For Quick Alerts
ALLOW NOTIFICATIONS  
For Daily Alerts

ಮುಖ ಮತ್ತು ಮೈಯಿಂದ ಹೋಳಿ ಬಣ್ಣ ಸಂಪೂರ್ಣ ತೆಗೆಯುವುದು ಹೇಗೆ?

|

ಹೋಳಿಯ ಆಚರಣೆ ಮುಗಿದು ಒಂದೆರಡು ದಿನವಾದ ಮೇಲೆ ಕೆಲವರಿಗೆ ತ್ವಚೆ ಅಲರ್ಜಿ ಉಂಟಾಗುವುದು,ಇನ್ನು ಕೆಲವೊಂದು ಬಣ್ಣ ಎಷ್ಟು ತೊಳೆದರೂ ಹೋಗುವುದೇ ಇಲ್ಲ. ಹೋಳಿಯಾದ ಮಾರನೇಯ ದಿನದಿಂದ ನಮ್ಮ ದಿನ ನಿತ್ಯದ ಕೆಲ ಕೆಲಸಕ್ಕೆ ಹೋಗುತ್ತೇವೆ. ಆದರೆ ಎಷ್ಟೋ ಜನರ ಮುಖದಲ್ಲಿ ಬಣ್ಣ ಸ್ವಲ್ಪ-ಸ್ವಲ್ಪ ಕಾಣುತ್ತಿರುತ್ತದೆ.

How to Remove Holi Colors from Face and Skin in Kannada

ಅಲ್ಲದೆ ಕೆಮಿಕಲ್‌ ಇರುವ ಬಣ್ಣದಲ್ಲಿ ಆಟ ಆಡಿದ್ದರೆ ತ್ವಚೆ ಒಣಗುವುದು, ಗುಳ್ಳೆಗಳು ಏಳುವುದು, ತುರಿಕೆ ಕಂಡು ಬರುವುದು. ನಾವಿಲ್ಲಿ ರಂಗಿನ ಹಬ್ಬದ ಬಳಿಕ ತ್ವಚೆಯಿಂದ ಬಣ್ಣವನ್ನು ಸಂಪೂರ್ಣವಾಗಿ ತೆಗೆಯಲು ಹಾಗೂ ತ್ವಚೆಯನ್ನು ಪ್ಯಾಂಪರ್‌ ಮಾಡಲು ಕೆಲವೊಂದು ಟಿಪ್ಸ್ ನೀಡಿದ್ದೇವೆ ನೋಡಿ:

ಹೋಳಿಯ ಬಣ್ಣ ತೆಗೆಯಲು ಸೀಮೆಎಣ್ಣೆ, ಪೆಟ್ರೋಲ್ ಅಥವಾ ಸ್ಪಿರಿಟ್‌ ಬಳಸಬೇಡಿ

ಹೋಳಿಯ ಬಣ್ಣ ತೆಗೆಯಲು ಸೀಮೆಎಣ್ಣೆ, ಪೆಟ್ರೋಲ್ ಅಥವಾ ಸ್ಪಿರಿಟ್‌ ಬಳಸಬೇಡಿ

ಕೆಲವರು ಬಣ್ಣ ಸುಲಭವಾಗಿ ತೆಗೆಯಲು ಸೀಮೆ ಎಣ್ಣೆ, ಪಟ್ರೋಲ್ ಮುಂತಾದವು ಬಳಸುತ್ತಾರೆ. ಆದರೆ ಹಾಗೇ ಮಾಡಿದರೆ ಬಣ್ಣ ತೆಗೆಯಬಹುದು, ಇದರಿಂದ ತ್ವಚೆಗೆ ಹಾನಿಯುಂಟಾಗುವುದು.

ಬಿಸಿ ನೀರಿನ ಬದಲಿಗೆ ತಣ್ಣೀರು ಅಥವಾ ಹದ ಬಿಸಿ ನೀರು ಬಳಸಿ

ಬಿಸಿ ನೀರಿನ ಬದಲಿಗೆ ತಣ್ಣೀರು ಅಥವಾ ಹದ ಬಿಸಿ ನೀರು ಬಳಸಿ

ನೀವು ಕೆಮಿಕಲ್‌ ತೊಳೆಯಲು ಬಿಸಿ ನೀರು ಬಳಸಿದರೆ ಅದರಿಂದ ತ್ವಚೆ ಮತ್ತಷ್ಟು ಹಾನಿಯಾಗಬಹುದು. ಹೋಳಿಯಾಡಿದ ಬಳಿಕ ಮುಖ ಹಾಗೂ ಮೈಗೆ ತಣ್ಣೀರು ಹಾಕಿ ತೊಳೆಯಿರಿ.

ಸೋಪು ಮತ್ತು ಶ್ಯಾಂಪೂ:

ಸೋಪು ಮತ್ತು ಶ್ಯಾಂಪೂ:

ನೀವು ಹೋಳಿಯಾಡಿದ ಬಳಿಕ ಮೈಲ್ಡ್ ಶ್ಯಾಂಪೂ ಹಾಗೂ ಸೋಪು ಬಳಸಿ ತೊಳೆಯಿರಿ. ಮುಖವನ್ನು ಹಾಗೂ ಮೈಯನ್ನು ತುಂಬಾ ತಿಕ್ಕಿ ತೊಳೆಯಬೇಡಿ. ತುಂಬಾ ತೊಳೆದರೆ ತ್ವಚೆ ಡ್ರೈಯಾಗುವುದು.

ನಿಂಬೆಣ್ಣು ಬಳಸಿ

ನಿಂಬೆಣ್ಣು ಬಳಸಿ

ನೀವು ಹೋಳಿ ಬಣ್ಣ ತೊಳೆಯುವ ಮೊದಲು ಮುಖ ಮತ್ತು ಮೈಗೆ ಎಣ್ಣೆ ಹಚ್ಚಿ, ನಂತರ ನಿಂಬೆ ಹಣ್ಣನ್ನು ಕತ್ತರಿಸಿ ಅದರಿಂದ ಉಜ್ಜಿ ಮೈಗೆ ನೀರು ಹಾಕಿ. ಇದರಿಂದ ಬಣ್ಣವನ್ನು ಸುಲಭದಲ್ಲಿ ಹೋಗಿಸಬಹುದು.

ತ್ವಚೆ ಒಣಗುವುದು ತಡೆಗಟ್ಟುವುದು ಹೇಗೆ?

ತ್ವಚೆ ಒಣಗುವುದು ತಡೆಗಟ್ಟುವುದು ಹೇಗೆ?

ತ್ವಚೆ ತುಂಬಾ ಡ್ರೈಯಾಗಿದ್ದರೆ ನೀವು ತೆಂಗಿನೆಣ್ಣೆ ಹಚ್ಚಿ ಅಥವಾ ಮಾಯಿಶ್ಚರೈಸರ್ ಹಚ್ಚಿ. ಲೋಳೆಸರ ಅಥವಾ ರೋಸ್‌ವಾಟರ್ ಬಳಸಿ ತ್ವಚೆಯನ್ನು ಆರೈಕೆ ಮಾಡಿ.

English summary

How to Remove Holi Colors from Face and Skin in Kannada

How to Remove Holi Colors from Face and Skin in Kannada, read on....
X
Desktop Bottom Promotion