For Quick Alerts
ALLOW NOTIFICATIONS  
For Daily Alerts

ಪಿರಿಯಡ್ಸ್‌ನಲ್ಲಿ ಕಾಡುವ ಪಿಂಪಲ್‌ನಿಂದ ಪಾರಾಗುವುದು ಹೇಗೆ?

|

ಮುಟ್ಟಿನ ದಿನಗಳು ಹತ್ತಿರ ಬರ್ತಾ ಇದ್ದಂತೆ ಮೂಡ್‌ ಸ್ವಿಂಗ್‌, ಕಿಬ್ಬೊಟ್ಟೆ ನೋವು, ತಲೆ ನೋವು ಇನ್ನು ಆ ದಿನಗಳಲ್ಲಿ ಕಾಡುವ ರಕ್ತಸ್ರಾವ ಇವುಗಳ ನಡುವೆ ಮೊಡವೆ ಸಮಸ್ಯೆಯೂ ಹೆಣ್ಮಕ್ಕಳನ್ನು ಕಾಡುತ್ತಿರುತ್ತದೆ. ಮುಟ್ಟಿನ ಸಮಯದಲ್ಲಿ ಶೇ.65ರಷ್ಟು ಮಹಿಳೆಯರಿಗೆ ಮೊಡವೆ ಸಮಸ್ಯೆ ಉಂಟಾಗುತ್ತದೆ ಎಂದು ಅಧ್ಯಯನ ವರದಿಗಳು ಹೇಳಿವೆ.

How To Deal With Period Acne

ಇದನ್ನು ಮುಟ್ಟಿನ ಮೊಡವೆ ಎಂದು ಕರೆಯುತ್ತಾರೆ. ಮೊದಲೇ ಆ ದಿನಗಳಲ್ಲಿ ಸ್ವಲ್ಪ ಕಿರಿಕಿರಿ ಅನಿಸುತ್ತಿರುತ್ತದೆ, ಅದರ ಜೊತೆಗೆ ಮುಖದಲ್ಲಿ ಈ ಮೊಡವೆ ಕೂಡ ಎದ್ದು ಕಾಣುವಾಗ ತುಂಬಾ ಸಿಟ್ಟು ಬರುವುದು. ಇನ್ನು ಆ ಮೊಡವೆಯ ಕಲೆಗಳು ಹೋಗಲು ಒಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ, ಅಷ್ಟರಲ್ಲಿ ಮುಂದಿನ ತಿಂಗಳು ಮುಟ್ಟಿನ ಸಮಯ ಬಂದಿರುತ್ತದೆ, ಆಗ ಮತ್ತೆ ಮೊಡವೆ ಕಾಡುವುದು. ಮುಟ್ಟಿನಲ್ಲಿ ಕಾಡುವ ಈ ಮೊಡವೆ ಸಮಸ್ಯೆ ಹೋಗಲಾಡಿಸುವುದು ಹೇಗೆ ಎಂದು ಅನಿಸುವುದು ಸಹಜ. ಇಲ್ಲಿ ನಾವು ಮುಟ್ಟಿನ ಮೊಡವೆಗೆ ಕಾರಣ ಮತ್ತು ಅದು ಹೋಗಲಾಡಿಸುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:
 ಮುಟ್ಟಿನ ಮೊಡವೆ ಏಕೆ ಬರುತ್ತದೆ?

ಮುಟ್ಟಿನ ಮೊಡವೆ ಏಕೆ ಬರುತ್ತದೆ?

ಇದಕ್ಕೆ ಪ್ರಮುಖ ಕಾರಣ ಹಾರ್ಮೋನ್‌ಗಳು. ಮುಟ್ಟಿನ ಸಮಯದಲ್ಲಿ ಹಾರ್ಮೋನ್‌ಗಳು ಬದಲಾಗುವುದು ಸಹಜ, ಈ ಹಾರ್ಮೋನ್‌ ಬದಲಾವಣೆ ಮುಟ್ಟಾಗುವ ವಾರದ ಮುಂಚೆಯೇ ಶುರುವಾಗುವುದು. ಆಗ ದೇಹದಲ್ಲಿ ಈಸ್ಟ್ರೋಜನ್‌ ಪ್ರಮಾಣ ಹೆಚ್ಚಾಗುವುದು. ಈಸ್ಟ್ರೋಜನ್ ಹೆಚ್ಚಾದಾಗ ತ್ವಚೆಯಲ್ಲಿ ಸೆಬಮ್‌ ಉತ್ಪತ್ತಿ ಹೆಚ್ಚಾಗಿ ಮುಖದಲ್ಲಿ ಎಣ್ಣೆಯಂಶ ಉಂಟಾಗಿ ಮೊಡವೆ ಬರುವುದು.

