಗಿದೆಯೇ, ಇಲ್ಲವೇ ಎಂದು ತಿಳಿಯಲು ನೀವು ಸ್ವಲ್ಪ ಹೆಚ್ಚು ಕ್ರೀಮ್‌ ಅನ್ನು ಮೈಗೆ ಹಚ್ಚಿದಾಗ ತ್ವಚೆ ನೈಸರ್ಗಿಕವಾಗಿ, ಆಕರ್ಷಕವಾಗಿ ಕಂಡರೆ ಅದು ಕ್ಲೀನ್‌ ಮಾಯಿಶ್ಚರೈಸರ್, ಇಲ್ಲದಿದ್ದರೆ ಎಣ್ಣೆ-ಎಣ್ಣೆಯಾಗಿ ಅನಿಸಿದರೆ ಅದು ಕ್ಲೀನ್ ಮಾಯಿಶ್ಚರೈಸರ್‌ ಅಲ್ಲ.

 ಕ್ಲೀನ್‌ ಮಾಯಿಶ್ಚರೈಸರ್ ಎಂದರೆ ಅದರಲ್ಲಿ ಯಾವೆಲ್ಲಾ ಅಂಶ ಇರಬಾರದು?

ಕ್ಲೀನ್‌ ಮಾಯಿಶ್ಚರೈಸರ್ ಎಂದರೆ ಅದರಲ್ಲಿ ಯಾವೆಲ್ಲಾ ಅಂಶ ಇರಬಾರದು?

ಮಾಯಿಶ್ಚರೈಸರ್‌ನಲ್ಲಿ ಸಲ್ಫೇಟ್‌, ಪಾರಾಬೆನ್ಸ್, ಥಾಲೇಟ್‌ಗಳು, ಸಂಶ್ಲೇಷಿತ ಸುಗಂಧ, ಡೈ ಇಂಥ ಅಂಶಗಳು ಇರಬಾರದು. ಕೆಲವರು ಸಿಲಿಕೋನ್ಸ್ ಬಳಸುತ್ತಾರೆ, ಅದು ಅಳತೆಯ ಪ್ರಮಾಣದಲ್ಲಿ ಇದ್ದರೆ ತೊಂದರೆಯಿಲ್ಲ.

ಮಾಯಿಶ್ಚರೈಸರ್‌ನಲ್ಲಿ ಯಾವೆಲ್ಲಾ ಅಂಶಗಳಿದ್ದರೆ ಒಳ್ಳೆಯದು?

ಮಾಯಿಶ್ಚರೈಸರ್‌ನಲ್ಲಿ ಯಾವೆಲ್ಲಾ ಅಂಶಗಳಿದ್ದರೆ ಒಳ್ಳೆಯದು?

* ವೈಟ್‌ ಪೆಟ್ರೋಲಿಯಂ: ಇದು ತ್ವಚೆಗೆ ರಕ್ಷಣೆಯನ್ನು ಒದಗಿಸುವುದು.

* ಹೈಯಲುರೋನಿಕ್ ಆಮ್ಲ: ತ್ವಚೆಯಲ್ಲಿ ನೀರಿನಂಶ ಇರುವಂತೆ ಮಾಡಿ ಒಣಗುವುದನ್ನು ತಡೆಗಟ್ಟುತ್ತೆ.

* ಗ್ಲಿಸರಿನ್ : ಬಿರುಕನ್ನು ಮುಚ್ಚುತ್ತೆ ಹಾಗೂ ತ್ವಚೆಯನ್ನು ಮೃದುವಾಗಿಸುತ್ತೆ.

 ಮಾಯಿಶ್ಚರೈಸರ್ ಕೊಳ್ಳುವಾಗ ನೀವುಗಮನಿಸಬೇಕಾದ ಅಂಶಗಳೇನು?

ಮಾಯಿಶ್ಚರೈಸರ್ ಕೊಳ್ಳುವಾಗ ನೀವುಗಮನಿಸಬೇಕಾದ ಅಂಶಗಳೇನು?

* ತುಂಬಾ ಸುಗಂಧವಾಸನೆ ಇರುವ ಮಾಯಿಶ್ಚರೈಸರ್ ಒಳ್ಳೆಯದಲ್ಲ.

*ನಿಮ್ಮ ತ್ವಚೆಗೆ ಹೊಂದುವ ಮಾಯಿಶ್ಚರೈಸರ್ ಬಳಸಿ , ಅಂದ್ರೆ ನಿಮ್ಮದು ಆಯಿಲ್ ಸ್ಕಿನ್ (ಎಣ್ಣೆ ತ್ವಚೆ) ಆಗಿದ್ದರೆ ಡ್ರೈ ತ್ವಚೆಗೆ ಇರುವ ಮಾಯಿಶ್ಚರೈಸರ್ ಬಳಸಿದರೆ ತ್ವಚೆ ಮತ್ತಷ್ಟು ಎಣ್ಣೆ-ಎಣ್ಣೆಯಾಗುವುದು. ಅದೇ ರೀತಿ ಡ್ರೈ ತ್ವಚೆಯವರು ಎಣ್ಣೆಯಂಶವಿರುವ ಮಾಯಿಶ್ಚರೈಸರ್ ಆಯ್ಕೆ ಮಾಡಬೇಕು.

ಇನ್ನು ಮಾಯಿಶ್ಚರೈಸರ್ ಕೊಳ್ಳಲು ಹೋಗುವಾಗ ಬ್ರ್ಯಾಂಡ್‌ ಬಗ್ಗೆ ತಲೆಕೆಡಿಸಿಕೊಳ್ಳದೆ ಇಂಥ ಅಂಶಗಳನ್ನು ಗಮನಿಸಿದರೆ ನೀವು ನಿಮ್ಮ ತ್ವಚೆ ಪರ್ಫೆಕ್ಟ್ ಆದ ಮಾಯಿಶ್ಚರೈಸರ್ ಆಯ್ಕೆ ಮಾಡಬಹುದು.

English summary

Is Your Moisturizer Clean? This Is How You Can Check in kannada

Is your moisturizer clean? This Is how you can check in kannada, read on...
Story first published: Friday, December 10, 2021, 19:47 [IST]
X
Desktop Bottom Promotion