For Quick Alerts
ALLOW NOTIFICATIONS  
For Daily Alerts

ವೈಟ್‌ ಹೆಡ್‌ ಸಮಸ್ಯೆ ತಡೆಗಟ್ಟಲು ಹೀಗೆ ಮಾಡಿ

|

ಪ್ರತಿಯೊಬ್ಬರಿಗೆ ವೈಟ್‌ ಹೆಡ್ಸ್ ಹಾಗೂ ಬ್ಲ್ಯಾಕ್‌ ಹೆಡ್ಸ್ ಸಮಸ್ಯೆ ಇದ್ದೇ ಇರುತ್ತದೆ. ನೀವು ಕನ್ನಡಿಯಲ್ಲಿ ಮೂಗಿನ ತುದಿಯನ್ನು ಸರಿಯಾಗಿ ಗಮನಿಸಿದರೆ ಮೂಗಿನ ಎರಡು ಬದಿಯಲ್ಲಿ ಬಿಳಿ-ಬಿಳಿ ಕಾಣುತ್ತಿರುತ್ತದೆ. ಬ್ಲ್ಯಾಕ್‌ ಹೆಡ್ಸ್ ತೆಗೆದಷ್ಟು ಸುಲಭವಾಗಿ ವೈಟ್‌ ಹೆಡ್ಸ್ ತೆಗೆಯಲು ಸಾಧ್ಯವಿಲ್ಲ. ಅಲ್ಲದೆ ವೈಟ್‌ ಹೆಡ್ಸ್ ಮೂಗಿನ ಮೇಲೆ ಇದ್ದರೆ ನೋಡಲು ಕೂಡ ಅಸಹ್ಯವಾಗಿ ಕಾಣುವುದು.

ತ್ವಚೆ ಆಕರ್ಷಕವಾಗಿ ಕಾಣಬೇಕೆಂದರೆ ವೈಟ್ ಹೆಡ್ಸ್ ಹಾಗೂ ಬ್ಲ್ಯಾಕ್‌ ಹೆಡ್ಸ್ ಎರಡೂ ತೆಗೆಯಬೇಕು, ಇಲ್ಲದಿದ್ದರೆ ಎಷ್ಟೇ ಮೇಕಪ್ ಮಾಡಿದರೂ ಮುಖದ ತ್ವಚೆಯಲ್ಲಿ ಕಾಂತಿ ಇರುವುದಿಲ್ಲ. ಮುಖದಲ್ಲಿ ಬ್ಲ್ಯಾಕ್‌ ಹೆಡ್ಸ್‌ ಇರಬಾರದೆಂದರೆ ಏನು ಮಾಡಬೇಕೆಂಬ ಟಿಪ್ಸ್ ನೀಡಲಾಗಿದೆ ನೋಡಿ:

ಮುಖವನ್ನು ಆಗಾಗ ತೊಳೆಯುತ್ತಾ ಇರಿ

ಮುಖವನ್ನು ಆಗಾಗ ತೊಳೆಯುತ್ತಾ ಇರಿ

ಮುಖ ತೊಳೆಯುವುದರಿಂದ ಮುಖದಲ್ಲಿ ದೂಳು ಕೂರುವುದಿಲ್ಲ. ಮುಖದಲ್ಲಿ ಎಣ್ಣೆಯಂಶ ಕೂರಲು ಬಿಡಲೇಬೇಡಿ. ಎಣ್ಣೆಯಂಶ ಇದ್ದರೆ ಮುಖದಲ್ಲಿ ಜಿಡ್ಡಿನಂಶ ಉಳಿದು ಈ ರೀತಿಯ ವೈಟ್ ಹೆಡ್ಸ್, ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಮೂಡುವುದು. ಮುಖ ತೊಳೆಯುವಾಗ ಸೋಪು ಬದಲಿಗೆ ಫೇಸ್‌ ವಾಶ್‌ ಬಳಸಿ. ಸೋಪ್‌ನಲ್ಲಿ ಕೆಮಿಕಲ್ ಅಧಿಕವಿರುವುದರಿಂದ ಆಗಾಗ ಸೋಪು ಹಚ್ಚಿ ತೊಳೆಯುವುದು ಅಷ್ಟು ಒಳ್ಳೆಯದಲ್ಲ, ಆದ್ದರಿಂದ ಫೇಸ್‌ವಾಶ್‌ ಬಳಸಿ. ಹೊರಗಡೆ ಹೋಗಿ ಮನೆಗೆ ಬಂದ ತಕ್ಷಣ ಮುಖ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ.

 ಎಕ್ಸ್‌ಫೋಲೆಟ್ ಮಾಡಿ

ಎಕ್ಸ್‌ಫೋಲೆಟ್ ಮಾಡಿ

ಮುಖವನ್ನು ವಾರಕ್ಕೊಮ್ಮೆ ಎಕ್ಸ್‌ಫೋಲೆಟ್ ಮಾಡಿ. ಇದರಿಂದ ನಿರ್ಜೀವ ತ್ವಚೆಯನ್ನು ತೆಗೆಯಬಹುದು, ಮುಖ ಆಕರ್ಷಕವಾಗಿ ಕಾಣುವುದು.

