For Quick Alerts
ALLOW NOTIFICATIONS  
For Daily Alerts

ಈ ಹಣ್ಣುಗಳ ಸಿಪ್ಪೆಯನ್ನು ಎಸೆಯುವ ಬದಲು, ಮುಖದ ಕಾಂತಿಗಾಗಿ ಬಳಸಿಕೊಳ್ಳಬಹುದು!

|

ಇದುವರೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಣ್ಣುಗಳನ್ನು ಸೇವಿಸಬೇಕು ಎಂಬ ಸಲಹೆಯನ್ನು ನೀವು ಕೇಳಿರಬೇಕು, ಆದರೆ ಉತ್ತಮ ತ್ವಚೆಯನ್ನು ಪಡೆಯಲು ಹಣ್ಣುಗಳ ಸಿಪ್ಪೆ ಬಳಸಬೇಕು ಎಂಬುದನ್ನು ಕೇಳಿದ್ದೀರಾ? ಹೌದು, ಹಣ್ಣು ಸೇವನೆಯ ನಂತರ ಸಿಪ್ಪೆಗಳನ್ನು ಎಸೆಯುವ ಬದಲು, ಆ ಕಸದಿಂದ ರಸವನ್ನು ಮಾಡುವುದು ಹೇಗೆ? ಆ ರಸ ನಿಮ್ಮ ಮುಖದ ಮೇಲೆ ಹೇಗೆ ಮ್ಯಾಜಿಕ್ ಮಾಡುತ್ತೆ? ಎಲ್ಲವನ್ನೂ ಈ ಲೇಖನದಲ್ಲಿ ವಿವರಿಸಿದ್ದೇವೆ.

ಹೊಳೆಯುವ ಮುಖವನ್ನು ಪಡೆಯಲು ಹಣ್ಣಿನ ಸಿಪ್ಪೆಗಳನ್ನು ಹೇಗೆ ಬಳಸುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಪಪ್ಪಾಯಿ ಸಿಪ್ಪೆ:

ಪಪ್ಪಾಯಿ ಸಿಪ್ಪೆ:

ಮುಖದ ಶುಷ್ಕತೆಯನ್ನು ತೆಗೆದುಹಾಕುವ ಮೂಲಕ ಚರ್ಮದ ಹೊಳಪನ್ನು ಹೆಚ್ಚಿಸಲು ಇದು ಕೆಲಸ ಮಾಡುತ್ತದೆ. ಇದಕ್ಕಾಗಿ, ಪಪ್ಪಾಯಿಯ ಸಿಪ್ಪೆಯನ್ನು ಒಣಗಿಸಿ ಮತ್ತು ಪುಡಿ ಮಾಡಲು ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಟೀ ಚಮಚ ಗ್ಲಿಸರಿನ್ ಅನ್ನು ಎರಡು ಟೀ ಚಮಚ ಪುಡಿಯಲ್ಲಿ ಬೆರೆಸಿ ದಪ್ಪ ಪೇಸ್ಟ್ ಮಾಡಿ, ಫೇಸ್ ಪ್ಯಾಕ್ ನಂತೆ ಮುಖಕ್ಕೆ ಹಚ್ಚಿ. ಪ್ಯಾಕ್ ಒಣಗಿದ ಮೇಲೆ ನಿಮ್ಮ ಮುಖವನ್ನು ತೊಳೆಯಿರಿ. ಮುಖದ ಟ್ಯಾನಿಂಗ್ ತೆಗೆದುಹಾಕಲು, ಪಪ್ಪಾಯಿ ಸಿಪ್ಪೆಯನ್ನು ಪುಡಿಮಾಡಿ ಮತ್ತು ಅದರಲ್ಲಿ ನಿಂಬೆ ರಸವನ್ನು ಬೆರೆಸಿ ಬಳಸಿ.

