For Quick Alerts
ALLOW NOTIFICATIONS  
For Daily Alerts

ತ್ವಚೆಯ ಎಲ್ಲಾ ಸಮಸ್ಯೆಗೆ ಕರಿಬೇವು ಒಂದೇ ಮದ್ದು

|

ಕರಿಬೇವಿನ ಎಲೆಗಳು ನಮ್ಮ ಅಡುಗೆಮನೆಗೆ ಹೊಸದೇನಲ್ಲ. ಇದನ್ನು ವರ್ಷಗಳಿಂದ ವಿವಿಧ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತಿದೆ, ಆದರೆ ಆಹಾರದಲ್ಲಿ ಸುವಾಸನೆಗಾಗಿ ಬಳಸುವ ಈ ಎಲೆಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಇದು ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಆರೋಗ್ಯಕರ-ಸುಂದರ ಚರ್ಮಕ್ಕಾಗಿ ಅವುಗಳನ್ನು ವಿವಿಧ ರೂಪದಲ್ಲಿ ಬಳಸಬಹುದು. ಅದು ಹೇಗೆ ಎಂಬುದನ್ನು ನೋಡೋಣ.

ಕರಿಬೇವಿನ ಎಲೆಗಳು ತ್ವಚೆಗೆ ಹೇಗೆ ಸಹಕಾರಿ ಎಂಬದನ್ನು ಈ ಕೆಳಗೆ ನೀಡಲಾಗಿದೆ:

1. ಕರಿಬೇವು ಹಾಗೂ ನಿಂಬೆ:

1. ಕರಿಬೇವು ಹಾಗೂ ನಿಂಬೆ:

ನಿಂಬೆ ಹಣ್ಣಿನಲ್ಲಿ ವಿಟಮಿನ್ ' ಸಿ ' ಅಂಶವಿದ್ದು ಆಂಟಿ - ಆಕ್ಸಿಡೆಂಟ್ ಗುಣ ಲಕ್ಷಣಗಳಿವೆ. ಕರಿಬೇವಿನ ಎಲೆಗಳು ನಿಂಬೆ ಹಣ್ಣಿನ ಮಿಶ್ರಣದ ಫೇಸ್ ಪ್ಯಾಕ್ ನಿಮ್ಮ ಮುಖದ ಚರ್ಮವನ್ನು ಹೊಳೆಯುವಂತೆ ಮಾಡಿ ಮುಖದ ಮೇಲಿನ ಕಲೆಗಳನ್ನು ನಿವಾರಣೆ ಮಾಡಿ ಮೊಡವೆಗಳನ್ನು ದೂರ ಮಾಡುತ್ತದೆ. ಇದಕ್ಕಾಗಿ 4-5 ಕರಿಬೇವಿನ ಎಲೆಗಳನ್ನು ರುಬ್ಬುವ ಮೂಲಕ ಪೇಸ್ಟ್ ಮಾಡಿ. ಈ ಪೇಸ್ಟ್‌ಗೆ ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಮೊಡವೆ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ.

2 . ಕರಿಬೇವು-ರೋಸ್‌ವಾಟರ್:

2 . ಕರಿಬೇವು-ರೋಸ್‌ವಾಟರ್:

ಈ ಫೇಸ್ ಪ್ಯಾಕ್‌ನ ಉಪಯೋಗದಿಂದ ನಿಮ್ಮ ಮುಖದ ಚರ್ಮ ಮೊಡವೆಗಳಿಂದ ಮುಕ್ತವಾಗಿ, ಹೊಳೆಯಲು ಪ್ರಾರಂಭವಾಗುತ್ತದೆ. ರೋಸ್ ವಾಟರ್ ನಿಮ್ಮ ಚರ್ಮದ ಪಿಹೆಚ್ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇದಕ್ಕಾಗಿ ಎರಡು ಮೂರು ದಿನಗಳ ಕಾಲ ಕರಿಬೇವಿನ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ. ಒಂದು ಚಮಚ ಕರಿಬೇವಿನ ಎಲೆಯ ಪುಡಿಗೆ ಒಂದು ಚಮಚ ಮುಲ್ತಾನಿ ಮಿಟ್ಟಿ ಮತ್ತು ಕೆಲವು ಹನಿ ರೋಸ್ ವಾಟರ್ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದಾಗ ನೀರಿನಿಂದ ತೊಳೆಯಿರಿ. ಮುಖ ಹೊಳೆಯಲಾರಂಭಿಸುತ್ತದೆ.

3. ಕರಿಬೇವು- ಅರಿಶಿನ:

3. ಕರಿಬೇವು- ಅರಿಶಿನ:

ಎಲ್ಲರಿಗೂ ಗೊತ್ತಿರುವ ಹಾಗೆ ಅರಿಶಿಣ ಮತ್ತು ಕರಿಬೇವಿನ ಎಲೆಗಳು ಆಂಟಿ - ಬ್ಯಾಕ್ಟರಿಯಲ್ ಗುಣ ಲಕ್ಷಣಗಳಿಂದ ತುಂಬಿದೆ. ಇವೆರಡರ ಮಿಶ್ರಣದಿಂದ ತಯಾರಾದ ಫೇಸ್ ಪ್ಯಾಕ್ ಕೇವಲ ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ವಾಸಿ ಮಾಡುವುದಲ್ಲದೆ ಆರೋಗ್ಯಕರ ಚರ್ಮ ನಿಮ್ಮದಾಗುವಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಕರಿಬೇವಿನ ಎಲೆಗಳ ಪೇಸ್ಟ್‌ಗೆ ಸ್ವಲ್ಪ ಅರಿಶಿನ ಮತ್ತು ಕೆಲವು ಹನಿ ರೋಸ್ ವಾಟರ್ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ. ಕೆಲವೇ ದಿನಗಳಲ್ಲಿ ವ್ಯತ್ಯಾಸ ಗೋಚರಿಸುತ್ತದೆ. ಇದರಿಂದ ಮುಖದ ಕಲೆಗಳಲ್ಲೂ ನಿವಾರಣೆಯಾಗಿ, ಮುಖದಲ್ಲಿ ಹೊಳಪು ಮೂಡುವುದು.

4. ಕರಿಬೇವು-ಹಾಲು:

4. ಕರಿಬೇವು-ಹಾಲು:

15-20 ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಒಂದು ಕಪ್ ಹಾಲಿನಲ್ಲಿ ಕುದಿಸಿ. ತಣ್ಣಗಾದ ನಂತರ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ. ನೀವು ಮುಖದ ಮೇಲಿನ ಕಲೆಗಳನ್ನು ತೊಡೆದುಹಾಕುತ್ತೀರಿ.

5. ಕರಿಬೇವು-ನಿಂಬೆ:

5. ಕರಿಬೇವು-ನಿಂಬೆ:

ಒಂದು ಮಿಕ್ಸರ್ ಜಾರ್ ನಲ್ಲಿ ಕರಿಬೇವಿನ ಎಲೆಗಳನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಮೊಡವೆಗಳನ್ನು ತೊಡೆದುಹಾಕಲು ವಾರಕ್ಕೊಮ್ಮೆ ಈ ಪ್ಯಾಕ್ ಅನ್ನು ಹಚ್ಚಿ.

English summary

How to use Curry Leaves to Bring Quick Glow on the Face in Kannada

Here we talking about How to use Curry leaves to bring quick glow on the face in kannada, read on
Story first published: Friday, January 7, 2022, 17:42 [IST]
X
Desktop Bottom Promotion