ಎಕ್ಸ್‌ಫೋಲೆಟ್‌ ಮಾಡುವುದು ಹೇಗೆ?

ಒಂದು ಚಮಚ ತೆಂಗಿನೆಣ್ಣೆ ಅಥವಾ ಆಲೀವ್‌ ಎಣ್ಣೆ ಒಂದು ಚಮಚ ಸಕ್ಕರೆ ಹಾಕಿ ಮಿಶ್ರ ಮಾಡಿ ಮುಖವನ್ನು ತಿಕ್ಕಿ. 2-3 ನಿಮಿಷ ತಿಕ್ಕಿದರೆ ಸಾಕು. ಹೀಗೆ ಮಾಡಿದರೆ ಕೊಳೆ ಹಾಗೂ ನಿರ್ಜೀವ ತ್ವಚೆ ಹೋಗಿ ತ್ವಚೆ ಮೃದುವಾಗಿರುತ್ತದೆ ಹಾಗೂ ಮುಖದ ಹೊಳಪು ಕೂಡ ಹೆಚ್ಚುವುದು.

 ಎಣ್ಣೆಯಂಶವಿರುವ ಸನ್‌ಸ್ಕ್ರೀನ್ ಅಥವಾ ಮಾಯಿಶ್ಚರೈಸರ್ ಬಳಸಬೇಡಿ

ಎಣ್ಣೆಯಂಶವಿರುವ ಸನ್‌ಸ್ಕ್ರೀನ್ ಅಥವಾ ಮಾಯಿಶ್ಚರೈಸರ್ ಬಳಸಬೇಡಿ

ಈ ವೈಟ್‌ ಹೆಡ್ಸ್ ಸಮಸ್ಯೆ ಎಣ್ಣೆ ತ್ವಚೆಯವರಲ್ಲಿ ಕಂಡು ಬರುವುದು. ನೀವು ಮಾಯಿಶ್ಚರೈಸರ್‌ ಹಾಗೂ ಸನ್‌ಸ್ಕ್ರೀನ್‌ ಆಯ್ಕೆ ಮಾಡುವಾಗ ನಿಮ್ಮ ತ್ವಚೆಗೆ ಹೊಂದುವ ಅಂದರೆ ಎಣ್ಣೆಯಂಶ ಇಲ್ಲದ ಮಾಯಿಶ್ಚರೈಸರ್ ಅಥವಾ ಸನ್‌ಸ್ಕ್ರೀನ್ ಬಳಸಿ.

ಚಿವುಟಿ ತೆಗೆಯಬೇಡಿ

ಚಿವುಟಿ ತೆಗೆಯಬೇಡಿ

ವೈಟ್‌ ಹೆಡ್ಸ್ ಕಂಡ ತಕ್ಷಣ ಅದನ್ನು ಚಿವುಟಿ ತೆಗೆಯುವ ಅಭ್ಯಾಸ ಹೆಚ್ಚಿನವರಲ್ಲಿ ಇರುತ್ತದೆ. ಈ ಅಭ್ಯಾಸ ನಿಮ್ಮ ತ್ವಚೆಯ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಈ ರೀತಿ ಚಿವುಟುವುದರಿಂದ ಮುಖದಲ್ಲಿ ವೈಟ್‌ ಹೆಡ್ಸ್ ಸಮಸ್ಯೆ ಹೆಚ್ಚಾಗುವುದು ಅಲ್ಲದೆ ರಂಧ್ರಗಳು ಬೀಳುವುದು. ವೈಟ್‌ ಹೆಡ್ಸ್ ಹೋಗಲಾಡಿಸಲು ಹದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಕ್ಲೀನ್‌ ಅಪ್ ಮಾಡಿಸಿ.

 ಟೋನರ್ ಬಳಸಿ

ಟೋನರ್ ಬಳಸಿ

ಪ್ರತಿಬಾರಿ ಮುಖ ತೊಳೆದ ಬಳಿಕ ಟೋನರ್ ಬಳಸಿ. ಟೋನರ್ ಬಳಸುವುದರಿಂದ ತೆರೆದ ರಂಧ್ರಗಳನ್ನು ಮುಚ್ಚುತ್ತದೆ. ಇದು ರಂಧ್ರದಲ್ಲಿ ವೈಟ್‌ ಹೆಡ್ಸ್ ಉಂಟಾಗುವುದನ್ನು ತಡೆಗಟ್ಟುತ್ತದೆ. ಈ ವಿಧಾನ ವೈಟ್‌ ಹೆಡ್ಸ್ ಹಾಗೂ ಬ್ಲ್ಯಾಕ್‌ ಹೆಡ್ಸ್ ಎರಡೂ ತಡೆಗಟ್ಟಲು ತುಂಬಾನೇ ಸಹಕಾರಿ.

English summary

How To Get Rid of Whiteheads In Kannada

Whiteheads are common skin problem, Here best tips to get rid from whiteheads read on....
X
Desktop Bottom Promotion