ಕಿತ್ತಳೆ ಸಿಪ್ಪೆ:

ಕಿತ್ತಳೆ ಸಿಪ್ಪೆ:

ಮುಖದ ಮೇಲೆ ಕಲೆ, ಗುಳ್ಳೆಗಳನ್ನು ಕಡಿಮೆ ಮಾಡಲು ಕಿತ್ತಳೆ ಸಿಪ್ಪೆಯು ಸಹಾಯ ಮಾಡುತ್ತದೆ. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಪುಡಿಮಾಡಿ, ಉತ್ತಮವಾದ ಪೇಸ್ಟ್ ಮಾಡಿ. ಈಗ ಈ ಪೇಸ್ಟ್‌ಗೆ 2 ಟೀ ಚಮಚ ಹಸಿ ಹಾಲು ಮತ್ತು ಎರಡು ಚಿಟಿಕೆ ಅರಿಶಿನ ಮಿಶ್ರಣ ಮಾಡಿ. ಫೇಸ್ ಪ್ಯಾಕ್‌ನಂತೆ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಪ್ಯಾಕ್ ಒಣಗಿದ ಮೇಲೆ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

ನಿಂಬೆ ಸಿಪ್ಪೆ:

ನಿಂಬೆ ಸಿಪ್ಪೆ:

ಮುಖದ ಮೇಲಿನ ಟ್ಯಾನಿಂಗ್ ತೆಗೆದುಹಾಕಲು, ನಿಂಬೆ ಸಿಪ್ಪೆ ಸಹಕಾರಿ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಮೊಡವೆಯ ಮೇಲೂ ಪರಿಣಾಮ ಬೀರುತ್ತದೆ. ಇದಕ್ಕಾಗಿ ನೀವು ನಿಂಬೆ ಸಿಪ್ಪೆಯನ್ನು ಒಣಗಿಸಿ, ಪುಡಿಮಾಡಿ ಪೇಸ್ಟ್ ಮಾಡಿ. ಮುಖದ ಮೇಲೆ ಫೇಸ್ ಪ್ಯಾಕ್ ಆಗಿ ಬಳಸಿ. ಇದನ್ನು ನಿರಂತರವಾಗಿ ಮಾಡುತ್ತಿದ್ದರೆ, ಟ್ಯಾನಿಂಗ್ ದೂರವಾಗುತ್ತದೆ.

ಬಾಳೆಹಣ್ಣಿನ ಸಿಪ್ಪೆ:

ಬಾಳೆಹಣ್ಣಿನ ಸಿಪ್ಪೆ:

ಟ್ಯಾನಿಂಗ್ ತೊಡೆದುಹಾಕಲು, ನೀವು ಬಾಳೆಹಣ್ಣಿನ ಸಿಪ್ಪೆಯ ಒಳಗಿನ ಬಿಳಿ ಭಾಗವನ್ನು ಮುಖದ ಮೇಲೆ ಹಾಕಿ, ಮೆಲ್ಲನೇ ಕೈಗಳಿಂದ ಇಪ್ಪತ್ತು ನಿಮಿಷಗಳ ಕಾಲ ಉಜ್ಜಬೇಕು. ಇದರ ನಂತರ ಮುಖವನ್ನು ತೊಳೆಯಿರಿ. ಇದನ್ನು ಮಾಡುವುದರಿಂದ ಟ್ಯಾನಿಂಗ್ ದೂರವಾಗುವುದಲ್ಲದೇ, ಮುಖದ ಹೊಳಪು ಹೆಚ್ಚಾಗುತ್ತದೆ.

ಮಾವಿನ ಸಿಪ್ಪೆ:

ಮಾವಿನ ಸಿಪ್ಪೆ:

ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು, ಮಾವಿನ ಸಿಪ್ಪೆಯನ್ನು ಪುಡಿಮಾಡಿ ಮುಖಕ್ಕೆ ಹಚ್ಚಿ. ಇದು ಗುಳ್ಳೆಗಳನ್ನು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಮಾವಿನ ಸಿಪ್ಪೆಯನ್ನು ಒಣಗಿಸಿ ಪುಡಿಯನ್ನಾಗಿ ಮಾಡಿ ರೋಸ್ ವಾಟರ್, ಗೋಧಿ ಹಿಟ್ಟಿನೊಂದಿಗೆ ಬೆರೆಸಿ ಮುಖದ ಮೇಲೆ ಪೇಸ್ಟ್ ಆಗಿ ಬಳಸಿ.

English summary

How You Can Use Fruit Peels for Fair Skin in Kannada

Here we talking about How you can use fruit peels for fair skin in kannada, read on
Story first published: Monday, May 3, 2021, 11:44 [IST]
X
Desktop Bottom Promotion