For Quick Alerts
ALLOW NOTIFICATIONS  
For Daily Alerts

ಬೆಂಡೆಕಾಯಿಯಲ್ಲಿದೆ ಮೊಡವೆಯಿಂದ ಹಿಡಿದು ಸೋರಿಯಾಸಿಸ್ ನಂತಹ ತ್ವಚೆ ಸಮಸ್ಯೆಗಳನ್ನು ಕಡಿಮೆ ಮಾಡುವ ಶಕ್ತಿ!

|

ಲೇಡಿ ಫಿಂಗರ್ ಎಂದೇ ಕರೆಯಲ್ಪಡುವ ಬೆಂಡೆಕಾಯಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇದೇ ಬೆಂಡೆಕಾಯಿ ಲೇಡಿಸ್ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುವುದು ಎಂದು ನಿಮಗೆ ತಿಳಿದಿದೆಯೇ? ಹೌದು, ಆರೋಗ್ಯಕಾರಿ ಬೆಂಡೆಕಾಯಿ, ಮಹಿಳೆಯರ ತ್ವಚೆಯ ಸಮಸ್ಯೆಗಳಾದ ಮೊಡವೆ, ಸುಕ್ಕು ಮೊದಲಾದವುಗಳನ್ನು ಕಡಿಮೆ ಮಾಡುವುದು. ಅದನ್ನು ಹೇಗೆ ಬಳಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ತ್ವಚೆಯ ಸಮಸ್ಯೆಯ ಪರಿಹಾರಕ್ಕಾಗಿ ಬೆಂಡೆಕಾಯಿಯನ್ನು ಬಳಸಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ವಿಟಮಿನ್ ಭರಿತವಾಗಿದೆ ಈ ತರಕಾರಿ:

ವಿಟಮಿನ್ ಭರಿತವಾಗಿದೆ ಈ ತರಕಾರಿ:

ಬೆಂಡೆಕಾಯಿ ಅಥವಾ ಲೇಡಿ ಫಿಂಗರ್ ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ನ ಉತ್ತಮ ಮೂಲವಾಗಿದೆ. ಇದರ ಒಂದು ಗ್ಲಾಸ್ ಜ್ಯೂಸ್ 6 ಗ್ರಾಂ ಕಾರ್ಬೋಹೈಡ್ರೇಟ್, 80 ಮೈಕ್ರೋಗ್ರಾಂ ಫೋಲೇಟ್, 3 ಗ್ರಾಂ ಫೈಬರ್ ಮತ್ತು 2 ಗ್ರಾಂ ಪ್ರೋಟೀನ್ ನ್ನು ಹೊಂದಿರುವುದು. ಆದ್ದರಿಂದ ಇದು ಕೂಡ ಆರೋಗ್ಯಕ್ಕೆ ಒಳ್ಳೆಯದೇ. ಇಂತಹ ಪೋಷಕಾಂಶಯುಕ್ತ ಬೆಂಡೆಕಾಯಿಯನ್ನು ತ್ವಚೆಗೆ ಹೇಗೆ ಸಹಕಾರಿ ಎಂಬುದನ್ನು ನೋಡೋಣ.

ಸುಕ್ಕುಗಳನ್ನು ಕಡಿಮೆ ಮಾಡಲು ಹೀಗೆ ಬಳಸಿ:

ಸುಕ್ಕುಗಳನ್ನು ಕಡಿಮೆ ಮಾಡಲು ಹೀಗೆ ಬಳಸಿ:

ವಯಸ್ಸಾದಂತೆ ಚರ್ಮ ಸುಕ್ಕುಗಟ್ಟುವುದು ಸಾಮಾನ್ಯ. ಆದರೆ ಹಲವಾರು ಕಾರಣಗಳಿಂದ ಕೆಲವೊಮ್ಮೆ ಬೇಗನೇ ಮುಖ ಸುಕ್ಕುಗಟ್ಟುವುದು. ಹೀಗೆ ವಯಸ್ಸಿಗೆ ಮುನ್ನವೇ ಸುಕ್ಕಾಗುವುದನ್ನು ತಡೆಗಟ್ಟಲು ಬೆಂಡೆಕಾಯಿ ಬಳಸಬಹುದು. ಇದು ನಿಮ್ಮ ತ್ವಚೆ ಸುಕ್ಕಾಗುವದನ್ನು ವಿಳಂಬಗೊಳಿಸುವುದು. ಅದಕ್ಕಾಗಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.