ಮುಟ್ಟಿನ ಮೊಡವೆ ಎಲ್ಲಿ ಕಂಡು ಬರುತ್ತದೆ?

ಮುಟ್ಟಿನ ಮೊಡವೆ ಎಲ್ಲಿ ಕಂಡು ಬರುತ್ತದೆ?

ಮುಟ್ಟಿನ ಮೊಡವೆ ಒಂದು ನಿರ್ಧಿಷ್ಟ ಜಾಗದಲ್ಲಿ ಏಳುತ್ತದೆಯೇ ಎಂದು ನೋಡುವುದಾದರೆ ಹೌದು ಇದು ಗಲ್ಲದಲ್ಲಿ ಏಳುವುದು. ಇದು ಸಾಮಾನ್ಯ ಮೊಡವೆಗಿಂತ ಸ್ವಲ್ಪ ದೊಡ್ಡ ಗಾತ್ರದಲ್ಲಿ ಕೆಂಪಗೆ ಇರುತ್ತದೆ. ಇದನ್ನು ಚಿವುಟಿದರೆ ಮೊಡವೆಯ ಗಾತ್ರ ಹೆಚ್ಚಾಗುವುದು, ಇದರಿಂದ ಮುಖದಲ್ಲಿ ಕಲೆ ಉಳಿದುಕೊಳ್ಳುವುದು. ಇದನ್ನು ಮುಟ್ಟದೇ ಇದ್ದರೆ ಅದು ಸ್ವಲ್ಪ ದಿನದಲ್ಲಿ ಮಾಯವಾಗುತ್ತದೆ.

ಮುಟ್ಟಿನ ಮೊಡವೆ ಬಾರದಂತೆ ತಡೆಯುವುದು ಹೇಗೆ?

ಮುಟ್ಟಿನ ಮೊಡವೆ ಬಾರದಂತೆ ತಡೆಯುವುದು ಹೇಗೆ?

1. ರಾಸಾಯನಿಕ ಕ್ರೀಮ್ ಬಳಸುವುದು

ಬೆಂಝಾಲ್ ಪೆರಾಕ್ಸೈಡ್ (Benzoyl Peroxide)

ಬೆಂಝಾಲ್ ಪೆರಾಕ್ಸೈಡ್‌ ಇರುವ ಅನೇಕ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಬೆಂಝಾಲ್ ಪೆರಾಕ್ಸೈಡ್‌ ಮೊಡವೆ ಉಂಟು ಮಾಡುವ ಬ್ಯಾಕ್ಟಿರಿಯಾ ತಡೆಗಟ್ಟುತ್ತದೆ ಹಾಗೂ ಮುಖದಲ್ಲಿ ತುರಿಕೆಯೂ ಉಂಟಾಗುವುದಿಲ್ಲ, ಆದ್ದರಿಂದ ಇದನ್ನು ಬಳಸುವುದು ಒಳ್ಳೆಯದು. ಇದು ಮೊಡವೆ ಏಳದಂತೆ ತಡೆಗಟ್ಟುತ್ತದೆ ಅಲ್ಲದೆ ಒಂದು ಮೊಡವೆ ಬಂದರೂ ಅದು ದೊಡ್ಡ ಗಾತ್ರವಾಗದಂತೆ ತಡೆಗಟ್ಟುತ್ತದೆ.