ಎರಡು ಮಧ್ಯಮ ಗಾತ್ರದ ಬೆಂಡೆಕಾಯಿಗಳನ್ನು ತೆಗೆದುಕೊಂಡು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪೇಸ್ಟ್ ತಯಾರಿಸಿ. ನಂತರ ನೀರು ಸೇರಿಸದೆ ಮುಖಕ್ಕೆ ಹಚ್ಚಿ. ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೂ ಇದನ್ನು ಹಚ್ಚಬಹುದು. ಸ್ವಲ್ಪ ಸಮಯದ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.

ಮೊಡವೆಗಳನ್ನು ನಿವಾರಿಸಲು:

ಮೊಡವೆಗಳನ್ನು ನಿವಾರಿಸಲು:

ಮೊಡವೆಗಳು ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದು ಗಂಡು-ಹೆಣ್ಣು ಎಂಬ ಭೇದವಿಲ್ಲ. ಎಲ್ಲರನ್ನು ಕಾಡುವ ಈ ಚರ್ಮ ಸಮಸ್ಯೆಗೆ ಬೆಂಡೆಕಾಯಿ ಬಳಸಬಹುದು. ಅದಕ್ಕಾಗಿ ಈ ಕೆಳಗಿನ ವಿಧಾನ ಬಳಸಿ.

2 ರಿಂದ 3 ತಾಜಾ ಬೆಂಡೆಕಾಯಿ ತೆಗೆದುಕೊಂಡು, ಸ್ವಚ್ಛಗೊಳಿಸಿ. ನಂತರ ಅದನ್ನು ಕುದಿಸಿ, ತಣ್ಣಗಾಗಲು ಬಿಡಿ. ನಂತೆ ಪೇಸ್ಟ್ ತಯಾರಿಸಿ. ಈಗ ಪೇಸ್ಟ್ ಗೆ 2 ರಿಂದ 3 ಹನಿ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ. ನಿಮ್ಮ ಸ್ವಚ್ಛ ಮುಖದ ಮೇಲೆ ಹಚ್ಚಿ. ಅದು ಒಣಗುವವರೆಗೆ ಮುಖದ ಮೇಲೆ ಇರಿಸಿ. ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ.

ಸೋರಿಯಾಸಿಸ್ ಸಮಸ್ಯೆಗೆ:

ಸೋರಿಯಾಸಿಸ್ ಸಮಸ್ಯೆಗೆ:

ಸೋರಿಯಾಸಿಸ್ ಎನ್ನುವುದು ಹೆಚ್ಚಿನ ಜನರನ್ನು ಕಾಡುವ ಚರ್ಮ ಸಮಸ್ಯೆಗಳಲ್ಲಿ ಒಂದಾಗಿದೆ. ಇಂತಹ ಸಮಸ್ಯೆ ನಿವಾರಿಸುವಲ್ಲೂ ಬೆಂಡೆಕಾಯಿ ಸಹಾಯ ಮಾಡುವುದು.

ಅದಕ್ಕಾಗಿ ತಾಜಾ ಬೆಂಡೆಕಾಯಿಯನ್ನು ಬಳಸಿ ಪೇಸ್ಟ್ ತಯಾರಿಸಿ. ಅವುಗಳನ್ನು ಸೋರಿಯಾಸಿಸ್ ಆದ ಜಾಗದಲ್ಲಿ ಹಚ್ಚಿ. ಇದನ್ನು ಇತರ ಚರ್ಮ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಪ್ರಯತ್ನಿಸಬಹುದು. ನೀವು ಚರ್ಮದ ಮೇಲೆ ಈ ಪೇಸ್ಟ ಹಚ್ಚಿಕೊಂಡಾಗ ನಿಮ್ಮ ಚರ್ಮವು ಬೆಂಡಕಾಯಿಯಲ್ಲಿರುವ ಓಕ್ರಾ ಜೆಲ್ ಅನ್ನು ಹೀರಿಕೊಳ್ಳುತ್ತದೆ ಮತ್ತು ಆ ಪ್ರದೇಶದ ಮೇಲೆ ತೆಳುವಾದ ಪದರವನ್ನು ಬಿಡುತ್ತದೆ. ಈ ಪ್ಯಾಕ್ ಒಣಗಿಸಿ, ನಂತರ ತೊಳೆಯಿರಿ.

English summary

How to Make Lady Finger Face Mask for Acne in Kannada

Here we talking about How to Make Lady Finger Face Mask for Acne in Kannada, read on
Story first published: Wednesday, July 7, 2021, 14:08 [IST]
X
Desktop Bottom Promotion