ಟಾಪಿಕಲ್ ರೆಟಿನಾಯ್ಡ್ (Topical Retinoids)

ಮೊಡವೆ ತಡೆಗಟ್ಟುವಲ್ಲಿ ಟಾಪಿಕಲ್ ರೆಟಿನಾಯ್ಡ್ ಕೂಡ ತುಂಬಾ ಸಹಕಾರಿ. ಇದರಲ್ಲಿರುವ ವಿಟಮಿನ್ ಮೊಡವೆ ಬರುವುದನ್ನು ತಡೆಗಟ್ಟುತ್ತದೆ.

ಮನೆಮದ್ದು

ರಾಸಾಯನಿಕ ಕ್ರೀಮ್‌ಗಳಲ್ಲಿ ಮನೆಮದ್ದು ಕೂಡ ಮೊಡವೆ ತಡೆಗಟ್ಟುವಲ್ಲಿ ಸಹಕಾರಿಯಾಗುದೆ.

ವಾರ್ಮ್‌ ಕಂಪ್ರೆಸ್

ವಾರ್ಮ್‌ ಕಂಪ್ರೆಸ್

ಮೊಡವೆ ಮೇಲೆ ವಾರ್ಮ್ ಕಂಪ್ರೆಸ್‌ ನೀಡುವುದರಿಂದ ನೋವು ಸ್ವಲ್ಪ ಕಡಿಮೆಯಾಗುವುದು, ಅಲ್ಲದೆ ಇದು ಮೊಡವೆಯಲ್ಲಿರುವ ಕೀವು ಹೀರಿಕೊಳ್ಳಲು ಸಹಕಾರಿ.

ಬಳಸುವುದು ಹೇಗೆ?

  • ಒಂದು ಟವಲ್‌ ಅನ್ನು ಬಿಸಿ ನೀರಿನಲ್ಲಿ ಅದ್ದಿ.
  • ಅದರ ನೀರನ್ನು ಹಿಂಡಿ
  • ಈಗ ಆ ಟವಲ್‌ ಅನ್ನು ಮೊಡವೆ ಮೇಲೆ 5-10 ಇಮಿಷ ಇಡಿ.
  • ಈ ರೀತಿ 2-3 ಬಾರಿ ಮಾಡಿದರೆ ಮೊಡವೆಯ ಗಾತ್ರ ಕಡಿಮೆಯಾಗುವುದು.
  • ಕೋಲ್ಡ್ ಕಂಪ್ರೆಸ್

    ಕೋಲ್ಡ್ ಕಂಪ್ರೆಸ್

    ಮೊಡವೆ ಗಾತ್ರ ದೊಡ್ಡದಾಗಿದ್ದರೆ ಅದನ್ನು ಕಡಿಮೆ ಮಾಡಲು ಕೋಲ್ಡ್ ಕಂಪ್ರೆಸ್ ಕೂಡ ಸಹಕಾರಿ, ಇದು ತಕ್ಷಣ ನೋವನ್ನು ಕಡಿಮೆ ಮಾಡುತ್ತದೆ.

    ಬಳಸುವುದು ಹೇಗೆ?

    • ಐಸ್‌ ಕ್ಯೂಬ್‌ ಅನ್ನು ಟವಲ್‌ನಲ್ಲಿ ಹಾಕಿ ಮೊಡವೆ ಮೇಲೆ ಮೆಲ್ಲನೆ ಒತ್ತಿ 5 ನಿಮಿಷ ಹಿಡಿಯಿರಿ.
    • ಈ ರೀತಿ ಆಗಾಗ ಮಾಡುತ್ತಿದ್ದರೆ ಮೊಡವೆ ನೋವು ಕಡಿಮೆಯಾಗುವುದು, ಮೊಡವೆಯೂ ಬೇಗನೆ ಮಾಯವಾಗುವುದು
    • ಟೀ ಟ್ರೀ ಆಯಿಲ್

      ಟೀ ಟ್ರೀ ಆಯಿಲ್

      ಟೀ ಟ್ರೀ ಆಯಿಲ್‌ ಅನ್ನು ಹಲವಾರು ರೀತಿಯಲ್ಲಿ ಸೌಂದರ್ಯ ವರ್ಧಕವಾಗಿ ಬಳಸಬಹುದು. ಇದು ಮೊಡವೆ ಊತ ಕಡಿಮೆ ಮಾಡುವಲ್ಲಿಯೂ ಸಹಕಾರಿ.

      ಬಳಸುವುದು ಹೇಗೆ?

      • 12 ಹನಿ ತೆಂಗಿನೆಣ್ಣೆಗೆ 2-3 ಹನಿ ಟೀ ಟ್ರೀ ಎಣ್ಣೆ ಹಾಕಿ ಮಿಶ್ರ ಮಾಡಿ.
      • ಈಗ ಆ ಮಿಶ್ರಣವನ್ನು ಮೊಡವೆ ಇರುವ ಕಡೆ ಹಚ್ಚಿ 30-45 ನಿಮಿಷ ಬಿಡಿ.
      • ಇದನ್ನು ದಿನದಲ್ಲಿ 2-3 ಬಾರಿ ಮಾಡಿ ಮೊಡವೆ ಕಡಿಮೆಯಾಗುವುದು, ಕಲೆಯೂ ಉಳಿಯುವುದಿಲ್ಲ.
      • ಅರಿಶಿಣ

        ಅರಿಶಿಣ

        ಅರಿಶಿಣ ಕೂಡ ಮೊಡವೆ ತಡೆಗಟ್ಟುವಲ್ಲಿ ತುಂಬಾ ಸಹಕಾರಿ, ಇದು ಮೊಡವೆ ಮಾಯವಾಗುವಂತೆ ಮಾಡಿ ಮುಖದ ಕಾಂತಿಯನ್ನೂ ಹೆಚ್ಚಿಸುತ್ತದೆ.

        ಬಳಸುವುದು ಹೇಗೆ?

        • ಅರ್ಧ ಚಮಚ ಲೋಳೆಸರ ತೆಗೆದು ಅದನ್ನು ಅರ್ಧ ಚಮಚ ಅರಿಶಿಣ ಪುಡಿ ಜೊತೆ ಮಿಶ್ರ ಮಾಡಿ.
        • ಇದನ್ನು ಮೊಡವೆ ಮೇಲೆ ಹಚ್ಚಿ 10-15 ನಿಮಿಷ ಬಿಡಿ.
        • ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿ, ಮೊಡವೆ ಬೇಗನೆ ಮಾಯವಾಗುವುದು.
        •  ಜೇನು

          ಜೇನು

          ಜೇನನ್ನು ಹಲವಾರು ಬಗೆಯಲ್ಲಿ ಸೌಂದರ್ಯವರ್ಧಕವಾಗಿ ಬಳಸುತ್ತೇವೆ. ಇದು ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವುದರಿಂದ ಮೊಡವೆ ತಡೆಗಟ್ಟುವಲ್ಲಿಯೂ ಸಹಕಾರಿ.

          ಬಳಸುವುದು ಹೇಗೆ?

          • ಜೇನನ್ನು ಮೊಡವೆ ಇರುವ ಕಡೆ ಮುಖಕ್ಕೆ ಹಚ್ಚಿ ಕೆಲವು ಗಂಟೆಯ ಬಳಿಕ ತೊಳೆಯಿರಿ.
          • ಈ ರೀತಿ ಪ್ರತಿದಿನ ಮಾಡುತ್ತಿದ್ದರೆ ಮೊಡವೆ ಸಮಸ್ಯೆಯೂ ಇರುವುದಿಲ್ಲ, ಮುಖದ ಕಾಂತಿಯೂ ಹೆಚ್ಚುವುದು.
          • ಲೋಳೆಸರ

            ಲೋಳೆಸರ

            ಲೋಳೆಸರ ಕೂಡ ತ್ವಚೆ ಸಮಸ್ಯೆ ಹೋಗಲಾಡಿಸಲು, ತ್ವಚೆಯ ಕಾಂತಿ ಹೆಚ್ಚಿಸಲು ತುಂಬಾ ಪರಿಣಾಮಕಾರಿ. ಇದು ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡಿ ಮೊಡವೆ ಉಂಟಾಗುವುದನ್ನು ತಡೆಗಟ್ಟುತ್ತದೆ.

            ಬಳಸುವುದು ಹೇಗೆ?

            • ಮೊಡವೆ ಇರುವ ಕಡೆ ಮಾತ್ರವಲ್ಲ, ಎಲ್ಲಾ ಕಡೆಯೂ ಇದರ ರಸ ಹಚ್ಚಬಹುದು. ಕಡಿಮೆಯೆಂದರೂ ಎರಡು ಗಂಟೆ ಬಿಡಿ.
            • ದಿನವಿಡೀ ಹಚ್ಚಿದರೆ ಮೊಡವೆ ಸಮಸ್ಯೆ ಬೇಗನೆ ಇಲ್ಲವಾಗುವುದು.
            • ಋತುಚಕ್ರದಲ್ಲಿ ಮೊಡವೆ ಸಮಸ್ಯೆ ಕಾಡದಿರಲು ಆಹಾರಕ್ರಮ

              ಋತುಚಕ್ರದಲ್ಲಿ ಮೊಡವೆ ಸಮಸ್ಯೆ ಕಾಡದಿರಲು ಆಹಾರಕ್ರಮ

              ಮೊಡವೆ ಬಾರದಂತೆ ತಡೆಯಲು ಕ್ರೀಮ್ ಹಚ್ಚುವುದು, ಮನೆಮದ್ದು ಮಾಡುವುದರ ಜೊತೆಗೆ ಆಹಾರಕ್ರಮದ ಕಡೆಯೂ ಗಮನ ನೀಡಬೇಕು. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ ಸೇವಿಸಬೇಕು. ಸಂಸ್ಕರಿಸಿದ ಆಹಾರ , ತಂಪು ಪಾನೀಯಗಳು ಸೇವಿಸಬೇಡಿ. ಸಕ್ಕರೆ ಕೂಡ ಕಡಿಮೆ ಪ್ರಮಾಣದಲ್ಲಿ ಸೇವಿಸಿ.

              ದೈಹಿಕ ವ್ಯಾಯಾಮದ ಬಳಿಕ ಸ್ನಾನ ಮಾಡಿ

              ದೈಹಿಕ ವ್ಯಾಯಾಮದ ಬಳಿಕ ಸ್ನಾನ ಮಾಡಿ

              ಮೈ ತುಂಬಾ ಬೆವರಿದ್ದರೆ ಕೂಡಲೇ ಸ್ನಾನ ಮಾಡಿ. ಬೆವರು, ಎಣ್ಣೆ ಜಿಗುಟು ಇವೆಲ್ಲಾ ಮೊಡವೆ ಸಮಸ್ಯೆ ಹೆಚ್ಚು ಮಾಡುತ್ತದೆ. ಎಣ್ಣೆ ತ್ವಚೆಯಾಗಿದ್ದರೆ ನಿಮ್ಮ ತ್ವಚೆಗೆ ತಕ್ಕ ಕ್ರೀಮ್ ಬಳಸಿ.

              ಮೊಬೈಲ್ ಫೋನ್‌ ಸ್ವಚ್ಛವಾಗಿಡಿ

              ಮೊಬೈಲ್ ಫೋನ್‌ ಸ್ವಚ್ಛವಾಗಿಡಿ

              ಮೊಬೈಲ್‌ ಫೋನ್‌ ಕಿವಿಗೆ ಹಿಡಿದು ಮಾತನಾಡುವಾಗ ಕೆನ್ನೆಗೆ ತಾಗುತ್ತದೆ, ಅದರಲ್ಲಿರುವ ಬ್ಯಾಕ್ಟಿರಿಯಾಗಳು ಮುಖಕ್ಕೆ ತಾಗಿ ಮೊಡವೆ ಸಮಸ್ಯೆ ಹೆಚ್ಚು ಮಾಡಬಹುದು. ಆದ್ದರಿಂದ ಮೊಬೈಲ್‌ ಪೋನ್ ಸ್ವಚ್ಛತೆ ಕಡೆಗೂ ಹೆಚ್ಚಿನ ಗಮನ ನೀಡಿ.

English summary

How To Deal With Period Acne

To deal with period acne, you need to know it better. And that is exactly what we are going to do in this article.
X
Desktop Bottom Promotion